Ninagagi: ನಿಹಾರಿಕಾನೇ ವಿಲನ್; ಕಂಡು ಹಿಡಿಯೋಕೆ ಸಾಧ್ಯನಾ ರಚನಾ - ಜೀವನಿಗೆ?

By ಎಸ್ ಸುಮಂತ್

ವಜ್ರೇಶ್ವರಿ ಮನೆಯಲ್ಲಿ ರಚನಾಗೆ ದೊಡ್ಡ ಶತ್ರು ಎಂದರೆ ಅದು ನಿಹಾರಿಕಾಳೆ. ತಾನೂ ದೊಡ್ಡ ಹೀರೋಯಿನ್ ಆಗಬೇಕು ಎಂಬ ಬಯಕೆ. ಆದರೆ ವಜ್ರೇಶ್ವರಿ, ತನ್ನ ಸ್ವಾರ್ಥಕ್ಕಾಗಿ ರಚನಾಳನ್ನ ಹೀರೋಯಿನ್ ಮಾಡಿದಳು. ನಿಹಾರಿಕ ಬಯಸಿದ ಎಲ್ಲಾ ಬದುಕನ್ನು ರಚನಾಗೆ ಕೊಟ್ಟಳು. ಅದು ಪ್ರೀತಿಯಲ್ಲ, ಮನೋಹರ್ ಮೇಲಿರುವ ಕೋಪ. ಆ ಕೋಪ ಎಷ್ಟರ ಮಟ್ಟಿಗೆ ಇದೆ ಅಂದ್ರೆ ರಚನಾಳ ಯಾವ ಭಾವನೆಗೂ ಬೆಲೆ ಕೊಡೋದಿಲ್ಲ, ರಚನಾಳ ಯಾವ ಆಸೆಗೂ ಸೊಪ್ಪು ಹಾಕಲ್ಲ. ಅದಕ್ಕೆ ಅಲ್ವಾ ರಚನಾಳಿಗೆ ಸ್ವಂತ ಒಂದು ಮೊಬೈಲ್ ಕೂಡ ಕೊಟ್ಟಿರಲಿಲ್ಲ.

ರಚನಾ ಮನೆಯಲ್ಲಿ ತುಂಬಾ ಸಾಫ್ಟ್ ಹುಡುಗಿ. ಯಾರಿಗೂ ಎದುರಾಡುತ್ತಿರಲಿಲ್ಲ. ಇದನ್ನ ನಿಹಾರಿಕಾ ಆಗಾಗ ಬಂಡವಾಳ ಮಾಡಿಕೊಂಡು ರಚಾನಾಗೆ ಸಂಬಂಧಿಸಿದ ವಸ್ತುಗಳನ್ನ ಹಾಳು ಮಾಡ್ತಾ ಇದ್ಲು, ರಚನಾಗೆ ನೋವು ಕೊಡ್ತಾ ಇದ್ಲು. ಆದರೆ ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಇದು ರಚನಾ ಅಥವಾ ಜೀವನಿಗೆ ಗೊತ್ತಾದ್ರೆ ಅಷ್ಟೇ ಕಥೆ.

Colors Kannada serial Written Update on ninagagi Jan 20th episode

ನಿಹಾರಿಕಾಗೆ ಹೇಗೋಯ್ತು ಆ ವಿಡಿಯೋ

ರಚನಾಗೆ ಜೀವ ತಾಳಿ ಕಟ್ಟಲಿಲ್ಲ. ಬದಲಿಗೆ ಅಂದು ನಾಟಕ ಮಾಡಿ, ರಚನಾಳೆ ತಾಳಿ ಹಾಕಿಕೊಳ್ಳುವಂತೆ ಮಾಡಿದ್ದ. ಇದು ಎದುರು ಇಟ್ಟಿದ್ದ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಆ ಮೊಬೈಲ್ ಇಟ್ಟವಳು ನಿಹಾರಿಕಾನೇ ಇರಬೇಕು ಎಂಬ ಅನುಮಾನ ಈಗ ಕಾಡುತ್ತಿದೆ. ಮದುವೆ ರಹಸ್ಯದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಶುರು ಮಾಡಿದ್ದಾಳೆ‌.

ನಿಹಾರಿಕಾ ಬ್ಲಾಕ್ ಮೇಲ್

ರಚನಾಳನ್ನು ಕಂಡರೆ ಆಗುತ್ತಿರಲಿಲ್ಲ ನಿಹಾರಿಕಾಗೆ. ಜೀವನಿಗಂತೂ ಮರ್ಯಾದೆ ಕೊಟ್ಟಿದ್ದೆ ನೋಡಲಿಲ್ಲ. ಇದೀಗ ಜೀವ ಹಾಗೂ ರಚನ ಮೇಲೆ ಸರಿಯಾಗಿ ದ್ವೇಷ ತೀರಿಸಿಕೊಳ್ಳುತ್ತಿದ್ದಾಳೆ. ಆ ವಿಡಿಯೋ ಕಳುಹಿಸಿ, ಹೇಳಿದಂತೆ ಕೇಳಬೇಕು ಎನ್ನುತ್ತಿದ್ದಾಳೆ. ಫ್ಯಾಮಿಲಿ ಪ್ರೋಗ್ರಾಂಗೆ ಎಲ್ಲರೂ ಬಯ್ಯುವಂತೆ ಬಟ್ಟೆ ಹಾಕಲು ರಚನಾಗೆ ಹೇಳಿದ್ರೆ, ಜೀವನಿಗೆ ಎಲ್ಲರಿಗೂ ಜ್ಯೂಸ್ ಕೊಡುವ ಕೆಲಸ ಹೇಳಿದ್ದಳು. ಕಪಾಳಕ್ಕೆ ಹೊಡೆಯಬೇಕು ಎಲ್ಲರ ಮುಂದೆ ಎಂಬ ಷರತ್ತನ್ನ ರಚನಾ ಹಾಗೂ ಜೀವ ಇಬ್ಬರು ಬ್ರೇಕ್ ಮಾಡಿದ್ದಾರೆ.

ಎಲ್ಲರ ಮೊಬೈಲ್ ಹುಡುಕಿದ ಜೀವ

ಯಾರೋ ಬೇಕು ಅಂತಾನೇ ಆಟ ಆಡಿಸ್ತಾ ಇರೋದು ಅಂತ ಅನುಮಾನಗೊಂಡ ಜೀವ ಹಾಗೂ ರಚನಾ ಎಲ್ಲರ ಮೊಬೈಲ್‌ನಲ್ಲೂ ಆ ವಿಡಿಯೋ ಇದೆಯಾ ಎಂಬುದ‌ನ್ನು ಚೆಕ್ ಮಾಡಿದ್ದಾರೆ. ಆದರೆ ಮನೆಯಲ್ಲಿ ಯಾರ ಮೊಬೈಲ್‌ನಲ್ಲೂ ಆ ವಿಡಿಯೋ ಇರಲಿಲ್ಲ. ಈ ಇಬ್ಬರು ನಿಹಾರಿಕಾ ಮೊಬೈಲ್ ಅನ್ನು ಮಾತ್ರ ಚೆಕ್ ಮಾಡಲು ಹೋಗಿಲ್ಲ. ವಜ್ರೇಶ್ವರಿ ಹಾಗೂ ಜನಾರ್ದನ್ ಮೇಲೆ ಜೀವನಿಗೆ ಅನುಮಾನವಿಲ್ಲ. ಯಾಕಂದ್ರೆ ವಜ್ರೇಶ್ವರಿ ಎಲ್ಲರ ಮುಂದೆ ಮರ್ಯಾದೆ ಕಳೆದುಕೊಳ್ಳಲ್ಲ, ಜನಾರ್ದನ್ ಸಾಕ್ಷಿ ಇಟ್ಕೊಂಡು ಟೈಮ್ ವೇಸ್ಟ್ ಮಾಡಲ್ಲ ಅನ್ನೋದು ಜೀವನಿಗೆ ಗೊತ್ತು.

ನಿಹಾರಿಕಾ ಮುಂದಿನ ನಿರ್ಧಾರ

ಈ ವಿಡಿಯೋ ಇರೋದೆ ನಿಹಾರಿಕಾ ಬಳಿ. ಇಬ್ಬರು ಎಲ್ಲರ ಮುಂದೆ ಒಬ್ಬರಿಗೊಬ್ಬರು ಮರ್ಯಾದೆ ಕಳೆದುಕೊಳ್ಳಲಿಲ್ಲ ಎಂಬ ಕೋಪ ನಿಹಾರಿಕಾಗೆ ಕಾಡಿದೆ. ಈಗ ಆ ವಿಡಿಯೋವನ್ನು ಎಲ್ಲರ ಮೊಬೈಲ್ ಗೂ ಕಳುಹಿಸಿ ಬಿಡಬೇಕೆಂಬ ನಿರ್ಧಾರ ಮಾಡಿದ್ದಾಳೆ. ಈ ಹಿಂದೊಮ್ಮೆ ಕೃಷ್ಣಾ ವಿಚಾರದಲ್ಲಿ ತಪ್ಪು ಮಾಡಿದ್ದ ನಿಹಾರಿಕಾಳನ್ನ ಹಿಂದು ಮುಂದು ನೋಡದೆ ರಚನಾ ಹೊರಗೆ ಹಾಕಿದ್ದಳು. ಈ ರೀತಿ ಬ್ಲಾಕ್ ಮೇಲ್ ಮಾಡಿದ್ದು ನಿಹಾರಿಕ ಎಂದು ಗೊತ್ತಾದರೆ ಅಷ್ಟೇ ಕಥೆ.

More from Filmibeat

English summary
Ninagagi serial today episode. Here is the details about Niharika is blackmailing Rachana.
Read more about: tv sumanth serail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X