Vadhu: ಹೆಂಡ್ತಿ ಡಿವೋರ್ಸ್ ಕಾಟ.. ಲಾಯರ್ ವಧು ಕಡೆಯಿಂದ ಸಂಕಷ್ಟ: ಸಾರ್ಥಕ್ ಏನ್ಮಾಡ್ತಾನೆ?
ಬಿಗ್ ಬಾಸ್ ಮುಗಿದ ಕೂಡಲೇ ಕಲರ್ಸ್ ಕನ್ನಡ ಆ ಸ್ಲಾಟ್‌ಗಳನ್ನ ಹೊಸ ಧಾರಾವಾಹಿಯಿಂದ ಫಿಲ್ ಮಾಡಿದೆ. ಅದರಲ್ಲಿ 'ವಧು' ಕೂಡ ಒಂದು. ಈ ಧಾರಾವಾಹಿಯ ಪ್ರೋಮೋ ಸಾಕಷ್ಟುಗಮನ ಸೆಳೆದಿತ್ತು. ಡಿವೋರ್ಸ್ ಲಾಯರ್ ಮದುವೆ ಕಥೆ ಇದೆ.
ಧಾರಾವಾಹಿಗಳಲ್ಲಿ ಕೋರ್ಟ್ ಸೀನ್ ಅಂದ್ರೆ ಅದು ಟಿ.ಎನ್. ಸೀತರಾಮ್ ಅವರ ವಾದ. ಕೋರ್ಟ್‌ನಲ್ಲಿ ನಿಂತು, ಕಪ್ಪು ಕೋಟ್ ಧರಿಸಿ, ಫೈಲ್‌ಗಳನ್ನ ಹಿಡಿದು ವಾದ ಮಂಡಿಸೋಕೆ ಶುರು ಮಾಡಿದ್ರು ಅಂದ್ರೆ ವೀಕ್ಷಕರು ಫಿದಾ ಆಗ್ತಾ ಇದ್ರು.

'ವಧು' ಧಾರಾವಾಹಿಯ ಪ್ರೋಮೋ ಬಿಟ್ಟಾಗ ಸೀತರಾಮ್ ಅವರು ಕೂಡ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದರು. ವಧು ಪರಿಚಯ ಮಾಡಿಕೊಳ್ಳುವಾಗ, ಅವರ ಬಳಿ ಡಿವೋರ್ಸ್ ಲಾಯರ್ ಎಂದು ಪರಿಚಯ ಮಾಡಿಕೊಂಡಿದ್ದರು. ಆ ಪ್ರೋಮೋ ನೋಡಿದ ವೀಕ್ಷಕರು. ಮತ್ತೆ ಟಿ.ಎನ್. ಸೀತರಾಮ್ ಅವರ ವಾದವನ್ನ ಕೇಳಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ವಾರಕ್ಕೆ ಬಂದ ರೇಟಿಂಗ್ ಎಷ್ಟು
ಹೊಸದಾಗಿ ಶುರುವಾಗುವ ಧಾರಾವಾಹಿಗಳು ಆರಂಭದಲ್ಲಿಯೇ ಕಥೆಯನ್ನ ಹೇಗೆ ತೆಗೆದುಕೊಂಡು ಹೋಗುತ್ತವೆ ಎನ್ನುವುದರ ಮೇಲೆ ಜನ ನೋಡುವುದಕ್ಕೆ ಶುರು ಮಾಡುತ್ತಾರೆ. ಅದರಲ್ಲೂ ಧಾರಾವಾಹಿ ಆರಂಭಕ್ಕೂ ಮುನ್ನ ಬರುವ ಪ್ರೋಮೋಗಳು ಇದರಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಇದೀಗ ವಧು ಧಾರಾವಾಹಿಯ ಸರದಿ. ಈ ಹೊಸ ಧಾರಾವಾಹಿ ಆರಂಭವಾಗಿ ಇನ್ನು ಒಂದು ವಾರವಷ್ಟೆ. ಆಗಲೇ ಜನರ ಮನಸ್ಸನ್ನ ಗೆದ್ದಿದೆ. ರೇಟಿಂಗ್ ನಲ್ಲಿ 4.0 ಪಡೆದುಕೊಂಡಿದೆ.
ಅಮ್ಮನಿಗಾಗಿ ಸಹಿಸಿಕೊಳ್ಳುತ್ತಿರುವ ಮಗ
ಸಾರ್ಥಕ್ ದೊಡ್ಡ ಬಿಸಿನೆಸ್ ಮ್ಯಾನ್. ಬಿಸಿನೆಸ್‌ನಲ್ಲಿ ಸಕ್ಸಸ್ ಆದ್ರೂ, ವೈಯಕ್ತಿಕ ಜೀವನ ಅಂದ್ರೆ ಮದುವೆ ವಿಚಾರದಲ್ಲಿ ಅದೇಕೋ ಫೇಲ್ ಆಗಿದ್ದಾನೆ. ಆದರೆ ಅಮ್ಮ ಎಂದರೆ ಪ್ರಾಣವನ್ನೇ ಇಟ್ಟುಕೊಂಡಿದ್ದಾನೆ. ಅಮ್ಮನಿಗೆ ಕೊಂಚವೂ ನೋವಾಗಬಾರದು. ಅದೇ ವೀಕ್ನೆಸ್ ಹಿಡಿದುಕೊಂಡಿರೋ ಪ್ರಿಯಾಂಕ, ಸಾರ್ಥಕ್‌ನ ಬ್ಲಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾಳೆ. ಅಮ್ಮನಿಗೆ ಯಾವುದೇ ಸತ್ಯ ತಿಳಿಯಬಾರದೆಂದು ಸಾರ್ಥಕ್ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಾನೆ.
ವಧುಗೆ ಸ್ವಾಭಿಮಾನವೇ ಜಾಸ್ತಿ
ಪ್ರಿಯಾಂಕಗೆ ಅಹಂಕಾರ ಹೆಚ್ಚಾಗಿದೆ. ಶ್ರೀಮಂತಿಕೆಯ ಅಹಂ ಅದು. ಹಣ ಬಿಸಾಡಿದರೆ ಲಾಯರ್ ಗಳು ಎಷ್ಟು ಜನ ಬೇಕಾದರೂ ಬಂದು ನಿಲ್ಲುತ್ತಾರೆ, ಡಿವೋರ್ಸ್ ಕೊಡಿಸುತ್ತಾರೆ ಎಂಬ ಅಹಂಕಾರ. ಹೀಗಾಗಿ ವಧುಗೆ ಅವಮಾನ ಮಾಡಿದ್ದಾಳೆ. ಆದರೆ ವಧು, ಹಣಕ್ಕೆ ಬೆಲೆ ಕೊಡುವವಳಲ್ಲ ಬದಲಾಗಿ ತನ್ನ ಸ್ವಾಭಿಮಾನಕ್ಕೆ ಬೆಲೆ ಕೊಡುವವಳು. ಡಿವೋರ್ಸ್ ಕೇಸ್ ತೆಗೆದುಕೊಳ್ಳಬೇಕು ಅಂದ್ರೆ ಪ್ರಿಯಾಂಕ ಕ್ಷಮೆ ಕೇಳಲೇಬೇಕೆಂದು ವಧು ಡಿಮ್ಯಾಂಡ್ ಇಟ್ಟಿದ್ದಾಳೆ.
ಲಾಯರ್ ಕಡೆಯಿಂದ ಹೆಣಗಾಟ
ಇತ್ತ ಪ್ರಿಯಾಂಕಾಳ ಬ್ಲಾಕ್ ಮೇಲ್.. ಅತ್ತ ವಧು ಹಠ.. ಎರಡು ಹೆಣ್ಣು ಮಕ್ಕಳ ನಡುವೆ ಸಿಲುಕಿ ಅಡ ಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿದೆ ಸಾರ್ಥಕ್ ಬದುಕು. ವಧುಳನ್ನ ಸಾಕಷ್ಟು ಮನವಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ವಧು ಬಗ್ಗುತ್ತಿಲ್ಲ. ಸಾರ್ಥಕ್ ಗೆ ಇಲ್ಲಿ ಸೂಕ್ಷ್ಮ ವಿಚಾರ ಅಡಗಿದೆ. ಅಮ್ಮನಿಗೆ ಡಿವೋರ್ಸ್ ವಿಚಾರ ಗೊತ್ತಾದರೆ ಅವರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಪ್ರಿಯಾಂಕಳ ಅಹಂಕಾರ ಕಡಿಮೆ ಮಾಡಿ, ಕ್ಷಮೆ ಅಂತು ಕೇಳಿಸುವುದು ಕಷ್ಟ. ವಧುಳನ್ನೆ ಕನ್ವಿನ್ಸ್ ಮಾಡ್ತಾನಾ ನೋಡಬೇಕಿದೆ.


Click it and Unblock the Notifications











