For Quick Alerts
  ALLOW NOTIFICATIONS  
  For Daily Alerts

  ಕೆಲವೇ ಗಂಟೆಗಳಲ್ಲಿ ಮತ್ತೆ 'ಕಾಮಿಡಿ ಕಿಲಾಡಿಗಳ' ಹಾವಳಿ ಶುರು!

  By ಪ್ರಿಯಾ ದೊರೆ
  |

  ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ರಿಯಾಲಿಟಿ ಶೋಗಳು ಜೀ ಕನ್ನಡದಲ್ಲಿ ಪ್ರಸಾರವಾಗುತ್ತವೆ ಎಂದರೆ ಸುಳ್ಳಾಗೋದಿಲ್ಲ. ಈ ವಾಹಿನಿಯಲ್ಲಿ ಮೂಡಿ ಬರುವ ಎಲ್ಲಾ ಶೋಗಳು ಹಿಟ್ ಆಗಿವೆ. ಹಾಗಾಗಿಯೇ ಒಂದಾದ ಮೇಲೆ ಮತ್ತೊಂದು ಸೀಸನ್ ಅನ್ನು ಶುರುವಾಗುತ್ತಿದೆ.

  ಸರಿಗಮಪ, ಕಾಮಿಡಿ ಕಿಲಾಡಿಗಳು, ಡಿಕೆಡಿ, ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋಗಳು ಹಿಟ್ ಆಗಿರುವ ಕಾರ್ಯಕ್ರಮಗಳು. ಈ ಎಲ್ಲಾ ರಿಯಾಲಿಟಿ ಶೋಗಳು ಅದಾಗಲೇ 3-4 ಸೀಸನ್ ಗಳು ಪ್ರಸಾರವಾಗಿವೆ. ಇದೆಲ್ಲದಕ್ಕೂ ಹೆಚ್ಚು ಸೀಸನ್ ಪ್ರಸಾರವಾಗಿರುವುದು ಸರಿಗಮಪ ರಿಯಾಲಿಟಿ ಶೋ.

  ದಾಖಲೆ ಕುಸಿತ ಕಂಡ ಬಿಗ್‌ಬಾಸ್ ಪ್ರೀಮಿಯರ್ ಟಿಆರ್‌ಪಿ: ಕಾರಣ?ದಾಖಲೆ ಕುಸಿತ ಕಂಡ ಬಿಗ್‌ಬಾಸ್ ಪ್ರೀಮಿಯರ್ ಟಿಆರ್‌ಪಿ: ಕಾರಣ?

  ಈ ರಿಯಾಲಿಟಿ ಶೋಗಳಿಂದಾಗಿ ಹಲವು ಪ್ರತಿಭೆಗಳು ಕೂಡ ಬೆಳಕಿಗೆ ಬಂದಿವೆ. ಕೆಲವರು ಕಿರುತೆರೆಯಲ್ಲಿ ಮಿಂಚುತ್ತಿದ್ದರೆ, ಮತ್ತೆ ಕೆಲವರು ಸಿನಿಮಾ ಜಗತ್ತಿನಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರಿಂದ ನಮ್ಮ ಬದುಕಿನ ದಿಕ್ಕೇ ಬದಲಾಗಿದೆ ಎಂದು ಹೇಳಿದವರೂ ಇದ್ದಾರೆ.

   ಹೊಟ್ಟೆ ಹುಣ್ಣಾಗಿಸುವ ಶೋ

  ಹೊಟ್ಟೆ ಹುಣ್ಣಾಗಿಸುವ ಶೋ

  ಕಾಮಿಡಿ ಕಿಲಾಡಿಯಲ್ಲಿ ಭಾಗವಹಿಸಿದ ಕೆಲ ಮಕ್ಕಳು ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸ್ಫರ್ಧಿಗಳ ಕಾಮಿಡಿಗೆ ನಗುವ ಜೊತೆಗೆ ಪ್ರೇಕ್ಷಕರು ಕಂಬನಿಯನ್ನೂ ಮಿಡಿದಿದ್ದಾರೆ. ಇದೀಗ ನಾಲ್ಕನೇ ಸೀಸನ್ ಆರಂಭವಾಗಲಿದೆ. ಈಗಾಗಲೇ ಕಾಮಿಡಿ ಕಿಲಾಡಿಗಳು ಮೂರು ಸೀಸನ್‌ಗಳು ಪ್ರಸಾರವಾಗಿ ಗೆದ್ದಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದ ಪ್ರತಿಭೆಗಳು ಅದ್ಭುತವಾಗಿ ಕಾಮಿಡಿ ಮಾಡಿದ್ದರು. ಜಗ್ಗೇಶ್, ರಕ್ಷಿತಾ ನಕ್ಕು ನಕ್ಕು ಹೊಟ್ಟೆಯನ್ನು ಹುಣ್ಣಾಗಿಸಿಕೊಂಡಿದ್ದರು. ಇದೀಗ ಕಾಮಿಡಿ ಕಿಲಾಡಿಗಳು ಸೀಸನ್ -4ಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ.

  'ಮುದ್ದುಮಣಿಗಳು' ಧಾರಾವಾಹಿಯ ದೃಷ್ಟಿ ಪಾತ್ರಕ್ಕೆ ಬಂದಿರುವ ಸೋನಿ ಯಾರು ಗೊತ್ತಾ..?'ಮುದ್ದುಮಣಿಗಳು' ಧಾರಾವಾಹಿಯ ದೃಷ್ಟಿ ಪಾತ್ರಕ್ಕೆ ಬಂದಿರುವ ಸೋನಿ ಯಾರು ಗೊತ್ತಾ..?

   ಕಾಮಿಡಿ ಕಿಲಾಡಿಗಳು ಸೀಸನ್ – 4

  ಕಾಮಿಡಿ ಕಿಲಾಡಿಗಳು ಸೀಸನ್ – 4

  ಇದೀಗ ಮತ್ತೆ ಎಲ್ಲರನ್ನು ನಗಿಸಲು ಕಾಮಿಡಿ ಕಿಲಾಡಿಗಳು ಸೀಸನ್-4 ಬರುತ್ತಿದೆ. ಕಳೆದ ತಿಂಗಳೇ ಕಾಮಿಡಿ ಕಿಲಾಡಿಗಳು ಸೀಸನ್ ನಾಲ್ಕರ ಪ್ರಮೋವನ್ನು ವಾಹಿನಿ ಪ್ರಸಾರ ಮಾಡಿತ್ತು. ಈ ಬಾರಿಯ ಪ್ರೋಮೋ ಕೊಂಚ ಡಿಫರೆಂಟ್ ಆಗಿ ಇತ್ತು. ನಗುವುದಕ್ಕೆ ಭಾಷೆ ಅರ್ಥವಾಗಲೇ ಬೇಕೆಂದೇನಿಲ್ಲ. ಭಾಷೆ ಗೊತ್ತಿಲ್ಲದಿದ್ದರೂ, ಕಾಮಿಡಿ ಅರ್ಥವಾದರೆ ಸಾಕು ನಗಬಹುದು ಎಂದು ಈ ಪ್ರೋಮೋದಲ್ಲಿ ತೋರಿಸಲಾಗಿತ್ತು. ಇನ್ನು ಈ ಪ್ರೋಮೋದಲ್ಲಿ ಮಾಸ್ಟರ್ ಆನಂದ್, ನವರಸ ನಾಯಕ ಜಗ್ಗೇಶ್ ಮತ್ತು ನಟಿ ರಕ್ಷಿತಾ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಇದೀಗ ನಿರ್ದೇಶಕ ಯೋಗರಾಜ್ ಭಟ್ ಕೂಡ ಕಾಮಿಡಿ ಕಿಲಾಡಿಗಳು ಶೋಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

   ಹೊಸ ಪ್ರತಿಭೆಗಳಿಗೆ ಅದ್ಭುತ ವೇದಿಕೆ

  ಹೊಸ ಪ್ರತಿಭೆಗಳಿಗೆ ಅದ್ಭುತ ವೇದಿಕೆ

  ಈ ಸೀಸನ್‌ನಲ್ಲೂ ಹೊಸ ಪ್ರತಿಭೆಗಳು ಭಾಗವಹಿಸುತ್ತಿದ್ದಾರೆ. ಇನ್ನೂ ವಾಹಿನಿ ಸ್ಪರ್ಧಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇನ್ನು ಈ ಸೀಸನ್‌ನಲ್ಲೂ ಮೂವರು ತೀರ್ಪುಗಾರರು ಇರುತ್ತಾರೆ. ಕಳೆದ ಬಾರಿಯಂತೆಯೇ ನಟಿ ರಕ್ಷಿತಾ, ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ತೀರ್ಪುಗಾರರಾಗಿ ಇರ್ತಾರೆ. ಮಾಸ್ಟರ್ ಆನಂದ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಇವರೆಲ್ಲರೂ ಇರುತ್ತಾರೆ ಎಂದ ಮೇಲೆ ಈ ಬಾರಿಯೂ ಪ್ರೇಕ್ಷಕರು ಬಿದ್ದು ಬಿದ್ದು ನಗುವುದರಲ್ಲಿ ಡೌಟ್ ಇಲ್ಲ.

   ವೀಕೆಂಡ್‌ನಲ್ಲಿ ಕಾಮಿಡಿ ಕಿಕ್ಕು

  ವೀಕೆಂಡ್‌ನಲ್ಲಿ ಕಾಮಿಡಿ ಕಿಕ್ಕು

  ನಾಳೆಯಿಂದ (ಸೆಪ್ಟೆಂಬರ್ 17) ಶೋ ಪ್ರಾರಂಭವಾಗಲಿದೆ. ಪ್ರತೀ ಶನಿವಾರ ಹಾಗೂ ಭಾನುವಾರ ಹೊಸ ಪ್ರತಿಭೆಗಳು ಹೊಸ ರೀತಿಯಲ್ಲಿ ನಗಿಸಲು ಹೊಸ ಹೊಸ ಸ್ಕಿಟ್ ಗಳನ್ನು ಹೊತ್ತು ಬರಲಿದ್ದಾರೆ. ವೀಕೆಂಡ್‌ನಲ್ಲಿ ರಾತ್ರಿ 9ಕ್ಕೆ ಹೊಸ ಸೀಸನ್ ಪ್ರಸಾರವಾಗಲಿದೆ ಮಿಸ್ ಮಾಡದೇ ನೋಡಿ.

  English summary
  Comedy Khiladigalu Season - 4 grand premiere from tomorrow. Promo released but contestants name or details yet to revealed.
  Saturday, September 17, 2022, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X