ತೆರೆಯ ಮುಂದೆ ಕಾಮಿಡಿಯನ್ ಆಗಲು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಜಗ್ಗಪ್ಪ; ಅವರ ತಂದೆ ಹೇಳಿದ್ದೇನು?

ಮಜಾ ಭಾರತದ ಮೂಲಕ ಖ್ಯಾತಿಯನ್ನು ಪಡೆದ ಜಗ್ಗಪ್ಪ ಅವರು ಹಲವಾರು ಕಿರು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಚಲನಚಿತ್ರಕ್ಕೂ ಕೂಡ ಪಾದಾರ್ಪಣೆಯನ್ನು ಮಾಡಿದ್ದಾರೆ. ಅಪ್ಪ ಒಬ್ಬರೇ ಮನೆ ನೋಡಿಕೊಳ್ಳುತ್ತಿದ್ದು. ಮೂರು ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುವ ಜವಾಬ್ದಾರಿ ಜಗ್ಗಪ್ಪ ಅವರ ಅಪ್ಪನ ಹೆಗಲಿಗೆ ಬಿತ್ತು. ಜಗ್ಗಪ್ಪನು ಸಹ ಅಪ್ಪನಿಗೆ ಹೆಗಲಾಗಿ ಇದ್ದು ಮನೆಯಲ್ಲಿ ನೆರವು ನೀಡುತ್ತಿದ್ದರು. ಆದರೆ ಮಜಾ ಭಾರತಕ್ಕೆ ಬಂದಾಗ ಅವರು ಮನೆಯವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಆಗದೆ ಇದ್ದಾಗ ಅವರ ತಂದೆ ನಮಗೆ ಬಣ್ಣದ ಲೋಕದ ನಂಟೇ ಬೇಡ ಎಂದು ಹೇಳಿದ್ದರು.

ಪೇಂಟ್ ಮಾಡಿಕೊಂಡು ಜಗ್ಗಪ್ಪ ಅವರ ಕುಟುಂಬ ಜೀವನವನ್ನು ಸಾಗಿಸುತ್ತಿತ್ತು. ಇದೆಲ್ಲದರ ನಡುವೆ ಜಗ್ಗಪ್ಪ ಅವರ ತಾಯಿ ಅವರಿಗಾಗಿ ದುಡ್ಡನ್ನ ಕೊಟ್ಟು ಟೀಚರ್ ಕೆಲಸ ಏನಾದರೂ ಮಾಡು ಎಂದು ಹೇಳಿದ್ದರು ಆದರೆ ಜಗಪ್ಪ ಅರ್ಧಕ್ಕೆ ಓದನ್ನ ನಿಲ್ಲಿಸಿ ಬೆಂಗಳೂರಿಗೆ ಬಂದು ಮಜಾ ಭಾರತ ಆಡಿಶನ್ ನಲ್ಲಿ ಭಾಗಿಯಾದರು. ಕೊನೆಗೆ ಇನ್ನೂ ಸಹ ಮಜಾ ಭಾರತ ಸೀಸನ್ ಶುರುವಾಗಿರಲೇ ಇಲ್ಲ ಅವರ ತಂದೆಗೆ ಇಬ್ಬರ್ ಮಕ್ಕಳನ್ನ ಓದಿಸಿ ಮನೆಯ ಬಾಡಿಗೆ ಎಲ್ಲವನ್ನ ಕಟ್ಟುವುದು ಕಷ್ಟವಾಗಿ ಬಂದುಬಿಡು ನೀನು ಎಂದು ಹೇಳಿದ್ದರು ಜಗಪ್ಪ ಮಾತ್ರ ನಾನು ಏನಾದರೂ ಸಾಧಿಸಲೇಬೇಕು ಎಂದುಕೊಂಡು ಮನೆಗೆ ಹೋಗಲೇ ಇಲ್ಲ.

Comedy kiladi and Mahabharatha fame Jaggappa recalls his sons hard days

ಮಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾನೆ ಎಂಬುದನ್ನ ತಿಳಿದುಕೊಂಡ ಜಗ್ಗಪ್ಪ ಅವರ ತಂದೆ ಮಗನ ಜೊತೆಗೆ 15 ದಿನ ಮಾತನಾಡಿರಲೇ ಇಲ್ಲ. ನೀನು ಜೀವನವನ್ನ ಹಾಳು ಮಾಡಿಕೊಳ್ಳಲು ಹೋಗುತ್ತಿದ್ದೀಯಾ ಎಂದು ಜಗ್ಗಪ್ಪ ಅವರಿಗೆ ಅವರ ತಂದೆ ಪದೇ ಪದೇ ಹೇಳುತ್ತಿದ್ದರು. ಕೊನೆಗೆ ಮಜಾ ಭಾರತ ಸೀಜನ್ ಶುರುವಾಗಿ ಮಗ ಟಿವಿಯಲ್ಲಿ ಕಾಣಿಸಿಕೊಂಡಾಗಲೇ ಅವರು ಮಗ ಮಾಡಿದ್ದು ಸರಿ ಎನಿಸಿತು.‌

ಜಗ್ಗಪ್ಪ ಅವರ ತಾಯಿ 80,000 ಲೋನ್ ತೆಗೆದುಕೊಟ್ಟು ಜಗ್ಗಪ್ಪ ಅವರನ್ನು ಟೀಚಿಂಗ್ ‌ಕೋರ್ಸ್‌ಗೆ ಸೇರಿಸಿದ್ದರು. ಆದರೆ ಓದನ್ನ ಅರ್ಧಕ್ಕೆ ಬಿಟ್ಟು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣವನ್ನ ಬೆಳೆಸಿದ್ದರು. ಈ ವೇಳೆ ಅವರ ತಂದೆ ಜಗ್ಗಪ್ಪ ಅವರಿಗೆ ಬೈದಿದ್ದರು. ನನ್ನ ಮಗ ನನ್ನ ಮಾತನ್ನ ಕೇಳಲೇ ಇಲ್ಲ ಎಂದು ಮಾತನ್ನು ಸಹ ಬಿಟ್ಟಿದ್ದರು. ಆದರೆ ಜಗ್ಗಪ್ಪ ಅವರು ಮಜಾ ಭಾರತದಲ್ಲಿ ಬಂದು ತಮ್ಮ ಪ್ರತಿಭೆ ಎಂತಹದ್ದು ಎಂಬುದನ್ನ ಪ್ರದರ್ಶನ ಮಾಡಿದ್ದಾರೆ. ನಂತರ ಮಜಾ ಭಾರತದಲ್ಲಿ ಕೊಡುತ್ತಿದ್ದ ಅಲ್ಪಸ್ವಲ್ಪ ಸಂಭಾವನೆಯಲ್ಲಿ ಮನೆಯ ನಿರ್ವಹಣೆಯನ್ನ ಜಗ್ಗಪ್ಪ ತಂದೆಯ ಜೊತೆಗೂಡಿ ಮಾಡಿದ್ದಾರೆ.

ಇನ್ನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಕಾಲೇಜು ಮುಗಿಸಿಕೊಂಡು ಬಂದು ಪಾರ್ಟ್ ಟೈಮ್ ಜಾಬ್ ಮಾಡಿ ಗಾಡಿ ಲೋನ್ ತೀರಿಸಿ ತಂದೆಗೆ ಗಾಡಿಯನ್ನು ಕೊಡಿಸಿದ್ದಾರೆ. ಚಾಮರಾಜನಗರದಿಂದ ವಲಸೆ ಬಂದಂತಹ ಕುಟುಂಬ ಒಂದು ಇಡೀ ದಿನ ಬಸ್ ಸ್ಟ್ಯಾಂಡ್ನಲ್ಲಿ ಕಾಲವನ್ನು ಕಳೆದಿತ್ತು ಇದೆಲ್ಲವನ್ನು ನೆನಪಿಸಿಕೊಂಡ ಜಗ್ಗಪ್ಪ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ತಂದೆ ಬಹಳ ಕಷ್ಟಪಟ್ಟು ಪೇಂಟ್ ಮಾಡಿ ಜೀವನವನ್ನು ನಡೆಸಿದ್ದಾರೆ ಅವರ ಜೊತೆಗೆ ನಾನು ಸಹ ಹೆಗಲಾಗಿ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮಾತನ್ನು ಶೋನಲ್ಲಿ ಜಗ್ಗಪ್ಪ ಹೇಳಿದ್ದಾರೆ.

ಮಜಾ ಭಾರತ, ಗಿಚ್ಚ ಗಿಲಿಗಿಲಿ ಹಾಗೂ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುವ ಜಗ್ಗಪ್ಪ ಅವರ ಜೀವನ ತುಂಬಾ ಕಷ್ಟದಿಂದ ಕೂಡಿತ್ತು. ತಂದೆಯ ಜೊತೆಗೆ ಕೆಲಸವನ್ನ ಮಾಡಿ ಕೊಟ್ಟು ಮನೆಯ ಜವಾಬ್ದಾರಿಯನ್ನ ನಿರ್ವಹಿಸಲು ಜಗಪ್ಪ ಸಹ ಪಾಲು ತೆಗೆದುಕೊಂಡಿದ್ದರು. ತೆರೆಯ ಮೇಲೆ ಎಲ್ಲರನ್ನ ನಕ್ಕು ನಗಿಸುತ್ತಿರುವ ಜಗ್ಗಪ್ಪ ಅವರು ಸಾಧನೆ ಮಾಡಲು ತುಂಬಾ ಕಷ್ಟವನ್ನು ಅನುಭವಿಸಿದ್ದಾರೆ.

ಮೊದಮೊದಲು ಜಗ್ಗಪ್ಪ ಅವರನ್ನು ಯಾರು ಸಹ ಗುರುತು ಹಿಡಿಯುತ್ತಿರಲಿಲ್ಲ ಮಜಾ ಭಾರತ ಬಂದ ಮೇಲೆ ಕೆಲವು ದಿನಗಳ ನಂತರ ಅವರನ್ನ ಮಜಾ ಭಾರತ ಜಗ್ಗಪ್ಪ ಎಂದು ಜನರು ಪತ್ತೆ ಮಾಡಲು ಶುರು ಮಾಡಿದರು ಆಗ ಹಲವಾರು ಕಾರ್ಯಕ್ರಮಗಳು ಸಿಕ್ಕವು ಇದರಿಂದ ಜೀವನ ಸುಧಾರಣೆಯಾಯಿತು ಎಂದು ಜಗ್ಗಪ್ಪ ತಮ್ಮ ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಮೆಲುಕು ಹಾಕಿದ್ದಾರೆ.

More from Filmibeat

English summary
comedy kiladi, Mahabharata jaggappa , barjari bachelors, zee kannada reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X