»   » 'ಕಾಮಿಡಿ ಕಿಲಾಡಿ ದಿವ್ಯಶ್ರೀ'ಗೆ ಸಿಕ್ಕಿದೆ ಸಿನಿಮಾ ಆಫರ್

'ಕಾಮಿಡಿ ಕಿಲಾಡಿ ದಿವ್ಯಶ್ರೀ'ಗೆ ಸಿಕ್ಕಿದೆ ಸಿನಿಮಾ ಆಫರ್

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ದಿವ್ಯ ಶ್ರೀ ಕೂಡ ಒಬ್ಬರು. ತಮ್ಮ ಡಿಫರೆಂಟ್ ಮ್ಯಾನರಿಸಂ ಮೂಲಕ ಎಲ್ಲರ ಗಮನ ಸೆಳೆದಿದ್ದ ದಿವ್ಯ ಅವರಿಗೆ ಈಗ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

'ಪುಣ್ಯಾತ್ಗಿತ್ತಿಯರು' ಎಂಬ ಹೊಸ ಸಿನಿಮಾದಲ್ಲಿ ದಿವ್ಯ ನಾಯಕಿಯಾಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ದಿವ್ಯ ಜೊತೆ ಇನ್ನು ಮೂರು ನಾಯಕಿಯರು ನಟಿಸಲಿದ್ದಾರಂತೆ.

Comedy Khiladigalu contestant Divyashree to make Sandalwood debut

ದಿವ್ಯ ಬಾಯ್ಬಡುಕಿ ಹುಡುಗಿಯಾಗಿ ಖಡಕ್ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ 'ಪಾಸಿಬಲ್' ಸಿನಿಮಾವನ್ನು ಮಾಡಿದ್ದ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

'ಕಾಮಿಡಿ ಕಿಲಾಡಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕೆ.ಆರ್ ಪೇಟೆ ಮತ್ತು ಲೋಕೇಶ್ ಈಗಾಗಲೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ದಿವ್ಯ ಕೂಡ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.

English summary
Zee Kannada Channel's Comedy Khiladigalu contestant Divyashree to make Sandalwood Debut

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada