Ninagagi: ಜೀವ - ರಚನಾ ಲೈಫ್‌ಗೆ ಬಂದ ಕಾಣದ ಕೈ ಯಾವುದು? ವಜ್ರೇಶ್ವರಿ, ನಿಹಾರಿಕ, ಜನಾರ್ದನ್ ಅಲ್ಲ!

By ಎಸ್ ಸುಮಂತ್

ರಚನಾ ಯಾವಾಗಲೂ ಸಂಪ್ರದಾಯಸ್ಥ ಕುಟುಂಬ, ತುಂಬು ಕುಟುಂಬವನ್ನೇ ಇಷ್ಟ ಪಡುವ ಹುಡುಗಿ. ಅದರಲ್ಲೂ ಗಂಡನಿಗೆ ಇಷ್ಟವಾಗುವ ಅಡುಗೆ ಮಾಡಿಟ್ಟು, ಮಗಳಿಗೆ ಕೈ ತುತ್ತು ತಿನಿಸಿ, ಶಾಲೆಗೆ ಬಿಟ್ಟು ಬಂದು, ಮತ್ತೆ ಮನೆಯನ್ನೆಲ್ಲಾ ಕ್ಲೀನ್ ಮಾಡಿಕೊಳ್ಳಬೇಕು. ಹೀಗೆ ಅಪ್ಪಟ ಗೃಹಿಣಿಯಂತೆ ಬದುಕಿ ಬಿಡಬೇಕೆಂಬ ಅಪಾರವಾದ ಆಸೆಯನ್ನ ಇಟ್ಟುಕೊಂಡವಳು. ಆದರೆ ತಾನೇ ನಿನ್ನ ತಾಯಿ ಎಂದು ಹೇಳಿಕೊಳ್ಳುವ ವಜ್ರೇಶ್ವರಿ ಇದಕ್ಕೆಲ್ಲ ಬಿಡುವವಳಲ್ಲ.

ರಚನಾಗೆ ಅವಳೇ ನಂಬಿರುವ ದೇವರು ಒಳ್ಳೆಯದ್ದನ್ನೇ ಮಾಡಿದೆ. ಜೀವ ಮನೆಗೆ ತಾಳಿ ಕಟ್ಟಿಕೊಂಡು ಹೋಗುವಂತೆ ಮನಸ್ಸು ಕೊಟ್ಟಿದೆ. ಅಲ್ಲಿಗೆ ರಚನಾ ಕೂಡ ಸೇಫ್, ಕೃಷ್ಣ ಕೂಡ ಸೇಫ್. ಆದರೆ ಮಾಡಿದ ಒಂದೇ ಒಂದು ಯಡವಟ್ಟು ಇಂದು ಜೀವ ಹಾಗೂ ರಚನಾ ಕೀ ಕೊಟ್ಟ ಗೊಂಬೆಯಂತೆ ಆಡುತ್ತಿದ್ದಾರೆ.

Colors Kannada serial Written Update on ninagagi Jan 16th episode

ಮಾಡ್ರನ್ ಡ್ರೆಸ್ ಹಾಕಿದ ರಚನಾ

ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಸೂಪರ್ ಸ್ಟಾರ್ ರಚನಾ ಮನೆಯಲ್ಲೂ ಸಂಕ್ರಾಂತಿ ಜೋರಾಗಿದೆ. ಜೀವ ಮನೆಯವರು, ರಚನಾ ಮನೆಯವರು ಸೇರಿ ಸಂಭ್ರಮಿಸುತ್ತಿದ್ದಾರೆ. ರಚನಾ ಬಗ್ಗೆ ಬಂದ ನೆಟ್ಟರ ಮುಂದೆ ಜೀವ ತಾಯಿ ಹೊಗಳುತ್ತಿದ್ದರೆ, ರಚನಾ ಬಂದ ರೀತಿಯೇ ಬೇರೆ. ಸೀರೆಯಟ್ಟು, ಲಕ್ಷಣವಾಗಿ ಬರ್ತಾಳೆ ಅಂತ ಹೊಗಳುತ್ತಿದ್ದರೆ ಅಲ್ಲಿದ್ದವರಿಗೆಲ್ಲ ಶಾಕ್ ಕೊಡುವಂತೆ ರಾಂಗ್ ಎಂಟ್ರಿಯಾಗಿದ್ದಾಳೆ.

ಸರ್ವ್ ಮಾಡಲು ನಿಂತ ಜೀವ

ಅತ್ತ ರಚನಾ ಮಾಡ್ರನ್ ಡ್ರೆಸ್ ತೊಟ್ಟು ಶಾಕ್ ನೀಡಿದರೆ ಇತ್ತ ಜೀವ ಇನ್ನೊಂದು ರೀತಿ ಆಡುತ್ತಿದ್ದಾನೆ. ಸರ್ವರ್ ಹಾಕುವ ಡ್ರೆಸ್ ಹಾಕಿ, ಬಂದ ಗೆಸ್ಟ್ ಗಳಿಗೆಲ್ಲ ಜ್ಯೂಸ್ ಬೇಕಾ ಅಂತ ಓಡಾಡುತ್ತಿದ್ದಾನೆ. ಇದು ರಚನಾ ಮನೆಯವರಿಗಂತು ಇಬ್ಬರಿಗೂ ಏನಾಗಿದೆ ಎಂಬ ಟೆನ್ಶನ್ ಶುರು ಮಾಡಿದೆ. ಇದನ್ನೆಲ್ಲ ನೋಡಿದ ನಿಹಾರಿಕಾಗಂತು ಹಾಲು ಕುಡಿದಷ್ಟು ಸಂಭ್ರಮ. ಅದಕ್ಕರ ಜೀವನನ್ನ ಬಾವ ಎಂದು ಕೂಡ ನೋಡದೆ ಹಲೋ ಜ್ಯೂಸ್ ತನ್ನಿ ವೇಟರ್ ಎಂದು ಮರ್ಯಾದೆ ಕಳೆಯಲು ಯತ್ನಿಸಿದ್ದಾಳೆ.

ಜೀವನ ಜೊತೆಗೆ ನಿಂತ ರಚನಾ

ಜೀವನಿಗೆ ಮರ್ಯಾದೆ ಹೋಗುವುದಕ್ಕೆ ರಚನಾ ಎಂದಿಗೂ ಬಿಡುವುದಿಲ್ಲ. ಸಾಧ್ಯವಾದಷ್ಟು ಅವನ ಜೊತೆಗೆ ನಿಲ್ಲುತ್ತಾಳೆ. ಈಗಲೂ ಅದನ್ನೇ ಮಾಡಿದ್ದಾಳೆ. ನಿಹಾರಿಕಾಗೆ ಸರಿಯಾದ ಉತ್ತರ ಕೊಟ್ಟಿದ್ದು, ಜೀವ ದೊಡ್ಮನೆ ಅಳಿಯ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದೆ, ತಮ್ಮ ಮನೆಗೆ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ. ಅತಿಥಿ ಸತ್ಕಾರಕ್ಕೆ ಅವರೇ ಮುಂದೆ ನಿಂತಿದ್ದಾರೆ. ಇದಲ್ಲವೇ ದೊಡ್ಡ ಗುಣ ಎಂದು ಹೊಗಳಿ ನಿಹಾರಿಕಾನೇ ಅಲ್ಲಿಂದ ಕಾಲ್ಕೀಳುವಂತೆ ಮಾಡಿದ್ದಾಳೆ.

ಕಾಣದ ಕೈಗಳ ಆತಂಕ

ರಚನಾಳ ಅವತಾರ ನೋಡಿ ಒಂದು ಕ್ಷಣ ಜೀವನಿಗೂ ಶಾಕ್ ಆಗಿದೆ. ಏನು ಈ ರೀತಿಯ ಬಟ್ಟೆ ಹಾಕಿದ್ದಾಳೆ ಎಂದು. ರಚನಾಗೆ ಜೀವನನ್ನು ನೋಡಿ ಶಾಕ್ ಆಗಿದೆ. ಇಬ್ಬರು ಸಮಸ್ಯೆ ಆಗಿದ್ದೇನು ಎಂಬುದನ್ನು ಮಾತ್ರ ಹಂಚಿಕೊಂಡಿಲ್ಲ. ಅವತ್ತು ಮದುವೆ ವಿಚಾರದಲ್ಲಿ ಮನೋಹರ್ ಏನೋ ಗೇಮ್ ಮಾಡಿದರು. ಎಲ್ಲರ ಗಮನ ವಜ್ರೇಶ್ವರಿ ಕಡೆಗೆ ಬಿದ್ದಾಗ, ರಚನಾಳೆ ಆ ತಾಳಿಯನ್ನ ಹಾಕಿಕೊಂಡಳು. ಈ ವಿಡಿಯೋ ಮೊಬೈಲ್ ನಲ್ಲಿ ಕ್ಯಾಪ್ಚರ್ ಆಗೋಗಿದೆ. ಆದ್ರೆ ಆ ಮೊಬೈಲ್ ಯಾರದು, ಆ ವಿಲನ್ ಯಾರು ಎಂಬುದು ಗೊತ್ತಾಗಿಲ್ಲ. ಆದರೆ ಆ ತಾಳಿ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ರಚನಾ ಹಾಗೂ ಜೀವಗೆ ಇರುವುದು ವಜ್ರೇಶ್ವರಿ, ನಿಹಾರಿಕಾ, ಜನಾರ್ದನ್. ಆದರೆ ಈ ಮೂವರು ಬಟ್ಟೆ ಈ ರೀತಿ ಹಾಕಬೇಕೆಂಬ ಬ್ಲ್ಯಾಕ್ ಮೇಲ್ ಮಾಡಲ್ಲ. ಆ ವಿಡಿಯೋ ಹೊರಗೆ ಬಂದ್ರೆ ಜೀವ ಹಾಗೂ ರಚನಾ ಇಬ್ಬರು ಜೈಲು ಸೇರಬೇಕಾಗುತ್ತದೆ.

More from Filmibeat

English summary
Ninagagi serial today episode. Here is the details about Who is the person who is blackmailing Rachana and Jiva?
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X