ವಧು ಮೇಲೆ ಸಾರ್ಥಕ್ ಗೆ ಲವ್ವಾಗಿದೆಯಾ ? ಡಿವೋರ್ಸ್ ವಿಚಾರಕ್ಕೆ ಗುಡುಗಿದ ಯಶೋಮತಿಗೆ ಸತ್ಯ ಗೊತ್ತಾಯ್ತಾ..?

By ಪ್ರಿಯಾ ದೊರೆ

'ವಧು' ಧಾರಾವಾಹಿಯಲ್ಲಿ ಪ್ರಿಯಾಂಕಾ ಅತ್ತೆ ಯಶೋಮತಿ ಬಳಿ ಒಂದು ರೀತಿ, ಪತಿ ಸಾರ್ಥಕ್ ಜೊತೆಗೆ ಮತ್ತೊಂದು ರೀತಿ ನಡೆದುಕೊಳ್ಳುತ್ತಾಳೆ. ಆದರೆ, ಪ್ರಿಯಾಂಕಳ ಮನಸ್ಸಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ.

ಯಶೋಮತಿ ಮತ್ತು ಸಾರ್ಥಕ್ ಮೇಲೆ ದ್ವೇಷ ಸಾಧಿಸುವ ಪ್ರಿಯಾಂಕ ತನ್ನ ಅಣ್ಣನನ್ನು ಇಂದಿಗೂ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾಳೆ. ಆದರೆ ಪ್ರಿಯಾಂಕಾಳ ಅಣ್ಣನೇ ಇಲ್ಲ.

Colors kannada Vadhu Serial 03rd April episode written update

ಸದ್ಯ ಪ್ರಿಯಾಂಕ ತಲೆಯಲ್ಲಿ ವಧು ಮತ್ತು ಯಶೋಮತಿ ನಡುವೆ ಯಾವ ರೀತಿಯ ವ್ಯವಹಾರ ನಡೆಯುತ್ತಿದೆ ಎಂಬ ವಿಚಾರವೇ ತಲೆ ಕೆಡಿಸಿದೆ. ಆದರೆ ವಧು ಉತ್ತರ ಕೊಡಲಿಲ್ಲ.

ಯಶೋಮತಿ ಕೆಂಡಾಮಂಡಲ

ಇತ್ತ ಯಶೋಮತಿ ಕೂಡ ಸೀಕ್ರೇಟ್ ಕಾಪಾಡಿಕೊಂಡಿದ್ದಾಳೆ. ಇದರಿಂದ ಪ್ರಿಯಾಂಕಾಳಿಗೆ ತಲೆ ಕೆಟ್ಟಿದ್ದು, ಸಾರ್ಥಕ್ ನನಗೆ ಡಿವೋರ್ಸ್ ಕೊಡಬೇಕು ಎಂದು ತೀರ್ಮಾನ ಮಾಡಿದ ಹಾಗಿದೆ. ಅವನ ನಡವಳಿಕೆಗಳು ಅಂತಹ ಅನುಮಾನವನ್ನು ತರುತ್ತಿದೆ ಎಂದು ಪ್ರಿಯಾಂಕ ಅತ್ತೆ ಯಶೋಮತಿ ಬಳಿ ಬತ್ತಿ ಇಟ್ಟಿದ್ದಾಳೆ. ಮೊದಲೇ ಸೊಸೆ ಎಂದರೆ ಬಹಳ ಇಷ್ಟಪಡುವ ಯಶೋಮತಿಗೆ ಈಗ ಸಂಕಟ ಎದುರಾಗಿದೆ. ಇತ್ತ ಮಗನ ಬದುಕು ಎಷ್ಟು ಮುಖ್ಯವೋ ಅತ್ತ ಸೊಸೆ ಜೀವನವೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ನೇರವಾಗಿ ಸಾರ್ಥಕ್ ಬಳಿ ಹೋಗಿ ಮಾತನಾಡಿದ್ದಾಳೆ. ನೇರವಾಗಿ ಮಗ ಸಾರ್ಥಕ್‌ಗೆ ಡಿವೋರ್ಸ್ ಯಾರೂ ಕೊಡಬಾರದು. ಕೂಡಿ ಬಾಳುವುದೇ ದಾಂಪತ್ಯ ಎಂದು ಹೇಳಿದ್ದಾಳೆ. ಅಮ್ಮನ ಮಾತನ್ನು ಕೇಳಿದ ಸಾರ್ಥಕ್ ಗೆ ಆತಂಕ ಹೆಚ್ಚಾಗಿದೆ.

ವಧು ಬಗ್ಗೆ ಯೋಚಿಸುತ್ತಿರುವ ಸಾರ್ಥಕ್

ಇತ್ತ ಸಾರ್ಥಕ್ ಸುಜಿತ್‌ನನ್ನು ಬೇರೆ ಹುಡುಗಿಯ ಜೊತೆಗೆ ಇರುವುದನ್ನು ನೋಡಿದ್ದು, ಈಗ ಅದು ವಧು ಅಲ್ಲ ಎಂಬುದು ಕನ್ಫರ್ಮ್ ಆಗಿದೆ. ಹಾಗಾಗಿ ಸುಜಿತ್ ಹಿನ್ನೆಲೆಯನ್ನು ತಿಳಿದುಕೊಳ್ಳಲು ಮುಂದಾಗಿದೆ. ಸುಜಿತ್ ಮತ್ತು ವಧು ಮದುವೆಯಾಗುತ್ತಿದ್ದು, ವಧು ಅವರ ಬದುಕು ಚೆನ್ನಾಗಿರಬೇಕು ಎಂಬುದು ಸಾರ್ಥಕ್ ಆಲೋಚನೆ. ವಧು ಬಗ್ಗೆ ಕೊಂಚ ಹೆಚ್ಚಾಗಿಯೇ ಕಾಳಜಿ ತೋರುವ ಸಾರ್ಥಕ್, ಅವರ ಬದುಕು ಸುಂದರವಾಗಿರಲಿ ಎಂದು ಬಯಸಿದ್ದಾನೆ. ಆದರೆ, ವಧು ಪರ್ಸನಲ್ ವಿಚಾರವನ್ನು ಸಾರ್ಥಕ್ ಜೊತೆಗೆ ಶೇರ್ ಮಾಡುವುದೇ ಅಪರೂಪ.

Colors kannada Vadhu Serial 03rd April episode written update

ವಧು ಮೇಲೆ ವ್ವಾಗಿದೆ

ಸಾರ್ಥಕ್ ಇತ್ತೀಚೆಗೆ ಹೆಚ್ಚಾಗಿ ವಧು ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುತ್ತಾನೆ. ಅಲ್ಲದೇ, ಪ್ರತಿಯೊಂದು ವಿಚಾರದಲ್ಲೂ ವಧು ಅವರ ಬಗ್ಗೆ ಸಾಫ್ಟ್ ಆಗಿದ್ದಾನೆ. ಇದನ್ನೆಲ್ಲಾ ಗಮನಿಸಿದರೆ ವಧು ಮೇಲೆ ಸಾರ್ಥಕ್‌ಗೆ ಲವ್ ಆಗಿದೆ ಎಂಬುದು ಕನ್ಫರ್ಮ್ ಆಗಿದೆ. ಆದರೆ, ಈ ವಿಚಾರ ಇನ್ನೂ ಸಾರ್ಥಕ್ ಗೂ ಅರ್ಥವಾಗಿಲ್ಲ. ವಧುಗೆ ಇದರ ಬಗ್ಗೆ ಒಂದು ಸಣ್ಣ ಅರಿವೂ ಇಲ್ಲ. ಸುಜಿತ್ ಗುಣಗಳ ಬಗ್ಗೆ ತಿಳಿದರೆ, ಸಾರ್ಥಕ್ ವಧುಳನ್ನು ಆತನಿಂದ ಬಚಾವ್ ಮಾಡುವುದಂತೂ ಪಕ್ಕಾ ಆಗಿದೆ.

ಪ್ರಿಯಾಂಕ ನಾಟಕ ಬಯಲಾಗುತ್ತಾ..?

ಇತ್ತ ಪ್ರಿಯಾಂಕ ಮತ್ತು ಸುಚಿತ್ ಸೇರಿಕೊಂಡು ವಧುಳನ್ನು ಹಸೆಮಣೆವರೆಗೂ ಕರೆದುಕೊಂಡು ಹೋಗಿ ನಂತರ ಮೋಸ ಮಾಡಬೇಕು. ದೊಡ್ಡ ಆಘಾತದಿಂದ ವಧು ಮತ್ತು ಅವರ ಕುಟುಂಬ ನರಳಬೇಕು ಎಂದು ಆಲೋಚಿಸಿದ್ದಾರೆ. ಪ್ರಿಯಾಂಕ ಮತ್ತು ಸುಜಿತ್ ಆಟ ಸಾರ್ಥಕ್ ಗೆ ಗೊತ್ತಾದರೆ ಮುಂದೆ ಯಾವೆಲ್ಲಾ ಪರಿಣಾಮ ಬೀರಬಹುದು. ಅಲ್ಲದೇ, ಪ್ರಿಯಾಂಕಳ ನಿಜ ಬಣ್ಣವನ್ನು ಸಾರ್ಥಕ್ ಬಯಲು ಮಾಡುತ್ತಾನಾ ಇಲ್ಲ ವಧು ಪ್ರಿಯಾಂಕ ಬಗ್ಗೆ ಯಶೋಮತಿಗೆ ತಿಳಿಸುತ್ತಾಳಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

More from Filmibeat

English summary
Priyanka tells yashomathi about divorce. This makes yashomathi get angry;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X