Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಮಾಚಾರಿಯಿಂದಾಗಿ ಶಾಶ್ವತವಾಗಿ ಕಣ್ಣು ಕಳೆದುಕೊಂಡಳಾ ಚಾರು?
ಚಾರು ಪರಿಸ್ಥಿತಿ ಕಂಡು ರಾಮಾಚಾರಿಗೆ ತುಂಬಾ ಬೇಜಾರು ಆಗುತ್ತದೆ. ಚಾರುಳನ್ನು ನೋಡುತ್ತಾ ದೂರದಲ್ಲಿ ರಾಮಾಚಾರಿ ನಿಂತಿರುತ್ತಾನೆ. ಚಾರು ಮಾತ್ರ ರಾಮಾಚಾರಿನ ಹತ್ತಿರಕ್ಕೆ ಕರೆಯುತ್ತಾಳೆ. ರಾಮಾಚಾರಿ, ಚಾರು ಹತ್ತಿರ ಬರ್ತಾನೆ, ಆಗ ಚಾರು, ರಾಮಾಚಾರಿ ನಿನ್ನ ಕೈ ಕೊಡು ಅಂತಾಳೆ. ಆದರೆ ರಾಮಾಚಾರಿಗೆ ಚಾರು ಪರಿಸ್ಥಿತಿ ನೋಡಿ ಬೇಜಾರು ಆಗುತ್ತದೆ.
ರಾಮಾಚಾರಿ ಕೈಕೊಟ್ಟ ತಕ್ಷಣ ಚಾರುಗೆ ತುಂಬಾ ಖುಷಿಯಾಗುತ್ತದೆ. ಇನ್ನೂ ಇದೇ ಮೊದಲ ಬಾರಿಗೆ ರಾಮಾಚಾರಿ ಚಾರುನ ಹುಡುಕಿಕೊಂಡು ಬಂದಿರೋದು ಅಂತಾ ಚಾರು ಕೈಸವರುತ್ತಾಳೆ. ಇದು ಆಸ್ಪತ್ರೆ ಆದರೂ ಸಹ ನಂಗೆ ಸ್ವರ್ಗ ಅಂತಾ ಅನಿಸ್ತಾ ಇದೆ ಅಂತಾಳೆ. ನೀನು ನನ್ನ ಅವತ್ತು ಕೈ ಹಿಡಿದು ತಳ್ಳಿದಾಗ ನಾನು ಇನ್ನೂ ಯಾವತ್ತು ನೀನು ನನ್ನ ಕೈ ಹಿಡಿಯೋದಿಲ್ಲ ಅಂತಾ ಅಂದುಕೊಂಡಿದ್ದೆ ಎಂದು ಹೇಳ್ತಾಳೆ. ಇವಾಗ ದೇವರು ನನ್ನ ಜೊತೆಗೆ ಇದ್ದಾನೆ ಅನಿಸ್ತಾ ಇದೆ ಅಂತಾನೇ.
ರಾಮಾಚಾರಿ
ತುಣುಕಿಗೆ
ಬಣ್ಣ
ಹಚ್ಚಿದ
ಮಕ್ಕಳು:
ಅಭಿನಯ
ಕಂಡು
ಕ್ರೇಜಿಸ್ಟಾರ್
ಭಾವುಕ
ಚಾರು ಮತ್ತು ರಾಮಾಚಾರಿ ಇಬ್ಬರೂ ಸಹ ಮಾತಾಡ್ತಾ ಇದ್ದಾಗ, ಇನ್ನೇನು ಚಾರುಗೆ ಕಣ್ಣು ಕಾಣಿಸೋದಿಲ್ಲ ಅಂತಾ ಹೇಳೋಕೆ ಬರ್ತಾರೆ ಡಾಕ್ಟರ್. ಆಗ ಚಾರು ರಾಮಾಚಾರಿ ಕೈಬಿಟ್ಟು ಏನು ಹೇಳ್ತಾ ಇದ್ದೀರಾ ಡಾಕ್ಟರ್ ಎಂದು ಕೇಳ್ತಾಳೆ. ಆಗ ರಾಮಾಚಾರಿ ಕೈ ಮುಗಿದು ಹೇಳಬೇಡಿ ಡಾಕ್ಟರ್ ಪ್ಲೀಸ್ ಅಂತಾನೆ.

ಸುಳ್ಳು ಹೇಳಿದ ವೈದ್ಯರು
ಅಷ್ಟರಲ್ಲಿ ಡಾಕ್ಟರ್ ಒಂದು ವಾರದ ಒಳಗೆ ಕಣ್ಣು ಬರುತ್ತದೆ ಡೋಂಟ್ ವರಿ ಅಂತಾ ಹೇಳಿ ಹೊರಗೆ ಹೋಗ್ತಾರೆ. ಇದರಿಂದ ರಾಮಾಚಾರಿಗೆ ದುಃಖವಾದರೆ ಚಾರುಗೆ ಖುಷಿಯಾಗುತ್ತದೆ. ನಂತರ ರಾಮಾಚಾರಿಗೆ ನನ್ನ ಒಂದು ಮಾತು ನಡೆಸಿಕೊಡ್ತೀಯಾ ಅಂತಾ ಕೇಳ್ತಾಳೆ. ಏನು ಅಂತಾ ಕೇಳಿದಾಗ ನನಗೆ ಒಂದು ವಾರ ನೀನೇ ಕಣ್ಣಾಗಿ ಇರ್ತಿಯಾ ಪ್ಲೀಸ್ ಅಂತಾಳೆ. ಆದರೆ ಚಾರಿಗೆ ಇದರಿಂದ ತುಂಬಾನೇ ಬೇಸರವಾಗುತ್ತದೆ ಅವಾಗ ಅಳೋಕೆ ಶುರು ಮಾಡುತ್ತಾನೆ.

ಚಾರು ಕಾಲಿಗೆ ಬಿದ್ದ ರಾಮಾಚಾರಿ
ಅಳುತ್ತಾ ರಾಮಾಚಾರಿ, ಚಾರು ಕಾಲಿಗೆ ಬಿದ್ದು ದಯವಿಟ್ಟು ನನ್ನ ಕ್ಷಮಿಸಿ ಮೇಡಂ ನನ್ನಿಂದ ಈ ರೀತಿ ಆಗೋಯ್ತು ಕ್ಷಮೆ ಇರಲಿ ಮೇಡಂ ಅಂತಾನೇ. ನಿಮ್ಮ ಬಳಿ ಕ್ಷಮೆ ಕೇಳೋ ಧೈರ್ಯನು ನಂಗೆ ಇಲ್ಲ ಮೇಡಂ ಎಂದು ಅನ್ನೋವಾಗ. ರಾಮಾಚಾರಿ ಅಳಬೇಡ ನೀನು ನಂಗೆ ಕಣ್ಣು ಹೋಗಿದ್ದರೆ ಮಾತ್ರ ಕ್ಷಮೆ ಕೇಳಬೇಕಿತ್ತು ಅಂತಾಳೆ . ಬಿಡು ನೀನು ಜೊತೆಗೆ ಇರ್ತಿಯಾ ಅಂದ್ರೆ ಪರ್ಮನೆಂಟ್ ಆಗಿ ಕಣ್ಣು ಹೋಗಲಿ ಅಂತಾಳೆ. ನಿನ್ನದು ಹೆಂಗರಳು ರಾಮಾಚಾರಿ ನೀನು ಏನು ಅಳೋ ಅಗತ್ಯ ಇಲ್ಲ. ನಾನು ನಿನ್ನ ಜೀವನದಲ್ಲಿ ನಿನಗೆ ಮಾಡಿದ ಅನ್ಯಾಯ ಒಂದ ಎರಡ ಎಂದು ಹೇಳ್ತಾಳೆ. ನಂಗೆ ಇಷ್ಟು ದಿನ ಪಾಪ ಪ್ರಜ್ಞೆ ಕಾಡ್ತಾ ಇತ್ತು. ನಂಗೆ ಸದ್ಯಕ್ಕೆ ಒಂದು ವಾರದ ಮಟ್ಟಿಗೆ ನಿನ್ನ ಕೈಯಲ್ಲೇ ಸಿಕ್ಕಿದೆ ಎಂದು ಹೇಳ್ತಾಳೆ. ಒಂದು ವಾರದ ಮಟ್ಟಿಗೆ ಕಣ್ಣು ಸರಿಯಾಗುತ್ತದೆ ಅಂತಾಳೆ.

ಇತ್ತ ಮಾನ್ಯತಾಗೆ ಕಾಲ್ ಮಾಡಿದ ಚಾರು
ಇತ್ತ ಮಾನ್ಯತಾಗೆ ಕಾಲ್ ಮಾಡಿದ ಚಾರು ಒಂದು ವಾರ ನಾನು ಮನೆಗೆ ಬರೋದಿಲ್ಲ ಕಲ್ಕತ್ತಾಗೆ ಹೋಗ್ತಾ ಇದ್ದೇನೆ ಅಂತಾಳೆ. ನಿನ್ನ ಬಟ್ಟೆ ಕಾಸ್ಮೆಟಿಕ್ ಎಲ್ಲಾ ಡ್ರೈವರ್ ಕೈಲಿ ಕಳಿಸ್ತೇನೆ ಅಂದಾಗ ಬೇಡ ಅಂತಾ ಹೇಳ್ತಾಳೆ. ನಂತರ ರಾಮಾಚಾರಿ ಬಳಿ ಒಂದು ದೊಡ್ಡ ಭಾರ ಕಳೀತು ಅಂತಾ ಚಾರು ಹೇಳ್ತಾಳೆ. ಇತ್ತ ಚಾರು ಡಾಕ್ಟರ್ ಹತ್ರ ಹೋಗಿ ಮಾತಾಡ್ತಾ ಇರ್ತಾರೆ. ನಂತರ ಐದು ಪರ್ಸೆಂಟ್ ಹಣ್ಣು ಬರೋ ಚಾನ್ಸ್ ಇದೆ ಅಂತಾರೆ. ಅವರ ಜೊತೆಗೆ ಒಬ್ರು ಇದ್ರೆ ಅವರಿಗೆ ಧೈರ್ಯ ಬರುತ್ತದೆ ಅಂತಾರೆ. ಸಾನ್ವಿ ಬಂದು ಚಾರುನಾ ಮಾತಾಡಿಸ್ತಾ ಇರ್ತಾಳೆ ಅವಾಗ ಸಾನ್ವಿ ಚಾರುಗೆ ಅಮ್ಮನಿಗೆ ಸುಳ್ಳು ಯಾಕೆ ಹೇಳಿದೆ ಅಂತಾ ಬೈತಾಳೆ.

ಚಾರು ಭವಿಷ್ಯ ರಾಮಾಚಾರಿ ಕೈಯಲ್ಲಿ
ಆಫೀಸ್‌ನಲ್ಲಿ ಎಲ್ಲರೂ ಮೀಟಿಂಗ್ ಮಾಡ್ತಾ ಇರ್ತಾರೆ ಅಲ್ಲಿಗೆ ರಾಮಾಚಾರಿ ಬರ್ತಾನೆ ಒಂದು ವಾರ ಚಾರುನಾ ಎಲ್ಲಿ ನೋಡಿಕೊಳ್ಳೋದು ಅಂತಾ ಕೇಳ್ತಾರೆ. ಕೊನೆಗೆ ರಾಮಾಚಾರಿಗೆ ಡಾಕ್ಟರ್ ಹೇಳಿದ ಮಾತುಗಳು ಕಣ್ಮುಂದೆ ಬರುತ್ತದೆ. ಈಗ ಚಾರು ಭವಿಷ್ಯ ರಾಮಾಚಾರಿ ಕೈಯಲ್ಲಿದೆ. ಚಾರು ರಾಮಾಚಾರಿ ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡುತ್ತಾನಾ ನೋಡಬೇಕು.