ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದ 'ದಿನೇಶ್ ದಿಗ್ಗಜರು'
Recommended Video

ಕಾಮಿಡಿ ಕಿಲಾಡಿಗಳು ಎರಡನೇ ಆವೃತ್ತಿಯ ನಂತರ ಆರಂಭವಾಗಿದ್ದ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಒಟ್ಟು ಆರು ತಂಡಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ದಿನೇಶ್ ದಿಗ್ಗಜರು ತಂಡ ಟ್ರೋಪಿ ಗೆದ್ದು ಕೊಂಡಿದೆ.
ಜುಲೈ 7 ರಂದು ಆರಂಭವಾಗಿದ್ದು ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ನಲ್ಲಿ ಪ್ರತಿಭಾನ್ವಿತ ಕಲಾವಿದರು ಸ್ಪರ್ಧಿಗಳಾಗಿದ್ದರು. ಕಾಮಿಡಿ ಕಿಲಾಡಿಗಳು ಮೊದಲನೇ ಆವೃತ್ತಿ ವಿನ್ನರ್ ಶಿವರಾಜ್ ಕೆಆರ್ ಪೇಟೆ ಹಾಗೂ ಎರಡನೇ ಆವೃತ್ತಿಯ ವಿಜೇತ ಮಡೆನೂರು ಸೇರಿದಂತೆ ಎರಡೂ ಆವೃತ್ತಿಯ ಇತರೆ ಸ್ಪರ್ಧಿಗಳು ಒಟ್ಟು ಆರು ತಂಡಗಳಾಗಿ ಭಾಗವಹಿಸಿದ್ದರು.
ಆರ ತಂಡಗಳಿಗೆ ಆರು ಜನ ಮೆಂಟರ್ ಮತ್ತು ಮೂರೂ ತಿರ್ಪುಗಾರರು ಮಾಲೀಕರಾಗಿದ್ದರು. ಹಾಗಿದ್ರೆ, ಚೊಚ್ಚಲ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದ ತಂಡಕ್ಕೆ ಸಿಕ್ಕಿದ ಬಹುಮಾನವೆಷ್ಟು.? ಮುಂದೆ ಓದಿ....

ಅಪ್ಪಣ್ಣ ಸಾರಥ್ಯದ ದಿನೇಶ್ ದಿಗ್ಗಜರು
ರಕ್ಷಿತಾ ಪ್ರೇಮ್ ಮಾಲೀಕತ್ವ ಹಾಗೂ ಸರಿಗಮಪ ವಿಜಿ ಮೆಂಟರ್ ಆಗಿದ್ದ ದಿನೇಶ್ ದಿಗ್ಗಜರು ತಂಡ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದಿದೆ. ಈ ತಂಡಕ್ಕೆ ಅಪ್ಪಣ್ಣ ನಾಯಕರಾಗಿದ್ದರು. 10 ಲಕ್ಷ ರೂಪಾಯಿ ಈ ತಂಡಕ್ಕೆ ಸಿಕ್ಕ ಬಹುಮಾನವಾಗಿ ಸಿಕ್ಕಿತ್ತು.

ರನ್ನರ್ ಅಪ್ ತಂಡ ಯಾವುದು.?
ಸೂರ್ಯ ನಾಯಕತ್ವ ವಹಿಸಿದ್ದ ಬಾಲಣ್ಣ ಭಾಜ ಬಜಂತ್ರಿ ತಂಡ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ತಂಡಕ್ಕೆ 4 ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಿತು. ಎರಡನೇ ರನ್ನರ್ ಅಪ್ ತಂಡ ನರಸಿಂಹರಾಜು ನಗೆ ಬಳಗಕ್ಕೆ 1.5 ಲಕ್ಷ ನಗದು ಬಹುಮಾನ ಸಿಕ್ಕಿದೆ.

ಒಟ್ಟು ಆರು ತಂಗಳು
ಮುಸುರಿ ಮಹಾ ಪ್ರಚಂಡರು
ಬಾಲಣ್ಣ ಭಾಜ ಭಾಜಂತ್ರಿ
ದಿನೇಶ್ ದಿಗ್ಗಜರು
ಎನ್.ಎಸ್ ರಾವ್ ಕಿಲಿ ಕಿಲ ಕಿಲಾಡೀಸ್
ನರಸಿಂಹರಾಜು ನಗೆ ಬಳಗ
ಧಿರೇಂದ್ರ ಹಾಸ್ಯ ಮಂಡಳಿ

ಹೊಸ ಧಾರಾವಾಹಿ
ಇನ್ಮುಂದೆ ಜೀ ಕನ್ನಡದಲ್ಲಿ ಶ್ರೀವಿಷ್ಣುದಶವತಾರ ಧಾರಾವಾಹಿ ಪ್ರಸಾರವಾಗಲಿದೆ. ಅಕ್ಟೋಬರ್ 15 ರಿಂದ ಪ್ರತಿ ರಾತ್ರಿ 7ಕ್ಕೆ ಜೀ ಕನ್ನಡದಲ್ಲಿ ಮೂಡಿ ಬರಲಿದೆ.


Click it and Unblock the Notifications











