ಮದುವೆ ಆಗ್ತಿದ್ದಾರೆ 'ಕಾಮಿಡಿ ಕಿಲಾಡಿ' ಜೋಡಿ : ಖುಷಿ ಹಂಚಿಕೊಂಡ ಜಿಜಿ

Recommended Video

ಮದುವೆ ಆಗ್ತಿದ್ದಾರೆ 'ಕಾಮಿಡಿ ಕಿಲಾಡಿ' ಜೋಡಿ | FILMIBEAT KANNADA

ಸಿನಿಮಾ, ಧಾರಾವಾಹಿ, ನಾಟಕಗಳ ಒಳಗೆ ಎಷ್ಟೋ ಬಾರಿ ಪ್ರೀತಿಯ ಸನ್ನಿವೇಶಗಳಲ್ಲಿ ನಟಿಸುವ ಕಲಾವಿದರಿಗೆ ನಿಜ ಜೀವನದಲ್ಲಿ ಆಗುವ ಪ್ರೀತಿ ಅಮೂಲ್ಯವಾಗಿದ್ದು. ಅದು ನೀಡುವ ಖುಷಿ ಬಹಳ ದೊಡ್ಡದು. ಸದ್ಯ ಅಂತಹ ಖುಷಿಯಲ್ಲಿ ಇರುವುದು 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಗೋವಿಂದೆ ಗೌಡ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೊದಲ ಸೀಸನ್ ಸ್ಪರ್ಧಿಗಳ ನಡುವೆ ಈಗ ಪ್ರೀತಿ ಮೂಡಿದೆ. ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಏರುತ್ತಿದ್ದ ಗೋವಿಂದೆ ಗೌಡ ಹಾಗೂ ದಿವ್ಯ ಜೋಡಿ ಇದೀಗ ಒಟ್ಟಿಗೆ ಹಸೆಮಣಿ ಏರುತ್ತಿದ್ದಾರೆ.

ತಮ್ಮ ಪ್ರೀತಿ, ನಿಶ್ವಿತಾರ್ಥ ಹಾಗೂ ಮದುವೆಯ ಬಗ್ಗೆ ಇದೀಗ ಹಾಸ್ಯ ನಟ ಗೋವಿಂದೆ ಗೌಡ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ತಮ್ಮ ಸಂತಸವನ್ನು ಈ ರೀತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ....

ಜನವರಿ 27ಕ್ಕೆ ನಿಶ್ಚಿತಾರ್ಥ

ಜನವರಿ 27ಕ್ಕೆ ನಿಶ್ಚಿತಾರ್ಥ

'ಕಾಮಿಡಿ ಕಿಲಾಡಿಗಳು' ಜೋಡಿ ಈಗ ನಿಜ ಜೀವನದಲ್ಲಿಯೂ ಒಂದಾಗುವ ನಿರ್ಧಾರ ಮಾಡಿದ್ದಾರೆ. ಗೋವಿಂದೆ ಗೌಡ ಹಾಗೂ ದಿವ್ಯ ಪರಸ್ಪರ ಪ್ರೀತಿ ಮಾಡುತ್ತಿದ್ದು, ಇದೀಗ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅವರ ನಿಶ್ವಿತಾರ್ಥ ಇದೇ ತಿಂಗಳ 27ರ ಭಾನುವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ.

ಶೃಂಗೇರಿಯಲ್ಲಿ ಮದುವೆ

ಶೃಂಗೇರಿಯಲ್ಲಿ ಮದುವೆ

ನಿಶ್ಚಿತಾರ್ಥದ ಎರಡು ತಿಂಗಳ ಬಳಿಯ ಗೋವಿಂದೆ ಗೌಡ ಹಾಗೂ ದಿವ್ಯ ಮದುವೆ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 14 ರಂದು ಜಿಜಿ ಅವರ ಕಲ್ಯಾಣೋತ್ಸವ ನಡೆಯಲಿದ್ದು, ಶೃಂಗೇರಿಯಲ್ಲಿ ಮದುವೆ ಕಾರ್ಯಕ್ರಮ ಜರುಗಲಿದೆ. ಶಾರದಾಂಬೆಯ ಆರ್ಶೀವಾದ ಪಡೆದು ಹೊಸ ಜೀವನಕ್ಕೆ ಈ ಜೋಡಿ ಕಾಲಿಡಲಿದ್ದಾರೆ.

ಪ್ರೀತಿ ಆಗಿದ್ದು ಯಾವಾಗ ?

ಪ್ರೀತಿ ಆಗಿದ್ದು ಯಾವಾಗ ?

ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ ಗೋವಿಂದೆ ಗೌಡ ನಾಚಿಕೊಂಡೆ ಉತ್ತರ ನೀಡಿದರು. ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಪರಿಚಯ ಆದ ಈ ಜೋಡಿ ಕಾರ್ಯಕ್ರಮ ಮುಗಿದ ಮೇಲೆ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರು ಕೂತು ಮಾತಾಡಿ, ಮನೆಯವರ ಸಮ್ಮುಖದಲ್ಲಿ ಮದುವೆ ಆಗುತ್ತಿದ್ದಾರೆ.

ಇಬ್ಬರು ಸಿನಿಮಾಗಳಲ್ಲಿ ಬ್ಯುಸಿ

ಇಬ್ಬರು ಸಿನಿಮಾಗಳಲ್ಲಿ ಬ್ಯುಸಿ

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ನಂತರ ದಿವ್ಯ ಮತ್ತು ಗೋವಿಂದೆ ಗೌಡ ಇಬ್ಬರೂ ಅನೇಕ ಸಿನಿಮಾ ಅವಕಾಶಗಳನ್ನು ಪಡೆದರು. ದಿವ್ಯ ಸದ್ಯ 'ಪುಣ್ಯಾತ್ ಗಿತ್ತೀಯರು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗೋವಿಂದೆ ಗೌಡ ಅವರು 'ಕೆಜಿಎಫ್' ಬಳಿಕ 'ಭರಾಟೆ' ಸೇರಿದಂತೆ ಸಾಕಷ್ಟು ಚಿತ್ರಗಳ ಅವಕಾಶ ಪಡೆದಿದ್ದಾರೆ.

More from Filmibeat

English summary
Zee Kannada channel 'Comedy Khiladigalu' season 1 contestants Govinde Gowda and Divya getting engaged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X