ನಿಶ್ಚಿತಾರ್ಥ ಮಾಡಿಕೊಂಡ 'ಕಾಮಿಡಿ ಕಿಲಾಡಿ'ಗಳಾದ ದಿವ್ಯಶ್ರೀ-ಗೋವಿಂದೇ ಗೌಡ

ಒಟ್ಟಿಗೆ ತೆರೆ ಹಂಚಿಕೊಂಡ ಸಿನಿಮಾ ನಟ-ನಟಿಯರು, ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಕಾಮನ್. ಆದರಿಲ್ಲಿ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದ ಇಬ್ಬರು ಸ್ಪರ್ಧಿಗಳು ಹೊಸ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ.

ಆ ಇಬ್ಬರು ಸ್ಪರ್ಧಿಗಳು ಬೇರೆ ಯಾರೂ ಅಲ್ಲ. ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಗೋವಿಂದೇಗೌಡ ಮತ್ತು ದಿವ್ಯಶ್ರೀ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದ ಗೋವಿಂದೇಗೌಡ ಮತ್ತು ದಿವ್ಯಶ್ರೀ ಪರಸ್ಪರ ಪ್ರೀತಿಸುತ್ತಿದ್ದಾರೆ. ಮದುವೆಯಾಗಲು ಮುಂದಾಗಿರುವ ಇವರಿಬ್ಬರ ನಿಶ್ಚಿತಾರ್ಥ ನಿನ್ನೆಯಷ್ಟೇ ನೆರವೇರಿದೆ.

ದಿವ್ಯಶ್ರೀ ಮತ್ತು ಗೋವಿಂದೇಗೌಡ ರವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ ನೋಡಿರಿ...

ಉಂಗುರ ಬದಲಿಸಿಕೊಂಡ ಜೋಡಿ

ಉಂಗುರ ಬದಲಿಸಿಕೊಂಡ ಜೋಡಿ

ಕಾಮಿಡಿ ಕಿಲಾಡಿಗಳಾದ ಗೋವಿಂದೇಗೌಡ ಮತ್ತು ದಿವ್ಯಶ್ರೀ ನಿಶ್ಚಿತಾರ್ಥ ಸಮಾರಂಭ ನಿನ್ನೆ.. ಅಂದರೆ ಭಾನುವಾರ ಬೆಂಗಳೂರಿನ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಿವ್ಯಶ್ರೀ ಮತ್ತು ಗೋವಿಂದೇಗೌಡ ಉಂಗುರ ಬದಲಾಯಿಸಿಕೊಂಡರು.

ಕಾಮಿಡಿ ಕಿಲಾಡಿಗಳು ಸಾಕ್ಷಿ

ಕಾಮಿಡಿ ಕಿಲಾಡಿಗಳು ಸಾಕ್ಷಿ

ದಿವ್ಯಶ್ರೀ ಮತ್ತು ಗೋವಿಂದ ಗೌಡ ನಿಶ್ಚಿತಾರ್ಥ ಸಮಾರಂಭಕ್ಕೆ ಅನೀಶ್ ಸೇರಿದಂತೆ ಕಾಮಿಡಿ ಕಿಲಾಡಿಗಳ ದಂಡೇ ಸಾಕ್ಷಿಯಾಗಿತ್ತು. ನವ ಜೋಡಿಗೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಶರಣಯ್ಯ ಶುಭ ಹಾರೈಸಿದರು.

ಸ್ನೇಹದಿಂದ ಪ್ರೀತಿ

ಸ್ನೇಹದಿಂದ ಪ್ರೀತಿ

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪರಿಚಯವಾದ ದಿವ್ಯಶ್ರೀ ಮತ್ತು ಗೋವಿಂದೇಗೌಡ ಉತ್ತಮ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಈಗ ಪ್ರೀತಿ ಮದುವೆ ಹಂತದವರೆಗೂ ಬಂದಿದೆ.

ಕುಟುಂಬದ ಸಮ್ಮತಿ ಮೇರೆಗೆ ನಿಶ್ಚಿತಾರ್ಥ

ಕುಟುಂಬದ ಸಮ್ಮತಿ ಮೇರೆಗೆ ನಿಶ್ಚಿತಾರ್ಥ

ದಿವ್ಯಶ್ರೀ ಮತ್ತು ಗೋವಿಂದೇಗೌಡ ಪ್ರೀತಿಗೆ ಉಭಯ ಕುಟುಂಬದವರು ಹಿಂದೆ ಮುಂದೆ ನೋಡದೆ ಸಮ್ಮತಿ ಕೊಟ್ಟಿದ್ದಾರೆ. ಕುಟುಂಬಗಳ ಮಧ್ಯೆ ಕಳೆದ ಸೆಪ್ಟೆಂಬರ್ ನಲ್ಲಿ ಮಾತುಕತೆ ನಡೆದಿದ್ದು ಇದೀಗ ನಿಶ್ಚಿತಾರ್ಥ ನೆರವೇರಿದೆ.

ಮದುವೆ ಯಾವಾಗ.?

ಮದುವೆ ಯಾವಾಗ.?

ಇನ್ನೆರಡು ತಿಂಗಳಲ್ಲಿ ಅಂದರೆ ಮಾರ್ಚ್ 14 ರಂದು ದಿವ್ಯಶ್ರೀ-ಗೋವಿಂದೇಗೌಡ ಮದುವೆ ನಡೆಯಲಿದೆ. ಶೃಂಗೇರಿಯಲ್ಲಿ ವಿವಾಹ ಮಹೋತ್ಸವ ನಡೆಯಲಿದ್ದು, ಶಾರದಾಂಬೆಯ ಆಶೀರ್ವಾದ ಪಡೆದು ಹೊಸ ಜೀವನಕ್ಕೆ ಈ ಜೋಡಿ ಕಾಲಿಡಲಿದ್ದಾರೆ.

ಸಿನಿಮಾಗಳಲ್ಲಿ ಅವಕಾಶ

ಸಿನಿಮಾಗಳಲ್ಲಿ ಅವಕಾಶ

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಮುಗಿದ ಮೇಲೆ ದಿವ್ಯಶ್ರೀ ಮತ್ತು ಗೋವಿಂದೇಗೌಡಗೆ ಸ್ಯಾಂಡಲ್ ವುಡ್ ನಿಂದ ಹಲವು ಆಫರ್ ಗಳು ಹುಡುಕಿಕೊಂಡು ಬಂದವು. 'ಪುಣ್ಯತ್ ಗಿತ್ತಿಯರು' ಚಿತ್ರದಲ್ಲಿ ದಿವ್ಯಶ್ರೀ ಅಭಿನಯಿಸಿದ್ದಾರೆ. ಇನ್ನು ಗೋವಿಂದೇಗೌಡ 'ಕೆಜಿಎಫ್' ಮತ್ತು 'ಭರಾಟೆ' ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Comedy Khiladigalu fame Govinde Gowda and Divya Shree got engaged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X