Ramachari: ವಂಶ ನಾಶ ಮಾಡ್ತೀನಿ ಅಂತ ಬಂದವಳೇ ಈಗ ಗರ್ಭಿಣಿ: ವೈಶಾಖ ವಿಚಾರ ತಿಳಿದು ಕಿಟ್ಟಿ ಶಾಕ್!

By ಎಸ್ ಸುಮಂತ್

ಕಿಟ್ಟಿ ಹಾಗೂ ರಾಮಾಚಾರಿ ಒಂದೇ ರೀತಿ ಇದ್ದ ಕಾರಣ ಶತ್ರುಗಳಿಗೆ ತುಂಬಾನೇ ಅನುಕೂಲವಾಗಿತ್ತು. ರಾಮಾಚಾರಿಯನ್ನು ಜೈಲಿಗೆ ಕಳುಹಿಸಿ, ಕಿಟ್ಟಿಯನ್ನು ತಂದರು. ರಾಮಾಚಾರಿಗೆ ಕೊಡಬಾರದ ಹಿಂಸೆ ಕೊಟ್ಟರು. ಆದರೆ ದೇವರ ದಯೆ, ಚಾರು ಪ್ರೀತಿ ರಾಮಾಚಾರಿಯನ್ನು ಸಾವಿನ ದವಡೆಯಿಂದ ಕಾಪಾಡಿತ್ತು. ಕಿಟ್ಟಿಗೂ ತನ್ನ ಜನ್ಮ ರಹಸ್ಯ ತಿಳಿದು, ಅಪ್ಪ ಅಮ್ಮನ ಮಡಿಲು ಸೇರಿದ.

ಕಿಟ್ಟಿಗೆ ಒಂದು ಪ್ರಶ್ನೆ ಕಾಡುತ್ತಲೇ ಇತ್ತು. ಮಾನ್ಯತಾಗೆ ಬೇಕಿರುವುದು ಮಗಳು. ಹೀಗಾಗಿ ಅವಳ ಕೋಪ, ದ್ವೇಷದಲ್ಲಿ ಒಂದು ಕಾರಣವಿದೆ. ಆದರೆ ವೈಶಾಖ ಮನೆಯ ಸೊಸೆಯಾಗಿ ಹಿಂಗ್ಯಾಕೆ ಮಾಡುತ್ತಿದ್ದಾಳೆ ಎಂಬುದೇ ಯಕ್ಷ ಪ್ರಶ್ನೆಯಾಗಿತ್ತು. ಈಗ ಕಿಟ್ಟಿಗೆ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

colors kannada serial Ramachari Written Update on May 7th episode

ಕಿಟ್ಟಿಗೆ ಬಂದಿದೆ ಅನುಮಾನ

ಕಿಟ್ಟಿಗೆ ಮೊದಲಿನಿಂದ ವೈಶಾಖಳ ಮೇಲೆ‌ ಅನುಮಾನವಿದೆ. ಶತ್ರುಗಳ ಜೊತೆಗೆ ವೈಶಾಖ ಯಾಕೆ ಸೇರಿದ್ದಾಳೆ ಎಂದು. ಆ ಸತ್ಯವನ್ನು ತಿಳಿಯುವುದಕ್ಕೆ ಸಾಕಷ್ಟು ಸಲ ಪ್ರಯತ್ನವನ್ನು ಪಟ್ಟಿದ್ದಾನೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಮನೆಯವರಿಗೆಲ್ಲಾ ಇನ್ನೇನು ಸತ್ಯ ಹೇಳಬೇಕೆಂದುಕೊಂಡಾಗ ವೈಶಾಖ ತಾಯಿಯಾಗಿರುವುದು ತಿಳಿಯಿತು. ಮನೆಯವರೆಲ್ಲಾ ಸಿಕ್ಕಾಪಟ್ಟೆ ಖುಷಿ ಪಟ್ಟರು. ಈ ಖುಷಿಯನ್ನು ಹಾಳು ಮಾಡಬಾರದೆಂದು ಸತ್ಯವನ್ನು ಹೇಳದೆಯೇ ಮುಚ್ಚಿಟ್ಟ. ಆದರೆ ಸತ್ಯ ತಿಳಿಯುವ ಹಂಬಲ ಕಿಟ್ಟಿಯದ್ದು. ಅದಕ್ಕೆ ವೈಶಾಖಳನ್ನು ಹಿಂಬಾಲಿಸಿಕೊಂಡು ಹೊರಟ.

ತವರಿಗೆ ಬಂದ ವೈಶಾಖ

ವೈಶಾಖ ಈಗ ತುಂಬಾನೇ ಖುಷಿಯಾಗಿದ್ದಾಳೆ. ತಾಯಿಯಾಗುತ್ತಿರುವುದು ಅವಳಿಗೂ ಖುಷಿ ಕೊಟ್ಟಿದೆ. ಆ ಸಂತಸದ ವಿಚಾರವನ್ನು ತವರು ಮನೆಯವರಿಗೆ ಹೇಳಬೇಕೆಂದು ಓಡೋಡಿ ಬಂದಿದ್ದಾಳೆ. ತಾಯಿಯಾಗುವ ವಿಚಾರವನ್ನು ತಾಯಿಗೆ ಹೇಳಿದಾಗ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಹೀಗಾಗಿಯೇ ವೈಶಾಖ ಸ್ವೀಟ್ ಬಾಕ್ಸ್ ತೆಗೆದುಕೊಂಡು ತಾಯಿಯ ಮನೆಗೆ ಬಂದಿದ್ದಾಳೆ. ಕಿಟ್ಟಿ ಕೂಡ ಅವಳನ್ನೇ ಹಿಂಬಾಲಿಸಿಕೊಂಡು ಬಂದಿದ್ದಾನೆ. ವೈಶಾಖ ಮನೆಯ ಒಳಗೆ ಹೋಗಿದ್ದನ್ನು ಕಂಡು, ಸತ್ಯ ತಿಳಿಯುವ ಪ್ರಯತ್ನ ಮಾಡಿದ್ದಾನೆ.

colors kannada serial Ramachari Written Update on May 7th episode

ಸತ್ಯ ತಿಳಿದು ಕಿಟ್ಟಿ ಶಾಕ್

ವೈಶಾಖ ನೇರ ಮನೆ ಒಳಗೆ ಹೋದಾಗ ಮೊದಲು ಸಿಕ್ಕಿದ್ದು ತಮ್ಮ. ಅಕ್ಕನನ್ನು ಕಂಡು ಕೊಂಚ ಕೋಪದಲ್ಲಿಯೇ ಇದ್ದ. ನೀನು ಏನು ಮಾಡಲು ಹೋದೆ. ಈಗ ಏನು ಮಾಡುತ್ತಿದ್ದೀಯಾ ಎಂದು ಕೇಳಿದ. ಆಗ ವೈಶಾಖ ಅದನ್ನು ಬಿಡು ಮೊದಲು ಸ್ವೀಟ್ ತಗೋ. ಖುಷಿಯ ವಿಚಾರವನ್ನು ಹೇಳುತ್ತೇನೆ ಎಂದು ಸ್ವೀಟ್ ಕೊಟ್ಟಳು. ತಾನೂ ತಾಯಿಯಾಗುತ್ತಿದ್ದೀನಿ ಎಂದ ಕೂಡಲೇ ಕೈನಲ್ಲಿದ್ದ ಸಿಹಿಯನ್ನು ನುಚ್ಚು ನೂರು ಮಾಡಿ, ವೈಶಾಖಳ ತಮ್ಮ ನೆಲಕ್ಕೆ ಬಿಸಾಡಿದ.

ದ್ವೇಷ ಹೊತ್ತು ಬಂದಿದ್ದ ವೈಶಾಖ

ಇಬ್ಬರ ನಡುವಿ‌ನ ಮಾತುಕತೆಯನ್ನು ಕಿಟ್ಟಿ ಮರೆಯಲ್ಲಿಯೇ ಕೇಳುತ್ತಾ ನಿಂತಿದ್ದ. ಆ ವಂಶವನ್ನ ನಿರ್ವಂಶ ಮಾಡ್ತೀನಿ ಅಂತ ಹೇಳಿ ಆ ಮನೆಗೆ ಹೋಗಿ ವಂಶದ ಕುಡಿಯನ್ನ ನಿನ್ನ ಹೊಟ್ಟೆಯಲ್ಲಿ ಹೊತ್ತಿದ್ದೀಯಾ ನಾಚಿಕೆ ಆಗಲ್ವಾ? ಇಪ್ಪತ್ತೈದು ವರ್ಷ ದ್ವೇಷ ಇದೆ ಅಕ್ಕ. ನಾರಾಯಣಚಾರ್ಯರನ್ನ ಮೊದಲು ಸಾಯಿಸಿ, ಆಮೇಲೆ ಎಲ್ಲರನ್ನು ಸಾಯಿಸ್ತೀನಿ ಅಂತ ತಾನೇ ನೀನು ಹೇಳಿದ್ದು ಎಂದಿದ್ದಾನೆ.

ಶೃತಿ ಟಾರ್ಗೆಟ್ ಮಾಡಿದ ವೈಶಾಖ ತಮ್ಮ

ಈ ಸತ್ಯ ಕೇಳಿ ದ್ವೇಷದ ಬಗ್ಗೆ ತಿಳಿದ ಕಿಟ್ಟಿಗೆ, ನಮ್ಮ ತಂದೆ ಅಂಥದ್ದೇನು ಮಾಡಿದ್ರು ಎಂಬ ಪ್ರಶ್ನೆ ಮೂಡಿದೆ. ಅತ್ತ ವೈಶಾಖಳ ತಮ್ಮ ಶೃತಿಯನ್ನು ಟಾರ್ಗೆಟ್ ಮಾಡಿದ್ದಾನೆ. ಅವಳ ಹಿಂದೆ ಬಿದ್ದಿದ್ದಾನೆ. ಆ ವಿಚಾರ ಅಣ್ಣ ಅತ್ತಿಗೆಗೆ ವಿಚಾರ ಮುಟ್ಟಿಸಿದ್ದಾಳೆ.

More from Filmibeat

English summary
Ramachari Written kannada serial episode. Here is the details about kitty who knows the vast truth;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X