Ninagagi: ರಚನಾಳ ರಹಸ್ಯ ಗೊತ್ತಿರೋ ವಜ್ರೇಶ್ವರಿ ಹೊಸ ಆಟ; ಮಾಧುರಿ ಸಾವೇ ಆ ರಹಸ್ಯ ಎಂದು ಗೊತ್ತಾದರೆ?
ರಚನಾ ಎಷ್ಟು ಮುಗ್ಧಳು ಎಂದರೆ ತನ್ನ ಜೀವನ ಹಾಳು ಮಾಡ್ತಾ ಇರೋದು ಅಮ್ಮನ ರೂಪದಲ್ಲಿರುವ ರಾಕ್ಷಸಿ ಎಂಬುದೇ ಅರ್ಥವಾಗುತ್ತಿಲ್ಲ. ರಚನಾ ತನ್ನದೇ ರಚನೆ ಎಂದು ಹೇಳಿಕೊಳ್ಳುವ ವಜ್ರೇಶ್ವರಿ ಸೈಲೆಂಟ್ ಆಗಿದ್ದುಕೊಂಡೇ ರಚನಾಳ ಜೀವನವನ್ನ ಹಾಳು ಮಾಡ್ತಾ ಇದ್ದಾಳೆ.
ಯಾವತ್ತೂ ರಚನಾ ತಾನು ಹಾಕಿದ ದಾರಿಯಲ್ಲಿಯೇ ನಡೆಯಬೇಕು. ವಾಯ್ಸ್ ಹೊರಗೆ ಬರಬಾರದು. ಆಕ್ಟಿಂಗ್ ನಿಲ್ಲಿಸಬಾರದು ಎನ್ನುವುದು ವಜ್ರೇಶ್ವರಿ ಬಯಕೆ. ಈಗ ಎಲ್ಲವೂ ಉಲ್ಟಾ ಆಗಿದೆ. ರಚನಾ ತಾನಿಷ್ಟಪಟ್ಟ ಬದುಕನ್ನ ಬದುಕುತ್ತಿದ್ದಾಳೆ.

ರಚನಾಗೇ ಬುದ್ದಿ ಇಲ್ಲ, ಧೈರ್ಯ ಇಲ್ಲ ಎಂದೇ ಭಾವಿಸಿದ್ದ ವಜ್ರೇಶ್ವರಿಗೆ ರಚನಾಳ ನಡೆ ಆತಂಕ ಹುಟ್ಟಿಸಿದೆ. ಹೀಗಾಗಿ ಈಗ ಮಾತಿನಲ್ಲಿ ಆರ್ಡರ್ ಮಾಡುತ್ತಿಲ್ಲ, ಬದಲಾಗಿ ಭಾವನಾತ್ಮಕ ಆಟ ಶುರು ಮಾಡಿದ್ದಾಳೆ. ನಾಟಕದಲ್ಲಿಯೇ ರಚನಾಳನ್ನ ಕಟ್ಟಿ ಹಾಕುತ್ತಿದ್ದಾಳೆ. ಈಗ ಮಿತಿಮೀರಿ ರಚನಾಳಿಗೆ ಪಶ್ಚಾತ್ತಾಪದ ಭಯ ಹುಟ್ಟಿಸುತ್ತಿದ್ದಾಳೆ.
ಸರ ಹಿಡಿದ ಮಹಿಳೆಯಿಂದ ಭಯ
ಈಗಂತೂ ರಚನಾಳನ್ನ ನೆಮ್ಮದಿಯಾಗಿ ಕೂರಲು, ನಿಲ್ಲಲು ಬಿಡುತ್ತಿಲ್ಲ ಆ ಹೆಂಗಸು. ಸ್ನಾನ ಮಾಡದೆ ಅದೆಷ್ಟು ವರ್ಷವಾಗಿದೆಯೋ, ಹಲ್ಲು ಉಜ್ಜದೆ ಕರೆ ಕಟ್ಟಿದೆ. ಆ ಒಂದು ಸರ ಹಿಡಿದುಕೊಂಡು ರಚನಾಳ ಹಿಂದೆ ಮುಂದೆ ತಿರಯಗುತ್ತಿದ್ದಾಳೆ. ಕೊಲೆಗಾತಿ ನೀನು ಅಂತ ಕಿರುಚಿ ಹೇಳುತ್ತಿದ್ದಾಳೆ. ಇದು ರಚನಾಳಿಗೆ ಆತಂಕ ಸೃಷ್ಟಿಸುತ್ತಿದೆ.
ರಹಸ್ಯ ಬೇಧಿಸಲು ಹೊರಟ ಜೀವ
ಯಾವುದೋ ವ್ಯಕ್ತಿಯ ಜೊತೆಗೆ ತೇಜ ಮಾತಾಡ್ತಾ ಇರೋದನ್ನ ಜೀವ ಹಾಗೇ ರಚನಾ ಚಿಕ್ಕಮ್ಮ ಕೇಳಿಸಿಕೊಂಡಿದ್ದಾರೆ. ಸ್ವೀಟ್ ಬಾಕ್ಸ್ ಅಂತ ತೆಗೆದುಕೊಂಡು ಹೋಗುತ್ತಿದ್ದ ಅಂತ ಹೇಳಿದಾಗ ಅವನನ್ನು ಹಿಂಬಾಲಿಸಿ ಆ ಬಾಕ್ಸ್ ಬೀಳಿಸಿದ ಜೀವನಿಗೆ ಅದರಲ್ಲಿದ್ದ ಕಂತೆ ಕಂತೆ ಹಣ ಕಂಡು ಶಾಕ್ ಆಗಿತ್ತು. ಇದರ ಹಿಂದೆ ರಹಸ್ಯವಿದೆ ಎಂದು ಅರಿತ ಜೀವ, ಅವನನ್ನು ಹಿಂಬಾಲಿಸಿದರೆ ರಚನಾ ಜೀವನದ ರಹಸ್ಯ ತಿಳಿಯುತ್ತೆ ಎಂದು ಹಿಂಬಾಲಿಸುವುದಕ್ಕೆ ಶುರು ಮಾಡಿದ್ದಾನೆ.
ಆ ಹೆಂಗಸನ್ನ ಬಿಟ್ಟಿದ್ದೆ ವಜ್ರೇಶ್ವರಿ
ವಜ್ರೇಶ್ವರಿಗೆ ರಚನಾಳನ್ನ ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬುದು ಚೆನ್ನಾಗಿ ಗೊತ್ತು. ಹೀಗಾಗಿಯೇ ರಚನಾಳನ್ನ ಬ್ಲಾಕ್ ಮೇಲ್ ಮಾಡುವುದಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನ ತನ್ನ ಬಳಿ ಇಟ್ಟುಕೊಂಡಿದ್ದಾಳೆ. ಈಗ ಆ ತಿಕ್ಕಲು ಥರ ಆಡುತ್ತಿರುವ ಹೆಂಗಸು ಇವಳ ಸಾಕ್ಷಿಯೇ. ಅವಳಿಗೆ ಆ ಸರವನ್ನು ಕೊಟ್ಟು ಏನು ಮಾಡಬೇಕೆಂಬುದನ್ನು ತಿಳಿಸಿ ಬಂದಿದ್ದಳು. ಆ ದೃಶ್ಯವನ್ನು ಬಾಲ ಕೂಡ ನೋಡಿದ್ದ. ಆದರೆ ಅದನ್ನ ಹೇಳಿದರೆ ರಚನಾ ನಂಬುವುದಕ್ಕೆ ರೆಡಿ ಇಲ್ಲ. ಈಗ ಅನುಭವಿಸುತ್ತಿದ್ದಾಳೆ. ಹೆದರಿ ಸಾಯುತ್ತಿದ್ದಾಳೆ.
ಮಾಧುರಿ ಸಾವಿನ ಸತ್ಯ ತಿಳಿದರೆ?
ಜೀವ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದದ್ದು ಮಾಧುರಿಯನ್ನ. ಆದರೆ ಕೃಷ್ಣ ಹುಟ್ಟಿದ ಮೇಲೆ ಮಾಧುರಿಯನ್ನ ಆಕ್ಸಿಡೆಂಟ್ ನಲ್ಲಿ ಕಳೆದುಕೊಂಡು ಬಿಟ್ಟ. ಕೃಷ್ಣಾಳನ್ನ ತಂದೆ ತಾಯಿ ಎರಡು ಆಗಿ ಸಾಕಿದ. ಈಗ ರಚನಾ, ಕೃಷ್ಣಾಳ ಪಾಲಿಗೆ ಅಮ್ಮ ಆಗಿ ಬಂದಿದ್ದಾಳೆ. ಆದರೆ ಕೃಷ್ಣಾಳ ಹೆತ್ತ ತಾಯಿ ಜೀವ ತೆಗೆದದ್ದು ಇದೇ ರಚನಾ. ಅಂದು ತಾನು ಮಾಡಿದ ಆಕ್ಸಿಡೆಂಟ್ ಮಾಧುರಿಗೆ ಎಂಬುದು ರಚನಾಗೂ ಗೊತ್ತಿಲ್ಲ, ಜೀವನಿಗೂ ಗೊತ್ತಿಲ್ಲ. ಈಗ ರಹಸ್ಯದ ಹಿಂದೆ ಬಿದ್ದಿರೋ ಜೀವನಿಗೆ ಆ ಸತ್ಯ ತಿಳಿದರೆ ಸ್ನೇಹ ಹೋಗಿ ರಚನಾ ಮೇಲೆ ದ್ವೇಷವೂ ಹುಟ್ಟಬಹುದು. ಆದರೆ ರಚನಾ ಮಾತ್ರ ಆ ಪಶ್ಚಾತ್ತಾಪದಿಂದ ಹೊರಗೆ ಬರ್ತಿಲ್ಲ.


Click it and Unblock the Notifications











