ಬಿಗ್‌ಬಾಸ್ ಗೆ ಕಾಲಿಡಲಿದ್ದಾರಾ ಕಾಮಿಡಿ ಕಿಲಾಡಿ ನಯನಾ?
ಬಿಗ್‌ಬಾಸ್ ಸೀಸನ್ 8 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಪ್ರೋಮೋ ಬಿಡುಗಡೆ ಆಗಿದ್ದು, ಸ್ಪರ್ಧಾಳುಗಳ ಸಹ ಅಂತಿಮವಾಗಿದ್ದಾರೆ ಎನ್ನಲಾಗುತ್ತಿದೆ.
Recommended Video
ಈ ಭಾರಿ ಬಿಗ್‌ಬಾಸ್ ಗೆ ಯಾರ್ಯಾರು ಹೋಗಲಿದ್ದಾರೆ ಎಂಬುದು ಬಹಳ ಕುತೂಹಲ ಕೆರಳಿಸಿದೆ. ಹಲವರ ಹೆಸರುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಒಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ.
'ಕಾಮಿಡಿ ಕಿಲಾಡಿಗಳು' ಮೊದಲ ಸೀಸನ್‌ನಲ್ಲಿ ತಮ್ಮ ಅಭಿನಯ, ಕಾಮಿಡಿ ಟೈಮಿಂಗ್‌ನಿಂದ ಗಮನ ಸೆಳೆದಿದ್ದ ನಯನಾ ಅವರು ಈ ಬಾರಿ ಬಿಗ್‌ಬಾಸ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ರನ್ನರ್ ಅಪ್ ಆಗಿದ್ದ ನಯನಾ
ಕಾಮಿಡಿ ಕಿಲಾಡಿಗಳು ಶೋ ನಲ್ಲಿ ರನ್ನರ್ ಅಪ್ ಆಗಿದ್ದ ನಯನಾ ಆ ನಂತರ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಸೀತಾರಾಮ್ ಕಲ್ಯಾಣ ಸಿನಿಮಾದಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು. ಅದರ ನಂತರ 'ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲೂ ನಟಿಸಿದ್ದರು ಈ ನಟಿ.

ಕಾಮಿಡಿ ಕಿಲಾಡಿಗಳಲ್ಲಿ ಮೆಂಟರ್
ಕಾಮಿಡಿ ಕಿಲಾಡಿಗಳು ಶೋ ನೊಂದಿಗೆ ತಮ್ಮ ಸಂಬಂಧ ಮುಂದುವರೆಸಿರುವ ಈ ಕಮಿಡಿಯನ್, ಶೋ ನಲ್ಲಿ ಒಂದು ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸಕ್ರಿಯರಾಗಿದ್ದಾರೆ ನಯನಾ.

ಅಧಿಕೃತ ಹೇಳಿಕೆ ನೀಡಿಲ್ಲ
ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸಕ್ರಿಯರಾಗಿರುವ ನಯನಾ ಬಿಗ್‌ಬಾಸ್ ಗೆ ಹೋದಲ್ಲಿ ಒಳ್ಳೆಯ ಸ್ಪರ್ಧಿಯೊಬ್ಬರು ಬಿಗ್‌ಬಾಸ್ ಗೆ ದೊರೆತಂತಾಗುತ್ತದೆ ಎನ್ನಲಾಗುತ್ತಿದೆ. ಬಿಗ್‌ಬಾಸ್ ನಿಂದ ಆಫರ್ ಬಂದಿರುವ ಬಗ್ಗೆ ನಯನಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಹಲವರು ಸಂಭಾವ್ಯ ಪಟ್ಟಿಯಲ್ಲಿದ್ದಾರೆ
ನಯನಾ ಹೊರತಾಗಿ, ಡ್ರೋನ್ ಪ್ರತಾಪ್, ನಟ ಸುನಿಲ್ ರಾವ್, ಟಿಕ್‌ಟಾಕ್ ಸ್ಟಾರ್ ಬಿಂದು ಗೌಡ, ಸೋನು ಗೌಡ, ಸರಿಗಮಪ ಹನುಮಂತ, ಪತ್ರಕರ್ತೆ ರಾಧಾ ಹಿರೇಗೌಡರ್, ನಟಿ ಶುಭಾ ಪೂಂಜಾ, ಹಿರಿಯ ನಟಿ ರೇಖಾ ದಾಸ್, ನಟ ರಾಕೇಶ್ ಇನ್ನೂ ಹಲವರ ಹೆಸರು ಕೇಳಿ ಬರುತ್ತಿದೆ.


Click it and Unblock the Notifications











