Ninagagi: ತೇಜನೇ ಉಲ್ಟಾ ಹೊಡೆದಾಯ್ತು, ಈಗ ವಜ್ರೇಶ್ವರಿ ಏನ್ಮಾಡ್ತಾಳೆ?

By ಎಸ್ ಸುಮಂತ್

ಮನೋಹರ ಮಾಡದೆ ತಪ್ಪಿಗೆ ಇಂದು ಶಿಕ್ಷೆ ಅನುಭವಿಸುತ್ತಿದ್ದಾನೆ. ವಜ್ರೇಶ್ವರಿಯ ಕಪಿ ಮುಷ್ಠಿಗೆ ಸಿಲುಕಿ ಮಗಳನ್ನು ಕಳೆದುಕೊಂಡಿದ್ದಾನೆ. ಮಗಳ ಮೇಲೆ ಅಪಾರ ಪ್ರೀತಿ ಇದ್ದರು ತೋರಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಮಗಳನ್ನ ಈ ನರಕ ಕೂಪದಿಂದ ಬಿಡಿಸುವುದಕ್ಕಾಗಿ ಬಹಳ ಪ್ರಯತ್ನ ಪಟ್ಟ. ಆ ಸಮಯಕ್ಕೆ ಸಿಕ್ಕವನೆ ಜೀವ. ಮಗಳು ರಚನಾ ಅವಳ ಜೊತೆಗಿದ್ದರೆ ನೆಮ್ಮದಿಯಾಗಿರುತ್ತಾಳೆ, ಈ ನಟನೆ ಬಿಟ್ಟು ಬದುಕುತ್ತಾಳೆ ಎಂದೇ ಮನೋಹರ್ ಭಾವಿಸಿ ಸಹಾಯ ಮಾಡಿದ.

ರಚನಾ ಅದ್ಯಾವಾಗ ಜೀವನ ಹೆಂಡತಿ ಎಂದು ಹೇಳಿಕೊಂಡು ತಿರುಗಿದಳೋ ಅಲ್ಲಿಂದ ನೆಮ್ಮದಿ ಜೀವನ ಕಳೆಯುತ್ತಿದ್ದಾಳೆ. ಗೃಹಿಣಿಯಾಗಿ, ತಾಯಿಯಾಗಿ ಜೀವಿಸುತ್ತಿದ್ದಾಳೆ. ಆದರೆ ಈಗ ವಜ್ರೇಶ್ವರಿ ತನ್ನ ನಾಟಕದಿಂದ ಮತ್ತೆ ಮಗಳನ್ನ ಬಂಧಿಸುತ್ತಿದ್ದಾಳೆ. ಜೀವ ಇರುವಾಗ ಅದು ಅಸಾಧ್ಯ ಬಿಡಿ.

Colors Kannada serial Written Update on ninagagi Jan 7th episode

ಅಮ್ಮನ ಬಲೆಗೆ ಬಿದ್ದ ರಚನಾ

ಮನೆಗೆ ಬಂದಾಗಿನಿಂದ ವಜ್ರೇಶ್ವರಿಯ ನಾಟಕ ಅಷ್ಟಿಷ್ಟಲ್ಲ. ಜೀವನನ್ನ ಅವಮಾನ ಮಾಡಿದ್ದಾಯ್ತು, ಆದರೆ ರಚನಾಳನ್ನ ಎಮೋಷನಲೀ ಬ್ಲಾಕ್ ಮೇಲ್ ಮಾಡ್ತಾನೇ ಬಂದಿದ್ದಾಳೆ. ರಚನಾಗೆ ಅಮ್ಮನೆ ಪ್ರಪಂಚ. ಅಮ್ಮ ನನಗಾಗಿಯೇ ಬದುಕಿರೋದು ಅಂತ ನಂಬಿದ್ದಾಳೆ. ಈ ಮಾತನ್ನ ಜೀವ ಮುಂದೆಯೂ ಹೇಳಿದ್ದಳು. ಜೀವನಿಗೆ ರಚನಾ ಯಾಮಾರುತ್ತಾ ಇರೋದು ಅರ್ಥವಾಗಿದೆ. ಹೀಗಾಗಿ ರಚನಾಳಿಗೆ ಸೂಕ್ಷ್ಮವಾಗಿಯೇ ಎಲ್ಲದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಇದರ ನಡುವೆ ಅಮ್ಮನ ನಾಟಕ ನಂಬಿ ರಚನಾ ಸಿನಿಮಾಗೆ ಸಹಿ ಹಾಕಿದ್ದಾಳೆ.

ತೇಜನಿಂದ ವಜ್ರೇಶ್ವರಿ ಲಂಕೆಗೆ ಬೆಂಕಿ

ಮನೋಹರ್ ಮಗಳು ರಚನಾ ಎಂಬ ಸತ್ಯ ಮನೆಯಲ್ಲಿ ತೇಜನಿಗೂ ಗೊತ್ತು. ಆದರೆ ಅತ್ತಿಗೆ ಮಾತನ್ನ ಮೀರದ ಲಕ್ಷ್ಮಣನಂತೆ ಕಾವಲಿಗೆ ಇದ್ದ. ವಜ್ರೇಶ್ವರಿ ಏನು ಹೇಳುತ್ತಾಳೋ ಅದೇ ಫೈನಲ್ ಎನ್ನುತ್ತಿದ್ದ. ಆದರೆ ಮನೋಹರ ಯಾವಾಗ ವಜ್ರೇಶ್ವರಿ ನಾಟಕದ ಬಗ್ಗೆ ಹೇಳಿದನೋ, ತನ್ನ ಮಕ್ಕಳಿಗೂ ಅನ್ಯಾಯ ಮಾಡಬಹುದು ಎಂದಾಗಲೇ ತೇಜ ಎಚ್ಚೆತ್ತುಕೊಂಡಿದ್ದಾನೆ. ಈಗ ವಜ್ರೇಶ್ವರಿ ಅರಿವಿಗೆ ಬಾರದೇ ಅವಳ ಲಂಕೆಗೆ ಬೆಂಕಿ ತಾಗಿಸಿದ್ದಾನೆ.

ಜೀವನಿಂದ ಪ್ರೊಡ್ಯೂಸರ್‌ಗೆ ಶಾಕ್

ರಚನಾಳನ್ನ ಹೆದರಿಸಿ, ಬೆದರಿಸಿ ನೆಕ್ಸ್ಟ್ ಸಿನಿಮಾಗೆ ಪ್ರೊಡ್ಯೂಸರ್ ಸಹಿ ಹಾಕಿಸಿಕೊಂಡಿದ್ದಾನೆ. ಇದು ವಜ್ರೇಶ್ವರಿಯೇ ಆಡಿದ ನಾಟಕವಾಗಿದೆ. ಸಹಿ ಹಾಕಿಸಿಕೊಂಡ ನಿರ್ಮಾಪಕ ಸರಿಯಾದ ರೀತಿಯಲ್ಲಿ ನಡೆದುಕೊಂಡಿದ್ದರೆ ಸಮಸ್ಯೆ ಆಗ್ತಾ ಇರಲಿಲ್ಲ. ಆದರೆ ಆತ ರಚನಾಳ ವೈಯಕ್ತಿಕ ಜೀವನಕ್ಕೂ ಸಮಯ ಕೊಡಲ್ಲ, ನೀನು ನನ್ನ ಸರ್ವೆಂಟ್ ಎಂದೇ ಮಾತನಾಡಿದ್ದಾನೆ. ನಿರ್ಮಾಪಕನ ವರ್ತನೆ ಮಿತಿಮೀರಿದಾಗ ಜೀವ ಎಂಟ್ರಿ ಕೊಟ್ಟಿದ್ದಾನೆ. ಜೀವ ಬಂದಿದ್ದು ಕಂಡು ನಿರ್ಮಾಪಕನಿಗೆ ಬೆವರು ಕಿತ್ತು ಬಂದಿದೆ. ಆದರೆ ರಚನಾ ಮುಖದಲ್ಲಿ ನಗುವು ಮೂಡಿದೆ. ಇನ್ನು ಯಾರೂ ಏನು ಮಾಡಲು ಆಗಲ್ಲ ಎಂಬ ಫೀಲ್ ಅವಳದ್ದು‌.

ವಜ್ರೇಶ್ವರಿ ಮುಂದೇನು ಮಾಡ್ತಾಳೆ?

ವಜ್ರೇಶ್ವರಿಯ ನಾಟಕ ಕೋಟೆಗೆ ತೇಜನೇ ಕಾವಲುಗಾರ. ಆದರೆ ಈಗ ಅವನು ಎಚ್ಚೆತ್ತುಕೊಂಡಿದ್ದಾನೆ. ವಜ್ರೇಶ್ವರಿಯ ಜೊತೆಗೆ ಇದ್ದುಕೊಂಡು ಜೀವನಿಗೆ ಸುಳಿವು ಕೊಟ್ಟಿದ್ದಾನೆ. ಇದು ಮನೋಹರನಿಗೆ ಇನ್ನಿಲ್ಲದ ಖುಷಿ ನೀಡಿದೆ. ತೇಜನೇ ತನ್ನ ಸಪೋರ್ಟಿಗೆ ಇಲ್ಲದೆ ಹೋದರೆ ವಜ್ರೇಶ್ವರಿಯಿಂದ ಬೇರೆನು ಮಾಡುವುದಕ್ಕೂ ಸಾಧ್ಯವಿಲ್ಲ. ಇನ್ಮೇಲಾದರೂ ವಜ್ರೇಶ್ವರಿ ಕಟ್ಟಿದ ಕೋಟೆ ಬೀಳುತ್ತಾ ಅಥವಾ ತೇಜನನ್ನು ಆಟ ಆಡಿಸುವುದಕ್ಕೆ ಅಸ್ತ್ರ ಇಟ್ಟಿದ್ದಾಳಾ ನೋಡಬೇಕಿದೆ.

More from Filmibeat

English summary
Ninagagi serial today episode. Here is the details about Teja, who counterattacked Vajreshwari;
Read more about: sumanth serial tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X