ಕಾಮಿಡಿ ಕಿಲಾಡಿಗಳು ಸೀಸನ್ 4 ಅತೀ ಶೀಘ್ರದಲ್ಲೇ!

By ಪ್ರಿಯಾ ದೊರೆ

ಇತ್ತೀಚೆಗೆ ಕಿರುತೆರೆ ವಾಹಿನಿಗಳಲ್ಲಿ ಹೊಸ ಹೊಸ ಬಗೆಯ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಶೋಗಳು ವೀಕ್ಷಕರ ಮೆಚ್ಚಿನ ಕಾರ್ಯಕ್ರಮವಾಗಿದೆ. ಶನಿವಾರ, ಭಾನುವಾರ ಬಂದರೆ ಸಾಕು ಪ್ರೇಕ್ಷಕರು ಕಾಮಿಡಿ ಶೋ ನೋಡಿ ನಕ್ಕು ವಾರದ ಟೆನ್ಷನ್ ಕಡಿಮೆ ಮಾಡಿಕೊಳ್ಳುತ್ತಾರೆ.

ಇದೀಗ ಹೊಸ ಮತ್ತೆ ಕಾಮಿಡಿ ಶೋ ನಕ್ಕು ನಗಿಸಲು ಬರ್ತಿದೆ. ವಿಭಿನ್ನ ಹಾಗೂ ವಿನೂತನ, ಮನೊರಂಜನಾ ಕಾರ್ಯಕ್ರಮಗಳನ್ನು ನೀಡುತ್ತಿರುವ ಜೀ ಕನ್ನಡ ಚಾನೆಲ್, ಇದೀಗ ಹೊಸ ನಗಿಸೋ ಶೋ ಶುರುಮಾಡುತ್ತಿದೆ. ಇದು ಹೊಸ ಕಲಾವಿದರಿಗೆ ಒಂದು ಅದ್ಭುತ ವೇದಿಕೆಯಾಗಲಿದೆ. ಈ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಿದೆ.

ಈಗಾಗಲೇ ಕಾಮಿಡಿ ಕಿಲಾಡಿಗಳು ಶೋ ಫೇಮಸ್ ಆಗಿದ್ದು, ಇದರಲ್ಲಿ ಭಾಗವಹಿಸುವ ಕಲಾವಿದರ ನೈಪುಣ್ಯತೆಯನ್ನು ಜಡ್ಜ್ ಮಾಡಲು ಮೂವರು ಜಡ್ಜ್ ಗಳು ಇರಲಿದ್ದಾರೆ. ಜೀ ಕನ್ನಡದಲ್ಲಿ ಮೂಡಿ ಬರಲಿರುವ ಈ ಹಾಸ್ಯಮಯ ಕಾರ್ಯಕ್ರಮದ ಜಡ್ಜ್ ಗಳು ಯಾರು? ಯಾರು..? ಯಾವುದು ಆ ಕಾಮಿಡಿ ಶೋ..? ಸ್ಫರ್ಧಿಗಳು ಯಾರು..? ಎಂಬ ಎಲ್ಲ ವಿಷಯಗಳನ್ನು ಸಂಪೂರ್ಣ ಮಾಹಿತಿ ಮುಂದೆ ಓದಿ...

ಬರ್ತಿದೆ ಕಾಮಿಡಿ ಕಿಲಾಡಿಗಳು!

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಕಾಮಿಡಿ ಶೋ ಹೆಸರು ನಿಮಗೆಲ್ಲಾ ಗೊತ್ತೇ ಇದೆ. ಕಾಮಿಡಿ ಕಿಲಾಡಿಗಳು ಎಂದರೆ ಸಾಕು ಚಿಕ್ಕ ಮಕ್ಕಳ ಕಿವಿಯೂ ಚುರುಕಾಗುತ್ತದೆ. ಕಾಮಿಡಿ ಕಿಲಾಡಿಗಳು ಸೀಸನ್ 4 ಅತಿ ಶೀಘ್ರದಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರೋಮೋ ಬಿಡುಗಡೆಯಾಗಿದೆ. ಮತ್ತೆ ನಿಮ್ಮನ್ನು ನಗಿಸೋಕೆ ಬರುತ್ತಿದೆ ಕಾಮಿಡಿ ಕಿಲಾಡಿಗಳು ಎಂದು ಪ್ರೋಮೋದಲ್ಲಿ ಹೇಳಲಾಗಿದೆ. ಆದರೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಯಾವಾಗ ಶುರುವಾಗುತ್ತೆ ಎಂಬುದನ್ನು ಹೇಳಿಲ್ಲ. ಅತಿ ಶೀಘ್ರದಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಲಾಗಿದೆ.

ಪ್ರತಿಭೆಗಳಿಗೆ ಉತ್ತಮ ಅವಕಾಶ!

ಪ್ರತಿಭೆಗಳಿಗೆ ಉತ್ತಮ ಅವಕಾಶ!

ಕಾಮಿಡಿ ಕಿಲಾಡಿಗಳ ಮೂಲಕ ಅನೇಕ ಪ್ರತಿಭೆಗಳು ಅನಾವರಣವಾದವು ಎಂದರೆ ತಪ್ಪಿಲ್ಲ, ಅನೇಕ ಜನರಿಗೆ ಟ್ಯಾಲೆಂಟ್ ಇರುತ್ತದೆ. ಆದರೆ ಅದನ್ನು ತೋರ್ಪಡಿಸಲು ಅವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಅಂತಹ ವೇದಿಕೆಯನ್ನು ಜೀ ಕನ್ನಡ ವಾಹಿನಿ ದೊರಕಿಸಿಕೊಟ್ಟಿದೆ. ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್‌ಗಳನ್ನು ಮಾಡಿ ಕಲಾವಿದರನ್ನು ಹೆಕ್ಕಿ ತರುವ ಕೆಲಸವನ್ನು ಮಾಡುತ್ತಿದೆ. ಎಷ್ಟೋ ಮಂದಿ ಎಲೆಮರೆಯ ಕಾಯಿಯಂತೆ ಇದ್ದರು ಅಂಥಹವರನ್ನು ಹುಡುಕಿ ಅವರ ಪ್ರತಿಭೆಯನ್ನು ಇನ್ನೂ ಇಮ್ಮಡಿಗೊಳಿಸುವಲ್ಲಿ ಸಫಲರಾಗಿದ್ದಾರೆ. ಅನೇಕ ಜನ ಕಾಮಿಡಿಕಿಲಾಡಿಗಳು ವೇದಿಕೆಯಿಂದ ತೆರಳಿದ ಮೇಲೆ ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನಟಿಸಲು ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಇದೀಗ ನಾಲ್ಕನೇ ಸೀಸನ್‌ಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರತಿಭೆಗಳನ್ನು ಆರಿಸಿದೆ.

ಜಗ್ಗೇಶ್ ಜಡ್ಜ್!

ಈ ಬಾರಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೆ ಜಡ್ಜ್ ಯಾರಿರಬಹುದು ಎಂಬ ಕುತೂಹಲ ಮನೆ ಮಾಡಿದೆ. ಕಳೆದ ಬಾರಿ ಜಗ್ಗೇಶ್, ರಕ್ಷಿತಾ ಪ್ರೇಮ್ ಕಾಮಿಡಿ ಕಿಲಾಡಿಗಳು ಶೋ ಜಡ್ಜ್ ಮಾಡಿದ್ದರು. ಈ ಬಾರಿಯ ಪ್ರೋಮೊವನ್ನು ನಟ ಜಗ್ಗೇಶ್ ಹಂಚಿಕೊಂಡು, ತಾವೇ ಜಡ್ಜ್ ಆಗಲಿದ್ದಾರೆ ಎನ್ನುವ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಆದರೆ ಈ ಬಾರಿ ಯಾರು ಮಾಡುತ್ತಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನು ಯಾರು ಹೋಸ್ಟ್ ಮಾಡುತ್ತಾರೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಕಾಯುತ್ತಿರುವ ಪ್ರೇಕ್ಷಕರು!

ಕಾಯುತ್ತಿರುವ ಪ್ರೇಕ್ಷಕರು!

ಕಾಮಿಡಿ ಕಿಲಾಡಿಗಳು ಶೋ ನೋಡಲು ಅಭಿಮಾನಿಗಳೆಲ್ಲರೂ ಕಾಯುತ್ತಿದ್ದಾರೆ. ಪ್ರೋಮೋ ನೋಡಿದವರು ಶನಿವಾರ ಭಾನುವಾರ ನಕ್ಕು ನಲಿಯಲು ಕಾತುರರಾಗಿದ್ದಾರೆ. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಥವಾ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮುಗಿದ ಮೇಲೆ ಕಾಮಿಡಿ ಕಿಲಾಡಿಗಳು ಪ್ರಾರಂಭ ಆಗುವ ಸಾಧ್ಯತೆ ಇದೆ.

More from Filmibeat

English summary
Comedy Kiladigalu Season 4 Starting Soon, Know More details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X