For Quick Alerts
  ALLOW NOTIFICATIONS  
  For Daily Alerts

  ಕಾಡಿನಲ್ಲಿ ಕಳೆದು ಹೋದ ಯೋಗರಾಜ್ ಭಟ್, ರಕ್ಷಿತಾ, ಜಗ್ಗೇಶ್!

  By ಪ್ರಿಯಾ ದೊರೆ
  |

  ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮ ಜೂನಿಯರ್ಸ್ ಸೇರಿದಂತೆ ಡ್ಯಾನ್ಸ್ ಶೋ, ಟಾಕ್ ಶೋಗಳನ್ನು ಜೀ ಕನ್ನಡ ವಾಹಿನಿ ನೀಡಿದೆ. ಹಲವು ಕಾರ್ಯಕ್ರಮಗಳಲ್ಲಿ ಪ್ರೇಕ್ಷರ ಮನ ಗೆದ್ದ ಮತ್ತೊಂದು ಕಾರ್ಯಕ್ರಮವೆಂದರೆ ಅದು ಡ್ರಾಮಾ ಜೂನಿಯರ್ಸ್.

  ಇಡೀ ಕರ್ನಾಟಕದ ಮೂಲೆ ಮೂಲೆಗಳಿಂದಲೂ ತೊದಲು ನುಡಿವ ಮಕ್ಕಳನ್ನು ಒಂದು ಕಡೆ ಸೇರಿಸಿ, ಮಕ್ಕಳಲ್ಲಿ ಅಭಿನಯದ ಕಲೆ ಬಗ್ಗೆ ಮೊಳಕೆಯಲ್ಲಿ ಪಾಠ ಮಾಡುವ ಶಾಲೆಯೇ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ನೂರಾರು ಪ್ರತಿಭೆಗಳು ಕಿರುತೆರೆಯಲ್ಲಿ ಮಿಂಚಿದ್ದಾರೆ.

  ಒಂದು ಹೆಜ್ಜೆ ಮುಂದಿಟ್ಟು ಧೈರ್ಯ ಮಾಡಿಯೇಬಿಟ್ಟ ಕಂಠಿ: ಪೂರ್ವಿಗೆ ಗೊತ್ತಾಯ್ತು ಸತ್ಯ !ಒಂದು ಹೆಜ್ಜೆ ಮುಂದಿಟ್ಟು ಧೈರ್ಯ ಮಾಡಿಯೇಬಿಟ್ಟ ಕಂಠಿ: ಪೂರ್ವಿಗೆ ಗೊತ್ತಾಯ್ತು ಸತ್ಯ !

  ಕಾಮಿಡಿ ಕಿಲಾಡಿಯಲ್ಲಿ ಭಾಗವಹಿಸಿದ ಕೆಲ ಮಕ್ಕಳು ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸ್ಪರ್ಧಿಗಳ ಕಾಮಿಡಿಗೆ ನಗುವ ಜೊತೆಗೆ ಪ್ರೇಕ್ಷಕರು ಕಂಬನಿಯನ್ನೂ ಮಿಡಿದಿದ್ದಾರೆ. ಇದೀಗ ನಾಲ್ಕನೇ ಸೀಸನ್ ಆರಂಭವಾಗಲಿದೆ.

  ಕಾಮಿಡಿ ಕಿಲಾಡಿಗಳು ಪ್ರೋಮೊ!

  ಕಾಮಿಡಿ ಕಿಲಾಡಿಗಳು ಪ್ರೋಮೊ!

  ಈ ಬಾರಿಯ ಕಾಮಿಡಿ ಕಿಲಾಡಿಗಳು ಪ್ರೋಮೋ ಕೊಂಚ ಡಿಫರೆಂಟ್ ಆಗಿದೆ. ಯಾವ ಭಾಷೆಯಾದರೇನು ಕಾಮಿಡಿಗೆ ಭಾಷೆಯ ಮಿತಿ ಇಲ್ಲ ಎಂಬ ಅರ್ಥದಲ್ಲಿ ಈ ಪ್ರೋಮೋವನ್ನು ಸಿದ್ಧಪಡಿಸಲಾಗಿದೆ. ಈ ಪ್ರೋಮೋದಲ್ಲಿ ನಟ ಜಗ್ಗೇಶ್, ರಕ್ಷಿತಾ ಹಾಗೂ ಮಾಸ್ಟರ್‌ ಆನಂದ್ ಇದ್ದಾರೆ. ಕಾಡಿನ ಬ್ಯಾಕ್‌ಡ್ರಾಪ್‌ನಲ್ಲಿ ಶೂಟ್‌ ಮಾಡಲಾಗಿದೆ. ಈ ಬಾರಿ ನಗುವಿನ ಹಬ್ಬದೌತಣ ಪಕ್ಕ ಎನ್ನುತ್ತಿದೆ ಈ ಪ್ರೋಮೊ.

  ಇದು ಕಾಮಿಡಿ ಕಿಲಾಡಿ 4ನೇ ಸೀಸನ್!

  ಇದು ಕಾಮಿಡಿ ಕಿಲಾಡಿ 4ನೇ ಸೀಸನ್!

  ಈಗಾಗಲೇ ಕಾಮಿಡಿ ಕಿಲಾಡಿಗಳು ಮೂರು ಸೀಸನ್‌ಗಳು ಪ್ರಸಾರವಾಗಿವೆ. ಮೂರರಲ್ಲಿ ಬಂದ ಪ್ರತಿಭೆಗಳು ಕೂಡ ಅದ್ಭುತವಾಗಿ ಕಾಮಿಡಿ ಮಾಡಿ ಗೆದ್ದಿದ್ದಾರೆ. ಜಗ್ಗೇಶ್, ರಕ್ಷಿತಾ ನಕ್ಕು ನಕ್ಕು ಹೊಟ್ಟೆಯನ್ನು ಹುಣ್ಣಾಗಿಸಿಕೊಂಡಿದ್ದರು. ಇದೀಗ ಮತ್ತೆ ಕಾಮಿಡಿ ಕಿಲಾಡಿಗಳು ಸೀಸನ್ -4 ಪ್ರಸಾರ ಆಗಲು ಸಜ್ಜಾಗಿದೆ. ಈ ಬಾರಿಯೂ ಹಲವಾರು ಪ್ರತಿಭೆಗಳು ಹೊರ ಬರಲಿವೆ.

  ಸೆಪ್ಟೆಂಬರ್ 10ಕ್ಕೆ ಶೋ ಆರಂಭ!

  ಸೆಪ್ಟೆಂಬರ್ 10ಕ್ಕೆ ಶೋ ಆರಂಭ!

  ಗಣೇಶ ಹಬ್ಬಕ್ಕೆ ಭರ್ಜರಿ ಗಿಫ್ಟ್ ಆಗಿ ಈ ಪ್ರೋಮೊ ಬಿಡಲಾಗಿದೆ. ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಹೊಸ ಪ್ರೋಮೋವನ್ನು ರಿಲೀಸ್ ಮಾಡಲಾಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಸೆಪ್ಟೆಂಬರ್ 10 ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಹೊಸ ಸೀಸನ್ ಪ್ರಸಾರವಾಗಲಿದೆ.

  ಹತ್ತು ಹಲವು ಬಗೆಯ ಶೋಗಳು!

  ಹತ್ತು ಹಲವು ಬಗೆಯ ಶೋಗಳು!

  ಈಗಾಗಲೇ ಈ ವಾಹಿನಿ ಹಲವು ರಿಯಾಲಿಟಿ ಶೋಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿದೆ. ಡ್ಯಾನ್ಸ್ ಶೋ ಆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರತಿಭೆಗಳು ಬಂದಿದ್ದಾರೆ. ಇನ್ನು ಸರಿಗಮಪ ಕಾರ್ಯಕ್ರಮಕ್ಕಂತೂ ಹಳ್ಳಿಯಲ್ಲಿದ್ದವರೂ ಕೂಡ ಬೆಳಕಿಗೆ ಬಂದಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜೂನಿಯರ್ ಮಾಲಾಶ್ರೀ, ಜೂನಿಯರ್ ಜಗ್ಗೇಶ್ ಅಂತಹ ಹಾಸ್ಯ ಕಲಾವಿದರನ್ನು ಈ ಶೋ ನೀಡಿದೆ ಎಂದರೆ ತಪ್ಪಾಗಲಾರದು. ಇನ್ನು ಪುಟಾಣಿಗಳಿಗೂ ಜೀ ಕನ್ನಡ ವೇದಿಕೆ ನೀಡಿದೆ. ಅದೇ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ. ಈ ಶೋ ಮೂಲಕ ಪುಟಾಣಿಗಳು ಕೂಡ ತಮ್ಮ ನಟನೆಯ ಪ್ರತಿಭೆಯನ್ನು ಇಡೀ ಕರ್ನಾಟಕಕ್ಕೆ ತೋರಿಸಿಕೊಟ್ಟಿದೆ.

  English summary
  Comedy Kiladigalu Season 4 From September 9th, Know More details,
  Tuesday, September 6, 2022, 9:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X