Punyavathi: ಪದ್ಮಿನಿ-ನಂದನ್ ದೂರ ಮಾಡಲು ಪೂರ್ವಿ ಸಂಚು, ಪೂರ್ವಿ ನಾಟಕಕ್ಕೆ ತೆರೆ ಎಳೆದ ಚಿನ್ನು!

By Poorva

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಣ್ಯವತಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಅಕ್ಕ- ಬಾವನನ್ನು ದೂರ ಮಾಡಬೇಕು ಎಂದುಕೊಂಡಿರುವ ಪೂರ್ವಿ ಹಲವು ಸಂಚು ಮಾಡುತ್ತಿದ್ದಾರೆ. ಆಕೆ ವಿಷ ತೆಗೆದುಕೊಂಡಿದ್ದಾಳೆ ಎಂದು ಅಮ್ಮಾಜಿ ಬೇಸರ ಮಾಡಿಕೊಂಡು ತಲೆಗೆ ಕೈ ಹೊತ್ತು ಕುಳಿತಿದ್ದಾರೆ.

ಪೂರ್ವಿ ಉದ್ದೇಶ ಒಂದೇ ಹೇಗಾದರೂ ಮಾಡಿ ನಂದನ್ ನನ್ನವನಾಗವೇಕು... ಅಕ್ಕನಿಗೆ ನಂದನ್ ಮೇಲಿರುವ ಮೋಹ ಬದಲಾಗಬೇಕು .. ಎಂದು ಹೇಗಾದರೂ ಮಾಡಿ ಅಕ್ಕ ಪದ್ಮಿನಿ ಹಾಗೂ ನಂದನ್‌ನನ್ನು ದೂರ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇದ್ದಾಳೆ ಪೂರ್ವಿ.. ಆದರೆ ಪೂರ್ವಿ ತಲೆ ಸುತ್ತಿ ಬಿದ್ದಿರುವುದನ್ನು ಕಂಡ ಪದ್ಮಿನಿಗೆ ಕೈ ಕಾಲು ಅಲ್ಲಾಡುತ್ತಿಲ್ಲ.

Colors Kannada serial Punyavathi written updated on 12th September

ಪೂರ್ವಿ ಯಾಕೆ ತಲೆ ತಿರುಗಿ ಬಿದ್ದಳು? ಆಕೆಗೆ ಏನಾಯಿತು ಎಂದು ಬಹಳ ತಲೆ ಕೆಡಿಸಿಕೊಂಡಿದ್ದಾಳೆ. ಈ ವಿಚಾರವನ್ನು ಅಪ್ಪ ಅಮ್ಮನ ಬಳಿ ಹೇಳಿದರೆ ಪರಿಣಾಮ ಹೇಗಾಗಬೇಡ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ನಂದನ್ ಪದ್ಮಿನಿಗೆ ಸಾಂತ್ವನ ಹೇಳುತ್ತಾನೆ. ಏನು ಆಗಲ್ಲ ಭಯಪಡಬೇಡ ಎಂದು .ಆದರೂ ಪದ್ಮಿನಿಗೆ ಗೊಂಬೆ ಸಮಾಧಾನ ಹೇಳುವವರೆಗೂ ನೆಮ್ಮದಿ ಇಲ್ಲದ ಹಾಗೆ ಆಗಿತ್ತು... ಇನ್ನೂ ಚಿನ್ನು ಹಾಗೂ ಗೊಂಬೆ ಅಮ್ಮಾಜಿಗೆ ಸಮಾಧಾನ ಮಾಡುತ್ತಾರೆ.

ಪೂರ್ವಿ ಮೇಲೆ ಅನುಮಾನಗೊಂಡ ಗೊಂಬೆ, ಚಿನ್ನು

ಅಮ್ಮಾಜಿ ಮಾತ್ರ ಏನೇನೋ ಅವಾಂತರಗಳು ಆಗುತ್ತಿದೆ ಅಲ್ವಾ ಎಂದು ಸಿಕ್ಕಾ ಪಟ್ಟೆ ಬೇಸರ ವ್ಯಕ್ತಪಡಿಸುತ್ತಾ ಇರುತ್ತಾರೆ. ಚಿನ್ನು ಹಾಗೂ ಗೊಂಬೆ ಪೂರ್ವಿ ವಿಷ ಕುಡಿದಿರುವುದು ಹೌದೋ ಅಥವಾ ಇಲ್ಲವೋ ಎಂಬುದು ತಿಳಿಯದ ಹಾಗೆ ಆಗುತ್ತದೆ. ಇನ್ನೂ ಪೂರ್ವಿ ರೂಮ್ ಕಡೆ ಹೋದ ಚಿನ್ನು ಆಕೆ ರೂಮ್ ಎಲ್ಲಾ ಸರ್ಚ್ ಮಾಡುವಾಗ ವಿಷದ ಬಾಟಲ್ ಬಿದ್ದಿರುವ ಹಾಗೆ ಕಾಣುತ್ತದೆ .

ಬಾಟಲಿ ಮೂಸಿ ನೋಡಿದಾಗ ಚಿನ್ನುಗೆ ಪೂರ್ವಿ ಬಂಡಾವಳ ತಿಳಿಯುತ್ತದೆ.. ಆ ಮದ್ದಿನ ಬಾಟಲ್ ಒಳಗೆ ಕೂಲ್ ಡ್ರಿಂಕ್ಸ್ ವಾಸನೆ ಚಿನ್ನು ಮೂಗಿಗೆ ಬಡಿಯುತ್ತದೆ. ಆಕೆ ಅದನ್ನು ನೇರವಾಗಿ ಡಾಕ್ಟರ್ ಬಳಿ ತೋರಿಸಿದಾಗ ನನ್ನ ಮೇಲೆ ಅನುಮಾನ ಪಡುತ್ತಾ ಇದ್ದೀರಾ ಎಂದು ಕೇಳಿದಾಗ ನರ್ಸ್ ಭಯ ಪಡುತ್ತಿರುತ್ತಾರೆ. ಯಾಕೆಂದರೆ ಆಕೆಯೇ ಆ ಡಾಕ್ಯುಮೆಂಟ್ ಅನ್ನು ಡಾಕ್ಟರ್ ಗೆ ನೀಡಿದ್ದವಳು.

Colors Kannada serial Punyavathi written updated on 12th September

ಪೂರ್ವಿ ಪ್ಲ್ಯಾನ್‌ಗೆ ಬ್ರೇಕ್ ಹಾಕಿದ ಚಿನ್ನು, ಗೊಂಬೆ

ಬಾಟಲಿ ನೋಡಿದ ಡಾಕ್ಟರ್ ನರ್ಸ್ ಬಳಿ ವಿಚಾರಣೆ ಮಾಡಿದಾಗ ಪೂರ್ವಿ ಮಾಡಿದ ಖತರ್ನಾಕ್ ಕೆಲಸವನ್ನು ಬಾಯಿ ಬಿಡುತ್ತಾಳೆ. ಆಕೆ ನನಗೆ ಚಿನ್ನದ ಚೈನ್ ಕೊಟ್ಟು ಆಮಿಷ ಒಡ್ಡಿದರು ಆ ಕಾರಣದಿಂದ ಆಗಿ ನಾನು ಆಕೆ ಒಡ್ಡಿದ ಆಸೆಗೆ ಬಲಿಯಾದೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಹೇಳಿದಾಗ ಡಾಕ್ಟರ್ ನರ್ಸ್ ಗೆ ಸರಿಯಾಗಿ ಬೈದು ಬುದ್ದಿ ಹೇಳುತ್ತಾರೆ. ಆ ಬಳಿಕ ಚಿನ್ನು ಗೊಂಬೆ ಇಬ್ಬರಲ್ಲೂ ಕ್ಷಮೆಯಾಚನೆ ಮಾಡುತ್ತಾರೆ.

ಜೊತೆಗೆ ಈ ವಿಚಾರವನ್ನು ಬೇರೆ ಎಲ್ಲೂ ಪ್ರಸ್ತಾಪ ಮಾಡದ ಹಾಗೆ ಹೇಳುತ್ತಾರೆ. ಇನ್ನೂ ಪೂರ್ವಿ ಮನ ಪರಿವರ್ತನೆ ಮಾಡಲು ಚಿನ್ನು ಗೊಂಬೆ ಏನು ಮಾಡುತ್ತಾರೆ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಪುಣ್ಯವತಿ ವೀಕ್ಷಕರಿಗೆ ಅಕ್ಕ ಹಾಗೂ ಬಾವ ನಂದನ್ ಜೀವನವನ್ನು ಹಾಳು ಮಾಡಲು ಪೂರ್ವಿ ಹೊಂಚು ಹಾಕುತ್ತಿರುವುದು ಬೇಸರ ತಂದಿದೆ.

More from Filmibeat

English summary
Kannada serial Punyavathi written updated on 12th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X