ಜನಪ್ರಿಯ ಕಾಮಿಡಿಯನ್ ಕಪಿಲ್ ಗೆ 'ಶಾದಿ ಭಾಗ್ಯ'

By ಜೇಮ್ಸ್ ಮಾರ್ಟಿನ್

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ 'ಕಾಮಿಡಿ ನೈಟ್ಸ್ ವಿಥ್ ಕಪಿಲ್ಸ್' ಖ್ಯಾತಿಯ ಕಪಿಲ್ ಶರ್ಮ ಕೊನೆಗೂ ಮದುವೆ ಬಂಧನಕ್ಕೆ ಒಳಪಡುತ್ತಿದ್ದಾರೆ. ಕಪಿಲ್ ಶರ್ಮ ಅವರ ವೈಯಕ್ತಿಕ ಬದುಕಿನ ಬಗ್ಗೆ ಇದ್ದ ಊಹಾಪೋಹಗಳಿಗೆ ಈ ಮೂಲಕ ತೆರೆ ಎಳೆಯಲಾಗುತ್ತಿದೆ.

ಕಾಮಿಡಿ ಶೋನ ಕ್ರಿಯೇಟಿವ್ ಡೈರೆಕ್ಟರ್ ಪ್ರೀತಿ ಸಿಮೊಸ್ ಅವರ ಮನಗೆದ್ದಿರುವ ಕಪಿಲ್ ಅವರಿಗೆ ಮುಂದಿನ ವರ್ಷ ಶಾದಿ ಭಾಗ್ಯ ಗ್ಯಾರಂಟಿ ಎಂದು ತಿಳಿದು ಬಂದಿದೆ. 2013 ಕಪಿಲ್ ಪಾಲಿಗೆ ಸಕತ್ ಲಕ್ಕಿ ವರ್ಷವಾಗಿ ಪರಿಣಮಿಸಿದೆ. ಕಾಮಿಡಿ ನೈಟ್ಸ್ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಕಪಿಲ್ ಈಗ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. 2014ರಲ್ಲಿ ವೈಯಕ್ತಿಕ ಬದುಕಿನ ದೊಡ್ಡ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ ಎಂದು ಕಾಮಿಡಿ ಶೋ ತಂಡ ಹೇಳಿದೆ.

ಕಾಮಿಡಿ ಸರ್ಕಸ್ ನಲ್ಲಿ ಒಂದಾಗಿರುವ ಕಪಿಲ್ ಹಾಗೂ ಪ್ರೀತಿ ಇಬ್ಬರು ಉತ್ತಮ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿತ್ತು. ಎಲ್ಲರನ್ನು ಮಾತಿನ ಮೋಡಿಗೆ ಸಿಲುಕಿಸುವ ಕಪಿಲ್, ಪ್ರೀತಿ ಮನ ಗೆಲ್ಲಲು ಅದೇ ಅಸ್ತ್ರವಾಗಿ ಬಳಸಿದನಂತೆ ಆದರೆ, ಪ್ರೀತಿಗೂ ಕಪಿಲ್ ಏನು ಎಂಬುದು ಗೊತ್ತು. ಇಬ್ಬರಿಗೂ ತಮ್ಮ ನೆಚ್ಚಿನ ಕೂಸು 'ಕಾಮಿಡಿ ನೈಟ್ಸ್ ವಿಥ್ ಕಪಿಲ್' ಅರೈಕೆ ಮಾಡುವುದು ಗೊತ್ತು.

Comedy Nights' Kapil Sharma To Get Married To Preeti Simoes In 2014!

ಕಾಲೇಜು ದಿನಗಳಲ್ಲಿ ಗಿನ್ನಿ ಚಾತ್ರಥ್ ಜತೆ ಓಡಾಡಿಕೊಂಡಿದ್ದ ಕಪಿಲ್ ಶರ್ಮ, ಆಕೆ ನನ್ನ ಗೆಳತಿ ಅಷ್ಟೆ ಎಂದು ಹೇಳಿದ್ದ ಆದರೆ, ಪ್ರೀತಿ ಜತೆಗಿನ ಪವಿತ್ರ ಬಂಧನದ ಬಗ್ಗೆ ಇನ್ನೂ ತನ್ನ ಅಭಿಮಾನಿಗಳಿಗೆ ಶರ್ಮಾಜೀ ಯಾಕೋ ತಿಳಿಸಿಲ್ಲ.

ಈ ಹಿಂದೆ ಜನಪ್ರಿಯ ಕಾಮಿಡಿಯನ್ ಕಪಿಲ್ ಶರ್ಮ ಕೂಡಾ ಕಾನೂನಿನ ಹಿಡಿತಕ್ಕೆ ಒಳಪಟ್ಟಿದ್ದರು. ತೆರಿಗೆ ವಂಚನೆ ಆರೋಪ ಹೊತ್ತಿದ್ದ ಕಪಿಲ್ ರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ಕಲರ್ಸ್ ವಾಹಿನಿಯ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಖ್ಯಾತಿಯ ಕಪಿಲ್ ಶರ್ಮ ಅವರು ಸುಮಾರು 65 ಲಕ್ಷ ರು ಸೇವಾ ತೆರಿಗೆ ವಂಚಿಸಿದ ಆರೋಪ ಹೊತ್ತಿದ್ದಾರೆ. ಶೀಘ್ರದಲ್ಲೇ ಸೇವಾ ತೆರಿಗೆ ಕಟ್ಟದಿದ್ದರೆ ಕಪಿಲ್ ಅವರ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದರು. ಈ ಸಂದರ್ಭಗಳಲ್ಲಿ ಕಪಿಲ್ ಸಾಥ್ ನೀಡಿದ್ದು ಇದೇ ಪ್ರೀತಿ ಎನ್ನಲಾಗಿದೆ.

More from Filmibeat

English summary
Kapil Sharma has been avoiding all questions about his personal life but apparently the news about him marrying Comedy Nights With Kapil's Creative Director, Preeti Simoes, has leaked out!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X