Actor Nandhan: ಕನ್ನಡ ಸೀರಿಯಲ್ ಜಗತ್ತಿನಲ್ಲೊಬ್ಬ ಕನ್ನಡ ಪ್ರೇಮಿ.. ಇವರೇ ನೋಡಿ

By ಎಸ್ ಸುಮಂತ್

ಕರ್ನಾಟಕದಲ್ಲಿಯೇ ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆ, ಕನ್ನಡದವರೇ ಕನ್ನಡ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂಬ ಕೂಗು ನಿನ್ನೆ ಮೊನ್ನೆಯದ್ದಲ್ಲ. ಮಾತಾಡುವಾಗ ಕನ್ನಡ ಬಳಕೆ, ಬರೆಯುವಾಗ ಕನ್ನಡ ಬಳಕೆಯನ್ನು ಹೆಮ್ಮೆಯಿಂದ ಮಾಡಿದಾಗ, ಕನ್ನಡಿಗರು ಎಂಬ ಹೆಮ್ಮೆ ಇನ್ನಷ್ಟು ಹೆಚ್ಚಾಗುತ್ತದೆ. ತನ್ನ ಸೋಷಿಯಲ್ ಮೀಡಿಯಾದಲ್ಲಿ ಕನ್ನಡವನ್ನೇ ಹೆಚ್ಚು ಬಳಸುತ್ತಿರುವ ನಟ ಭುವನ್.

'ಪುಣ್ಯವತಿ' ಧಾರಾವಾಹಿಯಲ್ಲಿ ನಂದನ್ ಅಂದ್ರೇನೆ ಎಲ್ಲರಿಗೂ ಇಷ್ಟ. ಅದಕ್ಕೆ ಪದ್ಮಿನಿ ಯಾರಿಗೂ ಬಿಟ್ಟುಕೊಡ್ತಾ ಇಲ್ಲ. ನಂದನ್ ಮೇಲೆ ಪೂರ್ವಿಗೂ ಮನಸ್ಸಾಗಿದೆ. ಇದು ಸೀರಿಯಲ್ ಕಥೆ. ಆದರೆ, ನಂದನ್ ಅಲಿಯಾಸ್ ಭುವನ್ ರಿಯಲ್ ಲೈಫ್‌ನಲ್ಲಿ ಅಪ್ಪಟ ಕನ್ನಡ ಪ್ರೇಮಿ. ಅವರ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಕನ್ನಡದ ಕಂಪು ಚೆಲ್ಲಿದೆ.

punyavathi-actor-nandhan-kannada-love

ಒಂದೊಂದು ಫೋಟೋಗೆ ಅರ್ಥಗರ್ಭೀತ ವಾಕ್ಯ

ಎಷ್ಟೋ ಜನ ತಾನೂ ಕನ್ನಡ ಪ್ರೇಮಿ ಅಂತ ಹೇಳ್ತಾರೆ. ಆದರೆ, ಕೆಲವರು ನವೆಂಬರ್ ಪ್ರೇಮಿಗಳಾಗಿರುತ್ತಾರೆ. ನಂದನ್ ಅಲಿಯಾಸ್ ಭುವನ್ ಅಪ್ಪಟ ಕನ್ನಡ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ತನ್ನ ಕಾರಿನ ಹಿಂಬದಿ ಗ್ಲಾಸ್ ಮೇಲೂ ಕನ್ನಡದ ಕಂಪು, ಹಾಕುವ ಬಟ್ಟೆಯಲ್ಲೂ ಕನ್ನಡದ ಕಂಪು ಅಷ್ಟೇ ಯಾಕೆ ಒಂದೊಂದು ಫೋಟೋಗೂ ಕನ್ನಡದಲ್ಲಿಯೇ ಅದ್ಭುತ ವಾಕ್ಯವನ್ನು ಬರೆದಿದ್ದಾರೆ. "ನಿನ್ನೆ ನಡೆದ ಕೆಟ್ಟಗಳಿಗೆ ನಾಳೆಗೆ ಪಾಠವಾಗಬಹುದು, ಮಾತು ಬೆಳ್ಳಿಯಂತೆ, ಮೌನ ಬಿಸಿಬಿಸಿ ಬಂಗಾರವಿದ್ದಂತೆ, ಪ್ರತಿಸಲ ಪ್ರತಿಫಲ ಪ್ರಶಸ್ತಿ ರೂಪದಲ್ಲಿಯೇ ಸಿಗಲ್ಲ ಅಲ್ವಾ" ಹೀಗೆ ಜೀವನಕ್ಕೂ ಅನ್ವಯವಾಗುವಂತ ವಾಕ್ಯಗಳನ್ನೇ ತಮ್ಮ ಫೋಟೋಗೆ ಹಾಕಿ, ಮತ್ತೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ.


ಡ್ಯಾನ್ಸ್ ಪ್ರೇಮಿ ಭುವನ್

ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇದ್ದೆ ಇರುತ್ತೆ. ಹಾಗೇ ನಂದನ್‌ಗೆ ಕೂಡ ಡ್ಯಾನ್ಸ್ ಅಂದ್ರೆ ಹುಚ್ಚು. ಗಿಟಾರ್ ಅಂದ್ರೆ ಕ್ರೇಜು. ಭುವನ್ ಜೊತೆಗೊಂದು ಟೀಂ ಇದೆ. ಅವರೆಲ್ಲರೂ ಡ್ಯಾನ್ಸ್ ಮಾಡ್ತಾ ಇದ್ರೆ ಸೂಪರ್ ಎನಿಸುತ್ತದೆ. ನಂದನ್ ಡ್ಯಾನ್ಸ್ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೇ ಗಿಟಾರ್ ನುಡಿಸುತ್ತಿರುವುದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

punyavathi-actor-nandhan-kannada-love

ಫ್ಯಾನ್ಸ್ ಪೇಜ್‌ಗಳದ್ದೇ ಅಬ್ಬರ

ನಂದನ್‌ಗೆ ಫ್ಯಾನ್ಸ್ ಕೊರತೆಯೇನು ಇಲ್ಲ. ಸಿಕ್ಕಾಪಟ್ಟೆ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿದೆ. ಫ್ಯಾನ್ಸ್ ಎಂದಾಕ್ಷಣಾ ಇರುವ ಕೆಲಸವನ್ನೆಲ್ಲಾ ಬಿಟ್ಟು ಕೂರ್ತಾರೆ ಅಂದ್ರೆ ಅದಕ್ಕೊಂದು ಅರ್ಥ, ಅಭಿಮಾನ ಇರುತ್ತೆ. ಇದನ್ನು ಅರ್ಥ ಮಾಡಿಕೊಂಡಿರುವ ಭುವನ್, ತನ್ನ ಅಭಿಮಾನಿಗಳಿಗೋಸ್ಕರ ವಿಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ಇಷ್ಟೊಂದು ಸಮಯ ಕೊಟ್ಟು ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದೀರಿ, ನಿಮ್ಮ ಅಭಿಮಾನ ಮುಂದೆಯೂ ಸಾಗಲಿ ಎಂದಿದ್ದಾರೆ.

More from Filmibeat

English summary
Colors Kannada serial Punyavathi actor Nandhan kannada love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X