Ramachari: ಕಿಟ್ಟಿ-ರಾಮಾಚಾರಿ ಒಂದಾಗಿದಾಯ್ತು: ಮಾನ್ಯತಾ - ವೈಶಾಖಗೆ ನರಕ ಗ್ಯಾರಂಟಿ
ರಾಮಾಚಾರಿ ಸಾವು ಬದುಕಿನ ಹಂತಕ್ಕೆ ತಲುಪುವುದಕ್ಕೆ ಯಾರೋ ಕಡುವೈರಿಗಳ ದ್ವೇಷವೇ ಕಾರಣ ಅನ್ನೋದು ಚಾರುಗೆ ಬಲವಾದ ಅನುಮಾನ. ಕಿಟ್ಟಿಯನ್ನು ರಾಮಾಚಾರಿ ಸ್ಥಾನಕ್ಕೆ ಬಿಟ್ಟು ರಾಮಚಾರಿಯನ್ನು ಕೊಲ್ಲುವ ಪ್ರಯತ್ನ ಮಾಡಲಾಗಿತ್ತು. ಆದರೆ ಕಿಟ್ಟಿ ಯಾವ ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಸಮಯ ಬಂದಾಗ ಎಲ್ಲವನ್ನು ಹೇಳುತ್ತೇನೆ ಎಂದು ತೇಲಿಸಿ ಬಿಟ್ಟಿದ್ದಾನೆ.
ಕಿಟ್ಟಿಗೆ ಈ ವಿಚಾರವನ್ನು ಹೇಗೆ ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಯಾಕಂದ್ರೆ ರಾಮಾಚಾರಿಯ ಪ್ರಾಣಕ್ಕೆ ಸಂಚಕಾರ ತಂದಿರುವುದು ಚಾರು ತಾಯಿ ಮಾನ್ಯತಾ, ಮನೆಯಲ್ಲಿ ಅತ್ತಿಗೆ ಎನಿಸಿಕೊಂಡಿರುವ ವೈಶಾಖ. ಹೀಗಾಗಿ ಏನು ಹೇಳಬೇಕು ಎಂದು ತೋಚದೆ ಸುಮ್ಮನೆ ಆಗಿದ್ದಾನೆ. ಈಗ ರಾಮಾಚಾರಿಯೂ ಒಂದಾಗಿರುವ ಕಾರಣ ಸತ್ಯ ಹೇಳುವ ಸಮಯ ಬಂದಿದೆ.

ಬದುಕಿಬಿಟ್ಟ ರಾಮಾಚಾರಿ
ಜೀವನದಲ್ಲಿ ಜಿಗುಪ್ಸೆಯನ್ನೇ ಕಳೆದುಕೊಂಡ ಚಾರು ಬದುಕಲ್ಲಿ ಮತ್ತೆ ಹೊಸ ಚೈತನ್ಯ ಶುರುವಾಗಿದ್ದು ರಾಮಾಚಾರಿ ಬದುಕಿ ಬಂದ ಮೇಲೆ. ಗುರುಗಳಿಂದ ರಾಮಾಚಾರಿಯ ದೇಹಕ್ಕೆ ಶಕ್ತಿ ಭರಿಸುವ ಕೆಲಸವಾಗುತ್ತಿತ್ತು. ಆದರೆ ಅಷ್ಟರಲ್ಲಿ ಕಿಟ್ಟಿ ಹಾಗೂ ಚಾರು ಅಪಾಯಕ್ಕೆ ಸಿಲುಕಿದ್ದರು. ಹೆಂಡತಿಯ ಕೂಗಿಗೆ ಮಲಗಿದ್ದಲ್ಲಿದ್ದ ಎದ್ದ ರಾಮಾಚಾರಿ ಎಲ್ಲರನ್ನು ಬಗ್ಗು ಬಡಿದಿದ್ದ. ರೌಡಿಗಳಿಂದ ತಮ್ಮನನ್ನು, ಹೆಂಡತಿಯನ್ನು ಕಾಪಾಡಿಕೊಂಡಿದ್ದ. ಕಡೆಗೆ ಆ ರೌಡಿಗಳು ಅಲ್ಲಿಂದ ಓಡಿ ಹೋಗಿದ್ದರು. ಚಾರುಗೆ ಮತ್ತೆ ಜೀವ ಬಂದಂತೆ ಆಗಿತ್ತು.
ಚಾರು-ಕಿಟ್ಟಿಯ ತ್ಯಾಗ ಮಹತ್ವದ್ದು
ರಾಮಚಾರಿ ಸಂಪೂರ್ಣ ಹುಷಾರಾಗಿದ್ದಾನೆ. ಈಗ ಗುರುಗಳಿಂದ ಆಶೀರ್ವಾದ ಪಡೆದು ಮನೆಗೆ ಹೋಗುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಗುರುಗಳು ನಡೆದಿದ್ದೆಲ್ಲವನ್ನು ತಿಳಿಸಿದರು. ಕಪಾಲಿ ಬೆಟ್ಟಕ್ಕೆ ಹೋದ ಸೀತೆಯನ್ನು ಲಕ್ಷ್ಮಣನಂತೆ ಕಾಪಾಡಿದ ಕಿಟ್ಟಿಯ ಬಗ್ಗೆ ಹೇಳಿ ಹೊಗಳಿದರು ಅವರಿಬ್ಬರು ಇಲ್ಲದೇ ಹೋಗಿದ್ದರೆ ಜೀವ ಉಳಿಯುವುದೇ ಕಷ್ಟವಾಗುತ್ತಿತ್ತು ಎಂದರೆ. ಚಾರು ಅಂತ ಇರೋ ಬರೊಇ ದೇವರಿಗೆಲ್ಲಾ ಕೈ ಮುಗಿದು ಹರಕೆ ಹೊತ್ತಿದ್ದಳು. ಕಿಟ್ಟಿ ಕೂಡ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಅಣ್ಣನನ್ನು ಕಾಪಾಡಿದ್ದ. ಇದೆಲ್ಲವನ್ನು ಹೇಳಿ, ಗುರುಗಳು ಮೂವರನ್ನು ಬೀಳ್ಕೊಟ್ಟರು.
ಮನೆಗೆ ಹೊರಟ ಮೂವರು
ರಾಮಾಚಾರಿ ಹಾಗೂ ಚಾರುಳನ್ನು ಕರೆದುಕೊಂಡು ಕಿಟ್ಟಿ ಹೊರಟ. ಮನೆಯವರಿಗೆಲ್ಲಾ ರಾಮಾಚಾರಿ ಆರೋಗ್ಯ ಸರಿಯಾದದ್ದು ಗೊತ್ತಾದರೆ ತುಂಬಾ ಖುಷಿಯಾಗುತ್ತಾರೆ. ಯಾಕಂದ್ರೆ ಕಿಟ್ಟಿ ಮಗುವಿದ್ದಾಗಲೇ ಕಳೆದು ಹೋಗಿದ್ದ. ಅವನನ್ನು ಹುಡುಕಲು ಪೇಪರ್ ಆ್ಯಡ್ ಕೂಡ ಕೊಟ್ಟಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಈಗ ಇಬ್ಬರು ಮಕ್ಕಳನ್ನು ಒಟ್ಟಿಗೆ ನೋಡಿದರೆ ನಾರಾಯಣ ಆಚಾರ್ಯರಿಗೆ ಇದಕ್ಕಿಂತ ಖುಷಿ ಬೇಕಾ. ಹೀಗಾಗಿಯೇ ಮಕ್ಕಳು ಸರ್ಪೈಸ್ ಕೊಡುವುದಕ್ಕೆ ಪ್ಲ್ಯಾನ್ ಮಾಡಿ ಹೊರಟಿದ್ದಾರೆ.

ದಾರಿಯುದ್ಧಕ್ಕೂ ಕಿಡಿಗೇಡಿಗಳದ್ದೇ ಮಾತು
ಇದರ ನಡುವೆ ಆ ಕಿಡಿಗೇಡಿಗಳ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಇದೇ ರೀತಿ ಆ ಕಿಡಿಗೇಡಿಗಳನ್ನು ಹಾಗೇ ಬಿಟ್ಟರೆ ಮನೆಯನ್ನೇ ಸರ್ವನಾಶ ಮಾಡಿ ಬಿಡುತ್ತಾರೆ. ಅವರು ಯಾರು ಅಂತ ಹೇಳು ಅಂದಿದ್ದಾನೆ. ಕಿಟ್ಟಿಗೂ ಆ ಕಿಡಿಗೇಡಿಗಳ ಬಗ್ಗೆ ಗೊತ್ತಿದೆ. ಹೀಗೆ ಬಿಟ್ಟರೆ ಮನೆಯನ್ನೆ ಸರ್ವನಾಶ ಮಾಡಿಬಿಡುತ್ತಾರೆ ಎಂಬುದು ಅರ್ಥವಾಗಿದೆ. ಈಗಾಗಲೇ ಕಿಟ್ಟಿಯೇ ರಾಮಾಚಾರಿ ಎಂಬ ನಾಟಕ ಶುರು ಮಾಡಿ, ಅವರಿಗೆ ಬಿಸಿ ಮುಟ್ಟಿಸಿದ್ದಾನೆ. ಈಗ ಇಬ್ಬರು ಅಣ್ಣ ತಮ್ಮಂದಿರು ಒಂದಾಗಿರುವ ಕಾರಣ, ಮೂವರನ್ನು ಬಿಡುವ ಮಾತೇ ಇಲ್ಲ.


Click it and Unblock the Notifications











