Comedy Khiladigalu season 4: ರಾಜಮೌಳಿ ಸಿನಿಮಾಗೆ ಕುದುರೆ ಕಳುಹಿಸುವುದೇ ಈ ಗಿಲ್ಲು ನಟರಾಜ !

By ಎಸ್ ಸುಮಂತ್

ಕಾಮಿಡಿ ಕಿಲಾಡಿಗಳು ಸೀಸನ್ 4 ರಲ್ಲಿ ಅತ್ಯದ್ಭುತ ಪ್ರತಿಭೆಯೊಂದಿದೆ. ಅದು ಗಿಲ್ಲಿ ನಟರಾಜ. ಆತ ಕಾಮಿಡಿ ಮಾಡುವುದಕ್ಕೆ ನಿಂತರೆ ಮುಗೀತು. ಅಣ್ಣೊ, ಅಕ್ಕೋ ಅಂತ ಮಂಡ್ಯ ಭಾಷೆಯಲ್ಲಿ ತನ್ನತ್ತ ಎಲ್ಲರನ್ನು ಸೆಳೆದು ಬಿಡುತ್ತಾರೆ. ಹಿಂಗೆಲ್ಲಾ ಆಗುತ್ತೆ ಏನು ಮಾಡೋದು ಹೇಳಿ ಅಂದಾಗೆಲ್ಲ ನೋಡಿದವರು ಬಿದ್ದು ಬಿದ್ದು ನಗುವಂತೆ ಮಾಡುತ್ತೆ. ಈ ವಾರದ ಕಾಮಿಡಿಯಲ್ಲಿ ಗಿಲ್ಲ ನಟರಾಜನ ಕಾನ್ಸೆಪ್ಟ್ ಕೇಳಿದರೇನೆ ನಗು ಬರುತ್ತೆ. ಇನ್ನು ಅದರ ಮೇಲೆ ಹಾಸ್ಯ ಚಟಾಕಿ ಹಾರಿಸಿದರೆ ಕೇಳಬೇಕೆ..? ನಗುವಿನಿಂದಲೇ ಹೊಟ್ಟೆ ನೋವು ಬರಬೇಕು ಅಷ್ಟು ನಗಿಸಿದ್ದಾನೆ.

ಗಿಲ್ಲಿ ನಟರಾಜ ಪ್ರೇಕ್ಷಕರಿಗೆ ಹೊಸ ಪರಿಚಯವೇನು ಅಲ್ಲ. ಆದರೆ ಇಷ್ಟು ಟ್ಯಾಲೆಂಟ್ ಇರುವ ನಟನಿಗೆ ಇಂಥ ದೊಡ್ಡ ವೇದಿಕೆ ಸಿಗುವುದು ತುಂಬಾ ತಡವಾಯಿತು ಎಂಬುದೇ ಎಲ್ಲರ ಬೇಸರ. ಹಾಗೋ ಹೀಗೋ ಏನೋ ಮಾಡಬೇಕು ಅಂತ ಮಂಡ್ಯದ ಮಳವಳ್ಳಿಯಿಂದ ಬಸ್ಸು ಹತ್ತಿ ಬಂದವನು ಸೆಟ್ ಹಾಕಿಕೊಂಡು ಇದ್ದವ, ಇದೀಗ ಅದೇ ಸೆಟ್ ಮೇಲೆ ಎಲ್ಲರನ್ನು ನಗಿಸುತ್ತಿದ್ದಾನೆ. ಗಿಲ್ಲ ನಟರಾಜ ಮಾಡುವ ಕಾಮಿಡಿಗೆ ಜಡ್ಜ್‌ಗಳೇ ಸುಸ್ತಾಗುತ್ತಿದ್ದಾರೆ.

ನಟರಾಜನ ಎಂಟ್ರಿಗೆ ರಕ್ಷಿತಾ ಶಾಕ್

ನಟರಾಜನ ಎಂಟ್ರಿಗೆ ರಕ್ಷಿತಾ ಶಾಕ್

ಈ ವಾರ ಗಿಲ್ಲಿ ನಟರಾಜ ಹಾಕಿರುವ ವೇಷ ಮಹಾರಾಜನದ್ದು. ಮಹಾರಾಜ ಅಂದರೆ ಹೇಗಿರುತ್ತಾನೆ ಹೇಳಿ. ಸುತ್ತಮುತ್ತ ಆಳುಕಾಳು ಇರುತ್ತಾರೆ. ಮಹಾರಾಜ ನಡೆದುಕೊಂಡು ಬಂದಿದ್ದನ್ನು ಯಾರಾದರೂ ನೋಡಿದ್ದೀರಾ. ನೋ ವೇ ಚಾನ್ಸೆ ಇಲ್ಲ. ಆದರೆ ಪಾಪ ಕಾಮಿಡಿ ಕಿಲಾಡಿಗೆ ಬಂದ ಗಿಲ್ಲಿ ನಟರಾಜ ಮಹಾರಾಜನಾಗಿ ಏನೋ ಬಂದಿದ್ದಾನೆ. ಆದರೆ ಅವನನ್ನು ಕುದುರೆ ಕರೆದುಕೊಂಡು ಬಂದಿದ್ದಲ್ಲ. ಕುದುರೆಯನ್ನು ಅವನೇ ಒತ್ತುಕೊಂಡು ಬಂದಿದ್ದಾನೆ. ಇದಕ್ಕೆ ರಕ್ಷಿತಾ ಕೂಡ ಶಾಕ್ ಆಗಿದ್ದಾರೆ. ಯಾವ ಊರಿನ ಮಹಾರಾಜ ಇವರು ಅಂತ. ನಟರಾಜನ ಈ ಸಂಕಷ್ಟಕ್ಕೆಲ್ಲ ಕಾರಣ ರಾಜಮೌಳಿಯಂತೆ. ಪಾಪ ಅವನ್ನಲ್ಲಿದ್ದ ಕುದುರೆಗಳನ್ನೆಲ್ಲಾ ತಮ್ಮ ಸಿನಿಮಾದ ಶೂಟಿಂಗ್‌ಗೆ ತೆಗೆದುಕೊಂಡು ಹೋಗಿದ್ದಾರಂತೆ. ಅಷ್ಟೇ ಅಲ್ಲ ನಟರಾಜನ ಮಂತ್ರಿಗಳನ್ನೆಲ್ಲಾ ಅವರೇ ಕರೆದುಕೊಂಡು ಹೋಗಿ ಬಿಟ್ಟಿದ್ದಾರಂತೆ.

ಏರೋಪ್ಲೇನ್‌ನಲ್ಲಿ ಹೆಲ್ಮೆಟ್ ಹಾಕಲೇಬೇಕು

ಏರೋಪ್ಲೇನ್‌ನಲ್ಲಿ ಹೆಲ್ಮೆಟ್ ಹಾಕಲೇಬೇಕು

ಮಹಾರಾಜನಾಗಿ ಬಂದ ಗಿಲ್ಲಿ ನಟರಾಜನ ಅವತಾರಗಳು ಒಂದೊಂದು ಅಲ್ಲ. ಕುದುರೆಯ ಮುಖ ಮಾತ್ರ ಎತ್ತುಕೊಂಡು ಬಂದ ನಟರಾಜ, ಕೈನಲ್ಲೊಂದು ಹೆಲ್ಮೆಟ್ ಬೇರೆ ತಂದಿದ್ದಾನೆ. ಈ ಹೆಲ್ಮೆಟ್ ಯಾಕಪ್ಪ ಅಂತ ಜಗ್ಗೇಶ್ ನೋಡುವಾಗಲೇ ನಟರಾಜನಿಗೆ ಅನುಮಾನ ಬಂದಿದೆ. ಅದಕ್ಕೆ ಉತ್ತರಿಸಿದ ನಟರಾಜ, ಜಗ್ಗಣ್ಣ ಈ ಹೆಲ್ಮೆಟ್ ಯಾಕೆ ಅಂತ ಯೋಚನೆ ಮಾಡುತ್ತಿದ್ದೀರಾ ಅಲ್ವಾ. ಹೆಲ್ಮೆಟ್ ಯಾಕೆ ತಂದವ್ನೆ ಅನ್ನೋ ಅನುಮಾನ ತಾನೇ. ಏನಿಲ್ಲ ಜಗ್ಗಣ್ಣ ಬೆಳಗ್ಗೆನೇ ಪೊಲೀಸರು ಹಿಡಿತಾರೆ ಅಂತ ಹೆಲ್ಮೆಟ್ ಹಾಕೊಂಡು ನನ್ನ ಏರೋಪ್ಲೇನ್ ತಗೊಂಡು, ಯೂರಿನ್ ಮಾಡೋಣಾ ಅಂತ ಫಾರಿನ್ ಕಡೆಗೆ ಹೊರಟೆ. ಆದರೆ ಅಡ್ಡ ದಾರಿಯಲ್ಲಿ ಬೆಕ್ಕು ಅಡ್ಡ ಆಯ್ತು. ಅದಕ್ಕೆ ಅಪಶಕುನಾ ಅಂತ ವಾಪಾಸ್ ಆಗಿ ಬಿಟ್ಟೆ ಅಣ್ಣ ಅಂದಿದ್ದಾನೆ. ನಟರಾಜ ಈ ಮಾತಿಗೆ ಜಗ್ಗೇಶ್, ರಕ್ಷಿತಾ, ಭಟ್ಟರು ಬಿದ್ದು ಬಿದ್ದು ನಕ್ಕಿದ್ದಾರೆ.

ಗಿಲ್ಲಿ ನಟನ ಬ್ರ್ಯಾಂಡ್ ನೋಡಿ ರಕ್ಷಿತಾ ಶಾಕ್

ಗಿಲ್ಲಿ ನಟನ ಬ್ರ್ಯಾಂಡ್ ನೋಡಿ ರಕ್ಷಿತಾ ಶಾಕ್


ಗಿಲ್ಲಿ ನಟನಿಗೆ ವೇದಿಕೆ ಮೇಲೆಯೇ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿದೆ. ಅದಕ್ಕೆ ರೊಚ್ಚಿಗೆದ್ದ ಗಿಲ್ಲಿ ನಾನೀಗ ಎಣ್ಣೆ ಹಾಕಲೇಬೇಕು ಅಂದಿದ್ದಾನೆ. ಇಲ್ಲಿ ಕಂಪನಿಗೆ ಯಾರು ಇಲ್ವಲ್ಲ ಅಂದವನೇ ಭಟ್ರು ಸಾರ್ ಎಣ್ಣೆ ಹಾಕೋಣಾ ಬರುತ್ತೀರಾ ಎಂದಿದ್ದಾನೆ. ಭಟ್ರು ಅದಕ್ಕೆ ರೆಡಿ ಅಂದುಬಿಡೋದಾ. ಪಾಪ ಕಾಡಿ ಬೇಡಿ ಗಿಲ್ಲಿ ನಟರಾಜ ಸಾರ್ ನೀವೂ ಬರಲ್ಲ ಅಂತ ಹೇಳಿ ಅಂದಾಗ ಭಟ್ರು ಆಯ್ತು ನೀನು ಒಬ್ಬನೆ ಕುಡಿಯಪ್ಪ ಎಂದಿದ್ದಾರೆ. ಆದರೆ ಗಿಲ್ಲಿ ನಟ ಎಣ್ಣೆ ಬಾಟಲ್ ತೆಗೆದಾಕ್ಷಣ ರಕ್ಷಿತಾ ಶಾಕ್ ಆಗಿದ್ದಾರೆ. ಏ ಕೊಬ್ಬರಿ ಎಣ್ಣೆ ಏನೋ ಅಂದಿದ್ದಾರೆ. ಮತ್ತೆ ನೀವೇನು ಅಂದುಕೊಂಡ್ರೊ ಅಂತ ಎಣ್ಣೆ ಹಾಕಿಕೊಳ್ಳುವುದಕ್ಕೆ ಶುರು ಮಾಡಿದ್ದಾನೆ.

ಕೊಬ್ಬರಿ ಎಣ್ಣೆಗೆ ಕಂಟ್ರೋಲ್ ತಪ್ಪಿದ ಗಿಲ್ಲಿ

ಕೊಬ್ಬರಿ ಎಣ್ಣೆಗೆ ಕಂಟ್ರೋಲ್ ತಪ್ಪಿದ ಗಿಲ್ಲಿ

ಪಾಪ ರಕ್ಷಿತಾ ಗಾಬರಿಯಾಗಿದ್ದರು. ಗಿಲ್ಲಿ ನಟ ವೇದಿಕೆ ಮೇಲೆಯೇ ಎಣ್ಣೆ ಹಾಕಿ ಹೆಂಗೆಂಗೋ ಆಡಿ ಬಿಡುತ್ತಾನಾ ಅಂತ. ಆದರೆ ಆತ ತೆಗೆದ ಬಾಟಲ್ ಭಯಾನಕವಾಗಿತ್ತು. ಅದಕ್ಕೆ ರಕ್ಷಿತಾ ಥೋ ಕರ್ಮ ಅಂದುಕೊಂಡು ಸುಮ್ಮನಾಗಿದ್ದರು. ಆದರೆ ಕಿರೀಟ ತೆಗೆದು ಅದು ಯಾವಾಗ ಎಣ್ಣೆ ಹಾಕಿದನೋ ಒಂದೇ ಸಲಕ್ಕೆ ಕಿಕ್ ಏರಿದೆ. ಸಿಕ್ಕಾಪಟ್ಟೆ ಟೈಟ್ ಆದ ಗಿಲ್ಲಿ ನಟನನ್ನು ಹಿಡಿಯೋದಕೆ ಸಾಹಸ ಮಾಡಿದ್ದಂತಾಯಿತು.

More from Filmibeat

English summary
Comedy Khiladigalu season 4 Gilli Nataraj Performance on September 25th Episode. Here is the details about Gilly Nataraja Performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X