Bhuvan: 'ಪುಣ್ಯವತಿ' ಹೀರೊಗೆ ಮಹಿಳಾ ಅಭಿಮಾನಿಗಳೇ ಜಾಸ್ತಿ.. ಹುಡುಗಿಯರ ಮನ ಗೆದ್ದ ಭುವನ್!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ 'ಪುಣ್ಯವತಿ' ಧಾರಾವಾಹಿ ಎಲ್ಲರ ಮನಸ್ಸನ್ನು ಗೆದ್ದಿದೆ. ಹಳ್ಳಿಯ ಹುಡುಗಿಯ ಜೊತೆಗೆ ಮದುವೆಯಾಗಿರುವ ನಂದನ್ ಈಗ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪದ್ಮಿನಿಗಾಗಿ ನಂದ‌ನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಒಮ್ಮೆ ಮದುವೆ ಮುರಿದೇ ಬಿದ್ದಿತ್ತು. ಆದ್ರೆ ನಂದನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಕಡೆಗೂ ನಂದನ್ ತನ್ನ ಪ್ರೀತಿಯನ್ನು ಪಡೆದಿದ್ದಾನೆ.

ವಿಧಿಯ ಆಟವೇ ಬೇರೆಯಾಗಿತ್ತು. ನಂದನ್ ಮತ್ತು ಪದ್ಮಿನಿ ನಡುವೆ ಪ್ರೀತಿ ಇದೆ. ಆದರೆ, ವಿಧಿ ತಾಳಿಯನ್ನು ಮಾತ್ರ ಹಾಕಿಸಿಲ್ಲ. ನಂದನ್ ತಾಳಿ ಕಟ್ಟಿರುವುದೇ ತಂಗಿಗೆ. ಪದ್ಮಿನಿ ಈಗ ತನ್ನ ಜೀವನವನ್ನು ತ್ಯಾಗ ಮಾಡಲು ಹೊರಟಿದ್ದಾಳೆ. ಇದು ನಂದನ್‌ಗೆ ರಿಸೀವ್ ಮಾಡಿಕೊಳ್ಳಲು ರೆಡಿ ಇಲ್ಲ.

Colors kannada serial Punyavathi hero Bhuvan good at guitar instrument

ಹುಡುಗಿಯರ ಮನ ಗೆದ್ದ ನಂದನ್

ನಂದನ್ ನಿಜವಾದ ಹೆಸರು ಭುವನ್. 'ಪುಣ್ಯವತಿ' ಧಾರಾವಾಹಿಯಲ್ಲಿ ಕ್ಯೂಟ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಿನಿಯ ಜೊತೆಗೆ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಭುವನ್ ನಡೆಗೆ ಮಹಿಳಾ ಮಣಿಗಳೇ ಹೆಚ್ಚಿನ ಅಭಿಮಾನಿಗಳಾಗಿದ್ದಾರೆ. ಅವರ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನಂದನ್ ಮಾಡುವ ಪ್ರೀತಿಗೆ, ತೋರುವ ಕಾಳಜಿಗೆ ಇಂತಹ ಹುಡುಗ ಇರಬೇಕು ಎಂಬ ಫೀಲ್ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ನಂದನ್‌ಗೆ ಹೆಚ್ಚು ಬೆಂಬಲಕ್ಕೆ ನಿಂತಿದ್ದಾರೆ. ನಂದನ್‌ಗೆ ನಿಜವಾದ ಪ್ರೀತಿ ಸಿಗಲಿ ಎಂದೇ ಬಯಸುತ್ತಿದ್ದಾರೆ.

ಕ್ಯೂಟ್ ಫೋಟೋಗಳೇ ರಾರಾಜಿಸುತ್ತಿವೆ

ಸೋಷಿಯಲ್ ಮೀಡಿಯಾದಲ್ಲೂ ನಂದನ್ ಅಲಿಯಾಸ್ ಭುವನ್ ಬ್ಯುಸಿಯಾಗಿದ್ದಾರೆ. 'ಪುಣ್ಯವತಿ' ಧಾರಾವಾಹಿ ಶುರುವಾದಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಟೋಗಳನ್ನು ಹಾಕುತ್ತಿದ್ದಾರೆ‌. ಸದ್ಯಕ್ಕೆ 17 ಸಾವಿರದಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಡಿಫ್ರೆಂಟ್ ಡಿಫ್ರೆಂಟ್ ಪೋಸ್ ಕೊಟ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಡ್ಯಾನ್ಸ್ ಮಾಡುವ ರೀತಿಗೆ ಮತ್ತಷ್ಟು ಖುಷಿ ವ್ಯಕ್ತಪಡಿಸಿದ್ದಾರೆ. ಡ್ಯಾನ್ಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಡ್ಯಾನ್ಸಿಂಗ್ ಸೂಪರ್ ಜೋಡಿ ಕಾಂಪಿಟೇಷನ್‌ನಲ್ಲಿ ಕೂಡ ಫುಲ್ ಹೆಜ್ಜೆ ಹಾಕಿ ಎಲ್ಲರ ಮನಸ್ಸು ಗೆದ್ದಿದ್ದಾರೆ.

Colors kannada serial Punyavathi hero Bhuvan good at guitar instrument


ಗಿಟಾರ್ ಪ್ರಿಯ ಭುವನ್

ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇರುತ್ತದೆ. ಭುವನ್‌ಗೆ ಗಿಟಾರ್ ಬಾರಿಸುವ ಕ್ರೇಜ್ ಇದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ‌ ಪಡೆದಿರುವ ಭುವನ್, ರಂಗಭೂಮಿಯ ಅನುಭವವನ್ನು ಪಡೆದಿದ್ದಾರೆ. ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆ. ನೃತ್ಯದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಕನ್ನಡ ಪ್ರೇಮಿಯೂ ಕೂಡ ಹೌದು. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚಾಗಿಯೇ ಕನ್ನಡವನ್ನೇ ಬಳಕೆ‌ ಮಾಡುತ್ತಾರೆ. ಕನ್ನಡ ಹಾಡುಗಳಿಗೆ ಹೆಚ್ಚಿನ ಡ್ಯಾನ್ಸ್ ಮಾಡುತ್ತಾರೆ. ಸದ್ಯ 'ಪುಣ್ಯವತಿ' ಧಾರಾವಾಹಿಯಲ್ಲಿ ನಂದನ್ ಆಗಿ ಫೇಮಸ್ ಆಗಿದ್ದಾರೆ.

ಪದ್ಮಿನಿಯನ್ನೇ ಉಳಿಸಿಕೊಳ್ತಾನಾ ನಂದನ್?

'ಪುಣ್ಯವತಿ' ಧಾರಾವಾಹಿಯಲ್ಲಿ ಅಮ್ಮಾಜಿಯ ಮುದ್ದಿನ ಮೊಮ್ಮಗ. ಎಲ್ಲರ ಪ್ರೀತಿಯ ಮಗ. ಪದ್ಮಿನಿಯನ್ನು ಪ್ರೀತಿ ಮಾಡಿದ್ದ. ಆದರೆ, ಪದ್ಮಿನಿ ತಂಗಿಗೆ ತಾಳಿ‌ಕಟ್ಟಿದ್ದಾನೆ. ಇದು ನಂದನ್‌ಗೂ ಗೊತ್ತು. ಅದನ್ನು ಮರೆಸುವುದಕ್ಕೆ ಪ್ರಯತ್ನಿಸುತ್ತಿದ್ದಾನೆ. ಆ ಕಡೆ ಅಮ್ಮಾಜಿಗೂ ವಿಚಾರ ಗೊತ್ತಾಗಿ, ಪದ್ಮಿನಿ ತಂಗಿಯನ್ನೇ ಸೊಸೆಯನ್ನಾಗಿ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಆದರೆ, ಇದಕ್ಕೆ ನಂದನ್ ಮನಸ್ಸು ಒಪ್ಪುತ್ತಿಲ್ಲ. ಪದ್ಮಿನಿಯನ್ನೇ ಹೆಂಡತಿ, ಅವಳಿಲ್ಲದೆ ಇದ್ದರೆ ಲೈಫ್ ಸಾಧ್ಯವಿಲ್ಲ ಎನ್ನುತ್ತಿದ್ದಾನೆ. ಪದ್ಮಿನಿ ಕೂಡ ತಂಗಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ದಾಳೆ. ಹೀಗಾಗಿ‌ ನಂದನ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

More from Filmibeat

English summary
Colors kannada serial Punyavathi hero Bhuvan good at guitar instrument. Here is the details of Bhuvan lifestyle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X