For Quick Alerts
  ALLOW NOTIFICATIONS  
  For Daily Alerts

  Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!

  By ಎಸ್ ಸುಮಂತ್
  |

  ಜೀ ಕನ್ನಡದಲ್ಲಿ ವೀಕೆಂಡ್ ಮಸ್ತ್ ಮನರಂಜನೆ ಸಿಗುತ್ತಿದೆ. ಅದರಲ್ಲೂ ಕಾಮಿಡಿ ಕಿಲಾಡಿಗಳನ್ನು ನೋಡುವುದೆಂದರೆ ಖುಷಿಯೋ ಖುಷಿ. ವಾರಪೂರ್ತಿ ಎಷ್ಟೇ ಟೆನ್ಶನ್ ಇದ್ದರು, ವಾರದಲ್ಲಿ ಎರಡು ದಿನ ಆ ನೋಡಿದರೆ ಮುಗೀತು. ಮನಸ್ಸು ಹಗುರವಾಗುತ್ತೆ, ನಗು ಮೂಡುತ್ತೆ. ಪ್ರತಿವಾರವೂ ಕಲಾವಿದರು ವಿಭಿನ್ನವಾಗಿ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಪ್ರತಿಭೆಗಳಿಗೆ ವೇದಿಕೆಯಾಗುವುದರ ಜೊತೆಗೆ ನೋಡುಗರಿಗೂ ನಂಬರ್ ಒನ್ ಶೋ ಆಗಿದೆ.

  ವಾರದ ಟಿಆರ್‌ಪಿ ಲಿಸ್ಟ್ ನೋಡುವಾಗಲೂ ಕಾಮಿಡಿ ಕಿಲಾಡಿಗಳು ಶೋ ಮೊದಲ ಸ್ಥಾನದಲ್ಲಿಯೇ ಇರಲಿದೆ. ಕಾಮಿಡಿ ಕಿಲಾಡಿಗಳು ಸೀಸನ್ 3ರ ತನಕವೂ ಅದೇ ಡಿಮ್ಯಾಂಡ್ ಉಳಿಸಿಕೊಂಡಿತ್ತು. ಈಗ ಸೀಸನ್ 4ರಲ್ಲಿಯೂ ಅದೇ ಡಿಮ್ಯಾಂಡ್ ಉಳಿಸಿಕೊಂಡಿದೆ. ಪ್ರತಿ ಸಲದಂತೆ ಅರ್ಜುನ್ ಜನ್ಯ ಮತ್ತು ಅನುಶ್ರೀ ಕಾಮಿಡಿ ಇದರಲ್ಲೂ ಮುಂದುವರೆದಿದೆ.

  ಅರ್ಜುನ್ ಜನ್ಯ ಕಾಮಿಡಿಗೆ ಜಡ್ಜ್‌ಗಳು ಫಿದಾ

  ಅರ್ಜುನ್ ಜನ್ಯ ಕಾಮಿಡಿಗೆ ಜಡ್ಜ್‌ಗಳು ಫಿದಾ

  ಅರ್ಜುನ್ ಜನ್ಯಾ ಹಾಗೂ ಅನುಶ್ರೀ ಕಾಂಬಿನೇಷನ್ ಎಷ್ಟು ನಗು ತರಿಸುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ವೇದಿಕೆ ಮೇಲೆ ಇಬ್ಬರು ಪ್ರೇಮಿಗಳ ರೀತಿಯೇ ಕಾಲೆಳೆಯುತ್ತಾ ಇರುತ್ತಾರೆ. ಇಷ್ಟು ವರ್ಷ ಅನುಶ್ರೀ ತನ್ನ ಪ್ರೀತಿಯನ್ನು ಅರ್ಜುನ್ ಜನ್ಯಾ ಬಳಿ ಹೇಳಿದ್ದೇ ಆಯ್ತು. ಆದರೆ ಒಪ್ಪಿಕೊಳ್ಳುವುದಕ್ಕೆ ಜನ್ಯಾ ರೆಡಿ ಇಲ್ಲ. ಈ ಬಾರಿಯ ಸೀಸನ್‌ನಲ್ಲಿ ಅದು ಉಲ್ಟಾ. ಅನುಶ್ರೀಗೆ ಅರ್ಜುನ್ ಜನ್ಯಾ ಅವರೇ ಪ್ರಪೋಸ್ ಮಾಡಿದ್ದಾರೆ.

  ಕ್ರೇಜಿಸ್ಟಾರ್ ಮಾತಿಗೆ ಅರ್ಜುನ್ ಜನ್ಯಾ ಸಮ್ಮತಿ

  ಕ್ರೇಜಿಸ್ಟಾರ್ ಮಾತಿಗೆ ಅರ್ಜುನ್ ಜನ್ಯಾ ಸಮ್ಮತಿ

  ಇಷ್ಟು ದಿನ ಪ್ರಪೋಸ್ ವಿಚಾರವಾಗಿ ನಡೆದುಕೊಂಡು ಬಂದ ರೀತಿ ಎಲ್ಲರಿಗೂ ಗೊತ್ತು. ಅದಕ್ಕೆ ಕ್ರೇಜಿಸ್ಟಾರ್ ಇವತ್ತಿನ ವೇದಿಕೆಯಲ್ಲಿ ಎಲ್ಲದನ್ನೂ ಉಲ್ಟಾ ಮಾಡಿದ್ದಾರೆ. ಅನುಶ್ರೀಗೆ ಖುಷಿಯಾಗುವಂತ ಪ್ಲ್ಯಾನ್ ಮಾಡಿದ್ದಾರೆ. ನೀನು ಅನುಶ್ರೀಗೆ ಪ್ರಪೋಸ್ ಮಾಡಬೇಕು ಎಂದ ಕೂಡಲೇ ಕ್ರೇಜಿ ಸ್ಟಾರ್ ಮಾತಿಗೆ ಮ್ಯೂಸಿಕಲ್ ಮಾಂತ್ರಿಕ ಅಸ್ತು ಎಂದಿದ್ದಾರೆ. ಜೊತೆಗೆ ಪ್ರಪೋಸ್ ಮಾಡಲು ರೆಡಿಯಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದೇನೋ ಅನುಶ್ರೀಗೆ ಖುಷಿಯಾಗಲಿ ಅಂತ. ಆದರೆ ಅನುಶ್ರೀಗೆ ನಗುವಿಗಿಂತ ಅಳು ಬಂದಿದ್ದೆ ಹೆಚ್ಚು.

  ಅನುಶ್ರೀಗೆ ಕಣ್ಣೀರು ಹಾಕಿಸಿದ ಅರ್ಜುನ್ ಜನ್ಯಾ

  ಅನುಶ್ರೀಗೆ ಕಣ್ಣೀರು ಹಾಕಿಸಿದ ಅರ್ಜುನ್ ಜನ್ಯಾ

  ಕ್ರೇಜಿ ಸ್ಟಾರ್ ಪ್ರಪೋಸ್ ಮಾಡು ಅಂದಿದ್ದೇನೋ ಸರಿ. ಆದರೆ ಹೇಳಿದ ರೀತಿ ಹೇಗಿತ್ತು ಗೊತ್ತಾ. ಹೆಣದ ಮುಂದೆ ಕೂತು ಪ್ರೀತಿ ಹೇಳಿಕೊಂಡರೆ ಹೇಗಿರುತ್ತೆ. ಅದೇ ಚಾಲೆಂಜನ್ನು ಕ್ರೇಜಿ ಸ್ಟಾರ್ ಕೊಟ್ಟಿದ್ದು. ನಟರಾಜ ಸತ್ತವನಂತೆ ಬಿದ್ದಿದ್ದ. ಅವನ ಮುಂದೆ ಕೂತು ಅಳುತ್ತಾ ಅನುಶ್ರೀಗೆ ಪ್ರಪೋಸ್ ಮಾಡಬೇಕು ಎಂದಾಗ, ಅರ್ಜುನ್ ಜನ್ಯ ಅದೇ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿದರು. ಅಯ್ಯೋ ಇಷ್ಟು ವರ್ಷ ನಿನ್ನ ಹಿಂದೆ ಬಿದ್ದಿದ್ದೀನಿ ಒಪ್ಪಿಕೊಳ್ಳಮ್ಮ. ಎಷ್ಟು ಚೆನ್ನಾಗಿ ಕಾಣ್ತಾ ಇದ್ದೀಯಮ್ಮ. ನನ್ನ ಯಾಕಮ್ಮ ಲವ್ ಮಾಡ್ತಾ ಇದ್ದೀಯಾ. ಆರು ವರ್ಷದಿಂದ ಪ್ರಪೋಸ್ ಮಾಡುತ್ತಾ ಇದ್ದೀನಿ ಅಂತ ಸಾವಿನ ಮನೆಯಲ್ಲಿ ಹೇಗೆ ಅಳುತ್ತಾರೋ ಆ ರೀತಿ ಅಳುತ್ತಲೇ ಪ್ರಪೋಸ್ ಮಾಡಿದ್ದಾರೆ. ಅವರ ಅಳು ನೋಡಿ ಅನುಶ್ರೀ ಕೂಡ ಕಣ್ಣೀರು ಹಾಕಿದ್ದಾರೆ.

  ಅರ್ಜುನ್ ಜನ್ಯಾ ಪ್ರಪೋಸ್‌ಗೆ ಚಪ್ಪಾಳೆ

  ಅರ್ಜುನ್ ಜನ್ಯಾ ಪ್ರಪೋಸ್‌ಗೆ ಚಪ್ಪಾಳೆ

  ಇನ್ನು ಈ ರೀತಿಯ ಪ್ರಪೋಸ್ ಮಾಡಿದ್ದು ಹೊಸ ರೀತಿಯಲ್ಲಿ ಇತ್ತು. ಹೀಗಾಗಿ ಎಲ್ಲರೂ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ರವಿಚಂದ್ರನ್ ಸರ್ ನಿಮ್ಮ ಐಡಿಯಾ ಸೂಪರ್ ಎಂದಿದ್ದಾರೆ. ರವಿಮಾಮ ಎಂದರೆ ಹಾಗಲ್ಲವೇ. ಪ್ರೀತಿ ಪ್ರೇಮದ ವಿಚಾರದಲ್ಲಿ ಹೊಸತನವೇ ತುಂಬಿ ತುಳುಕುತ್ತದೆ. ಇನ್ನು ಅರ್ಜುನ್ ಜನ್ಯಾ ಹಾಗೂ ಅನುರ್ಶಿ ಆಕ್ಟಿಂಗ್ ಎಲ್ಲರೂ ಬೆಂಕಿ, ಸೂಪರ್ ಎಂದೇ ಕಮೆಂಟ್ ಮಾಡಿದ್ದಾರೆ.

  English summary
  Comedy Khiladigalu Reality Show October 9th Episode Written Update. Here is the details.
  Sunday, October 9, 2022, 23:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X