For Quick Alerts
  ALLOW NOTIFICATIONS  
  For Daily Alerts

  ಇದೇ ಶನಿವಾರ ಮತ್ತು ಭಾನುವಾರ ಕಾಮಿಡಿ ಕಿಲಾಡಿಗಳು ಫಿನಾಲೆ

  |

  ಏನೇ ಇರ್ಲಿ ನಿಮ್ ಟೆನ್ಶನ್ಸು, ಇನ್ಮೇಲೆ ಎಲ್ಲಾ ಉಡೀಸು, ಯಾಕಂದ್ರೇ ಮತ್ತೇ ಬಂದ್ರು ನಮ್ಮ ಕಾಮಿಡಿ ಚಾಂಪಿಯನ್ಸು ಎನ್ನುವ ಅಡಿಬರಹದ ಮೂಲಕ ನಗ್ಸೋದೆ ನಮ್ಮ ಸಿದ್ದಾಂತ ಅಂತ ವಾರಪೂರ್ತಿ ತಯಾರಾಗಿ ವಾರಾಂತ್ಯದಲ್ಲಿ ಇಡೀ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕಾರ್ಯಕ್ರಮ ಕೀರ್ತಿ 'ಕಾಮಿಡಿ ಕಿಲಾಡಿಗಳು'.

  ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಂತರ, ಕಾಮಿಡಿ ಕಿಲಾಡಿಗಳು ಚಾಂಪಿಯನ್‍ಶಿಪ್ ಎನ್ನುವ ಹೊಸ ಪರಿಲ್ಪನೆಯ ಮೂಲಕ ಶುರುವಾದ ಹಾಸ್ಯದ ರಣಾಂಗಣದಲ್ಲಿ ಮೂರು ಸೀಸನ್‍ನ 6 ತಂಡದ ಕಿಲಾಡಿಗಳು ನಿರಂತರ ರಂಗ ತಾಲೀಮಿನ ಮೂಲಕ ಹಾಸ್ಯಕ್ಕೆ ಮತ್ತಷ್ಟು ಮೆರುಗನ್ನ ನೀಡಿ ಸೈ ಎನಿಸಿಕೊಂಡರು.

  ಜುಲೈ 10 ರಿಂದ ಉದಯ ಟಿವಿಯಲ್ಲಿ 'ಜ್ಯೋತಿ' ಧಾರಾವಾಹಿ ಪ್ರಸಾರಜುಲೈ 10 ರಿಂದ ಉದಯ ಟಿವಿಯಲ್ಲಿ 'ಜ್ಯೋತಿ' ಧಾರಾವಾಹಿ ಪ್ರಸಾರ

  ಸುಮಾರು 37 ವಾರಗಳು ನಡೆದ ಈ ಕಾರ್ಯಕ್ರಮವು 220ಕ್ಕು ಹೆಚ್ಚು ನಾಟಕಗಳು, ಭಿನ್ನ, ವಿಭಿನ್ನ ಗೆಟಪ್‍ಗಳ ಮೂಲಕ ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳು ಹಾಗೂ ಪ್ರಯೋಗಾತ್ಮಕ ಸ್ಕಿಟ್‍ಗಳನ್ನ ಪ್ರದರ್ಶಿಸಿ ವಿಶೇಷ ಎನ್ನಿಸಿಕೊಂಡಿದೆ.

  ಕೊರೊನಾ ಸಾಂಕ್ರಾಮಿಕ ಖಾಯಿಲೆಯಿಂದ ಲಾಕ್ಡೌನ್ ಎನ್ನುವ ಕರಾಳ ಛಾಯೆ ಜಗತ್ತಿನೆಲ್ಲ ಆವರಿಸಿ, ಅದರಿಂದ ವಿಚಲಿತರಾದ ಮನಸ್ಸುಗಳಿಗೆ ಹೊಸ ಚೈತನ್ಯ ನೀಡುವಂತೆ ಮತ್ತೇ ಶುರುವಾದ ಕಾರ್ಯಕ್ರಮ ಸಂಜೀವಿನಿಯಾಯಿತೆಂದರೆ ತಪ್ಪಲ್ಲ. ಮನರಂಜನೆಯ ಮೂಲಕ ನಾಡಿನ ಮೆಚ್ಚುಗೆಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಸೀಸನ್ 2 ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ.

  ಎಂದಿನಂತೆ ನಮ್ಮ ಕಾರ್ಯಕ್ರಮದ ಹೆಮ್ಮೆಯ ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್, ಯೋಗರಾಜ್ ಭಟ್, ಹಾಗು ಕ್ರೇಜಿ ಕ್ವೀನ್ ರಕ್ಷಿತಾರವರು ಕಾರ್ಯಕ್ರಮದ ಸಾರಥ್ಯ ವಹಿಸಿದರೆ, ನಗುವಿನ ವಾರಿಯರ್ಸ್‍ಗಳ ರಾಯಭಾರಿಯಾದ ಕರ್ನಾಟಕದ ನೆಚ್ಚಿನ ನಿರೂಪಕ ಮಾಸ್ಟರ್ ಆನಂದ್‍ರವರು ಗ್ರ್ಯಾಂಡ್ ಫಿನಾಲೆಯ ನಿರೂಪಣೆಯ ಸಾರಥ್ಯ ವಹಿಸುತ್ತಿದ್ದಾರೆ.

  ಇವರೆಲ್ಲರ ಜೊತೆಗೆ ನೂರಾರು ತಂತ್ರಜ್ಞರು ಹಾಗು ಶ್ರಮಿಕರ ನಿರಂತರ ಪರಿಶ್ರಮದಲ್ಲಿ ಸಜ್ಜಾಗಿರುವ ಗ್ರ್ಯಾಂಡ್ ಫಿನಾಲೆ ವೇದಿಕೆ ಕೂಡ ಸೀಸನ್ 2 ಚಾಂಪಿಯನ್ ಶಿಪ್ ಟ್ರೋಫಿ ವಿನ್ನರ್ ಯಾರಾಗಬಹುದು ಎಂಬ ಕುತೂಹಲದ ಕ್ಷಣಗಣನೆಗೆ ಎದುರು ನೋಡುತ್ತಿದೆ.

  ಒಟ್ಟಾರೆ 6 ತಂಡಗಳ ವಿಭಿನ್ನ ಹಾಸ್ಯ ನಾಟಕಗಳ ಜೊತೆ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ಪ್ರತಿಭೆಗಳು ಕೂಡ ಕರುನಾಡನ್ನ ರಂಜಿಸಲು ಸಿದ್ದರಾಗಿದ್ದಾರೆ. ಈ ಎಲ್ಲಾ ಅವೀಸ್ಮರಣೀಯ ಕ್ಷಣಗಣಗಳಿಗೆ ಗ್ರ್ಯಾಂಡ್ ಫಿನಾಲೆ ವೇದಿಕೆ ಸಜ್ಜಾಗಿದ್ದು, ವಾರಾಂತ್ಯದ ಮನರಂಜನೆಯ ಮಹಾಪೂರ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಗ್ರ್ಯಾಂಡ್ ಫಿನಾಲೆಯ ಸಂಚಿಕೆ ಜುಲೈ 10 ಶನಿವಾರ ಹಾಗು 11 ರ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

  English summary
  Zee Kannada popular reality show comedy khiladigalu championship finale will telecast on this weekend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X