Ninagagi: ರಚನಾ-ಜೀವಾ ಮದುವೆ; ಗುಟ್ಟಾಗಿಟ್ಟಿದ್ದ ಫೋನ್‌ನಲ್ಲಿ ಬಯಲಾದ್ರೆ?
'ನಿನಗಾಗಿ' ಧಾರಾವಾಹಿಯಲ್ಲಿ ಜೀವ ಹಾಗೂ ರಚನಾ ದೊಡ್ಡಮಟ್ಟದ ರಿಸ್ಕ್ ಅನ್ನೇ ತೆಗೆದುಕೊಳ್ಳುತ್ತಿದ್ದಾರೆ. ರಚನಾಗೆ ಸೈಕೋ ಆಶ್ವಿನ್ ನಿಂದ ತಪ್ಪಿಸಿಕೊಳ್ಳಬೇಕಿತ್ತು. ಜೀವಾಗೆ ತನ್ನ ಮಗಳನ್ನು ಕಾಪಾಡಿಕೊಳ್ಳಬೇಕಿತ್ತು. ಆದರೆ ಈ ಎರಡು ಅಸಾಧ್ಯವಾಗಿತ್ತು. ಎರಡನ್ನು ಸಾಧ್ಯವಾಗಿಸಿದ್ದು ಮಾತ್ರ ಶಾಕಿಂಗ್ ಆಗಿಸಿತ್ತು. ರಚನಾ ತನಗೂ ಜೀವಾಗೂ ಮದುವೆಯಾಗಿದೆ ಎಂದು ತಾಳಿ ಹಾಕಿಕೊಂಡು ಕೋರ್ಟ್‌ಗೆ ಬಂದಳು.
ಅಂದಿನಿಂದ ವಜ್ರೇಶ್ವರಿ ಮನಸ್ಸಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಗಳನ್ನು ಜೀವನಿಂದ ದೂರ ಮಾಡುವುದಕ್ಕೆ ಹಾರ್ಟ್ ಅಟ್ಯಾಕ್ ಎಂಬ ಡ್ರಾಮಾ ಮಾಡಿದಳು. ಆ ಡ್ರಾಮಾ ಜೀವನಿಗೆ ಗೊತ್ತಾದ ಮೇಲೆ ರಚನ ಜೊತೆಗೆ ಮನೆಗೆ ಬಂದ. ಈಗ ಜೀವ-ರಚನಾ ನಾಟಕ ನೋಡಿ, ಇಬ್ಬರಿಗೂ ಮತ್ತೊಮ್ಮೆ ಮದುವೆ ಮಾಡುವುದಕ್ಕೆ ಪ್ಲ್ಯಾನ್ ನಡೆದಿದೆ. ಈ ಮದುವೆಯ ಸಮಯದಲ್ಲಿ ಮನೋಹರ್ ಪ್ಲ್ಯಾನ್ ಕಂಡು ವೀಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.

ಮೊದಲ ಪ್ಲ್ಯಾನ್ ವರ್ಕ್ ಆಗ್ತಿಲ್ಲ
ವಜ್ರೇಶ್ವರಿ ಹಾಗೂ ಜೀವನ ಮಾವನಿಗೆ ಈ ಮದುವೆ ನಡೆದಿಲ್ಲ ಎಂಬ ದೊಡ್ಡ ಅನುಮಾನವಿದೆ. ಅದನ್ನ ಸಾಬೀತು ಪಡಿಸಿದರೆ ಜೈಲು ಶಿಕ್ಷೆಯಾಗುತ್ತೆ ಎಂದೇ ನಂಬಿರುವ ಕಾರಣ ಜೀವನನ್ನ ಸಿಕ್ಕಿ ಹಾಕಿಸುವ ಎಲ್ಲಾ ಪ್ಲ್ಯಾನ್ ನಡೆಯುತ್ತಾ ಇದೆ. ಲಾಯರ್ ಮುಂದೆ ತಾಳಿ ಕಟ್ಡಿಸುವ ಶಾಸ್ತ್ರ ನಡೆಯುತ್ತಿದ್ದು, ಮನೋಹರ್ ಹಾಗೂ ಜೀವ ಸೇರಿ ಮಾಡಿದ ಪ್ಲ್ಯಾನ್ ಪ್ಲಾಫ್ ಆಗಿದೆ. ಇದರಿಂದ ವಜ್ರೇಶ್ವರಿ ಟೀಂ ಫುಲ್ ಖುಷಿಯಾಗಿದೆ.
ತಾಳಿ ಕಟ್ಟಲು ಬಲವಂತ
ಅತ್ತ ಪ್ಲ್ಯಾನ್ ವರ್ಕ್ ಆಗ್ತಿಲ್ಲ.. ಇತ್ತ ಮನೆಯವರಿಂದ ಒತ್ತಡ ಕಡಿಮೆಯಾಗುತ್ತಿಲ್ಲ. ಏನು ಮಾಡಬೇಕೆಂದು ತೋಚದೆ ಜೀವ ಹಾಗೂ ರಚನಾ ನಾಟಕ ಶುರು ಮಾಡಿದ್ದಾರೆ. ಅದು ಹಾಗೇ ಇದು ಹೀಗೆ. ಎಲ್ಲರೂ ಆಶೀರ್ವಾದ ಮಾಡಿ ಅಂತೆಲ್ಲ ಏನೇನೋ ಮಾತಾಡ್ತಾ ಇದ್ರು. ಮೊದಲು ಕಟ್ಟಯ್ಯ ತಾಳಿನ ಅಂತ ಮನೆಯವರಿಂದ ಮಾತು. ಜೀವಾನ ಮಗಳು ಕೃಷ್ಣಾಳಿಂದಾನು ಅದಕ್ಕೆ ಸಮ್ಮತಿ ಇತ್ತು.
ನಿಹಾರಿಕಳನ್ನು ತಳ್ಳಿದ ಮನೋಹರ್
ಆದರೆ ಈ ಸಮಯದಲ್ಲಿ ಜೀವನಿಗೆ ಧೈರ್ಯ ತುಂಬಿದ ಮನೋಹರ್ ತನ್ನ ಎರಡನೇ ಪ್ಲ್ಯಾನ್ ಅನ್ನು ಸಕ್ಸಸ್ ಮಾಡಿದ. ಜೀವನ ಪಕ್ಕ ನಿಂತಿದ್ದವನು ನಿಹಾರಿಜಾ ಹಿಂದೆ ಹೋಗಿ ನಿಂತ. ಇತ್ತ ಲಾಯರ್ ವಿಡಿಯೋ ಮಾಡುವುದರಲ್ಲಿ ಬ್ಯುಸಿ ಇದ್ರು. ಇನ್ಮೇನು ತಾಳಿ ಕಟ್ಟುವುದಕ್ಕೆ ಒತ್ತಡ ಶುರುವಾಗುತ್ತಿದ್ದಂತೆ ಮನೋಹರ್, ನಿಹರಿಕಾಳನ್ನ ತಳ್ಳಿದ. ವಜ್ರೇಶ್ವರಿ ಹೋಗಿ ಕುಂಕುಮದ ಮೇಲೆ ಬುದ್ದಳು. ಲಾಯರ್ ಮಾಡುತ್ತಿದ್ದ ವಿಡಿಯೋ ನೇರವಾಗಿ ವಜ್ರೇಶ್ವರಿ ಕಡೆಗೆ ಫೋಕಸ್ ಆಯ್ತು.
ಆನಂದ್ ಫೋನ್ ಆನ್ ಇದ್ರೆ!
ಎಲ್ಲರೂ ವಜ್ರೇಶ್ವರಿ ಬಿದ್ದು ಬಿಟ್ಟಳಲ್ಲ ಎಂದುಕೊಳ್ಳುವಾಗಲೇ ಮನೋಹರ್ ಸೂಚನೆ ನೀಡಿದ. ರಚನಾ ಮತ್ತೆ ಅವಳೆ ತಾಳಿ ಹಾಕಿಕೊಂಡಳು. ಆದರೆ ಈ ಎಪಿಸೋಡ್ ವೀಕ್ಷಕರಿಗೆ ಸಿಕ್ಕಾಪಟ್ಟೆ ನಗು ತರಿಸಿದೆ. ಆದರೆ ಕಾಮಿಡಿ ಏನು ಅಂದ್ರೆ ಆನಂದ್ ಫೋನ್ ಮತ್ತೊಂದು ಕಡೆ ರೆಕಾರ್ಡ್ ಆಗ್ತಾ ಇದೆ. ಅದರಿಂದ ಜೀವನ ಗುಟ್ಟು ರಟ್ಟಾಗಿ ಬಿಟ್ಟರೆ ಎಂಬ ಭಯ ಕಾಡುತ್ತಿದೆ. ಹೀಗಾಗಿ ವೀಕ್ಷಕರೆಲ್ಲ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಆನಂದ್ ಫೋನ್ ನಲ್ಲಿ ರೆಕಾರ್ಡ್ ಆಗದೆ ಇರಲಿ ಎಂದು.


Click it and Unblock the Notifications











