Ramachari: ಮುತ್ತು ಕೊಟ್ಟರೂ ರಾಮಚಾರಿಗೆ ಅರ್ಥವೇ ಆಗುತ್ತಿಲ್ಲ; ಗಂಡ ರೊಮ್ಯಾಂಟಿಕ್ ಅಲ್ಲ ಅಂತ ಚಾರು ಗರಂ!

By ಎಸ್ ಸುಮಂತ್

ಚಾರುಗೆ ಒಂದೇ ಚಿಂತೆ.‌ ನನ್ನ ಗಂಡ ಬದಲಾಗೋದು ಯಾವಾಗ, ನಮ್ಮ ಸಂಸಾರ ಶುರುವಾಗುವುದು ಯಾವಾಗ, ನಮಗೂ ಒಂದು ಮಗು ಆಗುವುದು ಯಾವಾಗ ಎಂಬುದೇ ದೊಡ್ಡ ಚಿಂತೆ. ಆದರೆ ಇದೆಲ್ಲವನ್ನು ರಾಮಾಚಾರಿಗೆ ಅರ್ಥ ಮಾಡಿಸುವುದು ಇದೆಯಲ್ಲ ಅದೇ ದೊಡ್ಡ ಸವಾಲು.

ಇತ್ತೀಚೆಗಷ್ಟೇ ಬೆಟ್ಟದಂತ ಕಷ್ಟ ಬಂದಿತ್ತು. ಆ ಕಷ್ಟದ ಜೊತೆಗೆ ಮನೆ ಮಗನು ಬಂದಿದ್ದ. ಹೇಗೋ ಶತ್ರುಗಳ ಕಾಟದಿಂದ ಬಚಾವ್ ಆಗಿ, ರಾಮಚಾರಿ ಮತ್ತು ಕಿಟ್ಟಿ ಇಬ್ಬರು ಉಳಿದಿದ್ದಾರೆ. ಮನೆಗೆ ಎರಡನೇ ಮಗನು ಸಿಕ್ಕಿದನಲ್ಲ ಎಂಬ ಸಂತಸವಿದೆ. ಆ ಶತ್ರುಗಳನ್ನು ಹುಡುಕಬೇಕೆಂಬ ಹಠವೂ ಇದೆ. ಆದರೆ ಇದೆಲ್ಲಾ ಜಂಜಾಟದ ನಡುವೆ ಚಾರುಗೆ ಮುದ್ದಾದ ಮಗುವಿನ ತಾಯಿಯಾಗಬೇಕೆಂಬ ಮಹಾದಾಸೆ ಹೆಚ್ಚಾಗಿದೆ.

colors kannada serial Ramachari Written Update on May 3rd episode

ಚಾರು ಮೇಲೆ ಸಿಟ್ಟಾದ ರಾಮಾಚಾರಿ

ರಾಮಚಾರಿ ಇನ್ನು ಕೂಡ ಬದಲಾಗಿಲ್ಲ. ಮದುವೆಯಾದರೂ ಬ್ರಹ್ಮಚಾರಿಯಾಗಿಯೇ ಉಳಿದುಕೊಂಡಿದ್ದಾನೆ. ಆದರೆ ಚಾರು ಮಾತ್ರ ಸಾಧ್ಯವಾದಷ್ಟು ರಾಮಚಾರಿಯನ್ನು ಕೆಣಕುವುದಕ್ಕೆ ಪ್ರಯತ್ನ ಪಡುತ್ತಾ ಇರುತ್ತಾಳೆ. ಈಗಲೂ ರಾಮಾಚಾರಿ ಫೋನ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರೆ ಚಾರು ಬಂದು‌ ಸಿಕ್ಕಾಪಟ್ಟೆ ಡಿಸ್ಟರ್ಬ್ ಮಾಡಿದ್ದಾಳೆ. ಇದು ರಾಮಾಚಾರಿಗೆ ಕೋಪ ತರಿಸಿದೆ. ಎದ್ದು ಹೋಗುವಾಗ ಚಾರು ಕೈ ಬೀಸಿದ್ದಾನೆ.

ನೆಪ ಹುಡುಕಿ ಕಿಸ್ ಕೊಟ್ಟ ಚಾರು

ಮೊದಲೇ ರಾಮಾಚಾರಿಯನ್ನು ತನ್ನ ದಾರಿಗೆ ತರಬೇಕೆಂದುಕೊಳ್ಳುತ್ತಿರುವ ಚಾರುಗೆ ಇದೇ ಒಂದು ನೆವ ಸಿಕ್ಕಿದೆ. ಕಣ್ಣಿಗೆ ಹೊಡೆದೆಯಲ್ಲ ಅಂತ ಕಣ್ಣು‌ಮುಚ್ಚಿಕೊಂಡು ಕೂತಿದ್ದಾಳೆ. ಆಗಲೂ ರಾಮಾಚಾರಿ ಬೈದಿದ್ದಾನೆ. ಅದಕ್ಕೆ ಹೇಳುವುದು ಕೂಗಾಟ ಆಡಬೇಡಿ ಅಂತ ಹೇಳಿದ್ದಾನೆ. ಆಯ್ತು‌ ಮೊದಲು ಕಣ್ಣು ಏನಾಗಿದೆ ನೋಡು ಎಂದಾಗ ಕಣ್ಣನ್ನು ಊದುವುಕ್ಕೆ ಪ್ರಯತ್ನ ಪಟ್ಟಿದ್ದಾನೆ.‌ ಈ ವೇಳೆ ಸುಮ್ಮನೆ ಇರದ ಚಾರು, ರಾಮಾಚಾರಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದಾಳೆ. ಈ ಮುತ್ತಿನ ಬಳಿಕ ಇನ್ನೇನೋ ಆಗಲಿದೆ ಎಂದೇ ನಿರೀಕ್ಷೆ ಇಟ್ಟುಕೊಂಡಿದ್ದಳು ಚಾರು. ಆದರೆ ಆಗಿದ್ದೆಲ್ಲವೂ ಉಲ್ಟಾ ಆಗಿದೆ.

colors kannada serial Ramachari Written Update on May 3rd episode

ರಾಮಚಾರಿಯ ಜೊತೆಗೆ ಚಾರು ಜಗಳ

ರಾಮಾಚಾರಿಗೆ ಇದೆಲ್ಲವೂ ಮ್ಯಾಟರ್ ಅಲ್ಲ. ಚಾರು ಕಿಸ್ ಕೊಟ್ಟರೂ ತನಗೇನು ಆಗಲೇ ಇಲ್ಲ ಎಂಬಂತೆ ಕೆನ್ನಯನ್ನು ಒರೆಸಿಕೊಂಡು, ಮೊಬೈಲ್ ನೋಡುತ್ತಾ ಕೂತಿದ್ದಾನೆ. ಇದನ್ನು ಕಂಡ ಚಾರುಗೆ ಪಿತ್ತ ನೆತ್ತಿಗೇರಿದೆ. ಆದರೆ ರಾಮಾಚಾರಿ, ಚಾರುಳನ್ನೇ ದೂಷಿಸಿದ್ದಾನೆ. ನೀವೇ ತಾನೇ ಸುಮ್ನೆ ಇರದೇ ಬಂದು‌ ತೀಟೆ ಮಾಡಿದ್ದು, ಮುತ್ತು ಕೊಟ್ಟಿದ್ದು. ಕೋಪ ಬರಬೇಕಿದ್ದದ್ದು ನನಗೆ ಎಂದಿದ್ದಾನೆ. ಕಿಸ್ ಕೊಟ್ಟಿದ್ದು ಯಾಕೆ ಎಂಬುದನ್ನು ಆಗ ಚಾರು ವಿವರಣೆ ನೀಡಿದ್ದಾಳೆ.

ಗಂಡ ರೊಮ್ಯಾಂಟಿಕ್ ಅಲ್ಲ

ಹೌದಪ್ಪ ತಪ್ಪು ನಂದೇ. ನೀನು ಸಂಸಾರ ಮಾಡ್ತೀಯ, ನಮಗೂ ಒಂದು ಮಗು ಆಗುತ್ತೆ, ಆ ಮಗು ಮನೆ ತುಂಬಾ ಓಡಾಡುತ್ತೆ ಎಂಬೆಲ್ಲಾ ಆಸೆ ಇಟ್ಟುಕೊಂಡು ನಿನಗೆ ಮುತ್ತು ಕೊಟ್ಟೆ ತಪ್ಪಾಯ್ತು ಎಂದಿದ್ದಾಳೆ‌. ಇದೇ ವೇಳೆ ದೇವರಿಗೆ ಮನವಿ ಮಾಡಿದ್ದಾಳೆ. ಇಂಥ ಅನ್ ರೊಮ್ಯಾಂಟಿಕ್ ಗಂಡನ ಜೊತೆಗೆ ಹೇಗೆ ಸಂಸಾರ ಮಾಡುವುದು ಎಂದು ಕೇಳಿದ್ದಾಳೆ.

ಗರ್ಭಿಣಿಯಾಗಿರುವ ವೈಶಾಖ

ಹಿತ ಶತ್ರುವಾಗಿ ವೈಶಾಖ ಕಾಡುತ್ತಿದ್ದಾಳೆ. ಮನೆಯ ಒಳಗೆ ಇದ್ದುಕೊಂಡು ಕೆಟ್ಟದ್ದನ್ನು ಬಯಸುತ್ತಿದ್ದಾಳೆ. ಕಿಟ್ಟಿ‌ ಇನ್ನೇನು ಸತ್ಯ ಹೇಳಬೇಕು ಎನ್ನುವಷ್ಟರಲ್ಲಿ ವೈಶಾಖ ಗರ್ಭಿಣಿ ಎಂಬುದು ಗೊತ್ತಾಗಿದೆ. ಈಗ ಎಷ್ಟೇ ಕೋಪವಿದ್ದರು ಚಾರು ಮಾತ್ರ ಒಳ್ಳೆ‌ ಮನಸ್ಸಿನಿಂದ ವೈಶಾಖಳ ಆರೋಗ್ಯವನ್ನು ಕಾಪಾಡುತ್ತಿದ್ದಾಳೆ. ಕಾಳಜಿ ತೋರುತ್ತಿದ್ದಾಳೆ. ಹೀಗಾಗಿ ತಾನೂ ಗರ್ಭಿಣಿಯಾಗಬೇಕೆಂಬ ಆಸೆ ಚಾರುಗು ಬಂದಿದೆ.

More from Filmibeat

English summary
Ramachari kannada serial today episode. Here is the details about Unromantic Ramachari;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X