ಹಾಸ್ಯ ನಟ ಕುರಿ ಪ್ರತಾಪ್ ಲೈಫ್ ಬಗ್ಗೆ ನಿಮಗೆಷ್ಟು ಗೊತ್ತು..?

ಕುರಿ ಪ್ರತಾಪ್ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ. ಸರಿಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕುರಿ ಪ್ರತಾಪ್ ನಟಿಸಿದ್ದಾರೆ. ಕುರಿಗಳು ಸಾರ್ ಕುರಿಗಳು ಎಂಬ ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿ ಪಡೆದರು. ಉದಯ ಟಿವಿಯಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗುತ್ತಿತ್ತು.

ಮೈಸೂರಿನಲ್ಲಿ ಹುಟ್ಟಿ ಬೆಳೆದ ಕುರಿ ಪ್ರತಾಪ್ ಐಎಎಸ್ ಅಧಿಕಾರಿಯಾಗಬೇಕು ಎಂದು ಅವರ ತಂದೆ ಕನಸು ಕಂಡಿದ್ದರು. ಆದರೆ ಪಿಯುಸಿಯಲ್ಲೇ ಡುಮ್ಕಿ ಹೊಡೆದು ಕಾಮಿಡಿ ಡ್ರಾಮಾಗಳಲ್ಲಿ ನಟಿಸಲು ಶುರು ಮಾಡಿದ್ದರಂತೆ. ಹೀಗೆ ಕುರಿ ಪ್ರತಾಪ್ ಕಲಾವೇದಿಕೆಗೆ ಎಂಟ್ರಿ ಕೊಟ್ಟರು.

ಡ್ರಾಮಾ ನಾಟಕಗಳ ಮೂಲಕವೇ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ ಕುರಿ ಪ್ರತಾಪ್ ರಿಯಾಲಿಟಿ ಶೋ, ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ತಮ್ಮ ಕಾಮಿಡಿ ಮಾತುಗಳಿಂದಲೇ ಅಭಿಮಾನಿಗಳನ್ನು ಗಳಿಸಿರುವ ಕುರಿ ಪ್ರತಾಪ್‌ಗೆ ಇಂಗ್ಲೀಷ್ ಬರುವುದಿಲ್ಲ. ಯಾಕೆ ಕಲಿತಿಲ್ಲ ಎಂದು ಕೇಳಿದರೆ, ಕನ್ನಡ ಬರುತ್ತಲ್ಲ ಅಷ್ಟೇ ಸಾಕು ಎನ್ನುತ್ತಾರೆ. ಅಲ್ಲದೇ, ತಾವು ಇಂಗ್ಲಿಷ್ ಕಲಿತು ಬಿಟ್ಟರೆ, ಚೆನ್ನಾಗಿರಲ್ಲ ಎನ್ನುವ ಕುರಿ ಪ್ರತಾಪ್ ಸಿನಿ ಜರ್ನಿ ನೋಡೋಣ ಬನ್ನಿ.

Comedy Actor Kuri Prathap Biography and Cini Journey

ಉದಯ ಟಿವಿಯಲ್ಲಿ ಮೂಡಿ ಬಂದ 'ಕುರಿಗಳು ಸರ್ ಕುರಿಗಳು' ಎಂಬ ರಿಯಾಲಿಟಿ ಶೋ ನಂತರ ಕೆಲ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್‌ನ ಭಾಗವಾದರು. ಮಜಾ ಟಾಕೀಸ್ ಮೂಲಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ಮಾಡಿದ್ದರು. ಮಾತು ಮಾತಿಗೂ ನಗಿಸುವ ಕುರಿ ಪ್ರತಾಪ್‌ರನ್ನು ನೋಡಿದರೆ ಕೆಲವರು ನಗುತ್ತಾರೆ. ಅಷ್ಟರ ಮಟ್ಟಕ್ಕೆ ಕುರಿ ಪ್ರತಾಪ್ ಹಾಸ್ಯ ಮಾಡುತ್ತಾರೆ. ಇನ್ನು ಕುರಿ ಪ್ರತಾಪ್ ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ಇದರಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

Comedy Actor Kuri Prathap Biography and Cini Journey

ನಗಿಸುತ್ತಲೇ ಎಲ್ಲರ ಮನಗೆದ್ದಿರುವ ಕುರಿ ಪ್ರತಾಪ್ ಸರಿ ಸುಮಾರು 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ದಿ ವಿಲನ್', 'ಅಯೋಗ್ಯ', 'ತಾರಕ್', 'ಭರ್ಜರಿ', 'ವಜ್ರಕಾಯ', 'ಅಧ್ಯಕ್ಷ', 'ವಿಕ್ಟರಿ', 'ನವಗ್ರಹ', 'ಯುವರತ್ನ', 'ಆರ್ಸಿ ಬ್ರದರ್ಸ್', 'ಪೊಗರು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಆರ್ಸಿ ಬ್ರದರ್ಸ್' ಸಿನಿಮಾದಲ್ಲಿ ಕುರಿ ಪ್ರತಾಪ್ ಹೀರೊ ಆಗಿ ನಟಿಸಿದ್ದಾರೆ. ತಬಲ ನಾಣಿ ಜೊತೆಗೆ ತೆರೆ ಹಂಚಿಕೊಂಡಿರುವ ಕುರಿ ಪ್ರತಾಪ್ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ಕಳೆದ ವಾರದಿಂದ ಕಾಮಿಡಿ ಗ್ಯಾಂಗ್ ಸಿನಿಮಾ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಸಹ ಇದ್ದು, ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಶ್ರುತಿ ಹರಿಹರನ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡ ತೀರ್ಪುಗಾರರಾಗಿದ್ದಾರೆ. ಈ ಶೋನಲ್ಲಿ ಶಿವರಾಜ್ ಕೆ.ಆರ್. ಪೇಟೆ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಈವರೆಗೂ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಶಿವರಾಜ್ ಕೆ.ಆರ್. ಪೇಟೆ ಇದರಲ್ಲಿ ಮೊದಲ ಬಾರಿಗೆ ನಿರೂಪಕರಾಗಿದ್ದಾರೆ. ಜೊತೆಗೆ ನಯನಾ, ಹಿತೇಶ್, ಮಡೆನೂರು ಮನು, ಸೂರ್ಯ ಮುಂತಾದವರು ಕಾಣಿಸಿಕೊಂಡಿದ್ದಾರೆ. ಮೂವರು ತೀರ್ಪುಗಾರರ ಜೊತೆಗೆ ಆರು ಸಖತ್ ಟೀಮ್‌ಗಳು ಕಾಮಿಡಿ ಮಾಡಿ, ವೀಕ್ಷಕರನ್ನು ರಂಜಿಸುವಲ್ಲಿ ಸಫಲರಾಗಿದ್ದಾರೆ.

More from Filmibeat

English summary
Comedy Actor Kuri Prathap Biography and Cini Journey, Know More About It
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X