Ninagagi: ವಜ್ರೇಶ್ವರಿ ಡಬಲ್ ಗೇಮ್ ಮುಂದೆ ಬಕ್ರಾಗಳಾಗ್ತಾರಾ ಜೀವ, ಜನಾರ್ದನ್?
ಜನಾರ್ದನ್‌ಗೆ ಒಂದೇ ಟಾರ್ಗೆಟ್ ಅದು ಕೃಷ್ಣ. ಈಗ ವಜ್ರೇಶ್ವರಿಯ ಟಾರ್ಗೆಟ್ ಕೂಡ ಕೃಷ್ಣನೇ ಆಗಿದ್ದಾಳೆ. ಇದೇ ದೊಡ್ಡ ತಲೆ ನೋವಾಗಿರೋದು ಜೀವನಿಗೆ. ತನ್ನ ಮಗಳ ಜೀವನ ಹಾಳು ಮಾಡಿದ ಎಂದು ಲಾಯರ್ ಜಗದೀಶ್ ತಪ್ಪಾಗಿ ಭಾವಿಸಿದ್ದಾನೆ. ಹೀಗಾಗಿಯೇ ಜೀವನನ್ನ ಖುಷಿಯಾಗಿರುವುದಕ್ಕೆ ಬಿಡುತ್ತಿಲ್ಲ. ಅವನ ಖುಷಿ ಎಂದರೆ ಅದು ಕೃಷ್ಣ. ಅವಳನ್ನೇ ಕಿಡ್ನ್ಯಾಪ್ ಮಾಡಿದರೆ ಆ ನೆಮ್ಮದಿ ಹಾಳಾಗುತ್ತದೆ ಎಂದೇ ಪ್ಲ್ಯಾನ್ ಮಾಡುತ್ತಲೇ ಇರುತ್ತಾನೆ.
ಅತ್ತ ವಜ್ರೇಶ್ವರಿಗೂ ಕೃಷ್ಣಾನಿಗೂ ಯಾವ ಸಂಬಂಧವೂ ಇರಲಿಲ್ಲ. ವಜ್ರೇಶ್ವರಿ ಇಷ್ಟು ದೊಡ್ಡಮಟ್ಟದ ದ್ವೇಷ ಕೂಡ ಮಾಡ್ತಾ ಇರಲಿಲ್ಲ. ಆದರೆ ತಾನೇ ರಚಿಸಿದ ರಚನಾಳ ಪ್ರಪಂಚವನ್ನೇ ಬದಲಾಯಿಸಿದ್ದಕ್ಕಾಗಿ ಈಗ ಕೃಷ್ಣಾ ಕೂಡ ವಜ್ರೇಶ್ವರಿಯ ಟಾರ್ಗೆಟ್ ಆಗಿದ್ದಾಳೆ.

ವಜ್ರೇಶ್ವರಿ ನಂಬಿರುವ ಜನಾರ್ದನ್
ಜನಾರ್ದನ್‌ಗೆ ಈಗ ವಜ್ರೇಶ್ವರಿಯೇ ದೊಡ್ಡ ಸಹಾಯಕಿ ಥರ ಕಾಣಿಸ್ತಾ ಇದ್ದಾಳೆ. ಆದರೆ ಅವನಿಗೆ ಗೊತ್ತಿಲ್ಲ ವಜ್ರೇಶ್ವರಿ ಕೇವಲ ಬಳಸಿಕೊಳ್ಳುತ್ತಾಳೆ ಅಂತ. ಮನೋಹರ್ ತಪ್ಪೇ ಮಾಡದೆ ಇದ್ದರು ದೊಡ್ಡ ಮಟ್ಟದ ತಪ್ಪಿತಸ್ಥನಂತೆ ಬಿಂಬಿಸಿ, ಅವಳ ಮಗಳನ್ನೇ ತನ್ನ ಮಗಳೆಂದು ನಂಬಿಸಿ, ರಚನಾಳಿಂದ ದುಡಿಸಿ ಕೊಳ್ಳುತ್ತಿದ್ದಾಳೆ. ಅವಳಿಗೆ ಬೇಕಿರುವುದು ರಚನಾ ಎಲ್ಲಿಯೂ ಹೋಗದೆ ತನ್ನ ಸೆರಗಲ್ಲಿಯೇ ಇರಬೇಕು, ದುಡಿದು ದುಡಿದು ಸಾಕಬೇಕು. ಜನಾರ್ದನ್ ತನಗೆ ವಜ್ರೇಶ್ವರಿ ಸಹಾಯ ಮಾಡ್ತಾ ಇದಾಳೆ ಅಂತ ನಂಬಿದ್ದಾನೆ. ಆದರೆ ವಜ್ರೇಶ್ವರಿ ಅವನನ್ನೇ ಬಳಸಿಕೊಳ್ಳುತ್ತಿದ್ದಾಳೆ.
ವಜ್ರೇಶ್ವರಿಗೆ ಬೈದ ಜೀವ
ವಜ್ರೇಶ್ವರಿ ಹಾಗೂ ಜನಾರ್ದನ್ ಮಾತಾಡುತ್ತ ನಿಂತ ವಿಚಾರ ಜೀವನಿಗೆ ತಿಳಿತು. ಕೃಷ್ಣಾಳನ್ನ ಕಿಡ್ನ್ಯಾಪ್ ಮಾಡಿಸಲು ವಜ್ರೇಶ್ವರಿಯೇ ಜೋಡಿಸಿರೋದು ಅಂತ. ಸೀದಾ ಬಂದವ ಬೈದ. ಅದಕ್ಕೆಲ್ಲ ವಜ್ರೇಶ್ವರಿ ತಲೆ ಕೆಡಿಸಿಕೊಳ್ಳಲಿಲ್ಲ. ನಾನೇ ಮಾಡಿಸಿದ್ದು ಏನಿವಾಗ..? ಏನು ಮಾಡೋದಕ್ಕೆ ಸಾಧ್ಯ ಎಂದು ಸವಾಲು ಹಾಕಿದಳು. ಆದರೆ ರಚನಾಳನ್ನು ನೋಡದ ಜೀವ, ನಿಮ್ಮಂಥವರಿಗೆ ಯಾವ ರೋಗವೂ ಬಂದು ಸಾಯಲ್ವಲ್ಲ ಅಂದುಬಿಟ್ಟ.
ತರಾಟೆಗೆ ತೆಗೆದುಕೊಂಡ ರಚನಾ
ಇದನ್ನ ಕೇಳಿಸಿಕೊಂಡ ರಚನಾ, ಜೀವನಿಗೆ ಕ್ಲಾಸ್ ತೆಗೆದುಕೊಂಡಳು. ಆದರೆ ಜೀವ, ಅಂದಿನಿಂದ ಇಂದಿನವರೆಗೂ ಏನೆಲ್ಲಾ ಆಯ್ತು, ನಿಮ್ಮ ಅಮ್ಮ ಎಷ್ಟು ನಾಟಕ ಆಡ್ತಾ ಇದಾರೆ, ಜನಾರ್ದನ್ ಜೊತೆಗೆ ಕೈಜೋಡಿಸಿರುವ ಉದ್ದೇಶವೇನು, ನಿನ್ನ ಜಾಗೂ ಕೃಷ್ಣನನ್ನ ದೂರ ಮಾಡ್ತಾರೆ ಅಂದ್ರು ರಚನಾ ನಂಬುವುದಕ್ಕೆ ರೆಡಿ ಇಲ್ಲ. ಆಯ್ತು ಮುಗೀತಾ ನಿಮ್ಮ ಆರೋಪ ಎಂದೇ ವ್ಯಂಗ್ಯ ಮಾಡಿದ್ದಾಳೆ. ವಜ್ರೇಶ್ವರಿ ಯಾರೋ ಮಾಯಾವಿಯನ್ನ ಭೇಟಿ ಮಾಡಿ, ಏನನ್ನೋ ಕೊಟ್ಟು ಬಂಧ್ದನ್ನು ಬಾಲ ಹೇಳಿದಾಗ ಅದನ್ನು ನಂಬಲಿಲ್ಲ. ಈಗ ಜೀವ ಮಾತನ್ನು ನಂಬಲ್ಲ.
ತೇಜನಿಗೆ ಗೊತ್ತು ವಜ್ರೇಶ್ವರಿ ಮುಖ
ರಚನಾ ತಾಯಿ ಎಂದರೆ ದೇವರೆಂದೇ ಭಾವಿಸಿದ್ದಾಳೆ. ಯಾರೂ ಏನೇ ಹೇಳಿದರೂ ತನ್ನ ತಾಯಿ ಮೇಲೆ ಮಾತ್ರ ಅನುಮಾನ ಪಡುವುದಿಲ್ಲ. ರಚನಾಳನ್ನ ಹಾಗೇ ತನ್ನ ವಶ ಮಾಡಿಕೊಂಡಿದ್ದಾಳೆ. ಇದು ಜೊತೆಗಿರುವ ತೇಜಾಗೆ ಮಾತ್ರ ಗೊತ್ತು. ನಿಹಾರಿಕಾಗೆ ಇದೆಲ್ಲ ಶಾಕ್ ಎನಿಸಿತ್ತು. ಆದರೆ ತೇಜಾಗೆ ಗೊತ್ತಿದೆ ಇಲ್ಲಿ ಜನಾರ್ಧನ್ ಹಾಗೂ ಜೀವ ಇಬ್ಬರು ಬಕ್ರ ಆಗ್ತಾ ಇದಾರೆ ಎಂದು.


Click it and Unblock the Notifications











