Ninagagi: ವಜ್ರೇಶ್ವರಿ ಎಂಬ ಹಾವಿನ ಹುತ್ತಕ್ಕೆ ಕೈ ಹಾಕಿರೋ ಜೀವನಿಗೆ ಎದುರಾಗುತ್ತಾ ಕಂಟಕ?

By ಎಸ್ ಸುಮಂತ್

ವಜ್ರೇಶ್ವರಿಯ ಗೇಮ್ ಪ್ಲ್ಯಾನ್ ಯಾರಿಂದಾನೂ ಬೇಧಿಸುವುದಕ್ಕೆ ಸಾಧ್ಯವಿಲ್ಲ. ತಾನಂದುಕೊಂಡಿದ್ದು ನಡೆಯಲೇಬೇಕೆಂದುಕೊಳ್ಳುವ ಹಠ ಅವಳದ್ದು. ಅದಕ್ಕಾಗಿಯೇ ಎಲ್ಲರನ್ನು ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿರುವುದು, ಎಲ್ಲವನ್ನು ತನ್ನ ಹತೋಟಿಯಲ್ಲಿಯೇ ಇಟ್ಟುಕೊಂಡಿದ್ದಾಳೆ.

ಮನೋಹರ ಕೂಡ ವಜ್ರೇಶ್ವರಿ ಎದುರು ಮಾತಾಡುವುದಕ್ಕೆ ಆಗದೇ ಒದ್ದಾಡುತ್ತಿದ್ದಾನೆ. ವಜ್ರೇಶ್ವರಿಯಿಂದ ಮಗಳನ್ನು ಕಾಪಾಡುವುದಕ್ಕೂ ಹರಸಾಹಸ ಪಡುತ್ತಿದ್ದಾನೆ. ಆದರೂ ತನ್ನ ಬಲೆಯಲ್ಲಿಯೇ ರಚನಾಳನ್ನ ಬೀಳಿಸಿಕೊಂಡು ವಿಲವಿಲ ಅಂತ ಇದ್ದಾಡುವಂತೆ ಮಾಡಿದ್ದಾಳೆ.

Colors Kannada serial Written Update on ninagagi Jan 30th episode

ವಜ್ರೇಶ್ವರಿಯ ಮಗಳು ರಚನಾ ಅಂತಾನೇ ಮನೆಯಲ್ಲಿ ಎಲ್ಲರೂ ನಂಬಿದ್ದಾರೆ. ಆದರೆ ಸತ್ಯ ಗೊತ್ತಿರೋದು ವಜ್ರೇಶ್ವರಿ, ತೇಜ, ಮನೋಹರ್‌ಗೆ ಮಾತ್ರ. ರಚನಾಳ ಯಾವುದೋ ಸತ್ಯವನ್ನ ಹುಡುಕಲು ಹೊರಟ ಚಿಕ್ಕಮ್ಮ ಹಾಗೂ ಜೀವನಿಗೆ ದಿಗಿಲು ಬಡಿದಂತೆ ಆಗುವಂತ ಸತ್ಯ ಎದುರಾಗಿದೆ. ಹಾವಿರುವ ಹುತ್ತದಲ್ಲಿ ಕೈ ಹಾಕಿರುವಂತೆ ಫೀಲ್ ಆಗ್ತಾ ಇದೆ.

ಸತ್ಯ ತಿಳಿದು ಶಾಕ್ ಆದ ಜೀವ

ಹಣ ಕೊಟ್ಟಿದ್ದು ಯಾರಿಗೆ ಎಂದು ಹುಡುಕಾಟ ಶುರು ಮಾಡಿದ ಜೀವನಿಗೆ ಎದುರಾಗಿದ್ದು ವಜ್ರೇಶ್ವರಿಯ ಕರಾಳ ಸತ್ಯ. ವಜ್ರೇಶ್ವರಿ ಬರುವುದಕ್ಕೂ ಮುನ್ನ ಮನೆ ನಂದಗೋಕುಲವಾಗಿತ್ತಂತೆ. ಮೂವರು ಅಣ್ಣತಮ್ಮಂದಿರು ರಾಮ ಲಕ್ಷ್ಮಣರಿದ್ದಂತೆ ಇದ್ರಂತೆ. ಆದತೆ ವಜ್ರೇಶ್ವರಿ ಎಂಬ ರಾಕ್ಷಸಿ‌ ಬಂದ ಮೇಲೆ ಮನೆಯೇ ನರಕವಾಗಿ ಹೋಯ್ತಂತೆ. ಒಮ್ಮೆ ಗರ್ಭಿಣಿಯಾಗಿದ್ದ ವಜ್ರೇಶ್ವರಿಗೆ ಅಬಾಷನ್ ಆಯ್ತಂತೆ. ಆಮೇಲೆ ಗಂಡ ಕೂಡ ಸತ್ತೋದನಂತೆ. ಇದನ್ನ ಕೇಳಿ ಜೀವನಿಗೆ ಹಾಗೂ ಚಿಕ್ಕಮ್ಮನಿಗೆ ಶಾಕ್ ಆಗಿದೆ.

ರಚನಾ ಬಗ್ಗೆ ನೂರೆಂಟು ಪ್ರಶ್ನೆ

ವಜ್ರೇಶ್ವರಿಗೆ ಮಗುವೇ ಆಗಲಿಲ್ಲವೆಂಬುದು ಅಜ್ಜಿಯಿಂದ ತಿಳಿದ ಸತ್ಯ. ಹಾಗಾದ್ರೆ ರಚನಾ ಯಾರು ಎಂಬ ಪ್ರಶ್ನೆ ಈಗ ಜೀವ ಹಾಗೂ ಚಿಕ್ಕಮ್ಮನನ್ನ ಕಾಡುತ್ತಿದೆ. ರಚನಾಳನ್ನ ಯಾಕೆ ಆ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಯೂ ಅವರನ್ನ ಕಾಡುತ್ತಿದೆ‌. ಇದರ ಜೊತೆಗೆ ವಜ್ರೇಶ್ವರಿ ಮೇಲೆ ಇನ್ನಷ್ಟು ಕೋಪ ಬಂದಿದೆ. ಅಜ್ಜಿಯ ಮಾತನ್ನು ನಂಬುವುದಕ್ಕೆ ಆಗದೆ, ಮನೆಯಲ್ಲಿ ಆಗುತ್ತಿರುವ ಅನಾಹುತಗಳನ್ನ ಅರಗಿಸಿಕೊಳ್ಳಲಾಗದೆ ಗೊಂದಲಕ್ಕೀಡಾಗಿದ್ದಾಳೆ. ಆದರೆ ಜೀವನಿಗೆ ಏನೋ ನಡೆಯುತ್ತಿದೆ ಎಂಬ ಅನುಮಾನವಂತು ಶುರುವಾಗಿದೆ.

ವಜ್ರೇಶ್ವರಿ ರೂಮಿನ ಹುಡುಕಾಟ

ಇಷ್ಟೊತ್ತಿನ ತನಕ ರಚನಾಳ ಹಿಂದೆ ಅಡಗಿರುವ ಸತ್ಯವನ್ನು ಹುಡುಕುವುದಕ್ಕೆ ಹೊರಟಿದ್ದ ಜೀವನಿಗೆ ಈಗ ವಜ್ರೇಶ್ವರಿಯ ಕರಾಳ ಸತ್ಯ ತಿಳಿಯುವ ಅನಿವಾರ್ಯತೆ ಎದುರಾಗಿದೆ‌. ವಜ್ರೇಶ್ವರಿ ಮುಚ್ಚಿಟ್ಟ ಸತ್ಯ ಏನು ಎಂಬುದನ್ನು ಹುಡುಕಲೇಬೇಕೆಂದು ನಿರ್ಧರಿಸಿದ. ಆದರೆ ಅದಕ್ಕೆ ಚಿಕ್ಕಮ್ಮ ಒಪ್ಪುತ್ತಿಲ್ಲ. ಭಯ ಪಟ್ಟಳು. ಆದರೆ ಜೀವ ಮಾತ್ರ ಧೈರ್ಯ ಮಾಡಿದ. ಹಾವಿರುವ ಹುತ್ತಕ್ಕೆ ಕೈ ಹಾಕಿ ಆಗಿದೆ. ಅದರಲ್ಲಿರುವ ಹಾವನ್ನ ಹಿರ ತೆಗೆಯಲೇಬೇಕಾಗಿದೆ. ನೀವೂ ಹೊರಗೆ ನಿಂತು ನೋಡಿಕೊಳ್ಳಿ ಎಂದಿದ್ದಾನೆ.

ರಚನಾಳಿಗೆ ಮತ್ತೆ ನಂಬಿಕೆ ದ್ರೋಹ

ಆ ಸರವನ್ನ ತಂದು ಬ್ಲಾಕ್ ಮೇಲ್ ಮಾಡಿದ್ದ ಹೆಂಗಸಿನ ಬಗ್ಗೆ ರಚನಾ ತುಂಬಾನೇ ಗಾಬರಿಯಾಗಿದ್ದಾಳೆ. ಅಮ್ಮನನ್ನೇ ನಂಬಿ ಅಲ್ಲಿಗೆ ಓಡಿ ಬಂದು ತಬ್ಬಿ ಸತ್ಯ ಹೇಳಿದ್ದಾಳೆ. ಆ ನಾಟಕದ ರುವಾರಿ ಅಮ್ಮನೇ ಎಂದು ಗೊತ್ತಿಲ್ಲದೆ ನಂಬಿದ್ದಾಳೆ. ಮಗಳ ಮುಂದೆ ನಾಟಕವಾಡಿದ ವಜ್ರೇಶ್ವರಿ, ಆ ಹೆಂಗಸಿನ ಮನೆಯವರನ್ನು ಹುಡುಕಿಸಿ ಹೇಳ್ತೀನಿ. ಹೋಗಿ ಮಾತಾಡಿಕೊಂಡು ಬರಿವಂತೆ ಅಂದಿದ್ದಾಳೆ. ಇದನ್ನೇ ನಂಬಿ ರಚನಾ ಮನೆಗೆ ಹೋಗಿದ್ದಾಳೆ. ಜೀವ ಹಾಗೂ ರಚನಾಳನ್ನ ದೂರ ಮಾಡುವುದಕ್ಕೆಂದೆ ಇಂಥದ್ದೊಂದು ಪ್ಲ್ಯಾನ್ ಮಾಡಿದ್ದಾಳೆ ವಜ್ರೇಶ್ವರಿ.

More from Filmibeat

English summary
Ninagagi serial today episode. Here is the details about The truth is revealed that Rachana is not Vajreshwari's daughter;
Read more about: tv serial sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X