twitter
    For Quick Alerts
    ALLOW NOTIFICATIONS  
    For Daily Alerts

    Comedy Khiladigalu Season 4: ರಾಘವೇಂದ್ರ ಆಚಾರ್ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ವೇದಿಕೆ!

    By ಎಸ್ ಸುಮಂತ್
    |

    ಜೀ ಕನ್ನಡದಲ್ಲಿ ವೀಕೆಂಡ್ ಮಸ್ತ್ ಮಜಾ ಶುರುವಾಗಿದೆ. ಅದು ಕಾಮಿಡಿ ಕಿಲಾಡಿಗಳು ಶೋ. ವಾರಪೂರ್ತಿ ಏನೇ ಬೇಸರ ಇದ್ದರು, ಏನೇ ಸ್ಟ್ರೆಸ್ ಇದ್ದರು ಈ ಶೋನಲ್ಲಿರುವ ಸ್ಪರ್ಧಿಗಳ ಕಾಮಿಡಿಯನ್ನು ಸ್ವಲ್ಪ ಹೊತ್ತು ನೋಡಿದರೂ ಸಾಕು ಮನಸ್ಸಾರೆ ನಕ್ಕು ಬಿಡುತ್ತೇವೆ. ಮನಸ್ಸು ಹಗುರವಾಗಿ ಬಿಡುತ್ತೆ. ಅದರಲ್ಲೂ ಕಾಮಿಡಿ ಅಂದ್ರೆ ರಾಘವೇಂದ್ರ ಆಚಾರ್ ಅವರ ಕಾಮಿಡಿಗೆ ಫಿದಾ ಆಗದವರ ಜನರಿಲ್ಲ ನೋಡಿ.

    ರಾಘವೇಂದ್ರ ಆಚಾರ್ ರಾಯಚೂರಿನವರು. ಅವರಿರುವುದೇ ಸೀರಿಯಸ್ ಆಗಿ, ಮಾತನಾಡುವುದೇ ಕಾಮಿಡಿಯಾಗಿ. ಆದರೆ ಅದರಲ್ಲಿಯೂ ಜನ ನಕ್ಕು ನಕ್ಕು ಸುಸ್ತಾಗುತ್ತಾರೆ. ಅಷ್ಟು ನಗಿಸುತ್ತಾರೆ. ಕೆಲವೊಂದು ವಿಚಾರ ನಮ್ಮ ನಡುವೆಯೇ ನಡೆದರು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಅದನ್ನೇ ಕಾಮಿಡಿ ಟಾಪಿಕ್ ಮಾಡಿಕೊಂಡಿರುವ ರಾಘವೇಂದ್ರ ನಗುವಿನ ಟಾನಿಕ್ ನೀಡುತ್ತಿದ್ದಾರೆ. ಈ ವಾರ ಅವರು ತೆಗೆದುಕೊಂಡಿದ್ದು ಕಾಯಿಲೆ ಮತ್ತು ಗೋ ಬ್ಯಾಕ್ ಚಳುವಳಿಯ ಕಾನ್ಸೆಪ್ಟ್. ಅದರ ಹಿಂದೆ ಹಿಂಗೂ ಇರುತ್ತಾ ಗುರು ಅಂತ ನಕ್ಕವರೇ ಜಾಸ್ತಿ.

    ರಾಘವೇಂದ್ರ ಕಾಮಿಡಿಗೆ ನಕ್ಕು ಸುಸ್ತೋ ಸುಸ್ತು

    ರಾಘವೇಂದ್ರ ಕಾಮಿಡಿಗೆ ನಕ್ಕು ಸುಸ್ತೋ ಸುಸ್ತು

    ಕಾಮಿಡಿ ಅಂದ್ರೆ ಮೊದಲು ನೆನಪಾಗುವುದೇ ಪ್ರಾಣೇಶ್. ಎಷ್ಟೇ ಹಾಸ್ಯ ಕಲಾವಿದರು ಬಂದ್ರು ಪ್ರಾಣೇಶ್ ಕಾಮಿಡಿಯನ್ನು ಹಿಂದಿಕ್ಕುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ಪ್ರಾಣೇಶ್ ಮಾಡುವ ಕಾಮಿಡಿಯ ಸ್ಟೈಲೇ ಡಿಫ್ರೆಂಟ್. ಆದರೆ ಪ್ರಾಣೇಶ್‌ರನ್ನೇ ನೆನಪಿಸುವಂತ ಅದ್ಭುತ ಕಾಮಿಡಿ ಮಾಡುತ್ತಿರುವುದು ರಾಘವೇಂದ್ರ ಆಚಾರ್. ಸೀರಿಯಸ್ ಆಗಿ ಮಾತನಾಡಿದರು. ಅದರಲ್ಲಿ ಹಾಸ್ಯ ರಸಾಯನವೇ ಅಡಗಿರುತ್ತೆ. ಕೈಕಟ್ಟಿ, ಮುಖದಲ್ಲೊಂದಿಷ್ಟು ಸೀರಿಯಸ್‌ನೆಸ್ ಇಟ್ಟುಕೊಂಡು, ಮೇಷ್ಟ್ರು ಪಾಠ ಮಾಡಿದ್ದಂತೆ ಕಾಮಿಡಿ ಮಾಡುತ್ತಾ ಹೋದರೂ ರಾಘವೇಂದ್ರ. ಅವರ ಮಾತುಗಳು ನಗಿಸಿ, ನಲಿಸುತ್ತವೆ.

    ಇಂಗ್ಲಿಷ್ ಇಷ್ಟನಾ ಕನ್ನಡದ ಕಾಯಿಲೆ ಇಷ್ಟನಾ?

    ಇಂಗ್ಲಿಷ್ ಇಷ್ಟನಾ ಕನ್ನಡದ ಕಾಯಿಲೆ ಇಷ್ಟನಾ?

    ಇತ್ತೀಚೆಗೆಂತು ನಾನಾ ರೀತಿಯ ಕಾಯಿಲೆಗಳನ್ನು ಮನುಷ್ಯ ನೋಡಿ ಬಿಟ್ಟಿದ್ದಾನೆ. ಆ ಕಾಯಿಲೆಯಲ್ಲಿ H1N1, ಕೊರೊನಾದಂತ ಹಲವು ಕಾಯಿಲೆಗಳಿವೆ. ಈ ಎಲ್ಲಾ ಕಾಯಿಲೆಗಳನ್ನು ಕನ್ನಡದಲ್ಲ ಹೇಳಿದಾಗ ಏನೋ ಈ ರೀತಿಯಾದಂತ ಕಾಯಿಲೆ ಅಂತಾರೆ. ಹಂದಿಜ್ವರ ಎಂದಾಗ ಬೈಯ್ಯುವ ಜನ ಅದನ್ನೇ ಇಂಗ್ಲಿಪ್‌ನಲ್ಲಿ ಹೇಳಿದಾಗ ನೀಡುವ ಗೌರವವೇ ಬೇರೆ. ಹೀಗೆ ತನ್ನದೇ ಸ್ಟೈಲ್ ನಲ್ಲಿ ರಾಘವೇಂದ್ರ ಕಾಯಿಲೆಗಳನ್ನು ಒಪ್ಪಿಸಿದ್ದಾನೆ. ಇನ್ನು ಆಗಾಗ ಬೆಂಗಳೂರು ಕನ್ನಡ ಮಾತನಾಡಿ, ದಿಢೀರನೇ ತಮ್ಮ ರಾಯಚೂರು ಭಾಷೆಗೆ ತಿರುಗುತ್ತಾನೆ. ಇದು ಎಲ್ಲೂ ಕೂಡ ಚೇಂಜಸ್ ಎನಿಸಲ್ಲ. ಬದಲಿಗೆ ಆ ಕಾಮಿಡಿಗೆ ಆ ಭಾಷೆಯೇ ಬೇಕಿತ್ತು ಎನಿಸದೇ ಇರುವುದಿಲ್ಲ.

    ಹಳ್ಳಿಯಲ್ಲೂ ಟ್ರಂಪ್‌ಗೆ ಗೋಬ್ಯಾಕ್ ಬಿಸಿ

    ಹಳ್ಳಿಯಲ್ಲೂ ಟ್ರಂಪ್‌ಗೆ ಗೋಬ್ಯಾಕ್ ಬಿಸಿ

    ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ಚಳುವಳಿಗಳು ಶುರುವಾಗಿ ಬಿಡುತ್ತವೆ. ಅದರಲ್ಲೂ ನಮಗೂ ಅದಕ್ಕೂ ಸಂಬಂಧವೇ ಇಲ್ಲದೆ ಇರುವ ಅಭಿಯಾನವನ್ನು ನಾವೂ ಪೋಸ್ಟ್ ಮಾಡಿರುತ್ತೇವೆ. ಮನುಷ್ಯನ ಜೀವನದಲ್ಲಿ ಸೋಶಿಯಲ್ ಮೀಡಿಯಾದ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದಕ್ಕೆ ಇದು ಕೂಡ ಒಂದು ಉದಾಹರಣೆಯೇ. ಒಮ್ಮೆ ಟ್ರಂಪ್ ಗೋ ಬ್ಯಾಕ್ ಅಭಿಯಾನ ಗುಜರಾತ್ ನಲ್ಲಿ ಶುರುವಾಗಿತ್ತು. ಆದರೆ ಅದೇ ಸಮಯದಲ್ಲಿ ರಾಘವೇಂದ್ರ ಫ್ರೆಂಡ್ ಕೂಡ ಟ್ರಂಪ್ ಗೋ ಬ್ಯಾಕ್ ಅಂತ ಬರೆದು ಪೋಸ್ಟ್ ಹಾಕಿದ್ದನಂತೆ. ಅದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮವೊಂದರ ಅಂಗನವಾಡಿಯ ಗೋಡೆ ಮೇಲೆ. ಟ್ರಂಪ್ ಅಲ್ಲಿಗೆ ಬರೋದು ಯಾವಾಗ, ಆ ಬರಹ ನೋಡೋದು ಯಾವಾಗ. ಇದೆಲ್ಲವೂ ಸಹಜ ಎನಿಸಿದರು ಅದನ್ನು ಕಾಮಿಡಿಯಾಗಿ ಹೇಳಿದ್ದು ರಾಘವೇಂದ್ರ.

    ರಾಘವೇಂದ್ರ ಕಾಮಿಡಿಗೆ ಬೆಂಬಲ

    ರಾಘವೇಂದ್ರ ಕಾಮಿಡಿಗೆ ಬೆಂಬಲ

    ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇವರ ಕಾಮಿಡಿ ನೋಡಿದವರು ಫುಲ್ ಖುಷಿಯಾಗಿದ್ದಾರೆ. ನಮ್ಮ ಕೊಪ್ಪಳ ಬಾಯ್ ಅಂತ ಸಪೋರ್ಟ್ ಮಾಡಿದ್ದಾರೆ. ಅವರ ಕಾಮಿಡಿಗೆ ಹಾರ್ಟ್ ನೀಡಿದವರೇ ಹೆಚ್ಚಾಗಿದ್ದಾರೆ. ಹಿಂಗೆ ಮುಂದುವರೆಯಲಿ ನಿಮ್ಮ ನಗುವಿನ ಕಲೆ ಎಂದು ಹಾರೈಸಿದ್ದಾರೆ.

    English summary
    Comedy Khiladigalu Reality Show September 25th Episode Written Update. Here is the details about Raghavendra Achar Mast Comedy.
    Sunday, September 25, 2022, 22:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X