Sri gowri: ಮದುವೆ ವಿಚಾರಕ್ಕೆ ಮನೆಯವರ ಸ್ವಾರ್ಥ; ಮೂಕರಾದ ಗೌರಿ-ಅಪ್ಪು
ಗೌರಿಗೆ ಮನೆಯಲ್ಲಿ ಎಲ್ಲವೂ ಇದೆ ನೆಮ್ಮದಿ ಒಂದು ಬಿಟ್ಟು. ಶ್ರೀಮಂತಿಕೆಯೇ ತುಂಬಿ ತುಳುಕುತ್ತಿದೆ. ಆದರೆ ಮನೆಯವರ್ಯಾರು ಗೌರಿಗೆ ಪ್ರೀತಿಯ ಮಾತುಗಳೇ ಸಿಗುತ್ತಿಲ್ಲ. ನಗುವು ಇಲ್ಲ. ಗೌರಿ ಕೂಡ ಇಡೀ ಮನೆಯವರ ಜೊತೆಗಿನ ಬಾಂಧವ್ಯಕ್ಕಾಗಿ ಬಯಸುತ್ತಿದ್ದಾಳೆ. ಮನೆಯವರ ಜೊತೆಗೆ ಕೂತು ಊಟ ಮಾಡಿದರೆ ಸಾಕು ಎನ್ನುತ್ತಾಳೆ. ಆದರೆ ಅದು ಸಾಧ್ಯವೇ ಇಲ್ಲದಾಗಿದೆ.
ಗೌರಿಗೆ ರಾತ್ರಿ ನಡೆಯುವ ರೋಗವಿದೆ. ಹಾಗಂತ ಅದು ನಾರ್ಮಲ್ ಆಗಿ ನಡೆಯುವ ಕಾಯಿಲೆ ಅಲ್ಲ. ಬದಲಿಗೆ ಯಾವುದೋ ಒಂದು ಮಂಕು ಬಡಿದಂತೆ ಆಗುತ್ತದೆ. ಇದರಿಂದ ಗೌರಿಯ ಜೀವಕ್ಕೋ ಎದುರು ಬಂದವರ ಜೀವಕ್ಕೋ ಹಾಕಿಯಾಗಬಹುದು. ಹೀಗಾಗಿಯೇ ಗೌರಿಯನ್ನು ಸರಪಳಿಯಿಂದ ಕಟ್ಟಿ ಹಾಕಲಾಗುತ್ತದೆ. ಮದುವೆ ಮಾಡಿ ಕಳುಹಿಸಿ ಬಿಟ್ಟರೆ ನಮಗೆ ಆ ಕಷ್ಟ ತಪ್ಪುತ್ತೆ ಎಂದು ಗೌರಿ ಅಜ್ಜಿ ಯೋಚನೆ ಮಾಡುತ್ತಿದ್ದಾರೆ. ಆದರೆ ಆ ಮದುವೆಗೇನೆ ಹಲವು ವಿಘ್ನಗಳು ಬಂದಿವೆ.

ಸೀರೆ ನನ್ನ ಹಕ್ಕಲ್ಲವೆಂದುಕೊಂಡ ಗೌರಿ
ಒಂದೇ ಸಮ ನೋವನ್ನೇ ನೀಡುತ್ತಿದ್ದರೆ ನಗು ಬರುವುದು ಎಲ್ಲಿಂದ. ಗೌರಿಯ ಪರಿಸ್ಥಿತಿ ಆಗಿರುವುದು ಅದೆ. ಎಲ್ಲರಿಂದ ನಿಂದನೆಗಳೆ ಕೇಳಿಸಿಕೊಳ್ಳುತ್ತಾಳೆ. ಅದರಲ್ಲೂ ಅಜ್ಜಿಯ ಮಾತಿನಿಂದ ನೊಂದು ಬೆಂದಿದ್ದಾಳೆ. ಕುಂತರು ತಪ್ಪು ನಿಂತರು ತಪ್ಪು. ಏನು ಮಾಡಿದರೂ ತಪ್ಪು ಎನ್ನುತ್ತಾರೆ ಅಜ್ಜಿ. ಮಗನಿಗೆ ಮಗಳೆಂದರೆ ಇಷ್ಟ. ಆದರೆ ಅಜ್ಜಿಯ ಮಾತಿನ ಮಧ್ಯೆ ಅದೆಲ್ಲಿಂದ ಸಾಧ್ಯವಾದೀತು.
ಮಂಗಳಮ್ಮನಿಗೆ ಗೌರಿ ಮೇಲೆ ಕೋಪ
ಮಂಗಳಮ್ಮನಿಗೆ ಮೊದಲು ಅಪ್ಪುಗೊಂದು ಮದುವೆ ಮಾಡಿಬಿಡೋಣ. ಆಮೇಲೆ ಅವನ ಜೀವನವೂ ಸರಿಯಾಗುತ್ತೆ ಎಂಬ ಹಂಬಲ. ಯಾಕಂದ್ರೆ ತನ್ನಿಡಿ ಜೀವನವನ್ನೆಲ್ಲಾ ತಂಗಿಯಂದಿರಿಗಾಗಿ ಮುಡಿಬಿಟ್ಟಿದ್ದಾನೆ. ತಂಗಿಯಂದಿರಿಗಾಗಿ ದುಡಿದಿದ್ದೆಲ್ಲಾ ಕೊಡುತ್ತಾನೆ. ಮಧ್ಯಮವರ್ಗದ ಜನ. ಈಗ ಮಗ ಮದುವೆಗೆ ಒಪ್ಪಿರುವುದೇ ಹೆಚ್ಚು. ಮಂಗಳಮ್ಮನಿಗೆ ಅದೇ ಖುಷಿ. ಆದರೆ ಮೊದಲ ಸಂಬಂಧವೇ ಹಾಳಾಯ್ತು. ಗೌರಿಯನ್ನು ಯಾವುದೇ ಕಾರಣಕ್ಕೂ ಸೊಸೆ ಮಾಡಿಕೊಳ್ಳಲ್ಲ ಎಂಬ ಹಠ. ಶ್ರೀಮಂತರ ಸಹವಾಸವೇ ಬೇಡ ಎಂದಿದ್ದಾಳೆ.
ಮದುವೆಗೆ ಅಪ್ಪು ಒಪ್ಪಿಸಿದ ಮಂಗಳಮ್ಮ
ಅಪ್ಪು ಮದುವೆಗೆ ಒಪ್ಪುತ್ತಿರಲಿಲ್ಲ. ಮಂಗಳಮ್ಮ ಸಾಯುವ ನಾಟಕವನ್ನು ಆಡಿದಾಗಲೇ ಅಪ್ಪು ಮದುವೆಗೆ ಒಪ್ಪಿಕೊಂಡಿದ್ದ. ಆದರೆ ನೋಡುವುದಕ್ಕೆ ಹೋಗಿದ್ದ ಹುಡುಗಿ ಗೌರಿ. ಮೊದಲೇ ಗೌರಿಯ ರಾತ್ರಿಯ ಕಾಯಿಲೆ ಮಂಗಳಮ್ಮನ ಮುಂದೆಯೇ ಅನಾವರಣವಾಗಿತ್ತು. ಸರಪಳಿ ವಿಚಾರ ಬಯಲಾದ ಮೇಲೆ ಆ ಸರಪಳಿ ಹುಡುಗಿ ನಮಗೆ ಬೇಡ ಎಂದೇ ಹಠ ಮಾಡಿದ್ದಳು. ಆದರೆ ಅಪ್ಪು ಮದುವೆಗೆ ಒಪ್ಪುವುದೇ ಕಷ್ಟ ಎಂದು ತಿಳಿದ ಮಂಗಳಮ್ಮ ಈಗ ಪ್ರಮಾಣ ಮಾಡಿಸಿಕೊಂಡಿದ್ದಾಳೆ.

ಅಪ್ಪು-ಗೌರಿ ಒಂದಾಗುವ ಸಮಯ?
ಗೌರಿಯನ್ನು ಮೊದಲು ಮದುವೆ ಮಾಡಿಸಿ ಕಳುಹಿಸಿ ಬಿಡಬೇಕೆಂದುಕೊಂಡಿರುವ ಅಜ್ಜಿಗೆ ಅಪ್ಪುಗೆ ಕೊಡುವುದಕ್ಕೆ ಒಪ್ಪುತ್ತಿಲ್ಲ. ನಮ್ಮ ಮನೆಯಲ್ಲಿ ಕೆಲಸಕ್ಕೆ ಬರುವ ಜನಕ್ಕೆ ಮನೆ ಮಗಳನ್ನು ಕೊಡುವುದಕ್ಕೆ ಆಗಲ್ಲ ಎಂದೇ ವಾದ ಮಾಡುತ್ತಿದ್ದಾಳೆ. ಅತ್ತೆ ಬೇರೆ ಹಿಂಸೆ ಕೊಡುವುದಕ್ಕೆ ಶುರು ಮಾಡಿದ್ದಾಳೆ. ನೀನು ಹುಟ್ಟಿದ ಮೇಲೆ ಮನೆಗೆ ಒಂದು ಪೈಸೆಯೂ ಒಳ್ಳೆಯದಾಗಿಲ್ಲ ಎಂದೇ ಕೊಂಕು ಮಾತನಾಡುತ್ತಿದ್ದಾಳೆ. ಕೊಂಕು ಮಾತನ್ನು ಕೇಳಿ ಕೇಳಿ ಗೌರಿಗೆ ಅಭ್ಯಾಸವಾಗಿ ಹೋಗಿದೆ. ಹೀಗಾಗಿ ಮೌನ ಒಂದು ಬಿಟ್ಟರೆ ಬೇರೆನು ಇಲ್ಲ. ಮನೆಯವರಿಂದ ಏನೇ ವಿರೋಧವಿದ್ದರು ವಿಧಿಯೇ ಅಪ್ಪು-ಗೌರಿಯನ್ನು ಒಂದು ಮಾಡಲಿದೆ.


Click it and Unblock the Notifications











