'ಕಾಮಿಡಿ ಕಿಲಾಡಿಗಳು'ಗಳಿಗೆ ಸೆಟ್ ಹಾಕುತ್ತಿದ್ದವ ವೇದಿಕೆ ಏರಿದ: ಗಿಲ್ಲಿ ನಟರಾಜ ಹಿಸ್ಟರಿಯೇ ರೋಚಕ?

By ಎಸ್ ಸುಮಂತ್

ಈಗಲೂ ಕೂಡ ಅದೆಷ್ಟೋ ಪ್ರತಿಭಾವಂತರು ಎಲೆಮರೆ ಕಾಯಿಯಂತೆಯೇ ಇದ್ದಾರೆ. ಏನು ಬಾರದೆ ಇದ್ದವರಿಗೆ ಸಾಕಷ್ಟು ಅವಕಾಶಗಳು ಸಿಕ್ಕಿರುವ ಉದಾಹರಣೆ ಇದೆ. ಎಲ್ಲಾ ಕಲೆ ಇದೆ, ನಾನು ಪ್ರೂವ್ ಮಾಡಬಲ್ಲೆ ಎನ್ನುವವನನ್ನು ತಿರುಗಿ ನೋಡುವುದು ಕಷ್ಟ. ಅಂಥವರು ಯಾವಾಗಲೂ ಎಲ್ಲಿಯೋ ಇದ್ದು, ತಮಗೆ ಅವಕಾಶ ಸಿಗಲಿಲ್ಲವಲ್ಲ ಎಂಬ ಬೇಸರದಲ್ಲಿಯೇ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಂತ ಅವಕಾಶ ವಂಚಿತರಿಗೆ, ನಿಜವಾದ ಪ್ರತಿಭೆಗಳಿಗೆ ಅವಕಾಶ ಕೊಡುವ ಶೋನೇ ಜೀ ಕನ್ನಡದ ಕಾಮಿಡಿ ಕಿಲಾಡಿಗಳು.

ಸದ್ಯ ಸೀಸನ್ 4 ಆರಂಭಗೊಂಡಿದೆ. ನಕ್ಕು ನಗಿಸಲು ಸ್ಪರ್ಧಿಗಳು ಸಿದ್ಧವಾಗಿದ್ದಾರೆ. ಅದರಲ್ಲಿ ಒಂದೊಂದು ಕ್ಯಾರೆಕ್ಟರ್ ಒಂದೊಂದು ರೀತಿಯ ವಿಭಿನ್ನತೆಯಿಂದ ಕೂಡಿದೆ. ಎಲ್ಲಾರು ನಗಿಸುವವರೇ. ಆದರೆ ನಗಿಸುವ ರೀತಿ ಸಿಕ್ಕಾಪಟ್ಟೆ ಡಿಫ್ರೆಂಟ್. ಓ ಹೌದಾ, ಈ ರೀತಿಯೂ ಇದೆಯಲ್ಲ ಅಂತ ಬಿದ್ದು ಬಿದ್ದು ನಗುವಂತೆ ಮಾಡುತ್ತೆ. ಅದರಲ್ಲಿ ಗಿಲ್ಲಿ ನಟರಾಜ ಅಂತಾನೇ ಖ್ಯಾತಿ ಪಡೆದ ಪ್ರತಿಭೆಯೊಂದು ಬಂದಿದೆ. ಅವರ ನಟನೆಗೆ ನೋಡುಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಕಾಮಿಡಿ ಕಿಲಾಡಿಗೆ ಬಂದ ಗಿಲ್ಲಿ ನಟರಾಜ

ಕಾಮಿಡಿ ಕಿಲಾಡಿಗೆ ಬಂದ ಗಿಲ್ಲಿ ನಟರಾಜ

ಕಲೆ ಎಂಬುದು ಯಾರ ಸ್ವತ್ತು ಅಲ್ಲ. ಎಲ್ಲರಲ್ಲಿಯೂ ಒಂದೊಂದು ರೀತಿಯ ಕಲೆ ಇದ್ದೆ ಇರುತ್ತದೆ. ಅವಕಾಶ ಸಿಕ್ಕಾಗ ಎಕ್ಸ್ ಪೋಸ್ ಮಾಡಿಬಿಡಬೇಕು. ಗಿಲ್ಲಿ ನಟರಾಜ್ ಕೂಡ ಮಾಡಿದ್ದು ಅದನ್ನೇ ತೆರೆ ಹಿಂದೆ, ಸೆಟ್ ಹಾಕುತ್ತಾ ಕುಳಿತಿದ್ದವ ಸಮಯ ಸಿಕ್ಕಾಗ ತನ್ನಲ್ಲಿರುವ ಕಲೆಯನ್ನು ಅನಾವರಣ ಮಾಡಿದ್ದಾರೆ. ಅದರ ಫಲವಾಗಿ ಇಂದು ಸೆಟ್ ಬಾಯ್ ಕಾಮಿಡಿ ಕಿಲಾಡಿ ವೇದಿಕೆಯ ಸ್ಪರ್ಧಿ.

ಗಿಲ್ಲಿ ನಟರಾಜನ ಕಾಮಿಡಿ ಸೂಪರ್

ಗಿಲ್ಲಿ ನಟರಾಜನ ಕಾಮಿಡಿ ಸೂಪರ್

ಬೆಂಗಳೂರು ಎಂಬುದು ದೊಡ್ಡ ಸಾಗರವೇ ಸರಿ. ಆ ಸಾಗರದಲ್ಲಿ ಈಜು ಬಾರದವನು ಬಂದರು ಕಲಿತು ಬಿಡುತ್ತಾರೆ. ಮಳವಳ್ಳಿಯ ನಟರಾಜನಿಗೂ ಅನ್ಸಿದ್ದು ಅದೇ. ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ನಾನ್ಯಾಕೆ ಇಲ್ಲಿಗೆ ಬಂದೆ ಎಂಬುದನ್ನು ಹೇಳಿದ್ದಾರೆ. ಇಲ್ಲಿಗೆ ಬಂದಿರುವವರೆಲ್ಲಾ ಹಳ್ಳಿಯಿಂದ ಬಂದಿರುವವರೇ. ಅದು ಒಂದು ಧೈರ್ಯ. ನಾನು ಹೋದರು ಕೆಲಸ ಸಿಗುತ್ತೆ ಅಂತ. ಬಂದಾಗ ಮೊದಲಿಗೆ ಸೆಟ್ ಹಾಕುವ ಹುಡುಗರು ಸಿಕ್ಕಿದ್ರು. ಅವರ ಜೊತೆ ಸೇರಿಕೊಂಡು ಸೆಟ್ ಹಾಕುವುದನ್ನು ಅಭ್ಯಾಸ ಮಾಡಿಕೊಂಡೆ. ಕಳೆದ ವರ್ಷ ಕಾಮಿಡಿ ಕಿಲಾಡಿಗಳಿಗೂ ಸೆಟ್ ಹಾಕಿದ್ದೆ ಎಂದು ತನ್ನ ಅನುಭವ ಹಂಚಿಕೊಂಡಿದ್ದಾರೆ.

ಜಡ್ಜ್‌ಗಳೇ ಗಿಲ್ಲಿ ನಟನ ಟಾರ್ಗೆಟ್

ಜಡ್ಜ್‌ಗಳೇ ಗಿಲ್ಲಿ ನಟನ ಟಾರ್ಗೆಟ್

ಕಾಮಿಡಿ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ತಮಗೆ ನಗು ಬಂದರೆ ನೋಡುಗರಿಗೆ ನಗು ಬರುವುದಿಲ್ಲ. ಎದುರುಗಡೆ ಇದ್ದವರ ಮೇಲೆ ಕಾಮಿಡಿ ಮಾಡಬಹುದು. ಆದರೆ ಅವರಿಗೆ ಅದು ನೋವಾಗಬಾರದು. ಅದೇ ರೀತಿ ನಟರಾಜ್ ಜಡ್ಜ್‌ಗಳನ್ನು ಆಧಾರವಾಗಿಟ್ಟುಕೊಂಡು ಕಾಮಿಡಿ ಮಾಡಿದ್ದಾನೆ. "ರಕ್ಷಿತ್ ಅಕ್ಕೋ ಪ್ರೇಮ್ ಅಣ್ಣ ಚೆನ್ನಾಗಿದ್ದಾರಾ..? ನೀವೂ ಇಲ್ಲಿದ್ದೀರಾ ಅಂದ್ರೆ ಅವ್ರು ಚೆನ್ನಾಗಿಯೇ ಇರುತ್ತಾರೆ ಎಂದಿದ್ದಾರೆ. ಇನ್ನು ಭಟ್ರ ಬುಡಕ್ಕೆ ಬಂದ ನಟ, ಭಟ್ರು ಸರ್ ನಂಗೆ ನಿಮ್ಮ ಗಾಳಿಪಟ ಸಿನಿಮಾ ಎಂದರೆ ಸಖತ್ ಇಷ್ಟ. ಯಾಕೇಳಿ ಎಲ್ಲರೂ ಮೊಲ ಹಿಡಿದುಕೊಂಡು ಹೋದ್ರೆ, ನೀವೂ ಹಂದಿ ಬಾಲ ಹಿಡಿದುಕೊಂಡೇ ಸಿನಿಮಾ ಮಾಡಿದ್ದೀರಾ" ಎಂದಿದ್ದಾರೆ. ಇನ್ನು ಜಗ್ಗೇಶ್ ಬಗ್ಗೆಯೂ ಸಖತ್ ಕಾಮಿಡಿ ಮಾಡಿ ಜಡ್ಜ್‌ಗಳ ಕೈನಿಂದ ಹೊಗಳಿಸಿಕೊಂಡಿದ್ದಾನೆ.

ಪ್ರೀತಿ, ಪ್ರೋತ್ಸಾಹ ಬಯಸಿದ ನಟ

ಪ್ರೀತಿ, ಪ್ರೋತ್ಸಾಹ ಬಯಸಿದ ನಟ

ಇದು ಗಿಲ್ಲಿ ನಟನ ಕನಸು. ಆತನೇ ಹಂಚಿಕೊಂಡ ಮಾಹಿತಿ ಪ್ರಕಾರ, ಕಾಮಿಡಿ ಕಿಲಾಡಿಗಳಿಗೆ ಸೆಲೆಕ್ಟ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ. ಇದು ನನ್ನ ಕನಸು ಕೂಡ. ಆದಷ್ಟು ನಾನು ನಿಮ್ಮನ್ನು ನಗಿಸುತ್ತೀನಿ. ನನಗೆ ಹರಸಿ ಹಾರೈಸಿ ಎಂದಿದ್ದಾರೆ.

More from Filmibeat

English summary
Comedy Kiladigalu Reality Show Contestant Gill Nataraj Life And History. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X