Ninagagi: ಕಳ್ಳ ಸ್ವಾಮಿ ಕೆಂಡ ತುಳಿಯುವಂತೆ ಮಾಡಿದ ವಜ್ರೇಶ್ವರಿ: ನಿಹಾರಿಕ ಬೆವರಿಳಿಸಿದ ಜೀವ

By ಎಸ್ ಸುಮಂತ್

ರಚನಾಳ ಮುಗ್ಧತೆಯನ್ನೇ ವಜ್ರೇಶ್ವರಿ ಬಂಡವಾಳ ಮಾಡಿಕೊಂಡು ದುಡಿಮೆ ಮಾಡುತ್ತಿದ್ದಾಳೆ. ರಚನಾ ಈಗ ಮದುವೆಯಾಗಿದ್ದೀನಿ ಅಂತ ಸಿನಿಮಾ ನಟನೆ ಮಾಡಲ್ಲ ಎಂದು ನಿರ್ಮಾಪಕರಿಗೆ ನೇರವಾಗಿ ಹೇಳುತ್ತಿದ್ದಾಳೆ. ಇದು ವಜ್ರೇಶ್ವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ರಚನಾ ಸದಾ ನಟನೆ ಮಾಡುತ್ತಲೇ ಇರಬೇಕು, ಹಣ ಹರಿದು ಬರುತ್ತಲೇ ಇರಬೇಕು ಎಂದು ವಜ್ರೇಶ್ವರಿ ಬಯಸಿದ್ದಳು. ಅದಕ್ಕೆಂದೇ ರಚಬಾಗೆ ಮದುವೆ ಮಾಡಲು ಪ್ಲ್ಯಾನ್ ಮಾಡಿದ್ದ ವಜ್ರೇಶ್ವರಿ ತನ್ನ ಅಣ್ಣನ ಮಗನನ್ನೆ ಮದುವೆ ಮಾಡಿಸಲು ಹೊರಟಲು. ಅವನಿಂದ ತಪ್ಪಿಸಿ ಕೊಳ್ಳುವುದಕ್ಕೇನೆ ರಚನಾ, ಜೀವ ಜೊತೆಗೆ ಮದುವೆ ಆಗಿದೆ ಎಂದಳು.

Colors Kannada serial Written Update on ninagagi Jan 13th episode

ಈಗ ರಚನಾಗೆ ಜೀವನೆ ಕಣ್ಗಾವಲು. ವಜ್ರೇಶ್ವರಿಯ ಡ್ರಾಮಾ ಚೆನ್ನಾಗಿ ಅರ್ಥ ಆಗಿದೆ. ಹೀಗಾಗಿಯೇ ರಚನಾಗೆ ಅನ್ಯಾಯ ಆಗ್ತಿದೆ ಅಂತ ಗೊತ್ತಾದ ಕೂಡಲೇ ಅಲ್ಲಿ ಜೀವ ಬಂದು ನಿಲ್ಲುತ್ತಾನೆ. ಈಗಾಗಲೇ ಹಣ ವಿಚಾರದಲ್ಲಿಯೇ ವಜ್ರೇಶ್ವರಿಗೆ ಬಿಸಿ ಮುಟ್ಟಿಸಿದ್ದಾನೆ. ವಜ್ರೇಶ್ವರಿಯ ಸ್ವಾರ್ಥ ಅರ್ಥ ಮಾಡಿಕೊಂಡ ಬಳಿಕ ತೇಜ ಅಲರ್ಟ್ ಆಗಿದ್ದಾನೆ.

ಕಳ್ಳ ಸ್ವಾಮಿ ಸುಳ್ಳು ಭವಿಷ್ಯ

ರಚನಾಗೆ ತಾಯಿ ಎಂದರೆ ಸಿಕ್ಕಾಪಟ್ಟೆ ಪ್ರೀತಿ. ಅವಳಿಗಾಗಿ ಏನು ಬೇಕಾದರೂ ಮಾಡುತ್ತಾಳೆ. ನಟನೆ ಮಾಡಲ್ಲ ಎಂದಿದ್ದಕ್ಕೆ ರಚನಾಗೆ ಶಿಕ್ಷೆ ಕೊಡುವ ನಾಟಕ ಶುರು ಮಾಡಿದ್ದಾಳೆ. ಅದಕ್ಕಾಗಿ ಶ್ರೀಮಾತಾ ಕಡೆಯವರು ಅಂತ ಹೇಳಿ, ಕಳ್ಳ ಸ್ವಾಮಿ ಕರೆಸಿ, ಕೆಂಡ ಹಾಯಬೇಕು, ಅದೇ ಕಾಲಲ್ಲಿ ನಡೆಯಬೇಕು ಎಂಬ ಶಿಕ್ಷೆ ನೀಡಿದ್ದಾಳೆ.

ಕೆಂಡದ ಮೇಲೆ ನಡೆದ ರಚನಾ ಸುಸ್ತು

ಅಮ್ಮನ ಆರೋಗ್ಯ ಸರಿಯಾಗಬೇಕು ಎಂಬುದು ರಚನಾ ಆಸೆ. ಹೀಗಾಗಿ ತನಗೆ ಎಷ್ಟೇ ಕಷ್ಟವಾದರೂ ರಚನಾ ಕೆಂಡದ ಮೇಲೆ ನಡೆದಿದ್ದಾಳೆ. ಆದರೆ ಅದೇ ಕಾಲಲ್ಲ ನೆಟ್ಟಕ್ಕೆ ಹತ್ತೋದು ಸುಲಭವಾಗಿರಲಿಲ್ಲ. ಆದರೂ ವಜ್ರೇಶ್ವರಿ, ಸ್ವಾಮೀಜಿಗಳ ಮಿಉಲಕ ಹಿಂಸೆ ಮಾಡುತ್ತಿದ್ದಳು. ವಜ್ರೇಶ್ವರಿ ಹಾಗೂ ನಿಹಾರಿಕ ಬಿಟ್ಟರೆ ಇನ್ನುಳಿದವರು ನೊಂದುಕೊಳ್ಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಜೀವ ಬಂದ.

ಜೀವ ಮಾಡಿದ ಸಖತ್ ಪ್ಲ್ಯಾನ್

ಜೀವಗೆ ಇವರು ಫೇಕ್ ಸ್ವಾಮೀಜಿಗಳು ಎಂಬುದು ಯಾವಾಗಲೋ ಅರ್ಥವಾಗಿತ್ತು. ಅದಕ್ಕೆ ಶ್ರೀಮಾತಾ ಬಳಿಗೆ ಹೋಗಿ, ಎಲ್ಲವನ್ನು ತಿಳಿದುಕೊಂಡು ಬಂದ. ದೇವಸ್ಥಾನದಲ್ಲಿ ಈ ಸತ್ಯ ಹೇಳಿದರೆ ರಚನಾ ನಂಬಲ್ಲ ಅನ್ನೋದು ಅರ್ಥವಾಗಿತ್ತು. ಅದಕಗಕೆ ಸೂಕ್ಷ್ಮವಾಗಿ ಅರ್ಥ ಮಾಡಿಸಿದ. ದೇವಸ್ಥಾನಕ್ಕೆ ಬಂದು ಸ್ವಾಮೀಜಿಗಳಿಗೆ ತದುಕಿದ. ಸ್ವಾಮೀಜಿಗಳಿಂದಾನರೆ ವ್ರತದ ನಿಯಮವನ್ನು ಉಲ್ಟಾ ಮಾಡಿದ. ರಚನಾಗೆ ತಾನೇ ಮುಂದೆ ನಿಂತು ಸಹಾಯ ಮಾಡಿದ.

ನಿಹಾರಿಕ - ವಜ್ರೇಶ್ವರಿ ಗಪ್ ಚುಪ್

ರಚನಾಳ ಕೈಲಿ ಆಗದೆ ಇದ್ದರೆ ವ್ರತವನ್ನು ಅವಳಿಗಿಂತ ಹಿರಿಯರು ಮಾಡಬಹುದು ಎಂದರು. ಆಗ ಎಲ್ಲರ ಚಿತ್ತ ನಿಹಾರಿಕ ಅತ್ತ ತಿರುಗಿತು. ನಿಹಾರಿಕ ಈಗ ಕೆಂಡ ತುಳಿದು, ಬೆಟ್ಟ ಹತ್ತಬೇಕು ಎಂದು ಹೇಳಿದಾಗ ನಿಹಾರಿಕ ಶಾಕ್ ಆದಳು. ಹಿಂದೇಟು ಹಾಕಿದಳು. ಜೀವ ಏನೋ ಮಾಡ್ತಿದ್ದಾನೇ ಅಂತಾನೆ ವಜ್ರೇಶ್ವರಿ ಹಾಗೂ ನಿಹಾರಿಕ ಗಢಗಢ ಅಂತ ನಡುಗಿದರು. ಆಮೇಲೆ ರಚನಾನೇ ನಾನೇ ಮುಂದುವರೆಸ್ತೀನಿ ಅಂತ ಹೇಳಿದಾಗ, ಜೀವ ಅವಳಿಗೆ ಸಹಾಯ ಮಾಡಿದ. ಎತ್ತಿಕೊಂಡು ಬೆಟ್ಟ ಹತ್ತಿದ. ಅಲ್ಲಿಯೂ ನಿಹಾರಿಕ ಬಿಡಲಿಲ್ಲ ಕುಂಕುಮ ಇಡುವ ವಿಚಾರದಲ್ಲಿ ಕಾಡಿದಳು. ಜೀವ ಧೈರ್ಯವಾಗಿ ಕುಂಕುಮವಿಟ್ಟು ನಿಹಾರಿಕಾಗೆ ತಿರುಗೇಟು ನೀಡಿದ್ದಾನೆ.

More from Filmibeat

English summary
Ninagagi serial today episode. Here is the details about Jeeva Behaviour Shock to Vajreshwari and Niharika;
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X