ರಿಜಿಸ್ಟರ್ ಮ್ಯಾರೇಜ್ ಆದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ: 'ಪ್ರೀತಿ ಅಮರ' ಎಂದ ನೆಟ್ಟಿಗರು
ಕಾಮಿಡಿ ಕಿಲಾಡಿಗಳು ಫ್ಯಾನ್ ಯಾರಿದ್ದಾರೋ ಅವರಿಗೆಲ್ಲ ಸಂಜು ಬಸಯ್ಯ ಬಗ್ಗೆ ಗೊತ್ತೇ ಇದೆ. ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ತಮ್ಮ ಪ್ರತಿಭೆಯಿಂದ ಹಾಸ್ಯದ ಕಚಗುಳಿ ಇಡುತ್ತಿದ್ದಾರೆ.
ನಾಲ್ಕು ವಾರಗಳ ಹಿಂದಷ್ಟೇ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಗೆಳತಿಯನ್ನು ಸಂಜು ಬಸಯ್ಯ ವಿವಾಹವಾಗಿದ್ದಾರೆ. ಬಳ್ಳಾರಿಯ ಪಲ್ಲವಿ ಎಂಬುವವರನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ನಾಲ್ಕು ವಾರಗಳ ಹಿಂದೆಯೇ ಪೋಸ್ಟ್ ಮಾಡಿದ್ದಾರೆ.

ಏಳೆಂಟು ವರ್ಷದ ಪ್ರೀತಿ
ಹಾಸ್ಯ ನಟ ಸಂಜು ಬಸಯ್ಯ ಹಾಗೂ ನಟಿ ಪಲ್ಲವಿ ಏಳೆಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು. ಅದೇ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಸದ್ಯ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
ಇನ್ನು ಬಳ್ಳಾರಿ ಮೂಲದ ಪಲ್ಲವಿ ಕೂಡ ನಟಿಯಾಗಿದ್ದು, ಹಲವು ಯೂಟ್ಯೂಬ್‌ನ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತ ಸಂಜು ಬಸಯ್ಯ ನಾಟಕಗಳಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಅಲ್ಲದೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ನಾಲ್ಕು ವಾರದ ಹಿಂದೆನೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರ ಒಪ್ಪಿಗೆ ಪಡೆದು ಸಪ್ತಪದಿ ತುಳಿಯೋದಾಗಿ ಹೇಳಿದ್ದಾರೆ.

ಕುಟುಂಬದ ಒಪ್ಪಿಗೆ ಪಡೆದು ಸಪ್ತಪದಿ
ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಇನ್ನೂ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನವ ಜೋಡಿ ಸದ್ಯ ಟೆಂಪಲ್ ರನ್ ಮಾಡುತ್ತಿದೆ. ರಿಜಿಸ್ಟರ್ ಮ್ಯಾರೇಜ್ ಆಗುತ್ತಿದ್ದಂತೆ ತಮ್ಮ ಅಭಿಮಾನಿಗಳಿಗೆ ಸಂಜು ಬಸಯ್ಯ ಮಾಹಿತಿಯನ್ನು ನೀಡಿದ್ದರು.
"ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತ್ತು. ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನುಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ,ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ನಿಜವಾದ ಪ್ರೀತಿಗೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ" ಎಂದು ಪೋಸ್ಟ್ ಮಾಡಿದ್ದರು.
ನೆಟ್ಟಿಗರು ಫುಲ್ ಖುಷ್
ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಜೋಡಿಗೆ ನೆಟ್ಟಿಗರು ಶುಭಾಶಯ ಕೋರಿದ್ದಾರೆ. ಒಬ್ಬರು "ಪ್ರೀತಿ ಅಮರ ಅಂತ ಇಂತಹ ಕಾಲದಲ್ಲಿ ಸಾಬೀತು ಮಾಡಿದೆ. ನಿಮ್ಮ ಜೋಡಿ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಪ್ರೀತಿಗೆ ಕಣ್ಣಿಲ್ಲ ಮೂಗಿಲ್ಲ ಬಾಯಿಲ್ಲ. ಆದ್ರೆ ಹೃದಯ ಇದೆ ಅಂತ ತೋರಿಸಿಕೊಟ್ಟಿದ್ದೀರಾ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತೊಬ್ಬರು "ಈ ಪ್ರೀತಿ ಎಂದೆಂದಿಗೂ ಇದೇ ತರ ಇರಲಿ" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ "ಈವಾಗ ಪ್ರೀತಿಗೆ ಬೆಲೆ ಬಂತು ಕೊನೆವರೆಗೂ ಸುಖವಾಗಿರಿ" ಎಂದು ನೆಟ್ಟಿಗರು ಶುಭ ಹಾರೈಸಿದ್ದಾರೆ. ಇವರಿಬ್ಬರ ಮದುವೆ ಮ್ಯಾಟರ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.


Click it and Unblock the Notifications











