ಕಾಮೆಡಿಯನ್ ಜಸ್ಪಾಲ್ ಭಟ್ಟಿ ದುರಂತ ಸಾವು

By Mahesh

Jaspal Bhatti
ಎಂಭತ್ತು ಹಾಗೂ 90ರ ದಶಕದಲ್ಲಿ ದೂರದರ್ಶನದ ಮೂಲಕ ಹಾಸ್ಯದ ಹೊನಲು ಹರಿಸಿ, ವೀಕ್ಷಕರಲ್ಲಿ ಸಾಮಾಜಿಕ ಪ್ರಜ್ಞೆ ಹೆಚ್ಚಿಸಿದ್ದ ಜನಪ್ರಿಯ ಕಾಮೆಡಿಯನ್ ಜಸ್ಪಾಲ್ ಭಟ್ಟಿ ಅವರು ಗುರುವಾರ (ಅ.25) ಮುಂಜಾನೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ.

ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಲಂಧರ್ ನಲ್ಲಿ ಜಸ್ಪಾಲ್ ಭಟ್ಟಿ ಅವರಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಭಟ್ಟಿ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಸಹಚರ ವಿನೋದ್ ಶರ್ಮ ಅವರ ಹೇಳಿದ್ದಾರೆ.

ಪಂಜಾಬಿ ಚಿತ್ರ ' ಪವರ್ ಕಟ್' ಪ್ರಚಾರಕ್ಕಾಗಿ ಭಟಿಂಡಾದಿಂದ ಜಲಂಧರ್ ಕಡೆಗೆ ಹೋಗುತ್ತಿದ್ದರು. ಕಾರನ್ನು ಜಸ್ಪಾಲ್ ಭಟ್ಟಿ ಅವರ ಪುತ್ರ ಜಸ್ ರಾಜ್ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಜಸ್ಪಾಲ್ ಭಟ್ಟಿ ಪುತ್ರ ಜಸ್ ರಾಜ್, ಚಿತ್ರದ ನಾಯಕಿ ಸುರಿಲ್ ಗೌತಮ್ ಹಾಗೂ ವಿನೋದ್ ಶರ್ಮ ಅವರಿಗೆ ತೀವ್ರ ಗಾಯ ಉಂಟಾಗಿದ್ದು ಜಲಂಧರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಅಥವಾ ಶುಕ್ರವಾರ ನಡೆಯುವ ಸಾಧ್ಯತೆಯಿದೆ ಎಂದು ಕುಟುಂಬದ ಮೂಲಗಳು ಹೇಳಿದೆ.

ಜಸ್ಪಾಲ್ ಭಟ್ಟಿ ಅವರು ಪತ್ನಿ ಸವಿತಾಅ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಂಚಿಂಗ್ ಡೈಲಾಗ್ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ತಲುಪಿಸುತ್ತಾ, ಸರ್ಕಾರಗಳ ನೀತಿಗಳನ್ನು 'ಪನ್' ಮೂಲಕ ತಿವಿಯುತ್ತಿದ್ದ ಜಸ್ಪಾಲ್ ಭಟ್ಟಿ ದೂರದರ್ಶನ ಜನಪ್ರಿಯ ಕಲಾವಿದರಾಗಿದ್ದರು.

ಹಲವು ಚಿತ್ರಗಳನ್ನು ನಟಿಸಿದ್ದ ಜಸ್ಪಾಲ್ ಅವರು ನಟ, ನಿರ್ದೇಶಕ, ಸಂಭಾಷಣೆಕಾರರಾಗಿ ಜನಪ್ರಿಯತೆ ಗಳಿಸಿದ್ದರು. ಈಗ ಚಾಲ್ತಿಯಲ್ಲಿರುವ ಕಾಮೆಡಿ ಶೋ, ರಿಯಾಲಿಟಿ ಟಾಕ್ ಶೋ ಗಳ ಪರಿಕಲ್ಪನೆಯನ್ನು ಮೊದಲ ಬಾರಿಗೆ ಸಮರ್ಥವಾಗಿ ದೂರದರ್ಶನ ಮೂಲಕ ವೀಕ್ಷಕರಿಗೆ ಪರಿಚಯಿಸಿದ್ದು ಜಸ್ಪಾಲ್ ಭಟ್ಟಿ ಎಂದರೆ ತಪ್ಪಾಗಲಾರದು.

ಫ್ಲಾಪ್ ಶೋ:
90ರ ದಶಕದಲ್ಲಿ ದೂರದರ್ಶನದಲ್ಲಿ ಫ್ಲಾಪ್ ಶೋ ಹಾಗೂ ಉಲ್ಟಾ ಪಲ್ಟಾ ಸರಣಿ ಮೂಲಕ ಜನಪ್ರಿಯತೆ ಗಳಿಸಿದ ಜಸ್ಪಾಲ್ ಭಟ್ಟಿ ಮೂಲತಃ ಅಮೃತ ಸರ್ ನ ರಜಪೂತ್ ಪರಿವಾರದವರು.

ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಪದವಿ ಗಳಿಸಿದರೂ ಭಟ್ಟಿ ಮಾತ್ರ ತನ್ನೊಳಗಿನ ಕಲಾವಿದನನ್ನು ಮರೆಯಲಿಲ್ಲ.

ಕಾಲೇಜು ದಿನಗಳಲ್ಲಿ ನಾನ್ಸೆಸ್ ಕ್ಲಬ್ ಎಂಬ ಬೀದಿ ನಾಟಕ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸಮಾಜದ ಭ್ರಷ್ಟಾಚಾರ ವಿರುದ್ಧ ನಗೆ ಚಾಟಿ ಬೀಸುತ್ತಿದ್ದ ಭಟ್ಟಿ, ಕಾರ್ಟೂನಿಸ್ಟ್ ಕೂಡಾ.

ಕೋಯಿ ಮೇರೆ ದಿಲ್ ಸೆ ಪೂಂಚೆ, ಫನಾ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಸ್ಪಾಲ್, ಪಂಜಾಬಿ ಚಿತ್ರಗಳ ಬೆಳವಣಿಗೆಯಲ್ಲೂ ಕೈಯಾಡಿಸಿದ್ದರು. ಸಬ್ ಟಿವಿಯ ಕಾಮೆಡಿ ಕ ಕಿಂಗ್ ಕೌನ್ ಸರಣಿಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ಸ್ಟಾರ್ ಪ್ಲಸ್ ನ 'ನಚ್ ಬಲಿಯೆ' ಶೋನಲ್ಲಿ ಪತ್ನಿ ಸವಿತಾ ಜೊತೆ ಕುಣಿದು ನಲಿದಿದ್ದರು. ಈ ದಂಪತಿಗಳು ಮೊಹಾಲಿಯಲ್ಲಿ 'ಜೋಕ್ ಫ್ಯಾಕ್ಟರಿ' ಎಂಬ ತರಬೇತಿ ಶಾಲೆ ಆರಂಭಿಸಿದ್ದರು.

ಇತ್ತೀಚೆಗೆ ಬೆಲೆ ಏರಿಕೆ, ಭ್ರೂಣ ಹತ್ಯೆ ವಿರುದ್ಧ ಜಸ್ಪಾಲ್ ಭಟ್ಟಿ ಅವರು ಸಮರ ಸಾರಿದ್ದರು. ಹಾಸ್ಯವನ್ನು ಸಮರ್ಥವಾಗಿ ಬಳಸಿಕೊಂಡು ಟಿವಿ ಮಾಧ್ಯಮದ ಮೂಲಕ ವೀಕ್ಷಕರಿಗೆ ಒಂದಿಷ್ಟು ಮನರಂಜನೆ ಹಾಗೂ ಅರಿವು ಮೂಡಿಸುತ್ತಿದ್ದ ಭಟ್ಟಿ ಸಾವು ತುಂಬಲಾರದ ನಷ್ಟವಾಗಿದೆ.

More from Filmibeat

English summary
Film actor and comedian Jaspal Bhatti died in a road accident near Jalandhar early on Thursday(Oct.25).The car in which the 57- year-old actor, director was travelling hit a roadside tree near Shahkot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X