Ramachari: ಸತ್ಯ ಹೇಳಬೇಕೆನ್ನುವಾಗಲೇ ಖುಷಿ ಸುದ್ದಿ ಕೊಟ್ಟ ವೈಶಾಖ; ಕಿಟ್ಟಿ ನಡೆಯೇನು?
ರಾಮಾಚಾರಿಗೆ ಮನೆಯಲ್ಲಿಯೇ ದೊಡ್ಡ ಶತ್ರುಗಳಿದ್ದಾರೆ. ಚಾರುಳನ್ನು ಪ್ರೀತಿಸಿ ಮದುವೆಯಾದಾಗಿಂದ ರಾಮಾಚಾರಿ ಟಾರ್ಗೆಟ್ ಆಗಿದ್ದಾನೆ. ರಾಮಾಚಾರಿ ಮೇಲೆ ಮಾನ್ಯತಾ ಕೋಪ ಸಾಧಿಸುವುದರಲ್ಲಿ ಒಂದು ಅರ್ಥವಿದೆ. ಆದರೆ ಆ ದ್ವೇಷಕಾರುವ ಜಾಗಕ್ಕೆ ಮನೆಯ ಸಿಸೆ ವೈಶಾಖ ಕೂಡ ಸೇರಿಕೊಂಡಿದ್ದಾಳೆ.
ನೋಡುವುದಕ್ಕೆ ರಾಮಚಾರಿಯಂತೆಯೇ ಇದ್ದ ಕ್ರಿಮಿನಲ್ ಬ್ಯಾಗ್ರೌಂಡ್‌ನ ಕಿಟ್ಟಿಯನ್ನ ಮಾನ್ಯತಾ, ರಾಮಾಚಾರಿ ಮನೆಗೆ ಬಿಟ್ಟಳು. ಈಗ ಎಲ್ಲಾ ಕಷ್ಟಗಾಲ ಕಳೆದು, ಕಿಟ್ಟಿಗೆ ಅಪ್ಪ-ಅಮ್ಮನು ಸಿಕ್ಕಿದ್ದಾರೆ, ಚಾರುಗೆ ಗಂಡನು ಬದುಕಿ ಬಂದಿದ್ದಾನೆ ಎಂಬ ಖುಷಿ. ಆದರೆ ಇಷ್ಟೆಲ್ಲಾ ಮಾಡಿದವರು ಯಾರು ಎಂಬ ದೊಡ್ಡ ಪ್ರಶ್ನೆ ರಾಮಾಚಾರಿ ಹಾಗೂ ಚಾರುಳದ್ದು.

ಕಿಟ್ಟಿಗೂ ಗೊಂದಲ
ಆ ಹಿತ ಶತ್ರುಗಳನ್ನು ತಿಳಿಯಲೇಬೇಕೆಂಬ ಹಂಬಲವೂ ಇಬ್ಬರದ್ದು. ಆ ಸತ್ಯ ಗೊತ್ತಿರುವುದು ಕಿಟ್ಟಿಗೆ ಮಾತ್ರ. ಕಿಟ್ಟಿಯೂ ಗೊಂದಲದಲ್ಲಿಯೇ ಇದ್ದಾನೆ. ಮನೆಯ ಸೊಸೆ ಯಾಕಿಂತ ಕೆಲಸ ಮಾಡಿದಳು ಎಂದು. ಸತ್ಯ ಹೇಳಬೇಕು ಎನ್ನುವಷ್ಟರಲ್ಲಿ ವೈಶಾಖಳೆ ಗುಡ್ ನ್ಯೂಸ್ ಕೊಟ್ಟಿದ್ದಾಳೆ.
ಸತ್ಯ ಹೇಳಲು ನಿರ್ಧರಿಸಿದ್ದ ಕಿಟ್ಟಿ
ಸತ್ಯ ಯಾವತ್ತಿದ್ರು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ. ಅದು ಯಾವಾಗ ಬೇಕಾದರೂ ಸುಡಬಹುದು. ಹೀಗಾಗಿ ಆದಷ್ಟು ಬೇಗ ಆ ಕೆಂಡವನ್ನು ಹೊರಗೆ ಹಾಕಬೇಕು. ಕಿಟ್ಟಿಯದ್ದು ಅದೇ ಪರಿಸ್ಥಿತಿ. ಸತ್ಯ ಗೊತ್ತಿರುವುದು ಅವನೊಬ್ಬನಿಗೆ. ಅದರ ಅನ್ವೇಷಣೆಯಲ್ಲಿಯೇ ಇನ್ನು ಸುತ್ತುತ್ತಾ ಇದ್ದಾನೆ. ಆದರೂ ಸತ್ಯ ಹೇಳಿಯೇ ಬಿಡುವವನಂತೆ ಮನೆಯ ಶತ್ರು ವೈಶಾಖಳ ಮುಂದೆ ನಿಂತಿದ್ದೇ ತಡ, ಗಢಗಢ ನಡುಗಿ ಹೊಸ ನಾಟಕವನ್ನೇ ಶುರು ಮಾಡಿಬಿಟ್ಟಳು.
ತಲೆಸುತ್ತಿ ಬಿದ್ದ ವೈಶಾಖ
ವೈಶಾಖ ಕೆಟ್ಟವರ ಸಹವಾಸವನ್ನು ಸುಲಭವಾಗಿ ಮಾಡುತ್ತಾಳೆ. ತನಗೆ ಲಾಭವಾಗುತ್ತೆ ಎಂದರೆ ತನ್ನ ಮನೆ ಎಂಬುದನ್ನು ನೋಡದೆ ಕೆಟ್ಟದ್ದನ್ನೇ ಮಾಡುತ್ತಾಳೆ. ಈಗ ತನಗೆ ಹಣ ಸಿಗುತ್ತೆ ಎಂಬ ಕಾರಣಕ್ಕೆ ಮಾವನನ್ನು ಸಾಯಿಸುವುದಕ್ಕೆ ಹೋದಳು, ಮೈದುನನ್ನು ಕೊಲ್ಲುವುದಕ್ಕೆ ನಿಂತಳು. ಈಗ ಸತ್ಯ ಗೊತ್ತಾಗುವ ಭಯಕ್ಕೆ ತಲೆ ಸುತ್ತುವ ನಾಟಕ ಶುರು ಮಾಡಿದಳು.

ತಾಯಿಯಾಗುವ ಖುಷಿ ನೀಡಿದ ವೈಶಾಖ
ವೈಶಾಖ ಸತ್ಯಕ್ಕೆ ಹೆದರಿಯೇ ತಲೆ ಸುತ್ತು ಬಂದು ಬೀಳುವ ನಾಟಕವಾಡಿದಳು ಸರಿ. ಆದರೆ ಈ ನಾಟಕ ಇಡೀ ಮನೆಯವರಿಗೆ ಖುಷಿಯನ್ನೇ ನೀಡಿದೆ. ಡಾಕ್ಟರ್ ಬಳಿ ತಪಾಸಣೆ ಮಾಡಿಸಿದಾಗ ವೈಶಾಖ ಗರ್ಭಿಣಿ ಎಂಬುದು ಗೊತ್ತಾಗಿದೆ. ಈ ಸತ್ಯ ಕೇಳಿ ಮನೆಯವರೆಲ್ಲಾ ಖುಷಿಯಾಗಿದ್ದಾರೆ. ವೈಶಾಖಗೆ ಸಿಹಿ ತಿನ್ನಿಸಿದ್ದಾರೆ. ಮಾವನಿಗೆ ಏನೇ ಕೋಪವಿದ್ದರೂ ಮನೆಗೆ ವಾರಸುದಾರ ಬರ್ತಾ ಇದ್ದಾನೆ ಎಂಬ ಖುಷಿಪಟ್ಟಿದ್ದಾರೆ. ಇನ್ನು ಕೋದಂಡ ಮೊದಲ ಹೆಂಡತಿಯೇ ಹುಟ್ಟಿ ಬರುತ್ತಿದ್ದಾಳೆ ಎಂದು ಸಂತಸ ಪಟ್ಟಿದ್ದಾನೆ.
ಸತ್ಯ ಹೇಳಲ್ವಾ ಕಿಟ್ಟಿ?
ಕಿಟ್ಟಿಗೆ ಮನೆಯವರ ಸುಖ, ಶಾಂತಿ, ನೆಮ್ಮದಿ ಬಹಳ ಮುಖ್ಯ. ಸತ್ಯ ಹೇಳಿದರೆ ಎಲ್ಲರ ಮನಸ್ಸಂತು ಒಡೆದು ಹೋಗುತ್ತದೆ. ಸೊಸೆಯೇ ಇಂಥವರ ಜೊತೆ ಸೇರಿ ಮನೆ ಹಾಳು ಮಾಡಿಬಿಟ್ಟಳಲ್ಲ ಅಂತ ಕೊರಗುತ್ತಾರೆ. ಆದರೆ ಈಗ ತಾಯಿ ಬೇರೆ ಆಗುತ್ತಿದ್ದಾಳೆ. ಹೀಗಾಗಿ ಸತ್ಯ ಹೇಳುವುದಕ್ಕೆ ಮುಂದಾದ ಕಿಟ್ಟಿಯ ಮನಸ್ಸಲ್ಲಿ ಗೊಂದಲವೇ ಮನೆ ಮಾಡಿದೆ. ಏನೇ ಆದರೂ ಕಿಟ್ಟಿ ಮೊದಲು ಪ್ರಾಶಸ್ತ್ಯ ನೀಡುವುದು ಮನೆಯವರ ಖುಷಿಗಾಗಿಯೇ. ಅವರು ಚೆನ್ನಾಗಿರಲಿ ಎಂದೇ ಬಯಸುವ ಕಿಟ್ಟಿ, ಈಗ ಈ ಸಂತಸವನ್ನು ಹಾಳು ಮಾಡುವುದಿಲ್ಲ. ಮಗು ಹುಟ್ಟಿ ವೈಶಾಖಳ ಗ್ರಹಚಾರವನ್ನು ಬದಲಾಯಿಸುತ್ತಿದೆ.


Click it and Unblock the Notifications











