Ramachari: ಜೈ ಶಂಕರ್ ಮನೆಗೆ ಬಂದ ರಾಮಾಚಾರಿ ಚಾರುಗಾಗಿ ಸುಳ್ಳು ಹೇಳುತ್ತಾನಾ ?

By ಶೃತಿ ಹರೀಶ್ ಗೌಡ

'ರಾಮಾಚಾರಿ' ಧಾರಾವಾಹಿಯಲ್ಲಿ ರಾಮಾಚಾರಿ ಮನೆಗೆ ಬಂದಿದ್ದು ಅಪ್ಪನ ಹಿತೋಪದೇಶವನ್ನು ಕೇಳಿದ್ದಾನೆ. ಈ ಕಡೆ ಚಾರು ಮನೆಯವರು ಗಂಡು ನೋಡುವ ಶಾಸ್ತ್ರವನ್ನು ಮಾಡುತ್ತಿದ್ದಾರೆ. ಈಗ ಜಾತಕ ನೋಡುವ ಕಾಲ ಬಂದಿದೆ.

ರಾಮಾಚಾರಿ ತನಗೆ ಕೊಟ್ಟಿರುವ ತಾಳಿ ನೋಡಿಕೊಂಡು ಚಾರುಲತಾ ಒಬ್ಬಳೇ ಮಾತನಾಡುತ್ತಿದ್ದಾಳೆ. ನನ್ನ ಹೃದಯದ ಮಾತು ಕೇಳಬೇಕು ಎಂದು ನನ್ನ ಕುತ್ತಿಗೆಗೆ ಈ ತಾಳಿ ನಿನ್ನ ಕೈಯಿಂದ ಬಿದ್ದಿದೆ ಎಂದು ಖುಷಿಯಿಂದ ಒಬ್ಬಳೇ ಮಾತನಾಡಿಕೊಳ್ಳುತ್ತಿದ್ದಾಳೆ. ಈ ಕಡೆ ಮಾನ್ಯತಾ, ಚಾರು ರೂಮಿಗೆ ಬಂದು ಬೇಬಿ ಎನ್ನುವ ತಕ್ಷಣವೇ ಚಾರು ತಾಳಿಯನ್ನು ಒಳಗಡೆ ಮುಚ್ಚಿಟ್ಟುಕೊಂಡಿದ್ದಾಳೆ.

ಹೇಳು ಮಾಮ್, ಎಂದು ಕೇಳಿದ್ದಾಳೆ. ಅದಕ್ಕೆ ಯಾರ ಜೊತೆ ಮಾತನಾಡುತ್ತಿದ್ದೀಯ ಎಂದು ಚಾರು ಬಳಿ ಕೇಳಿದ್ದಾರೆ. ಹಾಗೆ ಒಬ್ಬಳೇ ಮಾತನಾಡುತ್ತಿದ್ದೆ ಎಂದು ಹೇಳಿದಾಗ ಇನ್ನು ಸ್ವಲ್ಪವೇ ದಿನ ಎಂದು ಚಾರುಗೆ ಮಾನ್ಯತಾ ಹೇಳಿದ್ದಾಳೆ. ಮನಸ್ಸಿನಲ್ಲಿ ರಾಮಾಚಾರಿಗಿಂತ ನಿಮಗೆ ಒಳ್ಳೆಯ ಅಳಿಯ ಸಿಕ್ಕುವುದಿಲ್ಲ ಎಂದು ಖುಷಿ ಪಟ್ಟಿದ್ದಾಳೆ. ಕೊನೆಗೊಂದು ದಿನ ರಾಮಾಚಾರಿಯನ್ನೇ ನಿಮ್ಮ ಅಳಿಯ ಎಂದು ಒಪ್ಪಿಕೊಳ್ಳುತ್ತೀರಿ ಎಂದು ಚಾರು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದಾಳೆ.

ರಾಮಾಚಾರಿ ಬರ್ತಾನೆ ಎಂದ ಆಚಾರ್ಯರು

ರಾಮಾಚಾರಿ ಬರ್ತಾನೆ ಎಂದ ಆಚಾರ್ಯರು

ಜಾತಕ ನೋಡಲು ನಾರಾಯಣ ಆಚಾರ್ಯರಿಗೆ ಜೈ ಶಂಕರ್ ಕರೆ ಮಾಡಿದ್ದಾರೆ. ಹೇಗೆ ಇದ್ದೀರಿ ಯಾವಾಗ ಬಂದಿರಿ ಎಂದು ಯೋಗ ಕ್ಷೇಮವನ್ನು ಕೇಳಿದ್ದಾರೆ. ನಂತರ ನಮ್ಮಿಂದಾಗಿ ನಿಮ್ಮ ಮನೆಯಲ್ಲಿ ನೋವು ಉಂಟಾಗುವಂತೆ ಆಯಿತು ಎಂದು ಹೇಳಿದಾಗ ಆಚಾರ್ಯರು ಅದೆಲ್ಲವೂ ಈಗ ಬೇಡ ಎಂದಿದ್ದಾರೆ. ನನಗೆ ನಿಮ್ಮ ಬಳಿ ಮಾತನಾಡಲು ಇಷ್ಟ ಇಲ್ಲ ಆದರೂ ಸಹ ವೃತ್ತಿ ಧರ್ಮ ವೃತ್ತಿ ಬಗ್ಗೆ ಏನಾದರೂ ಇದ್ದರೆ ಕೇಳಿ ಎಂದು ಹೇಳಿದ್ದಾರೆ.

ವೃತ್ತಿ ಧರ್ಮ ಎಂದ ಆಚಾರ್ಯರು

ವೃತ್ತಿ ಧರ್ಮ ಎಂದ ಆಚಾರ್ಯರು

ಚಾರುಗೆ ಮದುವೆ ಗೊತ್ತಾಗಿದೆ ಅದಕ್ಕಾಗಿ ಇಬ್ಬರ ಜಾತಕ ಹೊಂದುತ್ತದಾ ಎಂದು ನೋಡಬೇಕು ಎಂದು ಜೈ ಶಂಕರ್ ಹೇಳಿದ್ದಾರೆ. ಅದಕ್ಕೆ ನಾರಾಯಣಚಾರ್ಯರು ರಾಮಾಚಾರಿಯನ್ನು ಕಳುಹಿಸುವುದಾಗಿ ಜೈ ಶಂಕರ್ ಬಳಿ ಹೇಳಿದ್ದಾರೆ. ಇದಕ್ಕೆ ಮನೆಯವರೆಲ್ಲರೂ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ರಾಮಾಚಾರಿ, ಚಾರು ಮನೆಗೆ ಹೋಗುವುದು ಬೇಡ ಎಂದು ಹೇಳಿದ್ದಾರೆ. ಇದಕ್ಕೆ ನಾರಾಯಣಚಾರ್ಯರು ವೃತ್ತಿ ಧರ್ಮವನ್ನು ಬಿಡಬಾರದು ಎಂದು ಮನೆಯವರಿಗೆ ಹೇಳಿದ್ದಾರೆ.

ಸುಳ್ಳು ಹೇಳುವಂತೆ ತಾಕೀತು

ಸುಳ್ಳು ಹೇಳುವಂತೆ ತಾಕೀತು

ರಾಮಾಚಾರಿಗೆ ಕರೆ ಮಾಡಿದ ಚಾರುಲತಾ ಮನೆಗೆ ಜಾತಕ ನೋಡಲು ಬರುತ್ತಿದ್ದಿಯಾ ಒಳ್ಳೆಯದೇ ಆಯಿತು ಎಂದಿದ್ದಾಳೆ. ಒಳ್ಳೆಯದ ಈಗಂದರೆ ಏನು ಮೇಡಂ ಎಂದು ರಾಮಾಚಾರಿ, ಚಾರುನನ್ನು ಕೇಳಿದ್ದಾನೆ. ಅದಕ್ಕೆ ತನ್ನ ಹೆಂಡತಿಯ ಜಾತಕವನ್ನು ನೋಡುವ ಭಾಗ್ಯ ಎಷ್ಟು ಗಂಡನಿಗೆ ಸಿಗುತ್ತದೆ ನೀನು ಸುಳ್ಳು ಹೇಳು ಎಂದು ಚಾರು ರಾಮಾಚಾರಿಗೆ ಹೇಳಿದ್ದಾಳೆ. ಸುಳ್ಳಾ ಯಾಕೆ ಮೇಡಂ ಎಂದಾಗ ಇನ್ನು ಎರಡು ವರ್ಷ ನಿಮ್ಮ ಮಗಳಿಗೆ ಮದುವೆಯಾಗುವುದಿಲ್ಲ ಎಂದು ಸುಳ್ಳು ಹೇಳಿ ನಮ್ಮ ಮದುವೆಯನ್ನು ಉಳಿಸಿಕೊ ಎಂಬ ಐಡಿಯಾವನ್ನು ರಾಮಾಚಾರಿಗೆ ಚಾರುನೇ ಕೊಟ್ಟಿದ್ದಾಳೆ.

ದೇವರ ಬಳಿ ಕಷ್ಟ ಹೇಳಿದ ರಾಮಾಚಾರಿ

ದೇವರ ಬಳಿ ಕಷ್ಟ ಹೇಳಿದ ರಾಮಾಚಾರಿ

ದೇವರ ಬಳಿ ಬಂದ ರಾಮಚಾರಿ ಅರಳಿ ಕಟ್ಟೆಯ ನಾಗರ ವಿಗ್ರಹದ ಮುಂದೆ ತನ್ನ ಕಷ್ಟ ಸುಖವನ್ನು ಮಾತನಾಡುತ್ತಿದ್ದಾನೆ. ನನ್ನನ್ನು ಕಂಡರೆ ಆಗದ ಹುಡುಗಿಗೆ ನನ್ನ ಕೈಯಾರೆ ನೀನು ತಾಳಿ ಕಟ್ಟಿಸಿದೆ. ಏನಪ್ಪಾ ನಿನ್ನ ಲೀಲೆ ಈಗ ನಾನೇ ಆ ಹುಡುಗಿ ಮನೆಯವರಿಗೆ ಜಾತಕವನ್ನು ಹೇಳಲು ಹೋಗುತ್ತಿದ್ದೇನೆ ಯಾಕಪ್ಪ ಇಂಥ ಸಂಕಷ್ಟವನ್ನೆಲ್ಲ ತಂದು ಕೊಟ್ಟಿದ್ದೀಯಾ ಏನು ಇದೆಲ್ಲ ನಿನ್ನದು ಎಂದು ಕೇಳುತ್ತಿದ್ದಾನೆ.

ಚಾರು ನೋಡಿ ರಾಮಾಚಾರಿಗೆ ಬೇಸರ

ಚಾರು ನೋಡಿ ರಾಮಾಚಾರಿಗೆ ಬೇಸರ

ನನಗೆ ಕೊನೆಯ ತನಕ ಋಣವನ್ನೇ ನೀನು ಹೊರಿಸಿದ್ದೀಯ ಯಾಕಪ್ಪ ದೇವರೇ ಈ ರೀತಿಯಲ್ಲ ನನ್ನ ಜೀವನದಲ್ಲಿ ಮಾಡಿದೆ ಎಂದು ದೇವರ ಬಳಿ ತನ್ನ ಕಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದಾನೆ. ನಂತರ ಚಾರು ಮನೆಗೆ ರಾಮಾಚಾರಿ ಹೊರಟಿದ್ದಾನೆ. ಚಾರು ಮನೆಯಲ್ಲಿ ರಾಮಾಚಾರಿಯನ್ನು ಜೈ ಶಂಕರ್ ಸ್ವಾಗತಿಸಿದ್ದಾರೆ. ಇದೇ ವೇಳೆ ರಾಮಾಚಾರಿ, ಚಾರು ಕಡೆ ತಿರುಗಿ ನೋಡಿ ಬೇಸರವನ್ನ ಮಾಡಿಕೊಂಡಿದ್ದಾನೆ ಚಾರು ಸಹ ಬೇಸರ ಮಾಡಿಕೊಂಡಿದ್ದಾಳೆ.

English summary
Colors Kannada serial Ramachari Written Update on February 27th episode. Here is the details about ramachari in charulatha home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X