twitter
    For Quick Alerts
    ALLOW NOTIFICATIONS  
    For Daily Alerts

    'ಕಾಮಿಡಿ ಕಿಲಾಡಿಗಳು' ಮುಗಿತು, ಮತ್ತೊಂದು ಹೊಸ ಶೋ ಬಂತು

    By Bharath Kumar
    |

    Recommended Video

    ಮತ್ತೆ ಶಿವರಾಜ್ ಕೆ.ಆರ್ ಪೇಟೆ, ನಯನ, ಮನು ನಿಮ್ ಮನೆಗೆ ಬರ್ತಿದ್ದಾರೆ..! | Filmibeat Kannada

    ಜೀ ಕನ್ನಡದ ಯಶಸ್ವಿ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು ಸೀಸನ್ 2' ಈಗಷ್ಟೇ ಮುಗಿದಿದೆ. ಎರಡನೇ ಆವೃತ್ತಿಯಲ್ಲಿ ಮಡೆನೂರು ಮನು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಎರಡನೇ ಸೀಸನ್ ಮುಗಿಯುತ್ತಿದ್ದಂತೆ ಮತ್ತೊಂದು ಹೊಸ ಶೋ ಆರಂಭವಾಗುತ್ತಿದೆ.

    ಹೌದು, 'ಕಾಮಿಡಿ ಕಿಲಾಡಿಗಳು' ಎರಡು ಆವೃತ್ತಿಯ ಸ್ಪರ್ಧಿಗಳು ಒಟ್ಟಿಗೆ ಭಾಗವಹಿಸಲಿರುವ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಎಂಬ ಹೊಸ ಶೋ ಮೂಡಿ ಬರ್ತಿದೆ.

    'ಕಾಮಿಡಿ ಕಿಲಾಡಿಗಳು-2' ವಿಜೇತರಿಗೆ ಒಲಿದ ಬಹುಮಾನ ಏನು ಗೊತ್ತಾ.?'ಕಾಮಿಡಿ ಕಿಲಾಡಿಗಳು-2' ವಿಜೇತರಿಗೆ ಒಲಿದ ಬಹುಮಾನ ಏನು ಗೊತ್ತಾ.?

    ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಪ್ರೋಮೋದಲ್ಲಿ ಶಿವರಾಜ್ ಕೆ.ಆರ್ ಪೇಟೆ, ದಿವ್ಯ, ಮಡನೂರು ಮನು ಕಾಣಿಸಿಕೊಂಡಿದ್ದಾರೆ. ಇನ್ನು ವಾರಂತ್ಯದಲ್ಲಿ ಮತ್ತೆ ಎಲ್ಲರನ್ನ ನಗಿಸಲು ಮತ್ತೆ ಕಿಲಾಡಿಗಳು ಬರ್ತಿರೋದಕ್ಕೆ ಟಿವಿ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

    Comedy Khiladigalu Championship starts from july 7th

    ಅಂದ್ಹಾಗೆ, ಈ ಕಾರ್ಯಕ್ರಮದಲ್ಲೂ ಅದೇ ತೀರ್ಪುಗಾರರು ಮುಂದುವರೆಯಲಿದ್ದಾರೆ. ನವರಸ ನಾಯಕ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಪ್ರೇಮ್ ಹಾಗೂ ನಿರೂಪಕ ಆನಂದ್ ಅವರೇ ಇರಲಿದ್ದಾರೆ.

    ಜುಲೈ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

    English summary
    Zee Kannada channel presenting new tv show ''Comedy Khiladigalu Championship'' from july 7th onwards.
    Monday, June 25, 2018, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X