Olavina Nildaana: ಅಮ್ಮನ ಬಳಿ ಕ್ಷಮೆ ಕೇಳಿದ ಸಿದ್ಧಾಂತ್, ತಾರಿಣಿ ಮನಸ್ಸು ಅರ್ಥ ಮಾಡಿಕೊಳ್ಳುತ್ತಾಳಾ ನಿರುಪಮಾ!?
ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿಯ ಒಳ್ಳೆಯ ಮನಸ್ಸು ಅತ್ತೆಗೆ ತಿಳಿಯುವ ಸಮಯ ಬಂದಿದೆ. ನಿರುಪಮಾಗೆ ತಾರಿಣಿ ಮೇಲೆ ಬಹಳ ಕೋಪ. ಆಕೆಯಿಂದಲೇ ನನ್ನ ಮಗ ನನ್ನನ್ನು ಬಿಟ್ಟು ಹೋಗಲು ಕಾರಣ ಎಂದು ಕೋಪ ಮಾಡಿಕೊಂಡಿರುತ್ತಾಳೆ. ಇದಕ್ಕೆ ಪ್ರಾಚಿ ಕೂಡ ತುಪ್ಪ ಸುರಿಯುತ್ತಾಳೆ.
ಪ್ರಾಚಿಗೆ ಸಿದ್ಧಾಂತ್ ಬಹಳ ಪ್ರೀತಿ, ಆದರೆ ಸಿದ್ಧಾಂತ್‌ಗೆ ಪ್ರಾಚೀನ ಕಂಡರೆ ಆಗುವುದಿಲ್ಲ. ನನಗೆ ಮದುವೆ ಆಗಿದೆ ಎಂದು ತಿಳಿದಿದ್ದರು ಪ್ರಾಚಿ ಬೆನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಆದ್ದರಿಂದ ಸಿದ್ಧಾಂತನಾ ತಾಯಿ ಮನಸ್ಸು ಮಾಡಿದರೆ ನಮ್ಮಿಬ್ಬರ ಮದುವೆ ಸಾಧ್ಯ ಎಂದುಕೊಂಡಿದ್ದಾಳೆ. ಆದರೆ ಪ್ರಾಚೀನ ಕಂಡರೆ ಉರಿದು ಬೀಳುವ ಸಿದ್ಧಾಂತ್‌ಗೆ ಅಮ್ಮನ ನಿರ್ಧಾರ ಬಹಳ ಕೋಪ ತರಿಸುತ್ತದೆ.

ಅಮ್ಮನಿಗೆ ಪ್ರಾಚಿ ಬಗ್ಗೆ ಹೇಳಿದರೆ ಆಕೆ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಸುಮ್ಮನಿರುತ್ತಾನೆ. ಆದರೆ ದಿನೇ ದಿನೇ ಪ್ರಾಚಿ ಕಾಟ ತಾಳಲಾರದೆ ಸಿದ್ಧಾಂತ ತನ್ನ ತಾಯಿಯ ಬಳಿಯಲ್ಲಿ ತಾನು ಮನೆ ಬಿಟ್ಟು ಹೋಗುವುದಾಗಿ ಹೇಳುತ್ತಾ.ನೆ ಇದನ್ನು ಕೇಳಿದ ನಿರೂಪಮಾಗೆ ಬಹಳ ಬೇಸರವಾಗುತ್ತದೆ.
ತಾಯಿಯ ಮಾತು ಕೇಳಿ ಬೇಸರಗೊಂಡ ಸಿದ್ದಾಂತ
ನನ್ನ ಮಗ ಮನೆ ಬಿಟ್ಟು ಹೋಗುವುದು ಬೇಡ ನಾನೇ ಮನೆಬಿಟ್ಟು ಹೋಗುತ್ತೇನೆ ಎಂದು ನಿರ್ಧಾರ ಮಾಡಿದ ನಿರೂಪಮಾ ನೇರವಾಗಿ ಪ್ರಾಚಿ ಮನೆಗೆ ಗಂಟು ಮೂಟೆ ಕಟ್ಟಿಕೊಂಡು ಹೋಗುತ್ತಾಳೆ. ಇದನ್ನು ನೋಡಿದ ಪ್ರಾಚಿ ಮಾತ್ರ ಬಹಳ ಆಶ್ಚರ್ಯ ಪಡುತ್ತಾಳೆ. ಸಿದ್ದಾಂತನ ತಾಯಿಯನ್ನು ನಾಜುಕಾಗಿ ಮನೆಯ ಒಳಗೆ ಕರೆದು ಮಾತನಾಡುತ್ತಾಳೆ. ಆಗ ಸಿದ್ದಾಂತ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾನೆ. ಅದು ನನಗೆ ಬಹಳ ನೋವು ನೀಡಿದೆ. ಅದಕ್ಕೆ ನಾನು ಮನೆ ಬಿಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ.

ಅಮ್ಮನ ಮಾತಿಗೆ ದುಃಖವಾದರೂ ಸುಮ್ಮನಿರುವ ಸಿದ್ದಾಂತ
ನಿರುಪಮಾ ಮಾತು ಕೇಳಿದ ಪ್ರಾಚಿ ಆಕೆಯ ಬೇಳೆ ಬೇಯಿಸಿಕೊಳ್ಳುತ್ತಾಳೆ. ಕಾರಣ ತಾರಿಣೆ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಆಕೆಯ ಮೇಲೆ ದ್ವೇಷ ಬರುವ ಹಾಗೆ ಮಾತನಾಡುತ್ತಾಳೆ. ನನ್ನ ಸೊಸೆಯಿಂದಲೇ ಇದೆಲ್ಲ ಆಗುತ್ತಿರುವುದು, ಮದುವೆಯ ಮುಂಚೆ ನನ್ನ ಮಗ ನಾನು ಹೇಳಿದ ಮಾತನ್ನು ಕೇಳುತ್ತಿದ್ದ. ಆತ ನಾನು ಹೇಳಿದ ಗೆರೆಯನ್ನು ಯಾವತ್ತು ದಾಟಿರಲಿಲ್ಲ ಎಂದು ನಿರೂಪಮಾ ಅಂದುಕೊಳ್ಳುತ್ತಾಳೆ.
ಹೆಂಡತಿಯ ಮನಸ್ಸನ್ನು ಅಮ್ಮನಿಗೆ ಅರ್ಥ ಮಾಡಿಸಲು ಹೊರಟ ಸಿದ್ದಾಂತ್
ಆದರೆ ಸಿದ್ಧಾಂತ್ ನನ್ನ ಮಾತು ಕೇಳುತ್ತಿಲ್ಲ ಆತನಿಗೆ ಹೆಂಡತಿಯ ಮಾತೆ ಮುಖ್ಯ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಇನ್ನು ತಾರಿಣಿ ಮಾತ್ರ ಅತ್ತೆ ಎಲ್ಲೇ ಇದ್ದರೂ ಅವರನ್ನು ಮನೆಗೆ ಕರೆದುಕೊಂಡು ಬನ್ನಿ ಅವರು ಏನೇ ಮಾತನಾಡಿದರು ಬಹಳ ತಾಳ್ಮೆಯಿಂದ ಕೇಳಿರಿ ಇದು ತನ್ನ ಗಂಡನಿಗೆ ಬುದ್ಧಿ ಮಾತು ಹೇಳಿ ಅತ್ತೆಯನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳುತ್ತಾಳೆ. ಇನ್ನಾದರೂ ನಿರುಪಮಾಗೆ ತನ್ನ ಸೊಸೆಯ ಗುಣದ ಬಗ್ಗೆ ಅರಿವಾಗುತ್ತದ ಕಾದು ನೋಡ್ಬೇಕಾಗಿದೆ.


Click it and Unblock the Notifications











