Ninagagi: ಜೀವ-ರಚನಾ ಫಸ್ಟ್ ನೈಟ್ ಕಾರ್ಯಕ್ರಮದಲ್ಲಿ ಮೀಡಿಯಾದವ್ರಿಗೇನು ಕೆಲ್ಸ?

By ಎಸ್ ಸುಮಂತ್

ವಜ್ರೇಶ್ವರಿ ಒಂದು ಬಯಸಿದರೆ ವಿಧಿ ಮತ್ತೇನೋ ಬರೆದು ಕಳುಹಿಸಿತ್ತು. ಕೊನೆವರೆಗೂ ಮಗಳಿಂದ ದುಡಿದು, ತಾನೂ ಆರಾಮವಾಗಿ ಬದುಕಬೇಕು ಎಂಬುದೇ ವಜ್ರೇಶ್ವರಿಯ ಪ್ಲ್ಯಾನ್ ಆಗಿತ್ತು. ಮನೋಹರ ಮಾಡದೆ ಇರುವ ತಪ್ಪಿಗೆ ಬ್ಲಾಕ್ ಮೇಲ್ ಮಾಡಿ ಅವನ ಮಗಳನ್ನ ತನ್ನ ಮಗಳೆಂದು ಮನೆಯವರನ್ನೆಲ್ಲ ನಂಬಿಸಿದ್ದಾಳೆ. ಅದರೆ ದೇವರಿಗೆ ರಚನಾಳ ಒಳ್ಳೆಯತನಕ್ಕೆ ಶಿಕ್ಷೆ ಕೊಡುವ ಆಸೆ ಇರಲಿಲ್ಲ ಎನಿಸುತ್ತೆ. ಅದಕ್ಕೆ ರಚನಾ ಬಯಸಿದ ಜೀವನವನ್ನೇ ನೀಡಿದ್ದಾನೆ.

ಒಂದು ಕ್ಯೂಟ್ ಕಂದಮ್ಮ, ಒಂದು ಪುಟ್ಟ ಸಂಸಾರ.. ಗಂಡ, ಮನೆ, ಮಗು.. ತಾನೇ ಅಡುಗೆ ಮಾಡಿ, ಎಲ್ಲರಿಗೂ ತಿನ್ನಿಸಿ, ಅಪ್ಪಟ ಗೃಹಿಣಿಯಾಗಬೇಕೆಂಬ ಬಯಕೆ ರಚನಾಳದ್ದಾಗಿತ್ತು. ಅದು ಈಗ ಫೇಕ್ ಮದುವೆಯಿಂದ ಈಡೇರಿದೆ. ದೇವರ ಆಜ್ಞೆಯನ್ನು ಮೀರಿ, ನನ್ನ ನಿರ್ಧಾತವನ್ನೇ ಸಕ್ಸಸ್ ಮಾಡ್ತೀನಿ ಎಂದು ಹೊರಟಿದ್ದ ವಜ್ರೇಶ್ವರಿಗೆ ಸರಿಯಾದ ಪಾಠವಾಗಿದೆ.

colors kannada serial Ninagagi Written Update on November 21st episode

ಸಂಪ್ರದಾಯದಂತೆ ಮನೆ ತುಂಬಿಸಿಕೊಂಡ ಬಾಲ

ಕೃಷ್ಣಾಗೆ ಅಮ್ಮನ ಪ್ರೀತಿ ಒಂದು ಕೊರತೆ ಇತ್ತು. ಈಗ ಸ್ಟಾರ್ ಆ ಸ್ಥಾನವನ್ನ ತುಂಬಿದ್ದಾರೆ. ಕೃಷ್ಣನಿಗಾಗಿಯೇ ತನ್ನ ಮನೆಯವರನ್ನ ಎದುರಾಕಿಕೊಂಡು ಬಂದಿದ್ದಾಳೆ. ಜೀವನ ಜೊತೆಗೆ ಸ್ಟಾರ್ ಮದುವೆಯಾಗಿದೆ ಎಂಬುದನ್ನು ಕೇಳುವುದಕ್ಕೇನೆ ಬಾಲು ಹಾಗೂ ಕೃಷ್ಣನಿಗೆ ಖುಷಿಯಾಗ್ತಿದೆ. ಈಗ ಮನೆ ತುಂಬಿಸಿಕೊಳ್ಳುವಾಗಲೇ ಶಾಸ್ತ್ರ, ಸಂಪ್ರದಾಯದಂತೆ ತುಂಬಿಸಿಕೊಂಡಿದ್ದಾರೆ.

ಸುಳ್ಳಿನ ಮದುವೆಗೆ ರಿಯಲ್ ಮಧುಚಂದ್ರ

ಎಲ್ಲವೂ ಶಾಸ್ತ್ರೋಕ್ತವಾಗಿ ನಡೆಯಬೇಕು ಎಂಬುದೇ ಬಾಲನ ಆಸೆ. ಹೀಗಾಗಿ ಜೀವ ಹಾಗೂ ರಚನಾ ಮಧುಚಂದ್ರಕ್ಕೆ ಬಾಲ ಎಲ್ಲಾ ತಯಾರಿ ಮಾಡಿದ್ದಾನೆ. ಅದರಲ್ಲೂ ಕೃಷ್ಣಾಳ ರೂಮನ್ನೇ ಹೂಗಳಿಂದ ಅಲಂಕಾರ ಮಾಡಿ, ಇಬ್ಬರಿಗೂ ಶಾಕ್ ನೀಡಿದ್ದಾರೆ. ಈ ಮದುವೆ ಅನ್ನೋದು ಸುಳ್ಳು, ನಾಟಕ ಎನ್ನುವುದು ಕೇವಲ ಜೀವನಿಗಷ್ಟೇ ಗೊತ್ತು. ಬಾಲುಗು ಸಹ ಹೇಳಿಲ್ಲ. ಇ್ಬರು ಇಷ್ಟಪಟ್ಟಿನೇ ಮದುವೆಯಾಗಿದ್ದಾರೆಂದು ಬಾಲು ನಂಬಿಕೊಂಡಿದ್ದಾನೆ. ಕೃಷ್ಣನಿಗಾಗಿ ಜೀವನು ನಾಟಕವಾಡುವುದಕ್ಕೆ ಶುರು ಮಾಡಿದ್ದಾನೆ.

ಕೃಷ್ಣಾಳ ಜವಾಬ್ದಾರಿ ಈಗ ಬಾಲನದ್ದು

ಅಮ್ಮ ಅಮ್ಮ ಎಂದು ಕನವರಿಸುತ್ತಿದ್ದ ಕೃಷ್ಣನಿಗೆ ಅಮ್ಮ ಪರ್ಮನೆಂಟ್ ಆಗಿ ಮನೆಗೆ ಬರುವಂತೆ ಆಯ್ತು. ಆ ಖುಷಿ ಕೊಂಚ ಜಾಸ್ತಿಯೇ ಇದೆ ಕೃಷ್ಣನಿಗೆ. ಈಗ ಅಮ್ಮನ ಜೊತೆಗೆ ನಾನು ಮಲಗ್ತೀನಿ ಅಂತ ಹಠ ಮಾಡ್ತಾ ಇದ್ದಾಳೆ. ಬಾಲನಿಗಂತು ಕೃಷ್ಣನನ್ನು ಸುಧಾರಿಸುವುದೇ ದೊಡ್ಡ ಕೆಲಸವಾಗಿದೆ. ಸತ್ಯ ಹೇಳುವಂತೆ ಇಲ್ಲ, ಕೃಷ್ಣನಿಗೆ ಅರ್ಥ ಮಾಡಿಸುವ ಪರಿ ಗೊತ್ತಿಲ್ಲ. ಹಾಗೋ ಹೀಗೋ ಕೃಷ್ಣನನ್ನು ಒಪ್ಪಿಸಿ ಬಾಲ ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ.

ನೆಟ್ಟಿಗನ ಕ್ಯೂರಿಯಾಸಿಟಿ ಪ್ರಶ್ನೆ

ರಚನಾ ಸೂಪರ್ ಸ್ಟಾರ್. ಏನೇ ಆದರೂ ದೊಡ್ಡ ಸುದ್ದಿಯೇ. ಸಣ್ಣ ಅನೌನ್ಸ್ಮೆಂಟ್ ಇದ್ದಾಗಲೂ ಮೀಡಿಯಾದವ್ರೆಲ್ಲ ಓಡೋಡಿ ಬಂದಿರುತ್ತಾರೆ. ಈಗ ಮದುವೆಯಾಗಿದೆ, ಬೈಟ್ ಮೂಲಕ ಕ್ಲಾರಿಟಿಯೂ ಸಿಕ್ಕಿದೆ. ಆದರೂ ಮೀಡಿಯಾದವ್ರೆಲ್ಲ ಜೀವನ ಮನೆ ಬಳಿಯೇ ಠಿಕಾಣಿ ಹೂಡಿದ್ದಾರೆ. ಇದರಿಂದ ರಚನಾ ಹಾಗೂ ಜೀವನ ತಮಗಿಷ್ಟ ಬಂದಂತೆ ಇರಲು ಆಗುತ್ತಿಲ್ಲ. ಆದರೆ ನೆಟ್ಟಿಗರೊಬ್ಬರಿಗೆ ಇದು ಬಹಳ ಕುತೂಹಲಕಾರಿ ಪ್ರಶ್ನೆಯಾಗಿದೆ. ರಚನಾ ಹಾಗೂ ಜೀವ ಫಸ್ಟ್ ನೈಟ್ ನಲ್ಲಿ ಮೀಡಿಯಾದವ್ರಿಗೇನು ಕೆಲಸ ಎಂದೇ ಕೇಳುತ್ತಿದ್ದಾರೆ. ಅತ್ತ ಅಶ್ವಿನ್ ಕಾಟ ಕೂಡ ಇದೆ. ಮನೆ ಬಳಿಯೇ ಕಾವಲಿನಂತೆ ಕಾಯುತ್ತಾ ಕೂತಿದ್ದಾನೆ.

More from Filmibeat

English summary
colors kannada serial Ninagagi Written Update on November 21st episode. Here is the details about Rachana and Jeeva first night;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X