»   » ಶಿವರಾಜ್.ಕೆ.ಆರ್.ಪೇಟೆಗೆ ಅದೃಷ್ಟ ಖುಲಾಯಿಸಿದೆ: ಅವಕಾಶ ಒದ್ಗೊಂಡು ಬರ್ತಿದೆ.!

ಶಿವರಾಜ್.ಕೆ.ಆರ್.ಪೇಟೆಗೆ ಅದೃಷ್ಟ ಖುಲಾಯಿಸಿದೆ: ಅವಕಾಶ ಒದ್ಗೊಂಡು ಬರ್ತಿದೆ.!

Posted By:
Subscribe to Filmibeat Kannada

ಅದ್ಯಾವ ಘಳಿಗೆಯಲ್ಲಿ 'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ ಕಾಲಿಟ್ರೋ... ಅಂದಿನಿಂದ ಶಿವರಾಜ್ ಕೆ.ಆರ್.ಪೇಟೆ ಅದೃಷ್ಟ ಖುಲಾಯಿಸಿಬಿಟ್ಟಿದೆ. ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಎಲ್ಲರ ಫೇವರಿಟ್ ಆಗಿದ್ದ ಶಿವರಾಜ್.ಕೆ.ಆರ್.ಪೇಟೆ ಇಂದು ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ ಅಂದ್ರೆ ಖಂಡಿತ ಸುಳ್ಳಲ್ಲ.

ಹೌದು, ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುವ ಜೊತೆಗೆ ಕಚಗುಳಿ ಇಡುವ ತಾಕತ್ತು ಇರುವ ಶಿವರಾಜ್.ಕೆ.ಆರ್.ಪೇಟೆಗೆ ಗಾಂಧಿನಗರದ ಭಾಗ್ಯದ ಬಾಗಿಲು ತೆರೆದಿದೆ. ಮುಂದೆ ಓದಿ...

ಶಿವರಾಜ್ ಕುಮಾರ್ ಮತ್ತು ಸುದೀಪ್ ಜೊತೆ ಶಿವರಾಜ್.ಕೆ.ಆರ್.ಪೇಟೆ.!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ರವರ ಜೊತೆ ತೆರೆಹಂಚಿಕೊಳ್ಳುವ ಅದೃಷ್ಟ ಶಿವರಾಜ್.ಕೆ.ಆರ್.ಪೇಟೆ ರವರಿಗೆ ಒಲಿದುಬಂದಿದೆ.[ಕೆ.ಆರ್.ಪೇಟೆ ಶಿವರಾಜ್ ರವರ ಬದುಕನ್ನೇ ಬದಲಿಸಿದ ಜೀ ಕನ್ನಡ ವಾಹಿನಿ!]

ಯಾವ ಚಿತ್ರದಲ್ಲಿ ಗೊತ್ತಾ.?

ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಂದಾಗಿರುವ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ನಟಿಸುವ ಅವಕಾಶ ಶಿವರಾಜ್.ಕೆ.ಆರ್.ಪೇಟೆ ರವರಿಗೆ ಸಿಕ್ಕಿದೆ.[ಟಿವಿ9 ವಾಹಿನಿಗೆ ಶಿವರಾಜ್.ಕೆ.ಆರ್.ಪೇಟೆ ಸೇರಿದ್ಹೇಗೆ ಗೊತ್ತಾ.?]

ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲಿದ್ದಾರೆ

'ದಿ ವಿಲನ್' ಚಿತ್ರದಲ್ಲಿ ಶಿವರಾಜ್.ಕೆ.ಆರ್.ಪೇಟೆ ಹಾಸ್ಯ ನಟನಾಗಿ ಕಾಣಿಸಿಕೊಂಡು ನಿಮ್ಮ ಹೊಟ್ಟೆ ಹುಣ್ಣಾಗುವಷ್ಟು ನಗಿಸಲಿದ್ದಾರೆ.['ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ]

ಶಿವರಾಜ್ ತುಂಬಾ ಚ್ಯೂಸಿ

'ದಿ ವಿಲನ್' ಜೊತೆಗೆ ಅನೇಕ ಚಿತ್ರಗಳಲ್ಲಿ 'ಹಾಸ್ಯ ನಟ'ನ ಪಾತ್ರ ಪೋಷಿಸಲು ಶಿವರಾಜ್.ಕೆ.ಆರ್.ಪೇಟೆ ರವರಿಗೆ ಅವಕಾಶ ಒದಗಿ ಬರುತ್ತಿದೆ. ಆದ್ರೆ, ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳದ ಶಿವರಾಜ್ ತುಂಬಾ ಚ್ಯೂಸಿ ಆಗಿದ್ದಾರೆ.

ನೀವೇ ಹೀರೋ ಆಗ್ಬಿಡಿ.!

ಬರೀ ಹಾಸ್ಯ ಪಾತ್ರಗಳು ಮಾತ್ರ ಅಲ್ಲ. 'ನೀವೇ ನಮ್ಮ ಸಿನಿಮಾಗೆ ಹೀರೋ ಆಗಿ' ಅಂತ ಕೇಳ್ಕೊಂಡು ಅನೇಕರು ಶಿವರಾಜ್ ರವರಿಗೆ ಫೋನ್ ಮಾಡಿದ್ದಾರಂತೆ.!

ಶಿವರಾಜ್ ಏನನ್ನುತ್ತಾರೆ.?

''ಕೆಲವರು ನೀವೇ ಹೀರೋ ಆಗಿ ಆಕ್ಟ್ ಮಾಡಿ ಎನ್ನುತ್ತಾರೆ. ಆದ್ರೆ ನನಗೆ ಇಷ್ಟ ಇಲ್ಲ. ನಾವು ಪೋಷಕ ನಟರಾಗೇ ಇರಲು ಬಯಸುತ್ತೇನೆ. ನಗಿಸಲು ಟ್ರೈ ಮಾಡುತ್ತೇನೆ. ಅಂತಹ ಕ್ಯಾರೆಕ್ಟರ್ ಸಿಕ್ಕರೆ ಮಾಡುತ್ತೇನೆ'' ಎನ್ನುತ್ತಾರೆ ಶಿವರಾಜ್.ಕೆ.ಆರ್.ಪೇಟೆ

ಸಂಚಾರಿ ವಿಜಯ್ ಹೇಳಿದ ಮಾತನ್ನ ನೆನಪಿಸಿಕೊಳ್ಳುವ ಶಿವರಾಜ್.!

''ನಾನು ಹವ್ಯಾಸಿ ರಂಗಭೂಮಿಯಲ್ಲಿ ನಾಟಕ ಮಾಡುತ್ತಿದ್ದೆ. ಆಗ 'ಸಂಚಾರಿ' ವಿಜಯ್ ಮತ್ತು ನಾನು ಒಟ್ಟಿಗೆ ನಾಟಕ ಮಾಡಿದ್ದೇವೆ. ವಿಜಯ್ ಈಗ ಸಿನಿಮಾ ಮಾಡ್ತಿದ್ದಾರೆ. ನಾವೆಲ್ಲ ನಾಟಕ ಮಾಡುವಾಗ ಅವರು ನನಗೆ ಒಂದು ಮಾತು ಹೇಳಿದ್ದರು. ''ಯಾರ ಹತ್ರನೂ ಚಾನ್ಸ್ ಕೇಳಬೇಡ. ಅದಾಗಿ ಅದೇ ಸಿಗಬೇಕು. ನಿನಗೆ ಚಾನ್ಸ್ ಬಂದಾಗ ಯಾರೂ ನಿನ್ನ ಹಿಡಿಯೋಕೆ ಆಗಲ್ಲ'' ಅಂತ. ಇಂದು ಆ ಮಾತನ್ನ ನೆನಪಿಸಿಕೊಳ್ಳುತ್ತೇನೆ'' ಅಂತಾರೆ ಶಿವರಾಜ್.ಕೆ.ಆರ್.ಪೇಟೆ

English summary
Shivaraj.K.R.Pete, Winner of Zee Kannada Channel's popular show 'Comedy Khiladigalu' is in demand in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada