ಪ್ರೀತಿಸಿ ಮದುವೆ ಆದ 'ಕಾಮಿಡಿ ಕಿಲಾಡಿಗಳು' ಜೋಡಿಯ ಖುಷಿಗೆ ಈಗ ಪಾರವೇ ಇಲ್ಲ!

ಕಾಮಿಡಿ ಕಿಲಾಡಿಗಳು ಸೀಸನ್ 1 ನಲ್ಲಿ ಖ್ಯಾತಿ ಪಡೆದಿದ್ದ ಕಲಾವಿದರಲ್ಲಿ ಒಬ್ಬರು ಗೋವಿಂದೇಗೌಡ. ಇವರನ್ನು ಪ್ರೀತಿಯಿಂದ ಎಲ್ಲರೂ ಜಿಜಿ ಎಂದು ಕರೆಯುತ್ತಿದ್ದರು. ಅದ್ಭುತವಾದ ಕಾಮಿಡಿ ಟೈಮಿಂಗ್ ಮತ್ತು ನಟನೆಯಿಂದ ಗೋವಿಂದೇಗೌಡ ಅವರು ಬಹಳ ಫೇಮಸ್ ಆಗಿದ್ದರು.

ಇವರ ಆಕ್ಟಿಂಗ್‌ಗೆ ಕಾಮಿಡಿ ಕಿಲಾಡಿಗಳು ಜಡ್ಜ್ ಮತ್ತು ರಾಜ್ಯದ ಜನತೆ ಫಿದಾ ಆಗಿದ್ದರು. ಈಗಲೂ ಗೋವಿಂದೇಗೌಡ ಅವರ ಅಭಿನಯವನ್ನು ಯಾರು ಮರೆತಿಲ್ಲ. ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು'ನಲ್ಲಿ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಸ್ಪರ್ಧಿಸಿದ್ದರು.

ಅದೇ ರಿಯಾಲಿಟಿ ಶೋನಲ್ಲಿ ಪ್ರೀತಿ ಚಿಗುರಿದ ಪರಿಣಾಮ ಗೋವಿಂದೇ ಗೌಡ ಮತ್ತು ದಿವ್ಯಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಗೋವಿಂದೇಗೌಡ ಹಾಗೂ ದಿವ್ಯಶ್ರೀ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಪ್ರೀತಿಸಿದ ಹುಡುಗಿಯನ್ನೆ ಮದುವೆ ಆಗಿದ್ರು!

ಪ್ರೀತಿಸಿದ ಹುಡುಗಿಯನ್ನೆ ಮದುವೆ ಆಗಿದ್ರು!

ಕಾಮಿಡಿ ಕಿಲಾಡಿಗಳು ನಂತರ ಗೋವಿಂದೇಗೌಡ ಅವರು ಸಿನಿಮಾಗಳಲ್ಲಿ ನಟಿಸಿದರು, ಕೆಜಿಎಫ್ ಸಿನಿಮಾದಲ್ಲಿ ಇವರು ನಟಿಸಿದ ಪಾತ್ರ ಮತ್ತು ಆ ಪಾತ್ರದ ಡೈಲಾಗ್ ಗಳನ್ನು ಜನರು ತುಂಬಾ ಎಂಜಾಯ್ ಮಾಡಿದ್ದರು. ಅದು ಮಾತ್ರವಲ್ಲದೆ ಇನ್ನು ಕೆಲವು ಸಿನಿಮಾಗಳಲ್ಲಿ ಗೋವಿಂದೇಗೌಡ ಅವರು ನಟಿಸಿದ್ದಾರೆ. ಹಾಗೆಯೇ ಒಂದು ಸಿನಿಮಾವನ್ನು ಸಹ ನಿರ್ದೇಶನ ಮಾಡಿದರು. ಗೋವಿಂದೇಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಕಾಮಿಡಿ ಕಿಲಾಡಿಗಳು ಶೋನಲ್ಲಿ ಸ್ಪರ್ಧಿಯಾಗಿದ್ದ ದಿವ್ಯಶ್ರೀ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಫೋಟೊಶೂಟ್‌ನಲ್ಲಿ ಮಸ್ತ್ ಮಸ್ತ್ ಪೋಸ್

ಫೋಟೊಶೂಟ್‌ನಲ್ಲಿ ಮಸ್ತ್ ಮಸ್ತ್ ಪೋಸ್

ಇವರಿಬ್ಬರು ತುಂಬಾ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಈ ಜೋಡಿ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನು ಅಂದ್ರೆ, ಗೋವಿಂದೇಗೌಡ ಮತ್ತು ದಿವ್ಯಶ್ರೀ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿರುವ ಗೋವಿಂದೇಗೌಡ ಮತ್ತು ದಿವ್ಯಶ್ರೀ ದಂಪತಿ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದಿವ್ಯಶ್ರೀ ಈಗ ತುಂಬು ಗರ್ಭಿಣಿಯಾಗಿದ್ದು, ಈ ಜೋಡಿಯಿಂದ ಸಿಕ್ಕ ಗುಡ್ ನ್ಯೂಸ್ ನೋಡಿ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

2019ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಜೋಡಿ

2019ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಜೋಡಿ

2019ರಲ್ಲಿ 'ಕಾಮಿಡಿ ಕಿಲಾಡಿಗಳು' ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಅವರ ನಿಶ್ಚಿತಾರ್ಥ ನೆರವೇರಿತ್ತು. ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗೋವಿಂದೇ ಗೌಡ ಮತ್ತು ದಿವ್ಯಶ್ರೀ ಅವರ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆದಿತ್ತು. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಉಂಗುರ ಬದಲಾಯಿಸಿಕೊಂಡಿದ್ದರು. ಎಂಗೇಜ್‌ಮೆಂಟ್‌ಗೆ ಕಾಮಿಡಿ ಕಿಲಾಡಿಗಳ ದಂಡೇ ನೆರೆದಿತ್ತು. 2019ರ ಮಾರ್ಚ್‌ 14 ರಂದು ಶೃಂಗೇರಿಯಲ್ಲಿ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಅವರ ವಿವಾಹ ಮಹೋತ್ಸವ ನಡೆದಿತ್ತು. ಶಾರದಾಂಬೆಯ ಆಶೀರ್ವಾದ ಪಡೆದು ಗೋವಿಂದೇ ಗೌಡ ಮತ್ತು ದಿವ್ಯಶ್ರೀ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ದಂಪತಿ

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ದಂಪತಿ

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಳಿಕ ಗೋವಿಂದೇ ಗೌಡ ಹಾಗೂ ದಿವ್ಯಶ್ರೀಗೆ ಕನ್ನಡ ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. 'ಕೆಜಿಎಫ್' ಹಾಗೂ 'ಭರಾಟೆ' ಸಿನಿಮಾಗಳಲ್ಲಿ ಗೋವಿಂದೇ ಗೌಡ ನಟಿಸಿದರು. ಇನ್ನೂ 'ಪುಣ್ಯಾತ್‌ಗಿತ್ತಿಯರು' ಸಿನಿಮಾದಲ್ಲಿ ದಿವ್ಯಶ್ರೀ ಅಭಿನಯಿಸಿದರು. 'ಜಂತರ್ ಮಂತರ್' ಎಂಬ ಚಿತ್ರಕ್ಕೆ ಗೋವಿಂದೇ ಗೌಡ ಆಕ್ಷನ್ ಕಟ್ ಹೇಳಿದ್ದರು.

More from Filmibeat

English summary
Comedy Kiladigalu fame Govinde Gowda and Divya Shree are expecting their first child.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X