Tripura Sundari: ಬಿಗ್‌ಬಾಸ್ ದಿವ್ಯಾ ಸುರೇಶ್ ಧಾರಾವಾಹಿ 'ತ್ರಿಪುರ ಸುಂದರಿ'ಗೆ 100ರ ಸಂಭ್ರಮ
ಜನಪ್ರಿಯ ಅಲೌಕಿಕ, ಕಾಲ್ಪನಿಕ ಕನ್ನಡ ಧಾರಾವಾಹಿ 'ತ್ರಿಪುರ ಸುಂದರಿ' ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯು ಕನ್ನಡ ಕಿರುತೆರೆಯಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇತ್ತೀಚೆಗೆ ವೀಕ್ಷಕರ ಮನಗೆದ್ದು TRP ರೇಟಿಂಗ್‌ನಲ್ಲೂ ಮುಂದಕ್ಕೆ ಸಾಗುತ್ತಿದೆ.
'ತ್ರಿಪುರ ಸುಂದರಿ' ಪ್ರಾರಂಭವಾದ ದಿನದಿಂದಲೇ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ಧಾರಾವಾಹಿಯ ದೃಶ್ಯದಿಂದ ಹಿಡಿದು ಅದರ ಅನನ್ಯ ಮತ್ತು ಬಲವಾದ ಕಥೆ ಹೇಳುವ ರೀತಿಗೆ ವೀಕ್ಷಕರು ಮನಸೋತಿದ್ದರು. ಅದೇ ರೀತಿಯಲ್ಲಿ ಮುಂದುವರಿದು ಇಂದಿಗೂ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿ ತ್ರಿಪುರ ಸುಂದರಿ ನಿಂತಿದೆ.

'ತ್ರಿಪುರ ಸುಂದರಿ' 100 ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ, ನಾಯಕ ನಟಿ ದಿವ್ಯಾ ಸುರೇಶ್ ಅವರು ತ್ರಿಪುರ ಸುಂದರಿಯ ಸೆಟ್‌ಗಳ ಕೆಲವು ವೀಡಿಯೊಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ತುಣುಕುಗಳನ್ನು ಹಂಚಿಕೊಂಡ ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
"ನಿಮ್ಮೆಲ್ಲರಿಗೂ ನಾನು ಆಮ್ರಪಾಲಿಯಾಗಿ ರಂಜಿಸುತ್ತಿರುವುದಕ್ಕೆ ನನಗೆ ಸಂತಸವಿದೆ. ನಿಮ್ಮ ನೆಚ್ಚಿನ 'ತ್ರಿಪುರ ಸುಂದರಿ' ಧಾರಾವಾಹಿಯು ಯಶಸ್ವಿ 100ನೇ ದಿನ ಪೂರೈಸಿದೆ. ನನ್ನಲಿರುವುದು ಪ್ರೀತಿ ಮತ್ತು ಕೃತಜ್ಞತೆ ಮಾತ್ರ. ಆಮ್ರಪಾಲಿ ತುಂಬ ಕಠಿಣ ಮಹಿಳೆ. ಈ ಕೆಲಸವನ್ನು ನಿಭಾಯಿಸುವುದು ನನಗೆ ಸುಲಭವಲ್ಲ, ಆದರೆ ನಾನು ಈ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಕೈಲಾದಷ್ಟು ಶ್ರಮವನ್ನು ನಾನು ಈ ಪಾತ್ರಕ್ಕೆ ನೀಡುತ್ತಿದ್ದೇನೆ, ಹೀಗೇ ನನ್ನನ್ನು ಬೆಂಬಲಿಸುತ್ತಿರಿ" ಎಂದು ಬರೆದುಕೊಂಡಿದ್ದಾರೆ.

ಏತನ್ಮಧ್ಯೆ, ತ್ರಿಪುರ ಸುಂದರಿಯ ಕಥೆಯು ರಾಜಕುಮಾರನನ್ನು ಹುಡುಕುವ ಕಾರ್ಯಾಚರಣೆಯಲ್ಲಿರುವ ಗಂಧರ್ವ ಸಾಮ್ರಾಜ್ಯದ ಅಮ್ರಪಾಲಿ ಎಂಬ ಸುಂದರ ಹುಡುಗಿಯ ಸುತ್ತ ಸುತ್ತುತ್ತದೆ. ತನ್ನ ಹುಡುಕಾಟದ ಸಮಯದಲ್ಲಿ, ಅವಳು ಭೂಮಿಯ ಮೇಲೆ ಇಳಿಯುತ್ತಾಳೆ. ಭೂಮಿಯಲ್ಲಿ ತಮ್ಮ ಉತ್ತರಾಧಿಕಾರಿಯ ಮೇಲೆಯೇ ಎಲ್ಲಾ ಭರವಸೆಯನ್ನು ಹೊಂದಿರುವ ಒಂದು ಕುಟುಂಬದೊಂದಿಗೆ ಸೇರಿ ಹೋಗುತ್ತಾಳೆ.
ಆಮ್ರಪಾಲಿಯ ಪಾತ್ರವನ್ನು ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಮಾಡಿದರೆ, ನಟ ಅಭಿನವ್ ವಿಶ್ವನಾಥನ್ ನಾಯಕ ಪ್ರದ್ಯುಮ್ನ್ಯನಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಸದ್ಯ 100ನೇ ಸಂಚಿಕೆಯನ್ನು ಯಶಸ್ವಿಯಾಗಿ ಮುಗಿಸಿ, ಮುನ್ನಡೆಯುತ್ತಿದೆ. ಅಲೌಕಿಕ ಕಾಲ್ಪನಿಕ ಕಥೆಗೆ ಕಿರುತೆರೆ ವೀಕ್ಷಕರು ಮನಸೋತಿದ್ದಾರೆ.


Click it and Unblock the Notifications











