ವರ್ಷಕ್ಕೂ ಮೊದಲೇ ಮುಗಿದ 'ಶ್ರೀಗೌರಿ' ಕಥೆ: ಆ ಸಮಯಕ್ಕೆ ಬರ್ತಿದೆ ಹೊಸ ಕಥೆ

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಆಗಾಗ ಹೊಸ ಹೊಸ ಧಾರಾವಾಹಿಗಳು ಬರುತ್ತಾ ಇರುತ್ತವೆ. ವರ್ಷಾನುಗಟ್ಟಲೆ ಈ ಧಾರಾವಾಹಿಗಳು ರನ್ ಆಗುತ್ತವೆ. ಆದರೆ ಕೆಲವೊಂದು ಧಾರಾವಾಹಿಗಳು ಮಾತ್ರ ಅರ್ಧಕ್ಕೆ ನಿಂತು ಹೋಗುತ್ತವೆ. ಅದಕ್ಕೆ ಕಾರಣವೂ ಇರುತ್ತದೆ. ಕಥೆಯಲ್ಲಿ ಟ್ವಿಸ್ಟ್ ಇಲ್ಲದೆ ಇರುವುದು, ಜನರಿಂದ ಒಳ್ಳೆಯ ರೆಸ್ಪಾನ್ಸ್ ಇಲ್ಲದೆ ಇರುವುದು. ಈ ಹಿಂದೆ ಇದೇ ಕಲರ್ಸ್ ಕನ್ನಡದಲ್ಲಿ 'ನನ್ನ ದೇವ್ರು' ಸೀರಿಯಲ್ ಶುರುವಾದ ಕೆಲವೇ ತಿಂಗಳಲ್ಲಿ ನಿಂತು ಹೋಗಿತ್ತು.

ಇದೀಗ 'ಶ್ರೀಗೌರಿ' ಸರದಿ. ಈ ವಾರ 'ಶ್ರೀಗೌರಿ' ಧಾರಾವಾಹಿ ತಮ್ಮ ಪಯಣವನ್ನು ಮುಗಿಸಿದೆ. ಜನರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಇತ್ತು. ಟಿಆರ್‌ಪಿಯಲ್ಲೂ ತುಂಬಾ ಕಳಪೆ ಮಟ್ಟ ಏನು ಇರಲಿಲ್ಲ. ಇನ್ನು ತಾರಾ ಬಳಗವೇ ದೊಡ್ಡ ಮಟ್ಟಕ್ಕೆ ಇತ್ತು. ಆದರೂ ಸೀರಿಯಲ್ ಬೇಗ ನಿಲ್ಲಿಸಿದ್ದು, ವೀಕ್ಷಕರಿಗೇನೆ ಬೇಸರವಾಗಿದೆ.

Colors kannada Shreegowri serial Written Update on December 22nd episode

ಶ್ರೀಗೌರಿ ಹ್ಯಾಪಿ ಎಂಡಿಂಗ್

ಅಪ್ಪು ಮನೆಯಲ್ಲಿ ಕಷ್ಟವನ್ನೇ ಅರ್ಥ ಮಾಡಿಕೊಳ್ಳದ ಜೀವ ಅಂದ್ರೆ ಅದು ಅರ್ಚನಾ. ತನ್ನ ಶೋಕಿಗಾಗಿ ಏನು ಬೇಕಾದರೂ ಮಾಡ್ತಾಳೆ. ಆದರೆ ಗೌರಿ ಮನೆಗೆ ಸೊಸೆಯಾಗಿ‌ ಬಂದಾಗಿನಿಂದ ಅಪ್ಪುಗೆ ಕಷ್ಟವಾಗದೆ ಇರುವಂತೆ ಮಾಡಲು ಪ್ರಯತ್ನ ಮಾಡಿದ್ದಾಳೆ. ಇಂದು ಅರ್ಚನಾ ತನ್ನ ಬರ್ತ್ ಡೇಗಾಗಿ ದೊಡ್ಡ ಮಟ್ಡಕ್ಕೆ ಹಣ ತೆಗೆದುಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿದ್ಲು. ಆದರೆ ಗೌರಿ ಅದನ್ನ ತಡೆದು ಮನೆಯಲ್ಲಿಯೇ ಬರ್ತ್ ಡೇ ಮಾಡಿದ್ದಾಳೆ. ಇದರಿಂದ ಹಲವು ಸತ್ಯವೂ ಬಯಲಾಗಿದೆ.

ಗಂಡನ ಬಗ್ಗೆ ಗೌರಿಗೆ ಹೆಮ್ಮೆ

ಅಪ್ಪುಗೆ ಅಮ್ಮನೆಂದರೆ ಪ್ರಾಣ. ಅಮ್ಮನೇ ದೇವರು.. ಅಮ್ಮನೇ ಜಗತ್ತು. ಅಮ್ಮನಿಗೆ ಏನಾದರೂ ಆದರೆ ತಾನೂ ಬದುಕುವುದೇ ಇಲ್ಲ. ಈ ವೀಕ್ನೆಸ್ ತಿಳಿದಿದ್ದ ಗೌರಿ ತಂದೆ ಅಪ್ಪುನನ್ನು ಕಟ್ಟಿ ಹಾಕಿದರು. ಮಂಗಳನ್ನ ಕಾಯಿಲೆ ವಾಸಿ ಮಾಡಲು ಹಣ ಕೊಡುತ್ತೇ‌ನೆ. ಆದರೆ ಗೌರಿಯನ್ನು ಪ್ರೀತಿಸುವಂತೆ ಮಾಡಿ, ಮದುವೆಯಾಗಬೇಕು. ಈ ಡೀಲ್ ಇಂದು ಗೌರಿಯ ಮುಂದೆಯೂ ಬಯಲಾಗಿದೆ. ಧಾರಾವಾಹಿ ಮುಗಿಯುವ ಹೊತ್ತಿಗೆ ಗೌರಿ ಮುಂದೆ ಸತ್ಯ ಬಯಲಾಗಿದೆ. ತಾಯಿಗೋಸ್ಕರ ಅಪ್ಪು ಮಾಡಿದ ತ್ಯಾಗಕ್ಕೆ ಗೌರಿ ಹೆಮ್ಮೆ ಪಟ್ಟಿದ್ದಾಳೆ‌.

ಕಥೆಯನ್ನು ಮೆಚ್ಚಿದ್ದ ವೀಕ್ಷಕರು

'ಶ್ರೀಗೌರಿ' ಧಾರಾವಾಹಿ ಶುರುವಾಗಿದ್ದು ಕಳೆದ ಜನವರಿ ಕೊನೆ ವಾರದಲ್ಲಿ. ಆದರೆ ವರ್ಷ ತುಂಬುವುದಕ್ಕೂ ಮೊದಲೇ ಧಾರಾವಾಹಿ ಅಂತ್ಯವಾಗಿದೆ. ಈ ಕಥೆಯನ್ನು ವೀಕ್ಷಕರು ಕೂಡ ಮೆಚ್ಚಿದ್ದರು. ಎಲ್ಲಿಯೂ ಬೋರ್ ಹೊಡೆಸುತ್ತಿರಲಿಲ್ಲ. ಧಾರಾವಾಹಿ ಮುಂದುವರೆದಿದ್ದರೆ ಇನ್ನು ಅದ್ಬುತವಾದ ಕಥೆಯಿಂದಾನೇ ಸಾಗುತ್ತಿತ್ತು ಎನಿಸುತ್ತದೆ. ಆದರೆ ಬೇಗನೇ ಮುಗಿದಿದೆ.

ಗೌರಿ ಸ್ಥಾನಕ್ಕೆ 'ನೂರು ಜನ್ಮಕೂ'

'ಶ್ರೀಗೌರಿ' ಹೊಸದೊಂದು ಧಾರಾವಾಹಿಗೆ ಜಾಗ ಮಾಡಿಕೊಟ್ಟಿದೆ. ಅದುವೇ 'ನೂರು ಜನ್ಮಕೂ'. ಇದೊಂದು ಸುಂದರ ಪ್ರೇಮ ಕಥೆಯ ನಡುವೆ ಆತ್ಮದ ಹಠದ ಕಥೆಯಾಗಿದೆ. ನೂರು ಜನ್ಮಕೂ ವಿಜಯ್ ಯಾರಿಗೆ ಸೇರಬೇಕು ಎಂಬ ಕಥೆ. ನಾಳೆಯಿಂದ ರಾತ್ರಿ 8.30ಕ್ಕೆ ಅಂದ್ರೆ ಇಷ್ಟು ದಿನ ಗೌರಿ ಸೀರಿಯಲ್ ಪ್ರಸಾರವಾಗುತ್ತಿದ್ದ ಸಮಯಕ್ಕೇನೆ ಪ್ರಸಾರವಾಗುತ್ತಿದೆ. ಈಗಾಗಲೇ ಪ್ರೋಮೋ ಮೂಲಕವೇ ಭಯ ಹುಟ್ಟಿಸಿದೆ. ಕುತೂಹಲವೂ ಮೂಡಿದೆ. ಈ ಧಾರಾವಾಹಿಯಲ್ಲಿ ಪ್ರಮುಖ. ಪಾತ್ರಧಾರಿಯಾಗಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Here is the details about Shreegowri serial ended this week;
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X