ಕಲರ್ಸ್ ಕನ್ನಡದಲ್ಲಿ ಮುಕ್ತಾಯವಾಗಲಿದ್ಯಾ 4 ಧಾರಾವಾಹಿಗಳು: ಪುಣ್ಯವತಿ, ತ್ರಿಪುರ ಸುಂದರಿ ಕಥೆಯೇನು..?
ಬಿಗ್ ಬಾಸ್ ಸೀಸನ್ 10 ಇನ್ನು ನಾಲ್ಕೈದು ದಿನಗಳಲ್ಲಿ ಆರಂಭವಾಗಲಿದ್ದು ಅದರ ಸಮಯವನ್ನು ಸಹ ಬದಲಾವಣೆ ಮಾಡಲಾಗಿದೆ. ರಾತ್ರಿ 9.30ಕ್ಕೆ ಬಿಗ್ ಬಾಸ್ ಶುರುವಾಗುವುದರಿಂದ ಬಂದಷ್ಟೇ ವೇಗದಲ್ಲಿ ತ್ರಿಪುರ ಸುಂದರಿ ಹಾಗೂ ಪುಣ್ಯವತಿ ಧಾರಾವಾಹಿ ಮುಗಿಯುತ್ತಾ ಅಥವಾ ಬೇರೆ ಸಮಯದಲ್ಲಿ ಪ್ರಸಾರ ಕಾಣಲಿದ್ಯಾ ಎಂಬುದು ಪ್ರೇಕ್ಷಕರ ಪ್ರಶ್ನೆಯಾಗಿದೆ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯವರು ಯಾವುದೇ ಸುಳಿವನ್ನು ಬಿಟ್ಟು ಕೊಟ್ಟಿಲ್ಲ. ಧಾರಾವಾಹಿಗಳು ಮುಗಿಯುತ್ತಾ ಅಥವಾ ಬೇರೆ ಸಮಯದಲ್ಲಿ ಧಾರಾವಾಹಿಗಳನ್ನ ಹಾಕಲಾಗುತ್ತಾ ಎಂಬುದರ ಬಗ್ಗೆ ಏನು ಇಂದಿಗೂ ತಿಳಿಸಲಿಲ್ಲ.
ಆದರೆ, ಪ್ರೇಕ್ಷಕರು ಮಾತ್ರ ಗೀತಾ ಹಾಗೂ ಲಕ್ಷಣ ಧಾರಾವಾಹಿಗಳು ಮುಗಿಯಲಿದ್ದು, ತ್ರಿಪುರ ಸುಂದರಿ ಹಾಗೂ ಪುಣ್ಯವತಿ ಧಾರಾವಾಹಿಯನ್ನು ಬೇರೆ ಸಮಯದಲ್ಲಿ ಹಾಕುತ್ತಾರೆ ಎಂದುಕೊಂಡಿದ್ದಾರೆ. ಗೀತಾ ಧಾರಾವಾಹಿಯಲ್ಲಿ ವಿಜಯ್‌ಗೆ ತನ್ನ ಮಲತಾಯಿ ಭಾನುಮತಿಯೇ ವಿಲನ್ ಎಂಬುದು ಗೊತ್ತಾಗಿದೆ. ಹಾಗಾಗಿ ಸದ್ಯಕ್ಕೆ ಧಾರಾವಾಹಿ ಮುಗಿಯುತ್ತದೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಸದ್ಯಕ್ಕೆ ಗೀತಾ ಧಾರಾವಾಹಿ ತಂಡದಿಂದ ಸಹ ಧಾರಾವಾಹಿ ಮುಗಿಯುತ್ತದೆ ಎಂಬ ಸುಳಿವು ಸಿಕ್ಕಿಲ್ಲ. ಇನ್ನು ಸಹ ಧಾರಾವಾಹಿ ಎಪಿಸೋಡ್‌ಗಳು ಇವೆ ಎಂಬಂತೆ ಬಿಂಬಿಸಲಾಗಿದೆ.

ಲಕ್ಷಣ ಸೀರಿಯಲ್‌ನಲ್ಲಿ ಶ್ವೇತಾಗೆ ಬುದ್ಧಿ ಕಲಿಸಲು ಶಕುಂತಲಾ ದೇವಿ ನಿರ್ಧಾರ ಮಾಡಿದ್ದು ಎಲ್ಲರೂ ಸಹ ಒಂದಾಗಿದ್ದಾರೆ. ಶಕುಂತಲಾ ದೇವಿಯು ಸಹ ತನ್ನ ಸೊಸೆಯರನ್ನೆಲ್ಲ ಒಪ್ಪಿಕೊಂಡಿದ್ದು ಎಲ್ಲರೂ ಸಹ ಸಂತೋಷದಿಂದ ಇದ್ದಾರೆ. ಇನ್ನು ಶ್ವೇತಾಗೆ ಬುದ್ಧಿ ಕಲಿಸಬೇಕು ಎಂದು ತಾವೇ ಖೆಡ್ಡಾವನ್ನು ತೋಡಿದ್ದಾರೆ. ಇದು ಶ್ವೇತಾಗೆ ತಲೆ ನೋವಾಗಿ ಪರಿಣಮಿಸಿದೆ. ಈಗಾಗಲೇ ಲಕ್ಷಣ ಧಾರಾವಾಹಿ 562ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಕಂಡಿದ್ದು ಸೀರಿಯಲ್ ಮುಗಿಯುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇಲ್ಲ ಮಧ್ಯಾಹ್ನ ಏನಾದರೂ ಧಾರಾವಾಹಿ ಹಾಕುತ್ತಾರ ಎಂಬ ಪ್ರಶ್ನೆ ಕಾಡುತ್ತಿದೆ.
ಗೀತಾ ಧಾರಾವಾಹಿ ಮುಗಿಸಿ ಎನ್ನುತ್ತಿರುವ ಪ್ರೇಕ್ಷಕರು, ಈಗಾಗಲೇ 981 ಎಪಿಸೋಡ್ ಪೂರೈಸಿರೋ ಗೀತಾ
ಗೀತಾ ಧಾರಾವಾಹಿಯನ್ನು ಆದಷ್ಟು ಬೇಗ ಮುಗಿಸಿ ಎಂದು ಪ್ರೇಕ್ಷಕರು ಯಾವಾಗಲೋ ಕೇಳಿದ್ದರು. ಆದರೆ ವಿಜಯ್‌ಗೆ ತನ್ನ ಮಲ ತಾಯಿ ಭಾನುಮತಿಯೇ ನನ್ನ ಜೀವನದಲ್ಲಿ ಇರುವ ವಿಲನ್ ಎಂಬುದು ತಿಳಿಯುತ್ತಿರಲಿಲ್ಲ. ಈಗ ಅದು ತಿಳಿದಿದ್ದು, ಆದಷ್ಟು ಬೇಗ ಮುಗಿಸಿ ಎನ್ನುತ್ತಿದ್ದಾರೆ. ಹೊಸ ಹೊಸ ಕಥೆಗಳ ಮೂಲಕ ಜನರ ಮನಸು ತಲುಪುವ ಕೆಲಸವನ್ನು ಮಾಡಿ ಎಂದು ಸಲಹೆ ಕೊಡುತ್ತಿದ್ದಾರೆ.

ಇನ್ನು, ಲಕ್ಷಣ ಧಾರಾವಾಹಿ ಸಹ 562 ಎಪಿಸೋಡ್‌ಗಳನ್ನು ಪೂರೈಸಿದ್ದು ಇವರು ಸಹ ಧಾರಾವಾಹಿಯನ್ನು ಎಳೆಯದೆ ಮುಗಿಸಲಿ ಈಗ ಧಾರಾವಾಹಿ ಕಥೆ ಒಂದು ಹಂತಕ್ಕೆ ಬಂದಿದೆ. ಶ್ವೇತಾಗೆ ಬುದ್ಧಿ ಕಲಿಸಿದ ಬಳಿಕ ಧಾರಾವಾಹಿ ಕೊನೆಗೊಳಿಸಿ ಎನ್ನುತ್ತಿದ್ದಾರೆ. ಮತ್ತಷ್ಟು ಸಂಭಾಷಣೆಯನ್ನು ಎಳೆಯಬೇಡಿ ಎನ್ನುವುದು ಪ್ರೇಕ್ಷಕರ ಒತ್ತಾಯ.
ಬದಲಾದ ಸಮಯದಲ್ಲಿ ಬರಲಿದ್ಯಾ ಪುಣ್ಯವತಿ, ತ್ರಿಪುರ ಸುಂದರಿ ಧಾರಾವಾಹಿಯ ಕಥೆಯೇನು?
ಪುಣ್ಯವತಿ ಧಾರಾವಾಹಿಗಿಂತಲೂ ತ್ರಿಪುರ ಸುಂದರಿ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ. ಯಾಕೆಂದರೆ ಪುಣ್ಯವತಿ ಧಾರಾವಾಹಿಯಲ್ಲಿ ತಂಗಿ ಅಕ್ಕನಿಗೆ ಹಿಂಸೆ ನೀಡುತ್ತಿರುವುದನ್ನು ಪ್ರೇಕ್ಷಕರು ಸಹಿಸಿಲ್ಲ. ತ್ರಿಪುರ ಸುಂದರಿ ಧಾರಾವಾಹಿ ಒಂದು ರಾಜಕುಮಾರನ ಕಥೆಯನ್ನು ಹೊಂದಿದ್ದು ಜನರು ಕುತೂಹಲದಿಂದ ನೋಡುತ್ತಾ ಇದ್ದರು. ಈಗ ಪ್ರದ್ಯುಮ್ಯನನೇ ರಾಜಕುಮಾರ ಎಂಬುದು ಆಮ್ರಪಾಲಿಗೆ ಗೊತ್ತಾಗಿದೆ. ಈಗ ಧಾರಾವಾಹಿ ಮತ್ತೊಂದು ರೋಚಕವಾದ ತಿರುವನ್ನು ಪಡೆದುಕೊಂಡಿದೆ.

ಇನ್ನೂ ಪುಣ್ಯವತಿ ಧಾರಾವಾಹಿಯಲ್ಲಿ ತಂಗಿ ಅಕ್ಕನಿಗೆ ಟಾರ್ಚರ್ ಕೊಡಲು ಶುರುಮಾಡಿದ್ದು ಪದ್ಮಿನಿಗೆ ಇದು ಗೊತ್ತಿಲ್ಲ. ಈ ಧಾರಾವಾಹಿಯು ಸಹ ಮುಗಿದು ಹೋಗುತ್ತದೆ ಎಂಬ ಊಹಾಪೋಹಗಳು ಎದ್ದಿದ್ದು ಇದೆಲ್ಲ ಊಹಾಪೋಹಗಳಿಗೆ ಕಲರ್ಸ್ ಕನ್ನಡವೇ ಉತ್ತರವನ್ನು ನೀಡಲಿದೆ. ಇನ್ನು ಏಳು ದಿನಗಳಲ್ಲಿ ಬಿಗ್ ಬಾಸ್ ಬರಲಿದ್ದು, ಆ ಬಿಗ್ ಬಾಸ್ ಪ್ರಸಾರವಾಗುವ ವೇಳೆ ಇದ್ದಂತಹ ಧಾರಾವಾಹಿಗಳ ಕಥೆ ಏನು ಎಂಬುವುದು ಧಾರಾವಾಹಿ ಪ್ರೇಕ್ಷಕರ ಪ್ರಶ್ನೆಯಾಗಿದೆ.


Click it and Unblock the Notifications











