'ಮುಂಗಾರು ಮಳೆ' ಮತ್ತು 'ದುನಿಯಾ' ಮಿಕ್ಸ್: ನೋಡಿ... ಹಲ್ಲು ಬಿಡಿ...
2006ರಲ್ಲಿ ತೆರೆಕಂಡ 'ಮುಂಗಾರು ಮಳೆ' ಹಾಗೂ 2007ರಲ್ಲಿ ತೆರೆಕಂಡ 'ದುನಿಯಾ' ಸ್ಯಾಂಡಲ್ ವುಡ್ ನ ಬಿಗೆಸ್ಟ್ ಬ್ಲಾಕ್ ಬಸ್ಟರ್ ಗಳು.
'ಮುಂಗಾರು ಮಳೆ' ನವಿರಾದ ಪ್ರೇಮ ಕಹಾನಿಯನ್ನು ಹೊಂದಿದ್ದರೆ, 'ದುನಿಯಾ' ಅಪ್ಪಟ ರಾ ಫೀಲ್ ಇರುವ ಸಿನಿಮಾ. ಈ ಎರಡೂ ಚಿತ್ರಗಳನ್ನು ಮಿಕ್ಸ್ ಮಾಡಿದ್ರೆ ಹೇಗಾಗಬಹುದು.?
ಇಲ್ಲಿಯವರೆಗೂ ಯಾರಿಗೂ ಬಾರದ ಈ ಐಡಿಯಾ 'ಕಾಮಿಡಿ ಕಿಲಾಡಿಗಳು' ಡೈರೆಕ್ಟರ್ ಗೆ ಹೊಳೆದಿದೆ. ಅದರ ಪರಿಣಾಮ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆಯಲ್ಲಿ 'ಮುಂಗಾರು ದುನಿಯಾ' ಎಂಬ ಸ್ಪೆಷಲ್ ಸ್ಕಿಟ್ ಪ್ರದರ್ಶನ ಮಾಡಲಾಗಿದೆ.

'ಮುಂಗಾರು-ದುನಿಯಾ' ಪಾತ್ರಧಾರಿಗಳು...
'ಮುಂಗಾರು-ದುನಿಯಾ' ಸ್ಕಿಟ್ ಗಾಗಿ ಗೋವಿಂದೇ ಗೌಡ, ದಿವ್ಯ, ನಯನ, ಹಿತೇಶ್ ಹಾಗೂ ಲೋಕೇಶ್ ಬಣ್ಣ ಹಚ್ಚಿ ಎಲ್ಲರಿಗೂ ಕಾಮಿಡಿ ಕಚಗುಳಿ ನೀಡಿದ್ದಾರೆ. ['ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!]

ಎದ್ದು-ಬಿದ್ದು ನಕ್ಕ ಯೋಗರಾಜ್ ಭಟ್
'ಮುಂಗಾರು-ದುನಿಯಾ' ಸ್ಕಿಟ್ ನೋಡಿ 'ಮುಂಗಾರು ಮಳೆ' ನಿರ್ದೇಶಕ ಯೋಗರಾಜ್ ಭಟ್ ಎದ್ದು-ಬಿದ್ದು ನಕ್ಕಿದ್ದಾರೆ. [Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?]

ಕಾಮಿಡಿ ಪಂಚ್ ಗೆ ಜಗ್ಗೇಶ್ ಕಿಲ ಕಿಲ
'ಮುಂಗಾರು-ದುನಿಯಾ' ಸ್ಕಿಟ್ ನಲ್ಲಿ ಇರುವ ಕಾಮಿಡಿ ಪಂಚ್ ನೋಡಿ 'ಕಾಮಿಡಿ ಕಿಲಾಡಿಗಳು' ತೀರ್ಪುಗಾರರ ಸ್ಥಾನದಲ್ಲಿ ಇರುವ ಜಗ್ಗೇಶ್ ಹಾಗೂ ರಕ್ಷಿತಾ ಕಿಲ ಕಿಲ ಅಂತ ನಕ್ಕಿದ್ದಾರೆ.['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

ಸಣ್ಣ ಝಲಕ್ ಇಲ್ಲಿದೆ ನೋಡಿ....
'ಮುಂಗಾರು-ದುನಿಯಾ' ಹೇಗೆ ಮೂಡಿಬಂದಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ, ಸಣ್ಣ ಝಲಕ್ ನಾವು ತೋರಿಸ್ತೀವಿ... ಈ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ....

ಇಂದು ಸಂಜೆ ಮಿಸ್ ಮಾಡ್ಬೇಡಿ...
'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಇಂದು ಸಂಜೆ 6 ಗಂಟೆಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಮಿಸ್ ಮಾಡದೆ ನೋಡಿ...


Click it and Unblock the Notifications











