3 ದಿನಗಳಿಂದ ನಾಪತ್ತೆಯಾಗಿದ್ದ ಕನ್ನಡ ಹಾಸ್ಯನಟ ಶವವಾಗಿ ಪತ್ತೆ; ಅನುಮಾನಾಸ್ಪದ ಸಾ*ವು

ಕನ್ನಡ ಕಿರುತೆರೆ ಹಾಸ್ಯನಟ ಸಿದ್ದಾರ್ಥ ಪರಸನೂರ ಮೃತದೇಹ ಪತ್ತೆಯಾಗಿದೆ. 3 ದಿನಗಳಿಂದ ನಾಪತ್ತೆಯಾಗಿದ್ದ ಅವರು ಅನುಮಾನಾಸ್ಪದವಾಗಿ ಸಾ*ವನ್ನಪ್ಪಿದ್ದಾರೆ. ಕನ್ನಡ ಕಿರುತೆರೆಯ 'ಕಾಮಿಡಿ ಕಿಲಾಡಿಗಳು' ಹಾಗೂ 'ಮಜಾ ಭಾರತ' ಕಾರ್ಯಕ್ರಮಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ನೋಡುಗರನ್ನು ಸಿದ್ದಾರ್ಥ ರಂಜಿಸಿದ್ದರು. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು.

ಹಾಸ್ಯನಟ ಸಿದ್ದಾರ್ಥ ಪರಸನೂರ ಅಗಲಿಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ. 3 ದಿನಗಳ ಹಿಂದೆ ಸ್ನೇಹಿತರ ಜೊತೆ ಮನೆಯಿಂದ ಹೊರಗೆ ಹೋಗಿದ್ದ ಅವರು ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಖಾಲಿ‌ ಜಾಗದಲ್ಲಿ ನಿನ್ನೆ(ಜೂನ್ 15) ಮಧ್ಯಾಹ್ನ ಸಿದ್ದಾರ್ಥ ಪರಸನೂರು ಅವರ ಮೃತ ದೇಹ ಪತ್ತೆಯಾಗಿದೆ.

Comedian Siddharth Parasanur Found Dead After 3 Days Missing Mystery Surrounds Death

ಹುಮನಾಬಾದ ಪುರಸಭೆ ಮಾಜಿ ಅಧ್ಯಕ್ಷರಾದ ಕಸ್ತೂರಿಬಾಯಿ ಪರಸನೂರ ಅವರ ಪುತ್ರ ಸಿದ್ದಾರ್ಥ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ವಾಸವಾಗಿದ್ದರು. ಸಾ*ವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಾ*ವು ಸಂಭವಿಸಿದ 2 ದಿನದ ಬಳಿಕ ಮೃತದೇಹ ಪತ್ತೆ ಆಗಿದೆ. ಸಿದ್ದಾರ್ಥ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಬಳಿಕ ಪೊಲೀಸರು ಆತನ ಮೊಬೈಲ್ ಟವರ್ ಪರಿಶೀಲನೆ ನಡೆಸಿ ಲೊಕೇಶನ್ ಹುಡುಕಿ ಹೋಗಿ ಪರಿಶೀಲಿಸಿದಾಗ ಕಾಡಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಸದ್ಯ ಸಿದ್ದಾರ್ಥ ಸಾ*ವಿನ ಬಗ್ಗೆ ಕುಟುಂಬಸ್ಥರು ಕೊ*ಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಹುಮ್ನಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶವ ಪತ್ತೆಯಾದ ಜಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಇದ್ದು ವಿದ್ಯುತ್ ಶಾಕ್‌ನಿಂದ ಸಿದ್ದಾರ್ಥ ಪರಸನೂರ ಸಾವನ್ನಪ್ಪಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಶವಪರೀಕ್ಷೆಗಾಗಿ ಈಗಾಗಲೇ ಮೃತದೇಹವನ್ನು ಬೀಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Read more about: comedian kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X