ಧರೆಗಿಳಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಜೂ.ನಯನಾ.. ಸಂಭ್ರಮವೋ ಸಂಭ್ರಮ!

By ಫಿಲ್ಮಿಬೀಟ್ ಡೆಸ್ಕ್

Comedy kiladi Nayana baby girl: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ತಮ್ಮ ನಟನೆಯಿಂದ ಮಾತುಗಳಿಂದಲೇ ಜನಪ್ರಿಯರಾಗಿದ್ದರು. ರಿಯಾಲಿಟಿ ಶೋಗಳಿಂದ ಫೇಮಸ್ ಆಗಿರೋ ನಟಿ ನಯನಾ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿಯೇ ಜೂ.ನಯನಾರನ್ನು ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗಷ್ಟೇ ಕಿರಿತೆರೆಯ ತಂಡ ನಯನಾಗೆ ಸೀಮಂತ ಕಾರ್ಯವನ್ನು ಮಾಡಿತ್ತು. ಈಗ ಇವರಿಗೆ ಹೆಣ್ಣು ಮಗು ಜನಿಸಿದ್ದು, ನೆಟ್ಟಿಗರು ಜೂ. ನಯನಾಗೆ ಸ್ವಾಗತ ಎಂದು ಶುಭ ಕೋರಿದ್ದಾರೆ.

Comedy Khiladigalu Fame Nayana

ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ತಮ್ಮ ಜೋರು ಧ್ವನಿಯಲ್ಲಿ ಕಿರು ವೀಕ್ಷಕರಿಗೆ ಸಖತ್ ಕಾಮಿಡಿ ಕಿಕ್ ಕೊಟ್ಟಿದ್ದರು. ಈಗ ತಾಯ್ತನ ಸಂಭ್ರಮದಲ್ಲಿದ್ದಾರೆ.

ನಿನ್ನೆ (ನವೆಂಬರ್ 1) ಕನ್ನಡ ರಾಜ್ಯೋತ್ಸವದ ದಿನದಂದೇ ನಯನಾ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ನಯನಾ ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ಸ್ವತ: ನಯನಾ ಶೇರ್ ಮಾಡಿಕೊಂಡಿದ್ದರು. ಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಹೇಳಿದ್ದರು.

ಅಂದ್ಹಾಗೆ, ನಯನಾ ಹುಬ್ಬಳ್ಳಿ ಮೂಲದವರು. ಬಡ ಅಂತ ಮಾತಾಡೋ ಈ ಪ್ರತಿಭಾನ್ವಿತ ನಟಿಗೆ ಚಿತ್ರರಂಗದ ಹಿನ್ನೆಲೆ ಇಲ್ಲ. ಆದರೂ ತನ್ನ ಪ್ರತಿಭೆಯಿಂದಲೇ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಯಶಸ್ಸನ್ನು ಕಂಡಿದ್ದಾರೆ. ರಿಯಾಲಿಟಿ ಶೋ ಅಷ್ಟೇ ಅಲ್ಲದೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ನಯನಾ ಕೆಲವು ವರ್ಷಗಳ ಹಿಂದಷ್ಟೇ ಶರತ್ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನಯನಾ ವೈವಾಹಿಕ ಜೀವನ ಸುಂದರವಾಗಿದೆ. ಇದೇ ವೇಳೆ ತಮ್ಮ ಕುಟುಂಬಕ್ಕೆ ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವ ನಯನಾ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

More from Filmibeat

English summary
Comedy Khiladigalu Fame Nayana Umuchagi Blessed With Cute Baby Girl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X