ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ

By Poorva

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಭಾರಿ ಜನ ಮೆಚ್ಚುಗೆ ಗಳಿಸಿತ್ತು. ಈ ಶೋ ನಲ್ಲಿ ಭಾಗವಹಿಸಲು ಬಂದಂತಹ ಅನೇಕ ಪ್ರತಿಭೆಗಳು ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಅದರಲ್ಲಿ ಒಬ್ಬರು ನಯನಾ. ಕಾಮಿಡಿ ಕಿಲಾಡಿ ನಯನಾ.

ಉತ್ತಮ ಪ್ರತಿಭೆಗಳನ್ನು ಕಾಮಿಡಿ ಕಿಲಾಡಿಗಳು ಶೋ ಕೊಟ್ಟಿದೆ ಎಂದರೆ ತಪ್ಪಾಗದು. ಅದರಲ್ಲು ಈ ಶೋ ಮೂಲಕ ಇಡೀ ನಾಡಿಗೆ ಪರಿಚಯವಾದ ನಟಿ ನಯನಾ.. ನಯನಾ ಕಾಮಿಡಿ ಕಿಲಾಡಿಗಳು ಶೋ ಮೂಲಕ ಮೊದಲಿಗೆ ಕಿರುತೆರೆಗೆ ಆಗಮಿಸಿದರು. ಅದಾದ ಬಳಿಕ ಇವರು ಮಜಾ ಟಾಕೀಸ್‌ನಲ್ಲು ಕೂಡ ಕಾಣಿಸಿಕೊಂಡರು.

comedy-khiladi-actor-nayana-photo-shoot

ಇವರ ಅಭಿನಯ ಕಂಡು ಮೆಚ್ಚದವರು ಇಲ್ಲ.. ಅಷ್ಟರ ಮಟ್ಟಿಗೆ ಇವರು ನಟನೆಯನ್ನು ಕರಗತ ಮಾಡಿಕೊಂಡು ಇದ್ದಾರೆ.. ಇನ್ನೂ ಮಜಾ ಟಾಕೀಸ್‌ನಲ್ಲಿ ಇವರ ನಟನೆ ನೋಡಿ ಬೆರಗಾಗದವರೆ ಹೆಚ್ಚು ಆ ಬಳಿಕ ಇವರಿಗೆ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಅವಕಾಶಗಳೂ ಬರತೊಡಗಿತು.

ಚೊಚ್ಚಲ ಮಗುವಿನ ನಿರೀಕ್ಷಿಯಲ್ಲಿ ನಯನ

ಸಿನಿಮಾದಲ್ಲಿ ಹೆಚ್ಚು ಬ್ಯುಸಿ ಆಗಿರುವ ನಟಿ ನಯನಾ ಇದೀಗ ಚೊಚ್ಚಲ ಮಗುವಿಗೆ ತಾಯಿ ಆಗಲಿದ್ದಾರೆ. ಇವರು ಮೊದಲು ತಾನು ಗರ್ಭಿಣಿ ಎಂದು ಅವರ ಅಭಿಮಾನಿಗಳಿಗೆ ತಿಳಿಸಿದ್ದು ಬೊಂಬಾಟ್ ಭೋಜನ ಕಾರ್ಯಕ್ರಮದ ಮೂಲಕ. ಇನ್ನೂ ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಗರ್ಭಿಣಿ ಬಯಕೆ ಈಡೇರಿಸಿಕೊಂಡಿದ್ದಾರೆ.

comedy-khiladi-actor-nayana-photo-shoot

ಪಂಚಿಂಗ್ ಡೈಲಾಗ್‌ನಿಂದಾ ಮನೆ ಮಾತಾಗಿರುವ ನಟಿ

ನಯನಾ ತಮ್ಮ ಪಂಚಿಂಗ್ ಡೈಲಾಗ್‌ನಿಂದ ಎಲ್ಲರ ಮನಸನ್ನು ಗೆಲ್ಲುತ್ತಾ ಇದ್ದಾರೆ ಎಂದರೆ ತಪ್ಪಾಗದು. ಇದೀಗ ಅವರು ಗರ್ಭಿಣಿ ಆಗಿದ್ದರೂ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಯಲ್ಲಮ್ಮನ ತಾಯಿ ದೇವಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಧಾರವಾಹಿ ನೋಡುಗರ ಮನಸನ್ನು ಮುಟ್ಟುತ್ತಿದ್ದು ನಯನಾ ಅವರ ನಟನೆಗೆ ಫಿದಾ ಆಗದವರೆ ಇಲ್ಲ. ಇದೀಗ ನಯನಾ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಯನಾ ಚೊಚ್ಚಲ ಮಗುವಿಗೆ ತಾಯಿ ಆಗುತ್ತಿರುವ ಖುಷಿಯಲ್ಲಿ ಇದ್ದಾರೆ.. ಹಾಗಾಗಿ ನಯನಾ ಸಖತ್ ಟ್ರೆಡಿಷನಲ್ ಆಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೀರೆ ಧರಿಸಿ ಮಿಂಚಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ವಿಡಿಯೋ ವೈರಲ್ ಆಗಿದೆ.

ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ

ಫೋಟೋದಲ್ಲಿ ನಯನಾ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.. ನಯನಾಗೆ ಸದ್ಯ 8 ತಿಂಗಳು. ಈ ನಡುವೆಯೂ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅಂಬರಾ ದಿ ಸಿಲ್ಕ್‌ ಡಿಸೈನರ್ ಸೀರೆ ಮತ್ತು ತೇಜು ಮೇಕ್‌ ಓವರ್ ಮಾಡಿದ್ದಾರೆ. ಒಟ್ಟಿನಲ್ಲಿ ನಯನಾ ತಾಯಿಯಾಗುತ್ತಿರುವ ಖುಷಿಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.. ಚೊಚ್ಚಲ ಮಗುವಿಗೆ ತಾಯಿ ಆಗುವ ಖುಷಿಯಲ್ಲಿ ನಯನಾ ಸಂಭ್ರಮಿಸಿದ್ದಾರೆ.

More from Filmibeat

English summary
Comedy khiladi Nayana photo shoot viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X